Home namma chikmagalur ಕುಡಿದ ಅಮಲಿನಲ್ಲಿ ಮೂಡಿಗೆರೆಯಲ್ಲಿ ಪ್ರವಾಸಿಗರ ಬಡಿದಾಟ
namma chikmagalurchikamagalurHomeLatest News

ಕುಡಿದ ಅಮಲಿನಲ್ಲಿ ಮೂಡಿಗೆರೆಯಲ್ಲಿ ಪ್ರವಾಸಿಗರ ಬಡಿದಾಟ

Share
Share

ಚಿಕ್ಕಮಗಳೂರು: ಕುಡಿದ ಅಮಲಿನಲ್ಲಿ ನಡುರಸ್ತೆಯಲ್ಲೆ ಪ್ರವಾಸಿಗರು ಬಡಿದಾಡಿಕೊಂಡಿರುವ ಘಟನೆ ಮೂಡಿಗೆರೆ ಪಟ್ಟಣದ ಬಸ್ ನಿಲ್ದಾಣ ರಸ್ತೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಮೂವರು ಪ್ರವಾಸಿಗರು ಹೊಡೆದಾಡಿಕೊಳ್ಳುತ್ತಿರುವುದು ಕಂಡ ಇಲ್ಲಿನ ಜನರು ಗಲಾಟೆ ಬಿಡಿಸಲು ಎಷ್ಟೇ ಪ್ರಯತ್ನಪಟ್ಟರು ಪ್ರಯೋಜನವಾಗಿಲ್ಲ. ಕಂಠಪೂರ್ತಿ ಕುಡಿದು ನಶೆಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ದ್ದು, ಪೊಲೀಸರು ಗಲಾಟೆ ಮಾಡಿಕೊಂಡ ಪ್ರವಾಸಿಗರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು, ಕೆಲವು ಪ್ರವಾಸಿಗರ ವರ್ತನೆಯಿಂದ ಇಲ್ಲಿನ ಸ್ಥಳೀಯರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಇತ್ತೀಚೆಗೆ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಚಾರ್ಮಾ ಡಿ ಘಾಟಿ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಸೆಲ್ಫಿ ತೆಗೆಯುವುದು, ಕುಡಿದ ಅಮಲಿನಲ್ಲಿ ನಡುರಸ್ತೆಯಲ್ಲೇ ನೃತ್ಯ ಮಾಡುವುದು ನಡೆಯುತ್ತಿದೆ.

ಪ್ರವಾಸಿತಾಣಗಳಲ್ಲಿ ಮಧ್ಯ ಸೇವಿಸುವುದು, ವಾಹನಗಳಲ್ಲಿ ಚಲಿಸುವಾಗ ಜೋರಾಗಿ ಕಿರುಚಿಕೊಳ್ಳುವುದು ಹಾಗೂ ಮದ್ಯದ ಅಮಲಿನಲ್ಲಿ ಬಡಿದಾಡಿಕೊಳ್ಳುವ ಇಂತಹ ಘಟನೆಗಳು ಸ್ಥಳೀಯರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದು, ಪುಂಡಾಟ ಮೆರೆಯುವ ಪ್ರವಾಸಿಗರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಇಲ್ಲಿನ ಜನರು ಆಗ್ರಹಿಸಿದ್ದಾರೆ.

Drunk tourists clash in Mudigere

Share

Leave a comment

Leave a Reply

Your email address will not be published. Required fields are marked *

Don't Miss

ಭದ್ರಾ ಹುಲಿ ಸಂರಕ್ಷಿತ ಸಿಬ್ಬಂದಿಗಳಿಂದಲೇ ಮದ್ಯಪಾನ ಮೋಜು ಮಸ್ತಿ

ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ವ್ಯಾಪ್ತಿಯ ತಣಿಗೆಬೈಲು ವಲಯದ, ವಿರೂಪಾಕ್ಷ ಖಾನ್ ಚೆಕ್ ಪೋಸ್ಟ್ ನಲ್ಲಿ ಸಿಬ್ಬಂದಿಗಳು ಆಗಲು ರಾತ್ರಿ ಎನ್ನದೆ ಮದ್ಯಪಾನ ಮಾಡಿ ಮೋಜು ಮಸ್ತಿಯಲ್ಲಿ ತೊಡಗಿರುವುದು ಕಂಡುಬಂದಿದೆ , ಚೆಕ್...

ತೋಟಕ್ಕೆ ನೀರು ಬಿಡಲು ಹೋದ ಯುವತಿ ಅಪಹರಣ

ಅಜ್ಜಂಪುರ : ಯುವತಿಯೊಬ್ಬಳನ್ನು ಕಾರಿನಲ್ಲಿ ಬಲವಂತವಾಗಿ ಅಪಹರಿಸಿಕೊಂಡು ಹೋಗಿರುವ ಗಂಭೀರ ಆರೋಪ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ತ್ಯಾಗದಕಟ್ಟೆ ಗ್ರಾಮದಲ್ಲಿ ಕೇಳಿ ಬಂದಿದೆ. ಬೈರಪ್ಪ ಎಂಬುವವರ ಮಗಳು ಗಾಯತ್ರಿ...

Related Articles

ಮೇಡಿಕಲ್ ಅಂಗಡಿಯಲ್ಲಿ ನಗದು ಕಳವು ಆರೋಪಿ ಬಂದನ

ಶೃಂಗೇರಿ: ಪಟ್ಟಣದ ಭಾರತೀ ಬೀದಿಯಲ್ಲಿರುವ ಭಗವಾನ್ ಮೇಡಿಕಲ್ ಅಂಗಡಿಯಲ್ಲಿ ಜು.೭ರಂದು ಬೀಗ ಒಡೆದು ಬಾಗಿಲು ತೆರೆದು...

ನೀಟ್ ವಿದ್ಯಾರ್ಥಿಗಳ ಹಲ್ಲೆ ಖಂಡಿಸಿ ಸಿಪಿಐನಿಂದ ಪ್ರತಿಭಟನೆ

ಚಿಕ್ಕಮಗಳೂರು:  ನೀಟ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ಸಿಪಿಐ ತಾಲ್ಲೂಕು...

ಮಳೆಗಾಗಿ ಅಯ್ಯನಕೆರೆ, ಮದಗದಕೆರೆ ತಪ್ಪಲಿನಲ್ಲಿ ವಿಶೇಷ ಪೂಜೆ

ಚಿಕ್ಕಮಗಳೂರು: ಮಳೆ ಕೊರತೆಯಿಂದ ಆತಂಕಗೊಂಡಿರುವ ಕಡೂರು ತಾಲೂಕಿನ ಅಯ್ಯನಕೆರೆ ಹಾಗೂ ಮದಗದಕೆರೆ ತಪ್ಪಲಿನ ಗ್ರಾಮಸ್ಥರು ಉತ್ತಮ...

ತೆಂಗಿನಕಾಯಿ ಕದ್ದ ಆರೋಪ: ಮಹಿಳೆ ಮೇಲೆ ಮೂವರಿಂದ ಹಲ್ಲೆ

ಕಡೂರು: ತೆಂಗಿನಕಾಯಿ ಕದ್ದ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರ ಮೇಲೆ ಮೂವರು ಪುರುಷರು ಹಲ್ಲೆ ನಡೆಸಿದ ಘಟನೆ...