Home ಇಂದಿನಿಂದ ಮದ್ಯದ ದರ ಶೇ.30 ಹೆಚ್ಚಳ
HomeLatest Newsnamma chikmagalurState News

ಇಂದಿನಿಂದ ಮದ್ಯದ ದರ ಶೇ.30 ಹೆಚ್ಚಳ

Share
Share

ಬೆಂಗಳೂರು: ಮದ್ಯದಲ್ಲಿನ ಆ‌ಲ್ಕೋಹಾಲ್ ಪ್ರಮಾಣ ಆಧರಿಸಿ ತೆರಿಗೆ ವಿಧಿಸುವ ಹೊಸ ಅಬಕಾರಿ ನೀತಿಯು ರಾಜ್ಯದಲ್ಲಿ ಅಧಿಕೃತವಾಗಿ ಜಾರಿಯಾಗಿದ್ದು, ಇದರೊಂದಿಗೆ ಜನಸಾಮಾನ್ಯರು ಬಳಸುವ ಅಗ್ಗದ ಮದ್ಯಗಳ ಬೆಲೆ ಶೇ.30ರಷ್ಟು ದುಬಾರಿಯಾಗಲಿದೆ. ಪ್ರೀಮಿಯಂ ಮತ್ತು ಐಷಾರಾಮಿ ವಿದೇಶಿ ಬ್ರಾಂಡ್ ಮದ್ಯಗಳ ದರ ಗಣನೀಯವಾಗಿ ಇಳಿಕೆಯಾಗಲಿದೆ.

ರಾಜ್ಯದಲ್ಲಿ ಈವರೆಗೆ ಅಸ್ತಿತ್ವದಲ್ಲಿದ್ದ ದಶಕಗಳಷ್ಟು ಹಳೆಯದಾದ ‘ಬಲ್ಕ್ ಲೀಟರ್’ ಆಧಾರಿತ ಸ್ಟ್ರಾಬ್ ವಾರು ತೆರಿಗೆ ಪದ್ಧತಿಗೆ ಇತಿಶ್ರೀ ಹಾಡಿರುವ ಸರಕಾರ, ದೇಶದಲ್ಲೇ ಮೊದಲ ಬಾರಿಗೆ ಆಲೋಹಾಲ್ ಇನ್ ಬಿವರೇಜ್ (ಎಐಬಿ) ಅಬಕಾರಿ ನೀತಿಯನ್ನು ಸೋಮವಾರದಿಂದ (ಮೇ 11) ಅಧಿಕೃತವಾಗಿ ಜಾರಿ ಮಾಡಿದೆ. ಹೊಸ ಅಬಕಾರಿ ನೀತಿಯಿಂದ ಆದಾಯ ವೃದ್ಧಿಯಾಗಲಿದೆ ಮತ್ತು ಮದ್ಯವ್ಯಸನಿಗಳ ಸಂಖ್ಯೆ ತಗ್ಗಲಿದೆ ಎಂದು ನಿರೀಕ್ಷಿಸಲಾಗಿದೆ.

ಹೊಸ ನೀತಿಯಲ್ಲಿ ಅಬಕಾರಿ ಸ್ಟ್ರಾಬ್‌ಗಳ ಸಂಖ್ಯೆಯನ್ನು 16ರಿಂದ 8ಕ್ಕೆ ಇಳಿಸಲಾಗಿದೆ. ಈ ಸರಳೀಕರಣವು ತೆರಿಗೆ ವ್ಯವಸ್ಥೆಯನ್ನು ಸುಲಭಗೊಳಿಸಿದ್ದರೂ ಇದರ ನೇರ ಹೊಡೆತ ಅಗ್ಗದ ಮದ್ಯ ಖರೀದಿಸುವ ಗ್ರಾಹಕರ ಮೇಲೆ ಬೀಳಲಿದೆ. ಸಾಮಾನ್ಯ ಜನರು ಹೆಚ್ಚಾಗಿ ಬಳಸುವ ವಿಸ್ಕಿ, ರಮ್, ಬ್ರಾಂಡಿ ಮತ್ತು ವೋಡ್ಕಾ ಬೆಲೆ ಭಾರಿ ಏರಿಕೆಯಾಗಲಿದೆ. ಮುಖ್ಯವಾಗಿ 180 ಮಿ.ಲೀ (ಕ್ವಾರ್ಟರ್) ಟೆಟ್ರಾ ಪ್ಯಾಕ್ ಮತ್ತು ಬಾಟಲಿಗಳ
ದರ ಹೆಚ್ಚಳದ ಸಾಧ್ಯಾಸಾಧ್ಯತೆ

ಮದ್ಯದ ಬೆಲೆ ಶೇ.20ರಿಂದ 30ರಷ್ಟು ಹೆಚ್ಚಳವಾಗಲಿದೆ. ಕಳೆದ ವರ್ಷ 63 ರೂ. ಇದ್ದ ಕ್ವಾರ್ಟರ್ ಮದ್ಯದ ಬೆಲೆ, ಇತ್ತೀಚಿನ ಏರಿಕೆಯ ನಂತರ 80 ರೂ.ಗೆ ತಲುಪಿತ್ತು. ಈಗ ಹೊಸ ನೀತಿಯಿಂದ ಇದು 105 ರೂ.ಗೆ ಏರಿಕೆಯಾಗುವ ಸಾಧ್ಯತೆಯಿದೆ.  ಕರ್ನಾಟಕ ಬ್ರಿವರ್ಸ್ ಆ್ಯಂಡ್ ಡಿಸ್ಟಿಲ್ಲರ್ಸ್ ಅಸೋಸಿಯೇಷನ್ (ಕೆಬಿಡಿಎ) ಪ್ರಕಾರ, ಅಗ್ಗದ ದರವಿದ್ದ ಮೊದಲ ಐದು ಸ್ಟ್ರಾಬ್‌ಗಳ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) ಶೇ.20ರಿಂದ 30ರಷ್ಟು ಹೆಚ್ಚಿಸಲಾಗಿದೆ. ರಾಜ್ಯದ ಒಟ್ಟಾರೆ ಅಬಕಾರಿ ಆದಾಯದಲ್ಲಿ ಮೊದಲ ಐದು ಫ್ಲ್ಯಾಬ್‌ನ ಮದ್ಯಗಳ ಕೊಡುಗೆ ಶೇ.70ರಿಂದ 75ರಷ್ಟಿದೆ. ಜನಸಾಮಾನ್ಯರ ಮೆಚ್ಚಿನ ಆಯ್ಕೆಯ ಅಗ್ಗದ ಮದ್ಯದ ಮೇಲೆಯೇ ಹೆಚ್ಚಿನ ತೆರಿಗೆ ವಿಧಿ ಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಬಳಸುವ ಅಥವಾ ವಿದೇಶಿ ಮೂಲದ ಪ್ರೀಮಿಯಂ ಬ್ರಾಂಡ್‌ಗಳಾದ ಡಿಯಾಜಿಯೊ, ಪೆರ್ನಾಡ್ ರಿಕಾರ್ಡ್ ಮತ್ತು ಯುನೈಟೆಡ್ ಸ್ಪಿರಿಟ್ಸ್‌ನಂತಹ ಕಂಪನಿಗಳ ಮದ್ಯದ ಬೆಲೆಯು ಶೇ.16ರಿಂದ 20ರಷ್ಟು ಇಳಿಕೆಯಾಗುವ ಅಂದಾಜಿದೆ. 6ರಿಂದ 8ನೇ ಫ್ಲ್ಯಾಬ್‌ನಲ್ಲಿ ಬರುವ ಈ ಮದ್ಯಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.10ರಿಂದ 15ರಷ್ಟು ಕಡಿಮೆ ಮಾಡಲಾಗಿದೆ. ಇದರಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ದೊಡ್ಡ ಮಟ್ಟದ ಲಾಭವಾಗಲಿದೆ ಎಂಬ ಆಕ್ಷೇಪಣೆ ಕೇಳಿಬಂದಿದೆ.

