Home namma chikmagalur chikamagalur ಅ.18ರಂದು ಕಬಡ್ಡಿ ಆಟಗಾರರ ಆಯ್ಕೆ ಪ್ರಕ್ರಿಯೆ
chikamagalurHomeLatest Newsnamma chikmagalur

ಅ.18ರಂದು ಕಬಡ್ಡಿ ಆಟಗಾರರ ಆಯ್ಕೆ ಪ್ರಕ್ರಿಯೆ

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಜಿಲ್ಲೆಯ 25 ವರ್ಷದೊಳಗಿನ ಪುರುಷರು ಹಾಗೂ 14 ವರ್ಷದೊಳಗಿನ ಬಾಲಕಿಯರ ಕಬಡ್ಡಿ ತಂಡಗಳ ಆಯ್ಕೆ ಪ್ರಕ್ರಿಯೆಯನ್ನು ಅ.18ರ ಭಾನುವಾರ ಬೆಳಿಗ್ಗೆ 11.30ಕ್ಕೆ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಲಾಗಿದೆ.

ನ.13ರಿಂದ 15ರವರೆಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆಯಲಿರುವ ಸಿ ಜೋನ್ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಜಿಲ್ಲೆಯ ಪುರುಷರ ತಂಡ ಹಾಗೂ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಒಲಿಂಪಿಕ್ ಅಸೋಸಿಯೇಷನ್ ವತಿಯಿಂದ ನಡೆಯಲಿರುವ ಅಂಡರ್‌-14 ಬಾಲಕಿಯರ ಕಬಡ್ಡಿ ಚಾಂಪಿಯನ್‌ಶಿಪ್‌ಗಾಗಿ ಆಟಗಾರ್ತಿಯರ ಆಯ್ಕೆ ನಡೆಯಲಿದೆ.

ಅರ್ಹತಾ ಮಾನದಂಡಗಳು

  • 25 ವರ್ಷದೊಳಗಿನ ಪುರುಷರ ದೇಹದ ತೂಕ 85 ಕೆ.ಜಿ. ಒಳಗಿರಬೇಕು. ಜನವರಿ 1, 2001ರ ನಂತರ ಜನಿಸಿರಬೇಕು.
  • 14 ವರ್ಷದೊಳಗಿನ ಬಾಲಕಿಯರ ದೇಹದ ತೂಕ 55 ಕೆ.ಜಿ. ಒಳಗಿರಬೇಕು. ನವೆಂಬರ್ 18, 2012ರ ನಂತರ ಜನಿಸಿರಬೇಕು.
  • ಆಧಾರ್ ಕಾರ್ಡ್, ಜನನ ಪ್ರಮಾಣಪತ್ರ ಹಾಗೂ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅಥವಾ ಪಾಸ್‌ಪೋರ್ಟ್ ತರಬೇಕು.
  • ಆಯ್ಕೆಯಲ್ಲಿ ಭಾಗವಹಿಸುವ ಆಟಗಾರರು ತಮ್ಮ ಕ್ಲಬ್ ಮೂಲಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನಲ್ಲಿ ನೋಂದಣಿಯಾಗಿರಬೇಕು.
  • 14 ವರ್ಷದೊಳಗಿನ ಬಾಲಕಿಯರು ಬ್ಯಾಂಕ್ ಪಾಸ್‌ಬುಕ್ ತರಬೇಕು.

ಜಿಲ್ಲೆಯ ಅರ್ಹ ಕಬಡ್ಡಿ ಆಟಗಾರರು ಹಾಗೂ ಆಟಗಾರ್ತಿಯರು ನಿಗದಿತ ಸಮಯಕ್ಕೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗುವಂತೆ ಅಸೋಸಿಯೇಷನ್ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

  • ಮಂಜು ರಾಜ್ ಅರಸ್: 6360958827
  • ದಿನೇಶ್ ಎಂ.ಈ.: 9449557201
  • ಧರ್ಮೇಶ್ ಎಂ.ಡಿ.: 9035924959

Selection process for Kabaddi players on Oct 18

Share

Leave a comment

Leave a Reply

Your email address will not be published. Required fields are marked *

Don't Miss

ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಚಿಕ್ಕಮಗಳೂರು: ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ೧೫ ಸಾವಿರ ಮಾಸಿಕ ಗೌರವಧನ ನೀಡುವುದು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ  ನೇತೃತ್ವದಲ್ಲಿ ಶುಕ್ರವಾರ...

ಜಿಲ್ಲಾಧಿಕಾರಿಯಿಂದ ಮಳಲೂರು ಏತನೀರಾವರಿ ಸ್ಥಳ ಪರಿಶೀಲನೆ

ಚಿಕ್ಕಮಗಳೂರು:  ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ತಾಲೂಕಿನ ಮಳಲೂರು ಏತನೀರಾವರಿ ಯೋಜನೆಯ ಕಾಮಗಾರಿಗಳನ್ನು ಸಮಗ್ರವಾಗಿ ಪೂರ್ಣಗೊಳಿಸಲು ಕಾವೇರಿ ನೀರಾವರಿ ನಿಗಮದಿಂದ (ಸಿಎನ್‌ಎನ್‌ಎಲ್) ರೂ.೨೧.೫ ಕೋಟಿ ವೆಚ್ಚದ ನೂತನ ವಿಸ್ತೃತ ಯೋಜನಾ ವರದಿ...

Related Articles

ಆಸ್ಟ್ರೇಲಿಯಾದಲ್ಲಿ ವರದಕ್ಷಿಣೆ ಕಿರುಕುಳ ಆರೋಪ

ತರೀಕೆರೆ: ಆಸ್ಟ್ರೇಲಿಯಾದಲ್ಲಿ ವಾಸವಿದ್ದಾಗ ಹೆಚ್ಚುವರಿ ವರದಕ್ಷಿಣೆಗಾಗಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ, ತನ್ನ ಸಂಬಳವನ್ನೂ...

ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಟಯರ್ ಕಳಚಿ ಬಿತ್ತು!

ಕೊಪ್ಪ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಟಯರ್ ಏಕಾಏಕಿ ಕಳಚಿ ಬಿದ್ದ ಪರಿಣಾಮ, ಬಸ್ಸಿನಲ್ಲಿದ್ದ 50ಕ್ಕೂ ಹೆಚ್ಚು...

ಅ.25ರಂದು ಮ್ಯಾರಥಾನ್ – ಸೈಕ್ಲಿಂಗ್ ಕ್ರೀಡಾಕೂಟ

ಚಿಕ್ಕಮಗಳೂರು: ಕಾಫಿನಾಡಿನ ಪ್ರಕೃತಿ ಸೌಂದರ್ಯದ ನಡುವೆ ಓಟ ಮತ್ತು ಸೈಕ್ಲಿಂಗ್ ಕ್ರೀಡೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಚಿಕ್ಕಮಗಳೂರು...

ಸ್ಕೂಟರ್‌ಗಳು ಏಕಾಏಕಿ ಹೊತ್ತಿ ಉರಿದ ಎಲೆಕ್ನಿಕ್ ಸ್ಕೂಟರ್‌

ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ ಎರಡು ಎಲೆಕ್ನಿಕ್ ಸ್ಕೂಟರ್‌ಗಳು ಏಕಾಏಕಿ ಹೊತ್ತಿ ಉರಿದು ಸಂಪೂರ್ಣ ಭಸ್ಮವಾಗಿರುವ ಆಘಾತಕಾರಿ...