Home namma chikmagalur ಜೂ. 15ಕ್ಕೆ ನಗರದಲ್ಲಿ ನೆನಪಿನಂಗಳದಲ್ಲಿ ಎಚ್ಚೆಸ್ವಿ
namma chikmagalurchikamagalurHomeLatest News

ಜೂ. 15ಕ್ಕೆ ನಗರದಲ್ಲಿ ನೆನಪಿನಂಗಳದಲ್ಲಿ ಎಚ್ಚೆಸ್ವಿ

Share
Share

ಚಿಕ್ಕಮಗಳೂರು: ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕವಿ ಡಾ. ಎಚ್.ಎಸ್ ವೆಂಕಟೇಶ್ ಮೂರ್ತಿ ರವರ ಗೌರವಾರ್ಥ ನಗರದ ಬ್ರಹ್ಮ ಸಮುದ್ರ ರಂಗಣ್ಣನ ಛತ್ರದಲ್ಲಿ ಜೂನ್. ೧೫ ರಂದು ಸಂಜೆ ೬ ಗಂಟೆಗೆ ನೆನಪಿನಂಗಳದಲ್ಲಿ ಎಚ್ಚೆಸ್ವಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ನ ಎಂ.ಎಸ್ ಸುಧೀರ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಚಿಕ್ಕಮಗಳೂರು ಬ್ರಾಹ್ಮಣ ಮಹಾ ಸಭಾ, ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸಾಂಸ್ಕೃತಿಕ ಸಂಘ ಹಾಗೂ ಸುಗಮ ಸಂಗೀತ ಗಂಗಾ ಇವರುಗಳ ಸಂಯುಕ್ತಾಶ್ರಯದಲ್ಲಿ ವೆಂಕಟೇಶ್ ಮೂರ್ತಿಯವರ ಕಾವ್ಯಗಾಯನ ನೆಡೆಯಲಿದೆ ಎಂದರು.

ವೆಂಕಟೇಶ್ ಮೂರ್ತಿಯವರು ಕಾವ್ಯ, ಮಹಾಕಾವ್ಯ, ಅಂಕಣ ಲೇಖನ, ನಾಟಕ, ಶಿಶುಗೀತೆ, ಚಿತ್ರಗೀತೆ, ಭಾವಗೀತೆಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅವರು ಇಂದು ಭೌತಿಕವಾಗಿ ನಮ್ಮೋಂದಿಗಿಲ್ಲ, ಚಿಕ್ಕಮಗಳೂರನ್ನು ಪ್ರೀತಿಸುತ್ತಿದ್ದ ಇವರು ಅನೇಕ ಸುಗಮ ಸಂಗೀತ ಕಾರ್ಯಕ್ರಮಗಳಿಗೆ ಆಗಮಿಸಿದ್ದರು ಎಂದು ಹೇಳಿದರು.

