Home namma chikmagalur chikamagalur ಬೀರೂರು ಬಳಿ ಬೈಕ್‌ಗೆ ಹಾಲಿನ ಆಟೋ ಡಿಕ್ಕಿಯಲ್ಲಿ ವ್ಯಕ್ತಿ ಸಾವು
chikamagalurHomeLatest Newsnamma chikmagalur

ಬೀರೂರು ಬಳಿ ಬೈಕ್‌ಗೆ ಹಾಲಿನ ಆಟೋ ಡಿಕ್ಕಿಯಲ್ಲಿ ವ್ಯಕ್ತಿ ಸಾವು

Share
Share

ಬೀರೂರು: ಹಾಲಿನ ಆಟೋವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಬೀರೂರು ಪಟ್ಟಣದ ರೇಣುಕಾ ರೈಸ್ ಮಿಲ್ ಸಮೀಪದ ರಾಷ್ಟ್ರೀಯ ಹೆದ್ದಾರಿ ಅಂಡರ್‌ಪಾಸ್ ಬಳಿ ಅ.19ರ ರಾತ್ರಿ ನಡೆದಿದೆ.

ಮೃತರನ್ನು ಬೀರೂರು ಸಮೀಪದ ದೊಡ್ಡಘಟ್ಟ ಗ್ರಾಮದ ಬಸವರಾಜಪ್ಪ (48) ಎಂದು ಗುರುತಿಸಲಾಗಿದೆ. ಇವರು ಕೃಷಿ ಕೆಲಸ ಮಾಡಿಕೊಂಡು ಗ್ರಾಮದಲ್ಲಿ ವಾಸವಾಗಿದ್ದರು. ಇವರ ಇಬ್ಬರು ಪುತ್ರರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಆಗಾಗ್ಗೆ ಗ್ರಾಮಕ್ಕೆ ಬಂದು ತಂದೆ-ತಾಯಿಯ ಯೋಗಕ್ಷೇಮ ವಿಚಾರಿಸುತ್ತಿದ್ದರು.

ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಅ.19ರಂದು ರಾತ್ರಿ ಸುಮಾರು 7.45ರ ವೇಳೆಯಲ್ಲಿ ಬಸವರಾಜಪ್ಪ ಅವರು ಕೆಎ-18-ಇಸಿ-1771 ಸಂಖ್ಯೆಯ ಬೈಕ್‌ನಲ್ಲಿ ದೊಡ್ಡಘಟ್ಟ ಗ್ರಾಮದತ್ತ ತೆರಳುತ್ತಿದ್ದರು. ಈ ವೇಳೆ ಬೀರೂರಿನ ರೇಣುಕಾ ರೈಸ್ ಮಿಲ್ ಸಮೀಪದ ರಾಷ್ಟ್ರೀಯ ಹೆದ್ದಾರಿ ಅಂಡರ್‌ಪಾಸ್ ಬಳಿ ಎದುರಿನಿಂದ ಬಂದ ಮ್ಯಾಕ್ಸಿಮಾ ಹಾಲಿನ ಆಟೋ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಬಸವರಾಜಪ್ಪ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು, ಕೈಕಾಲು ಹಾಗೂ ತಲೆಗೆ ಗಂಭೀರ ಗಾಯಗಳಾಗಿದ್ದವು. ಅಪಘಾತದ ಬಳಿಕ ಆಟೋದಲ್ಲಿದ್ದವರು ಅವರನ್ನು ಬೀರೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ವಿಷಯ ತಿಳಿದು ಆಸ್ಪತ್ರೆಗೆ ಬಂದ ಸಂಬಂಧಿಕರಿಗೆ ಬಸವರಾಜಪ್ಪ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಎಂಬುದು ತಿಳಿದುಬಂದಿದೆ.

ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಕಡೂರಿನ ಕೆಎಂಎಚ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರು ಶಿವಮೊಗ್ಗಕ್ಕೆ ಕರೆದೊಯ್ಯುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ವಾಹನದಲ್ಲಿ ಕರೆದೊಯ್ಯುತ್ತಿದ್ದಾಗ ಭದ್ರಾವತಿ ಪಟ್ಟಣದ ವ್ಯಾಪ್ತಿಯಲ್ಲಿ ಬಸವರಾಜಪ್ಪ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಪಘಾತದಲ್ಲಿ ಬೈಕ್‌ ಕೂಡ ಜಖಂಗೊಂಡಿದೆ.

ಈ ಸಂಬಂಧ ಮೃತರ ಸಂಬಂಧಿ ಡಿ.ಬಿ. ರಾಜಪ್ಪ ಅವರು ಬೀರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮ್ಯಾಕ್ಸಿಮಾ ಹಾಲಿನ ಆಟೋ ಚಾಲಕನ ಅತಿವೇಗ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ಆರೋಪಿಸಿ ನೀಡಿದ ದೂರಿನ ಮೇರೆಗೆ ಬೀರೂರು ಪೊಲೀಸ್ ಠಾಣೆಯಲ್ಲಿ ಮೊ.ನಂ. 164/2026ರಂತೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 281 ಮತ್ತು 106(1) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Man dies after milk auto collides with bike near Birur

Share

Leave a comment

Leave a Reply

Your email address will not be published. Required fields are marked *

Don't Miss

ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲ: ಎಕರೆಗೆ ₹50 ಸಾವಿರ ಪರಿಹಾರಕ್ಕೆ ರೈತ ಸಂಘ ಆಗ್ರಹ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆಯ ಬಹುತೇಕ ಪ್ರದೇಶಗಳು ಬರ ಪರಿಸ್ಥಿತಿ ಎದುರಿಸುತ್ತಿದ್ದು, ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ರೈತ...

ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ ಸಿಪಿಐ (ಎಂಎಲ್) ಪ್ರತಿಭಟನೆ

ಚಿಕ್ಕಮಗಳೂರು: ನಗರದ ಅಜಾದ್ ಪಾರ್ಕಿನಲ್ಲಿ ಬುಧವಾರ ಸಿಪಿಐ (ಎಂಎಲ್) ರೆಡ್ ಸ್ಟಾರ್ ಜಿಲ್ಲಾ ಸಂಘಟನೆಯು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಹಾಗೂ...

Related Articles

ಆರದವಳ್ಳಿ ಗ್ರಾಮದಲ್ಲಿ ವಿಜಯದಶಮಿ ಸಂಪ್ರದಾಯಿಕ ಆಚರಣೆ

ಚಿಕ್ಕಮಗಳೂರು: ದಸರಾ ನವರಾತ್ರಿ ನಾಡಹಬ್ಬದ ಅಂಗವಾಗಿ ತಾಲ್ಲೂಕಿನ ಅಂಬಳೆ ಹೋಬಳಿಯ ಆರದವಳ್ಳಿ ಗ್ರಾಮದಲ್ಲಿ ನೂ ರಾರು...

ಬೀಕನಹಳ್ಳಿ ಗ್ರಾಮಕ್ಕೆ ನಗರ ವಿದ್ಯುತ್ ಸಂಪರ್ಕ

ಚಿಕ್ಕಮಗಳೂರು: ನಗರದ ಸಮೀಪದ ದೊಡ್ಡ ಗ್ರಾಮಗಳಲ್ಲಿ ಒಂದಾದ ಬೀಕನಹಳ್ಳಿಯಲ್ಲಿ ಗ್ರಾಮಾಂತರ ವಿದ್ಯುತ್ ವ್ಯವಸ್ಥೆಯನ್ನು ನಗರ ವಿದ್ಯುತ್...

ದೇವಿರಮ್ಮನವರ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ

ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಬಿಳ್ಳಿಗಾರ್ ದೇವಿರಮ್ಮನವರ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು...

ದೇಶದ ಶಾಂತಿ, ಭದ್ರತೆಗಾಗಿ ಪೊಲೀಸರ ತ್ಯಾಗ ಸ್ಮರಣೀಯ

ಚಿಕ್ಕಮಗಳೂರು: ಖಾಕಿ ಸಮವಸ್ತ್ರವು ಜನರ ವಿಶ್ವಾಸದ ಸಂಕೇತವಾಗಿದ್ದು, ದೇಶದ ಗಡಿ ರಕ್ಷಣೆ, ಆಂತರಿಕ ಭದ್ರತೆ ಹಾಗೂ...