Home namma chikmagalur chikamagalur ಮೂಡಿಗೆರೆಯಲ್ಲಿ ಮದುವೆಗೆ ಹೋಗಿದ್ದ ತಾಯಿ ಮಗ ನಾಪತ್ತೆ
chikamagalurHomeLatest Newsnamma chikmagalur

ಮೂಡಿಗೆರೆಯಲ್ಲಿ ಮದುವೆಗೆ ಹೋಗಿದ್ದ ತಾಯಿ ಮಗ ನಾಪತ್ತೆ

Share
Share

ಮೂಡಿಗೆರೆ: ರೈತ ಭವನಕ್ಕೆ ಮದುವೆ ಸಮಾರಂಭಕ್ಕೆ ಬಂದಿದ್ದ ಸುಚಿತ್ರ (26) ಎಂಬ ಮಹಿಳೆ ತನ್ನ 4 ವರ್ಷದ ಮಗ ಧೃವಂ ಜೊತೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಕಡೇಮಡ್ಕಲ್ ಗ್ರಾಮದ ಸಂತೋಷ್ ಎಂಬುವವರು ಕಳೆದ ಆರು ವರ್ಷಗಳ ಹಿಂದೆ ಸುಚಿತ್ರ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.

ಮೇ 28 ರಂದು ಮೂಡಿಗೆರೆ ರೈತ ಭವನದಲ್ಲಿ ಮದುವೆ ಊಟ ಮುಗಿಸಿ, ಮಧ್ಯಾಹ್ನ 3 ಗಂಟೆಗೆ ಮುಯ್ಯ ನೀಡಲು ಹೋದ ಸುಚಿತ್ರ ವಾಪಸ್ ಬಂದಿಲ್ಲ. ಪತಿ ಸಂತೋಷ್ ಮದುವೆ ಹಾಲ್, ಮೂಡಿಗೆರೆ ಬಸ್ ನಿಲ್ದಾಣ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ.

ಸುಚಿತ್ರ ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಈ ಕುರಿತು ಪತಿ ಸಂತೋಷ್ ನೀಡಿದ ದೂರಿನನ್ವಯ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆ ಪ್ರಕರಣ ದಾಖಲಾಗಿದೆ.

Mother and son missing after attending wedding

Share

Leave a comment

Leave a Reply

Your email address will not be published. Required fields are marked *

Don't Miss

ಟಿಪ್ಪು ಸುಲ್ತಾನ್ ಕಟೌಟ್ ಗೆ ದೇಶದ್ರೋಹಿ ಹಾಡು-7 ಜನ ಪೊಲೀಸರ ವಶಕ್ಕೆ

ಚಿಕ್ಕಮಗಳೂರು: ಕಾಫಿನಾಡಲ್ಲಿ ಪಾಕ್ ಪ್ರೇಮಿಗಳು ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಈದ್ ಮಿಲಾದ್ ಆಚರಣೆಗೆ ಟಿಪ್ಪು ಸುಲ್ತಾನ್ ಕಟೌಟ್ ಹಾಕಿರುವ ಯುವಕರು, ಕಟೌಟ್ ಬ್ಯಾಕ್ ಗ್ರೌಂಡ್ ಗೆ ದೇಶದ್ರೋಹಿ ಸಾಂಗ್ ಹಾಕಿ ವಿವಾದ...

ಕಾಫಿಕಿಂಗ್ ಸಿದ್ಧಾರ್ಥಹೆಗ್ಗಡೆ ಹೆಸರು ಶಾಶ್ವತವಾಗಿ ಉಳಿಸುವ ಕಾರ್ಯ ಮಾಡಬೇಕಿದೆ

ಮೂಡಿಗೆರೆ: ಕಾಫಿ ಡೇ ಮಾಲೀಕ ದಿವಂಗತ ವಿ.ಜಿ.ಸಿದ್ಧಾರ್ಥ ಹೆಗ್ಗಡೆ ಅವರು ತಮ್ಮ ಸಂಪೂರ್ಣ ಜೀವನವನ್ನು ಕಾಫಿ ಬೆಳೆಗಾರರ ಮತ್ತು ಕಾರ್ಮಿಕರ ಹಿತಕ್ಕಾಗಿ ಸವಿಸಿದ್ದಾರೆಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು. ಅವರು ಭಾನುವಾರ...

Related Articles

ಅಜ್ಜಂಪುರ ಸುತ್ತಮುತ್ತ ಕರಡಿ ಹಾವಳಿ

ಅಜ್ಜಂಪುರ: ಅಜ್ಜಂಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕರಡಿ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಹಗಲು-ರಾತ್ರಿ...

ಚಿಕ್ಕಮಗಳೂರಿನಲ್ಲಿ 30 ಕೆ.ಜಿಗೂ ಅಧಿಕ ನಕಲಿ ನಾಟಿ ತುಪ್ಪ ಪತ್ತೆ

ಚಿಕ್ಕಮಗಳೂರು: ನಗರದ ಮಾರ್ಕೆಟ್ ರಸ್ತೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು...

ಪೊಲೀಸರ ದಾಳಿಗೆ ಹೆದರಿ ಓಡುವಾಗ ಜಾರಿ ಬಿದ್ದು ಯವಕ ಸಾವು

ಚಿಕ್ಕಮಗಳೂರು: ಪೊಲೀಸರ ದಾಳಿಗೆ ಹೆದರಿ ಓಡುವಾಗ ಜಾರಿ ಬಿದ್ದು ತಲೆ ಬಂಡೆಗೆ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿರುವ...

ಮನ್ ಕಿ ಬಾತ್‌ನಲ್ಲಿ ಚಿಕ್ಕಮಗಳೂರು ರೈತರ ಕೃಷಿ ವೈವಿಧ್ಯತೆಗೆ ಪ್ರಧಾನಿ ಮೋದಿ ಮೆಚ್ಚುಗೆ

ಚಿಕ್ಕಮಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 137ನೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರಿನ ರೈತರ...