Home namma chikmagalur ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ – ಮೂವರು ಆರೋಪಿಗಳ ಬಂಧನ
namma chikmagalurchikamagalurCrime NewsHomeLatest News

ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ – ಮೂವರು ಆರೋಪಿಗಳ ಬಂಧನ

Share
Share

ಚಿಕ್ಕಮಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ವ್ಯಕ್ತಿಯೊಬ್ಬರನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಕಡೂರು ಪೊಲೀಸರು ಬಂದಿಸಿ, ಕೃತ್ಯಕ್ಕೆ ಬಳಸಿದ ಓಮಿನಿ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಕಡೂರು ಪಟ್ಟಣದ ಪ್ರದೀಪ್ ಆಚಾರಿ(೩೩), ಕಡೂರು ಪಟ್ಟಣ ಕೋಟೆ ಬಡಾವಣೆಯ ಸಿದ್ದೇಶ್(೩೫), ವಿಶ್ವಾಸ್ (೧೮) ಬಂಧಿತ ಆರೋಪಿಗಳು, ಜೂ.೨ರಂದು ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಂಸಾಗರ ಗೇಟ್ ಬಳಿ ಅನಾಮಧೇಯ ವ್ಯಕ್ತಿಯ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತದೇಹವು ಕೊಲೆ ಮಾಡಿ ಸುಟ್ಟ ಸ್ಥಿತಿಯಲ್ಲಿ ದೊರೆತ್ತಿದ್ದು, ಕಡೂರು ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.

ಮೇ.೩೧ರಂದು ಕಡೂರು ಪಟ್ಟಣದ ಕೋಟೆ ಬಡಾವಣೆಯ ಮೀನಾಕ್ಷಿ ಎಂಬುವರು ತಮ್ಮ ಗಂಡ ಸುಬ್ರಹ್ಮಣ್ಯ ನಾಪತ್ತೆಯಾಗಿ ರುವ ಬಗ್ಗೆ ದೂರು ದಾಖಲಿಸಿದ್ದರು. ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಕಡೂರು ಠಾಣೆ ಪೊಲೀಸರು, ಕೊಲೆಯಾಗಿ ಸುಟ್ಟಸ್ಥಿತಿಯಲ್ಲಿ ದೊರೆತ ಮೃತದೇಹ ಮತ್ತು ಮೀನಾಕ್ಷಿ ಅವರ ಗಂಡ ಸುಬ್ರಹ್ಮಣ್ಯ ಎಂಬುದು ಖಾತ್ರಿ ಪಡಿಸಿಕೊಂಡ ಪೊಲೀಸರು ಆರೋಪಿಗಳಾದ ಪ್ರದೀಪ್ ಆಚಾರಿ, ಸಿದ್ದೇಶ್, ವಿಶ್ವಾಸ್‌ನನ್ನು ವಶಕ್ಕೆ ಪಡೆದು ವಿಚಾ ರಣೆಗೆ ಒಳಪಡಿಸಿದಾಗ ಅಕ್ರಮ ಸಂಬಂಧದಿಂದ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.

ಪ್ರದೀಪ್ ಆಚಾರಿ ಮತ್ತು ಸುಬ್ರಹ್ಮಣ್ಯ ಅವರ ಪತ್ನಿ ಮೀನಾಕ್ಷಿ ನಡುವೆ ಅಕ್ರಮ ಸಂಬಂಧವಿದ್ದು, ಸುಬ್ರಹ್ಮಣ್ಯ ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸುತ್ತಿದ್ದ ಹಿನ್ನಲೆಯಲ್ಲಿ ಪ್ರದೀಪ್ ಆಚಾರಿ ಸಿದ್ದೇಶ್ ಮತ್ತು ವಿಶ್ವಾಸ್‌ಗೆ ಹಣದ ಆಸೆ ತೋರಿಸಿ ಮೇ.೩೧ರಂದು ಕಂಸಾಗರ ಗೇಟ್ ಬಳಿ ಸಿದ್ದೇಶ್ ಅವರ ಮಾರತಿ ಓಮಿನಿಯಲ್ಲಿ ಸುಬ್ರಹ್ಮಣ್ಯನನ್ನು ಕೂರಿಸಿಕೊಂಡು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ನಂತರ ಮೃತದೇಹವನ್ನು ಸೌದೆ ಮತ್ತು ಪೆಟ್ರೋಲ್ ಬಳಸಿ ಸುಟ್ಟು ಹಾಕಲು ಯತ್ನಿಸಿರುವುದು ತಿಳಿದು ಬಂದಿದೆ.

ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಮಾರುತಿ ಓಮಿನಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳನ್ನು ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ವಿಕ್ರಮ ಅಮಟೆ ಶ್ಲಾಘೀಸಿ ಬಹುಮಾನ ಘೋಷಿಸಿದ್ದಾರೆ.

Murder by hanging with rope – Three accused arrested

Share

Leave a comment

Leave a Reply

Your email address will not be published. Required fields are marked *

Don't Miss

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳತನ

ಕೊಪ್ಪ: ತಾಲೂಕಿನ ಕುಂಚೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ದೇವಿಗೆ ಅಲಂಕರಿಸಿದ್ದ ಚಿನ್ನಾಭರಣ, ಬೆಳ್ಳಿಯ ವಿಗ್ರಹಗಳು ಹಾಗೂ ಕಾಣಿಕೆ ಹುಂಡಿಯ ಹಣವನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ...

ನೂತನ ಚಿಕ್ಕಮಗಳೂರು ಜಿಪಂ ಸಿಇಒ ಮೀನಾಕ್ಷಿ ಆರ್ಯ ನೇಮಕ

ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಎಚ್.ಎಸ್. ಕೀರ್ತನಾ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ 2023ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಮೀನಾಕ್ಷಿ ಆರ್ಯ ಅವರನ್ನು ನೇಮಿಸಿ ರಾಜ್ಯ ಸರ್ಕಾರ...

Related Articles

ಏಷ್ಯನ್ ಗೇಮ್ಸ್‌ನಲ್ಲಿಶಾನುವಳ್ಳಿಯ ಎಸ್.ಎಸ್. ಸ್ನೇಹಾಗೆ ಕಂಚು

ಚಿಕ್ಕಮಗಳೂರು: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 2026ರ ಏಷ್ಯನ್ ಗೇಮ್ಸ್‌ನ ಮಿಶ್ರ 4×100 ಮೀಟರ್ ರಿಲೇ...

ಮಾಣಿಕ್ಯಾಧಾರ ಜಲಪಾತದ ಬಳಿ ಪ್ರವಾಸಿಗರ ಹುಚ್ಚಾಟ

ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ಪ್ರವಾಸಿ ತಾಣವಾದ ದತ್ತಪೀಠದ ತಪ್ಪಲಿನ ಮಾಣಿಕ್ಯಾಧಾರ ಜಲಪಾತದ ಬಳಿ ಪ್ರವಾಸಿಗರ ಅತಿರೇಕದ...

ಮಹಾತ್ಮಗಾಂಧೀಜಿ-ಲಾಲ್ ಬಹದ್ದೂರ್ ಶಾಸ್ತ್ರೀಜಿ ಮಾರ್ಗದರ್ಶನ ಇಂದಿಗೂ ಪ್ರಸ್ತುತ

ಚಿಕ್ಕಮಗಳೂರು: ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕೆ ನೀಡಿದ ಸಂದೇಶಗಳು ಮತ್ತು...

ರಸ್ತೆಯ ಮೇಲೆ ಹೆಡ್‌ಲೈಟ್ ಇಲ್ಲದ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ

ಚಿಕ್ಕಮಗಳೂರು: ದಟ್ಟ ಅರಣ್ಯ, ಕಾಫಿ ತೋಟಗಳ ನಡುವೆ ಸಾಗುವ ಕಡಿದಾದ ತಿರುವುಗಳು, ಹೊಂಡ-ಗುಂಡಿಗಳ ರಸ್ತೆಯ ಮೇಲೆ...