Home namma chikmagalur chikamagalur ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕ ಉದ್ಘಾಟನೆ
chikamagalurHomeLatest Newsnamma chikmagalur

ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕ ಉದ್ಘಾಟನೆ

Share
Share

ಚಿಕ್ಕಮಗಳೂರು: ಕರ್ನಾಟಕದಲ್ಲಿ ಕನ್ನಡವೇ ಶ್ರೇಷ್ಠ ಭಾಷೆ ಕನ್ನಡಕ್ಕೆ ಕುಂದು ಬಾರದತೆ ಎಚ್ಚರಿಕೆ ವಹಿಸಿ ಉಳಿಸಿ ಬೆಳೆಸ ಬೇಕಾಗಿದೆ. ಅನ್ಯ ಭಾಷಿಕರು ಹೆಚ್ಚಳವಾಗಿ ದ್ದು ಅವರವರ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ.ಜೊತೆಗೆ ಇಂಗ್ಲೀಷ್ ಕಾನ್ವೆಂಟ್ ಹೆಚ್ಚುತ್ತಿದ್ದು ಕನ್ನಡ ಅಪಾಯದಲ್ಲಿ ಇದೆ ಕನ್ನಡಿಗರು ಎಚ್ಚೆತ್ತು ಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಶಿವರಾಮೇಗೌಡ ಕರೆ ನೀಡಿದರು.

ಇತ್ತೀಚೆಗೆ ರತ್ನಗಿರಿ ರಸ್ತೆಯಲ್ಲಿ ಇರುವ ನೂತನ ಬ್ಯಾಂಕ್ ನ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯ ಲ್ಲಿ ಸಂಘಟನೆ ಕಟ್ಟಲು ದೃಢ ಸಂಕಲ್ಪ ಮಾಡಿದ್ದು ಇಂದು ಮಹಿಳಾ ಘಟಕಕ್ಕೆ ಚಾಲನೆ ನೀಡಿ ಮಹಿಳಾ ಘಟಕದ ಅಧ್ಯಕ್ಷರಾಗಿ ಸುನೀತಾ ಮತ್ತು ಉಪಾಧ್ಯಕ್ಷರಾಗಿ ಸಿಂಧುರವರನ್ನು ನೇಮಕ ಮಾಡಲಾಗಿದೆ ಎಂದರು.ಹೆಣ್ಣುಮಕ್ಕಳು ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಂಡರೆ ಮನೆಯಲ್ಲಿ, ಶಾಲೆಯಲ್ಲಿ ಊರುಗಳಲ್ಲಿ, ನಗರಗಳಲ್ಲಿ ಕನ್ನಡ ಭಾಷೆ ಬೆಳೆಸಲು ಶಕ್ತಿಯಾಗುತ್ತಾರೆ ಎಂದರು.

ರಕ್ಷಣಾ ವೇದಿಕೆಯ ಮುಖಂಡ ರಕ್ಷಿತ್ ಗೌಡ ಮಾತನಾಡಿ ಮಹಿಳೆಯರು ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇಂದಿವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯವಾಗಿರುವುದರಿಂದ ಹಲವು ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಪತ್ರಕರ್ತ ಎನ್.ರಾಜು ಮಾತನಾಡಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ಕಾನ್ವೆಂಟ್ ಸಂಖ್ಯೆ ಹೆಚ್ಚುತ್ತಿದ್ದು ನಮ್ಮ ಕನ್ನಡ ಭಾಷೆಗೆ ಅಪಾಯದ ಸನ್ನಿವೇಶ ಸೃಷ್ಟಿ ಮಾಡುತ್ತಿದ್ದಾರೆ.ಕನ್ನಡ ಶಾಲೆಗಳಿಗೆ ಒತ್ತು ಕೊಟ್ಟು ಆಧುನಿಕ ವ್ಯವಸ್ಥೆ ಮಾಡಿಕೊಡುವುದನ್ನು ಮರೆತ ಸರ್ಕಾರಗಳು ಕನ್ನಡದ ಕತ್ತು ಹಿಸುಕುತ್ತಿವೆ.ಇಂತಹ ಸಂದರ್ಭದಲ್ಲಿ ಸಂಘಟನೆಗಳ ಅವಶ್ಯಕತೆ ಇದೆ.ಆದರೆ ಸಂಘಗಳು ಲೆಟರ್ ಹೆಡ್ ಮತ್ತು ವಿಜೀಟಿಂಗ್ ಕಾರ್ಡ್ ಗಳಿಗೆ ಸೀಮಿತ ವಾಗುತ್ತಿರುವುದು ವಿಷಾದನೀಯ ಎಂದರು.

ನೂತನ ಅಧ್ಯಕ್ಷರಾದ ಸುನೀತಾ ಸಂಘಟನೆ ಕಟ್ಟಲು ಸಹಕಾರ ಕೋರಿ ನೇಮಕ ಮಾಡಿದ್ದಕ್ಕೆ ಕೃತಜ್ಞತೆ ತಿಳಿಸಿದರು. ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡಿದವರನ್ನು ಇದೇ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು.ರೈತ ಸಂಘಟನೆಯ ಗುರುಶಾಂತಪ್ಪ,ಸಾಹಿತಿ ಕುಂದೂರು ಅಶೋಕ್, ಪತ್ರಕರ್ತ ಹೆಚ್.ಎಸ್.ಪುಟ್ಟಸ್ವಾಮಿ ,ಹೋರಾಟಗಾರ ಬಿ.ಅಮ್ಜದ್, ಡ್ಯಾನ್ಸ್ ಮಾಸ್ಟರ್ ಪ್ರಸಿದ್ಧ ಅಮೀನ್,ಕಲಾವಿದೆ ಮಂಜುಳಾ, ಸಾಮಾಜೀಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಡಿಂಪಲ್ ಕೋವೆಲ್ಲೂ ಮತ್ತು ನಾಗವೇಣಿ ಹರಳಪ್ಪ,ಭರತ ನಾಟ್ಯ ಕಲಾವಿದರಾದ ಜಯಮ್ಮ ಮತ್ತು ಜಾನಪದ ಕಲಾವಿದೆ ಕುಮಾರಿ ಜನನಿ,ಮಮತಾ ಮಹಿಳಾ ಸಮಾಜದ ಮಂಜುಳಾ ವಿಜಯಕುಮಾರ್,ಶ್ರೀಮತಿ ಕವಿತಾ,ಕನಕ ಮಹಿಳಾ ಸಮಾಜದ ಲಕ್ಷ್ಮಿ ವಿಶ್ವನಾಥ್ ,ತೀರ್ಪುಗಾರರಾದ ಶ್ರೀಮತಿ ಮಾಲನಾಯಕ್ ಅವರುಗಳನ್ನು ಗೌರವಿಸಲಾಯಿತು. ಪೂಜಾ ಸುಬ್ರಹ್ಮಣ್ಯ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

Karnataka Rakshana Vedike Women’s Unit inaugurated

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...