Home namma chikmagalur chikamagalur ಮೇ 17ಕ್ಕೆ ಮುಂಡಾಲ ಸಮಾಜದ ತಾಲೂಕು ಸಮ್ಮೇಳನ
chikamagalurHomeLatest Newsnamma chikmagalur

ಮೇ 17ಕ್ಕೆ ಮುಂಡಾಲ ಸಮಾಜದ ತಾಲೂಕು ಸಮ್ಮೇಳನ

Share
Oplus_153223168
Share

ಚಿಕ್ಕಮಗಳೂರು: ಕೈಮರ ಸಮೀಪದ ದಾಸರಹಳ್ಳಿಯ ಸಿದ್ದೇಶ್ವರ ಸಮುದಾಯ ಭವನದಲ್ಲಿ ಮುಂಡಾಲ ಸಮಾಜದ ಚಿಕ್ಕಮಗಳೂರು ತಾಲೂಕು ಸಮಿತಿಯಿಂದ ಮೇ ೧೭ರಂದು ಮುಂಡಾಲ ಸಮಾಜದ ತಾಲೂಕು ಮಹಾಸಭೆ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಮುಂಡಾಲ ಸಮಾಜದ ಜಿಲ್ಲಾಧ್ಯಕ್ಷ ವೈ.ಜೆ.ಸುರೇಶ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿ, ಸಂಘದ ಉದ್ದೇಶ, ಸಮಾಜದ ಸರ್ವ ಸದಸ್ಯರುಗಳಿಗೆ ಸಂಘಟನೆಯಿಂದ ಆಗುವ ಪ್ರಯೋಜನ, ಸಂಘದ ಏಳಿಗೆಗೆ ಮುಂದೆ ಮಾಡಬೇಕಾದ ಸಮಾಜಮುಖಿ ಕೆಲಸ ಕಾರ್ಯಗಳ ಬಗ್ಗೆ ಕಾರ್ಯಕ್ರಮದಲ್ಲಿ ತಿಳಿಸಲಾಗುವುದು. ಮುಂದೆ ಮುಂಡಾಲ ಸಮಾಜದ ಎಲ್ಲಾ ಸದಸ್ಯರು, ಸಮಾಜ ಬಾಂಧವರು ಒಟ್ಟಾಗಿ ಸೇರಿ ಸಂಘಟನೆ ಮುನ್ನಡೆಸಿಕೊಂಡು ಹೋಗುವುದರೊಂದಿಗೆ ಸಂಘದ ಏಳಿಕೆಗೆ ಒಂದಾಗಿ ಶ್ರಮಿಸಬೇಕಿದೆ ಎಂದು ಹೇಳಿದರು.

ಅಂದು ಬೆಳಿಗ್ಗೆ ೯.೩೦ಕ್ಕೆ ಮಹಾಸಭೆ ಸಮ್ಮೇಳನವನ್ನುಕಚ್ಚೂರು ಕ್ಷೇತ್ರದ ಧರ್ಮದರ್ಶಿ ಗೋಕುಲ್‌ದಾಸ್ ಉದ್ಘಾಟಿಸುವರು.ಮುಂಡಾಲ ಸಮಾಜದ ತಾಲೂಕು ಅಧ್ಯಕ್ಷ ವಿಜಯಕುಮಾರ್ ಅಧ್ಯಕ್ಷತೆವಹಿಸುವರು.ಸಮಾಜದ ಜಿಲ್ಲಾಗೌರವಾಧ್ಯಕ್ಷ ಜೆ.ಸಿ.ಲಕ್ಷ್ಮಣ ಪ್ರಾಸ್ತಾವಿಕವಾಗಿ ಮಾತನಾಡುವರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಕೆ.ಜೆ.ಜಾರ್ಜ್,ಸಂಸದ ಕೋಟಶ್ರೀನಿವಾಸಪೂಜಾರಿ, ಶಾಸಕ ಹೆಚ್.ಡಿ.ತಮ್ಮಯ್ಯ, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಸಿ.ಟಿ.ರವಿ, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿಶಾಂತೇಗೌಡ ಸಿಡಿಎ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಮಲ್ಲೇಶ್ವರ ಎಸ್ಟೇಟ್‌ನ ಮಿಥನ್ ಭಾಗವಹಿಸುವರೆಂದರು.

ಬಿಜೆಪಿ ಮುಖಂಡ ಅನಿಲ್‌ಕುಮಾರ್, ದಾಸರಹಳ್ಳಿ ಪಂಚಾಯಿತಿ ಮಾಜಿ ದಸ್ಯ ಎಂ.ಟಿ.ಸತೀಶ್, ವಿವಿಧ ಸಂಘಟನೆ ಮುಖಂಡರಾದ ಪಿ.ಸಿ.ರಾಜೇಗೌಡ, ಡಿ.ಸುರೇಶ್, ದಾನೇಶ್,ಜೆ.ಡಿ.ಲೋಕೇಶ್, ಚನ್ನಕೇಶವ, ಮಂಜುನಾಥ, ಡಿ.ವಿ.ಸಂಜಯ್, ಬಿ.ಎಲ್.ಪ್ರವೀಣ್, ಈಶ್ವರ್, ಟಿ.ಎಸ್.ಶಿವಕುಮಾರ್, ದೀಪಕ್, ಅವಿಲಚಂದ್ರಶೇಖರ್, ಚಂದ್ರು, ವಿನೋದನಾಗೇಶ್, ಮಂಜುನಾಥ, ಲಲಿತಶಂಕರ್, ಲಕ್ಷ್ಮಣ್, ಶಾರದಗೋಪಾಲ್, ಜಯಲಕ್ಷ್ಮಿ, ವಸಂತಪ್ರಮೋದ್, ಅಕ್ಷತಾಸುರೇಶ್, ಎಂ.ಎಸ್.ರಾಜಪ್ಪ, ಹರೀಶ್, ಸತೀಶ್, ಚರಣ್, ಎಂ.ಟಿ.ಗುರುರಾಜ್, ಸುಜಾತಕೃಷ್ಣಪ್ಪ ಇದ್ದರು.

Mundala Samaj Taluk Conference on May 17th

Share

Leave a comment

Leave a Reply

Your email address will not be published. Required fields are marked *

Don't Miss

ಲಕ್ಯಾ-ಸಖರಾಯಪಟ್ಟಣ ಹೋಬಳಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಇಂಧನ ಸಚಿವ ಮನವಿ

ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಯಾ ಹಾಗೂ ಸಖರಾಯಪಟ್ಟಣ ಹೋಬಳಿಗಳಲ್ಲಿ ರೈತರು ಎದುರಿಸುತ್ತಿರುವ ತೀವ್ರ ವಿದ್ಯುತ್ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಅವರು...

ಬಿರಂಜಿ ಹೊಳೆಯಿಂದ ರೈತಾಪಿ ವರ್ಗದ ಬೃಹತ್ ಪಾದಯಾತ್ರೆ

ಚಿಕ್ಕಮಗಳೂರು:  ಜಾವಣಿಗೆ ನಾಡಿನ ರೈತರ ಜಮೀನುಗಳಿಗೆ ನೀರು ಹರಿಸುವಲ್ಲಿ ವಿಫಲಗೊ ಂಡಿರುವ ಸರ್ಕಾರದ ಆಡಳಿತ ವ್ಯವಸ್ಥೆ ವಿರುದ್ಧ ಮಂಗಳವಾರ ರೈತ ಸಂಘ- ಹಸಿರುಸೇನೆ ತಾಲ್ಲೂಕು ಘಟ ಕ ಕರೆ ನೀಡಿದ್ಧ ಪ್ರತಿಭಟನೆಯಲ್ಲಿ...

Related Articles

ದೊಣ್ಣೆಯಿಂದ ಹಲ್ಲೆಯಾದ ಭಿಕ್ಷುಕನ ಸಾವು

ತರೀಕೆರೆ: ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಸುಮಾರು 65 ವರ್ಷದ ವ್ಯಕ್ತಿಯೊಬ್ಬರನ್ನು ದೊಣ್ಣೆಯಿಂದ ಹೊಡೆದು, ಕಾಲಿನಿಂದ...

ಅಜ್ಜಂಪುರದಲ್ಲಿ ಅಪರಿಚಿತ ವಾಹನ ಡಿಕ್ಕಿಗೆ ವ್ಯಕ್ತಿ ಸಾವು

ಅಜ್ಜಂಪುರ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಚಾಲಕ ವಾಹನ...

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಪ್ರತಿಭಟನೆ

ಚಿಕ್ಕಮಗಳೂರು: ಜಿಲ್ಲೆಯ ಭೀಕರ ಬರಗಾರದ ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಚಿಕ್ಕಮಗಳೂರು ತಾಲ್ಲೂಕನ್ನು...

ಜ್ಞಾನೇಶ್ ಕುಮಾರ್ ವಜಾಗೊಳಿಸಿ ಬಂಧಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರ ಧರಣಿ

ಚಿಕ್ಕಮಗಳೂರು: ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಜೊತೆಗೆ ಬಿಜೆಪಿ...