ನಿಸರ್ಗ ಸೌಂದರ್ಯವನ್ನು ಸದಾ ಪ್ರೀತಿಸುತ್ತಿದ್ದ ಕವಿ ಎಚ್ಚೆಸ್ವಿ ಅವರಿಗೆ ಸುಗಮ ಸಂಗೀತ ಗಂಗಾ ಸಂಸ್ಥೆ ಕವಿಕಾವ್ಯ ನಮನವನ್ನು ಸಲ್ಲಿಸಿದ್ದು, ಇದೀಗ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲು ಚಿಂತನೆ ನೆಡೆಸಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಸಂಗೀತ ಶಿಕ್ಷಕಿ ಬೀರೂರಿನ ಜ್ಯೋತಿ ಅನಂತು ರವರು ಉದ್ಘಾಟಿಸಲಿದ್ದು, ಸಾಹಿತಿ ಡಾ. ಹೆಚ್.ಎಸ್ ಸತ್ಯನಾರಾಯಣ ರವರು ಎಚ್ಚೆಸ್ವಿ ನುಡಿ ನಮನ ಸಲ್ಲಿಸಲಿದ್ದಾರೆ, ಇದೇ ಸಂದರ್ಭದಲ್ಲಿ ಎಂ.ಎಸ್ ಸುಧೀರ್ ನೇತೃತ್ವ ತಂಡ ಎಚ್ಚೆಸ್ವಿ ವಿರಚಿತ ಕಾವ್ಯಗಳ ಗಾನಸುಧೆ ಹರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಗಾಯನದಲ್ಲಿ ಎಂ.ಎಸ್ ಸುಧೀರ್, ಚೇತನ್‌ರಾಮ್, ವಿಷ್ಣುಭಾರದ್ವಾಜ್, ರೂಪಶ್ವಿನ್, ಅನುಷಾ, ರುಕ್ಸಾನ ಕಾಚೂರು. ರಾಯನಾಯಕ್, ಜ್ಯೋತಿವಿನೀತ್ ಕುಮಾರ್, ಲಾಲಿತ್ಯಅಣ್ವೇಕರ್, ಪೃಥ್ವಿಶ್ರೀ, ಸ್ವೇಚಿತ್, ಕೆ.ಎಸ್ ಚಿನ್ಮಯಿ, ಮಾನ್ಯತ ಬಾಗಮನೆ ಹಾಗೂ ಮಾನ್ಯ ಭಟ್ ಇವರುಗಳು ಎಚ್ಚೆಸ್ವ್ವಿ ವಿರಚಿತ ಗೀತೆಗಳನ್ನು ಹಾಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ್ ಜೋಷಿ, ಸುಗಮ ಸಂಗೀತ ಗಂಗಾದ ಸುಮಪ್ರಸಾದ್ ಉಪಸ್ಥಿತರಿದ್ದರು.

June 15th wake up in the city in a eccesvi

Share

Leave a comment

Leave a Reply

Your email address will not be published. Required fields are marked *

Don't Miss

ಮುಸ್ಲಿಂ ಕುಟುಂಬ ಇಲ್ಲದ ಬಿ. ಹೊಸಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲ್ಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ಈ ಬಾರಿಯ ಮೊಹರಂ ಹಬ್ಬವು ಭಕ್ತಿ, ಸಂಭ್ರಮ ಹಾಗೂ ಅಭೂತಪೂರ್ವ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಸುಮಾರು 100 ವರ್ಷಗಳ ಸುದೀರ್ಘ ಇತಿಹಾಸ...

ಜಿಲ್ಲಾ ಆಟದ ಮೈದಾನದ ಬಳಿ ಎ.ಎಸ್.ಐ ಮೇಲೆ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದ ಗೇಟ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಹೀಂದ್ರ ಥಾರ್ ಜೀಪನ್ನು ಅಡ್ಡವಾಗಿ ನಿಲ್ಲಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳು, ಬುದ್ದಿ ಹೇಳಲು ಹೋದ ಎ.ಎಸ್.ಐ ಭುವನೇಶ್...

Related Articles

ಧರ್ಮಸ್ಥಳ ಸಂಘದ ಸಾಲದ ವಿಚಾರ-ದಂಪತಿಗಳ ಮೇಲೆ ದೊಣ್ಣೆಗಳಿಂದ ಹಲ್ಲೆ

ಶೃಂಗೇರಿ: ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಉಂಟಾದ ಸಣ್ಣ ಭಿನ್ನಾಪ್ರಾಯ ವಿಕೋಪಕ್ಕೆ ತಿರುಗಿ, ದಂಪತಿಗಳ ಮೇಲೆ...

ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟ ಪ್ರದರ್ಶಿಸಿ

ಚಿಕ್ಕಮಗಳೂರು: ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟಿನ ಮಂತ್ರ ಪಠಿಸಬೇಕು. ಪರಸ್ಪರ ಒಡೆದಾಳುವ ನೀತಿ ಅನುಸರಿಸಿದರೆ, ಸರ್ಕಾರಗಳು...

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ...