Home Latest News ಗಾಂಧಿ ಜಯಂತಿಗೆ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಅರ್ಪಣೆ
Latest NewschikamagalurHomenamma chikmagalur

ಗಾಂಧಿ ಜಯಂತಿಗೆ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಅರ್ಪಣೆ

Share
Share

ಚಿಕ್ಕಮಗಳೂರು: ಅತ್ಯಾಧುನಿಕ ಮತ್ತು ಆಕರ್ಷಕವಾದ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ನಿರ್ಮಾಣ ಮಾಡಿ ಮಹಾತ್ಮ ಗಾಂಧಿ ಜಯಂತಿ ದಿನವೇ ಅರ್ಪಿಸುತ್ತಿರುವುದು ವಿಶೇಷ.

ಬ್ರಿಗೇಡ್ ಗ್ರೂಪ್ ನವರು ಹೊಸಮನೆ ಸರ್ಕಲ್ ನಲ್ಲಿ 8.000 ಚದುರ ಅಡಿ ಜಾಗದಲ್ಲಿ ಹದಿನೈದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡಿ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ಪ್ರತಿಷ್ಟಾಪನೆ ಮಾಡುತ್ತಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಸ್ಮಾರಕದ ಹಿಂಬದಿಯ ಗೋಡೆಯಲ್ಲಿ ನೂಲುವ ಚರಕ ಹಿಡಿದಿರುವ ಮಹಾತ್ಮ ಗಾಂಧಿಜೀಯವರ ಚಿತ್ರ ಕಲ್ಲುಗಳಿಂದ ಅಳವಡಿಸಲಾಗಿದ್ದು ಕಂಬಗಳ ಮೇಲೆ ಕೂಡ ಅಂಬೇಡ್ಕರ್ ಮತ್ತು ಗಾಂಧಿಜೀ ಚಿತ್ರಗಳಿವೆ.

ಬೆಲೆ ಬಾಳುವ ಕಲ್ಲುಗಳಿಂದ ಇಡೀ ಸ್ಮಾರಕ ನಿರ್ಮಿಸಿರುವುದು ಸುತ್ತಲೂ ಕಲ್ಲು ಹಾಸು ಒದಿಸುವುದರ ಜೊತೆಗೆ ಸುತ್ತ ಮುತ್ತಲಿನ ರಸ್ತೆಗಳಿಗೆ ಟಾರ್ ಹಾಕಿಸಲಾಗಿದೆ. ಝಗ ಮಗಿಸುವ ಬೆಳಕಿನ ಚಿತ್ತಾರ ಮತ್ತು ” ಟವರ್ ಕ್ಲಾಕ್ ” ಜನರ ಮನ ಸೆಳೆಯುವುದು ಖಚಿತ.ಇದರ ಜೊತೆಗೆ ಉತ್ತಮ ಕೆಫೆ ಕೂಡ ಇರುತ್ತದೆ ಎನ್ನಲಾಗಿದೆ.

ಕಳೆದ ಒಂಬತ್ತು ತಿಂಗಳಿಂದ ನೂರಾರು ಕೆಲಸಗಾರರು ,ಪರಿಣಿತರು ಮತ್ತು ಇಂಜಿನಿಯರ್ ಗಳು ಕೆಲಸ ಮಾಡಿದ್ದಾರೆ. ಚಿಕ್ಕಮಗಳೂರು ಜನರಷ್ಟೇ ಅಲ್ಲ ಪ್ರವಾಸಿಗರು ಬಂದು ಹೋಗುವಂತಹ ತಾಣವಾಗುವುದರಲ್ಲಿ ಅನುಮಾನವಿಲ್ಲಾ.

ಅಪಕರ್ಷಕ ವಿಶೇಷ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ನಿರ್ಮಾಣ ಮಾಡಿರುವ ಬ್ರಿಗೇಡ್ ಗ್ರೂಪ್ ಮಾಲೀಕರು ಜಿಲ್ಲೆಗೆ ನೀಡಿರುವ ಕೊಡುಗೆಯನ್ನು ಮುಕ್ತವಾಗಿ ಶ್ಲಾಘಸಿ ಸದಾಭಿನಂದನೆಗಳನ್ನು ಹೇಳ ಬೇಕು.

Memorial dedication of freedom fighters on Gandhi Jayanti

Share

Leave a comment

Leave a Reply

Your email address will not be published. Required fields are marked *

Don't Miss

ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ ರೈತರ ಸ್ಥಿತಿ ಅವಲೋಕಿಸಿದ ಸಚಿವ ಜಾರ್ಜ್

ಚಿಕ್ಕಮಗಳೂರು: ಸಕಾಲದಲ್ಲಿ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರು, ಒಣಗಿ ನಿಂತಿರುವ ಭೂಮಿ, ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆ ಒಡೆಯದೆ ಬಿಸಿಲಿನ ಝಳಕ್ಕೆ ಸಿಲುಕಿ ಸುಟ್ಟುಹೋಗಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ...

ಸಚಿವ ಕೆ.ಜೆ. ಜಾರ್ಜ್ ಬೆಂಗಾವಲು ವಾಹನ ಅಪಘಾತ

ಚಿಕ್ಕಮಗಳೂರು : ಅಜ್ಜಂಪುರ ಜಿಲ್ಲೆಯ ಬಯಲುಸೀಮೆ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆಗಾಗಿ ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರ ಬೆಂಗಾವಲು (Escort) ವಾಹನ ಅಪಘಾತಕ್ಕೀಡಾದ ಘಟನೆ ಅಜ್ಜಂಪುರ ಪಟ್ಟಣದಲ್ಲಿ...

Related Articles

ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಮಲೆನಾಡಿಗೆ ಕಂಟಕ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯದ ೧೦ ಜಿಲ್ಲೆಗಳ ೨೦ ಸಾವಿರಕ್ಕೂ ಅಧಿಕ ಚದರ ಕಿಲೋ...

ಅಂಗಾಂಗ ದಾನ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿ

ಚಿಕ್ಕಮಗಳೂರು: ಅಂಗಾಂಗ ದಾನ ಮಾಡಿ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ ಎಂದು ನಗರಸಭೆ ಪೌರಾಯುಕ್ತ...

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪ...

ಫಸಲ್ ಬಿಮಾ ನೋಂದಣಿ ಹೆಚ್ಚಿಸಲು ಜಿಲ್ಲಾಧಿಕಾರಿ ನಿರ್ದೇಶನ

ಚಿಕ್ಕಮಗಳೂರು: ಫಸಲ್ ಬಿಮಾ ಯೋಜನೆಯಡಿ ನೋಂದಣಿ ಕಡಿಮೆಯಾಗಿದ್ದು, ತಕ್ಷಣ ಅಗತ್ಯ ಪ್ರಚಾರ ಕೈಗೊಂಡು ರೈತರ ಮನವೊಲಿಸಿ...