ಕಡೂರು: ಎರಡು ಬೈಕ್ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವೃದ್ಧರೊಬ್ಬರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಕಡೂರು ತಾಲೂಕಿನ ನಾರಾಯಣಪುರ ಗ್ರಾಮದ ನಾಗರಾಜಪ್ಪ (65) ಮೃತಪಟ್ಟವರು.
ಮೇ 28 ರಂದು ಮಧ್ಯಾಹ್ನ ತಮ್ಮ ಟಿವಿಎಸ್ ಎಕ್ಸ್ಎಲ್ ಮೊಪೆಡ್ನಲ್ಲಿ ಕಡೂರಿನ ಸಂಬಂಧಿಕರ ಮನೆಗೆ ಹೋಗಿ ಬರುತ್ತಿದ್ದಾಗ, ಕರೆಕಲ್ ಹೊಳೆ ಗೇಟ್ ಸಮೀಪ ಎದುರಿನಿಂದ ಬಂದ ಯಮಹಾ ಆರ್15 ಬೈಕ್ ಸವಾರ ರುದ್ರೇಶ ಎಂಬಾತ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದಾನೆ.
ಅಪಘಾತದಲ್ಲಿ ನಾಗರಾಜಪ್ಪ ಅವರ ತಲೆ ಹಾಗೂ ಎದೆಗೆ ತೀವ್ರ ಪೆಟ್ಟಾಗಿತ್ತು. ಹಾಗೆಯೇ ಬೈಕ್ ಸವಾರ ರುದ್ರೇಶ ಹಾಗೂ ಹಿಂಬದಿ ಸವಾರ ಭರತ್ಗೂ ಗಾಯಗಳಾಗಿದ್ದವು. ನಾಗರಾಜಪ್ಪ ಅವರನ್ನು ಕಡೂರು ಹಾಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ನಂತರ ಬೆಂಗಳೂರಿಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. ಸಿಂಗಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Head-on collision between two bikes – elderly man dies
Leave a comment