ಅಬಕಾರಿ ನೀತಿಯು ಸ್ಥಳೀಯ ಮದ್ಯ ತಯಾರಿಕಾ ಘಟಕಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ದೊಡ್ಡ ಪ್ರಮಾಣದಲ್ಲಿ ಮದ್ಯ ಉತ್ಪಾದಿಸುವ ಬಹುರಾಷ್ಟ್ರೀಯ ಕಂಪನಿಗಳು ಬೆಲೆ ಏರಿಳಿತವನ್ನು ಸರಿದೂಗಿಸಿಕೊಳ್ಳಬಲ್ಲವು. ಆದರೆ, ಬಜೆಟ್ ಅಥವಾ ಅಗ್ಗದ ಮದ್ಯದ ಉತ್ಪಾದನೆಯನ್ನೇ ನೆಚ್ಚಿಕೊಂಡಿರುವ ಸ್ಥಳೀಯ ಸಣ್ಣ ಘಟಕಗಳ ವ್ಯವಹಾರ ಕುಸಿದು ಮುಚ್ಚುವ ಹಂತಕ್ಕೆ ತಲುಪಬಹುದು ಎಂದು ಕೆಬಿಡಿಎ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

Liquor prices to increase by 30% from today

Share

Leave a comment

Leave a Reply

Your email address will not be published. Required fields are marked *

Don't Miss

ಪ್ರತಾಪ ಸಿಂಹ ವಿರುದ್ಧ ಭೀಮ್ ಆರ್ಮಿ ಪ್ರತಿಭಟನೆ

ಚಿಕ್ಕಮಗಳೂರು: ದಲಿತ ಸಂಘಟನೆಗಳ ಬಗ್ಗೆ ಮಾಜಿ ಸಂಸದ ಪ್ರತಾಪ ಸಿಂಹ ಲಘುವಾಗಿ ಮಾತನಾಡಿದ್ದು, ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಭೀಮ್ ಆರ್ಮಿ ಮುಖಂಡರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ನಗರದ...

ಕಸ್ತೂರಿರಂಗನ್ ವರದಿ ವಿರೋಧಿಸಿ ಶೃಂಗೇರಿ ಬಂದ್‌ ಯಶಸ್ವಿ

ಶೃಂಗೇರಿ: ಕಸ್ತೂರಿರಂಗನ್ ವರದಿ ವಿರೋಧಿ ಸಮಿತಿ ನೇತೃತ್ವದಲ್ಲಿ ಸೋಮವಾರ ಕರೆ ನೀಡಿದ್ದ ಶೃಂಗೇರಿ ಪಟ್ಟಣ ಬಂದ್ ಯಶಸ್ವಿಯಾಯಿತು. ಬಂದ್ ಅಂಗವಾಗಿ ನಡೆದ ಪಟ್ಟಣದ ಸ್ವಾಗತ ಮಂಟಪದಿಂದ ಕುವೆಂಪು ಬಸ್ ನಿಲ್ದಾಣದವರೆಗೆ ನಡೆದ...

Related Articles

ತಂದೆ-ಮಗಳ ಗಾಯನ ಮಾಧುರ್ಯಕ್ಕೆ ಮನಸೋತ ಶ್ರೋತೃಗಳು

ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಸಂಜೆ ಅನುರಣಿಸಿದ ಕರ್ನಾಟಕ ಶಾಸ್ತ್ರೀಯ ಹಾಗೂ ಹರಿದಾಸ ಸಾಹಿತ್ಯದ...

ಭತ್ತದ ಗದ್ದೆಯಲ್ಲಿ 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ

ಕಳಸ: ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರ ಕಣ್ಣಿಗೆ ಸುಮಾರು 12 ಅಡಿ ಉದ್ದದ ಬೃಹತ್...

ತಂದೆ-ಮಗಳ ಗಾಯನ ಮಾಧುರ್ಯಕ್ಕೆ ಮನಸೋತ ಶ್ರೋತೃಗಳು

ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಸಂಜೆ ಅನುರಣಿಸಿದ ಕರ್ನಾಟಕ ಶಾಸ್ತ್ರೀಯ ಹಾಗೂ ಹರಿದಾಸ ಸಾಹಿತ್ಯದ...

ಅಕ್ಟೋಬರ್ ೧ ರಿಂದ ವಿದ್ಯುತ್ ಪೂರೈಕೆ ಸುಧಾರಣೆ

ಚಿಕ್ಕಮಗಳೂರು: ಜಿಲ್ಲೆಯ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಹೆಚ್ಚಿಸುವುದು ಸೇರಿದಂತೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ...