Home Latest News ಐ.ಟಿ.ರೈಡ್ – ನಲುಗಿರುವ ಲೈಫ್ ಲೈನ್ ಫೀಡ್ಸ್ ?
Latest NewschikamagalurHomenamma chikmagalur

ಐ.ಟಿ.ರೈಡ್ – ನಲುಗಿರುವ ಲೈಫ್ ಲೈನ್ ಫೀಡ್ಸ್ ?

Share
Share

ಚಿಕ್ಕಮಗಳೂರು: ಸತ್ಯ ಹೇಳಲು ಎದೆಗಾರಿಕೆ ಬೇಕು ಸುಳ್ಳು ಹೇಳುವುದಕ್ಕೆ ಬುಕಿಟ್ ಇದ್ದರೆ ಸಾಕು.ಕಳೆದ ವಾರ ಲೈಫ್ ಲೈನ್ ಫೀಡ್ಸ್ ನ ಕಿಶೋರ್ ಕುಮಾರ್ ಹೆಗ್ಡೆ ಮನೆ,ಕಛೇರಿ ಮತ್ತು ಗೆಸ್ಟ್ ಹೌಸ್ ಸೇರಿದಂತೆ ಹಲವು ಕಡೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಸತತ ಐದು ದಿನಗಳು ಜಾಲಾಡಿದ ಸುದ್ದಿ “ಗುಮ್ಮ” ನಂತೆ ಇರುವುದು ಏಕೆ ಈ ಬಗ್ಗೆ ನಿಗೂಢವಾಗಿರುವುದು ಏಕೆ ?ಎಂದು ಹಲವು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ಸಣ್ಣದಾದ ಉದ್ಯಮ ಪ್ರಾರಂಭಿಸಿ ಇಂದು ಬೃಹತ್ ಉದ್ಯಮವಾಗಿ ರೂಪಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಕೋಟ್ಯಂತರ ವಹಿವಾಟು ನಡೆಸುವ ಹೆಗ್ಡೆ ಬೃಹತ್ ಫ್ಯಾಕ್ಟರಿ ಸೇರಿದಂತೆ ಜಮೀನು ಖರೀದಿಸಿದ್ದಾರೆ ನೂರಾರು ವಾಹನಗಳು ಬೆಲೆ ಬಾಳುವ ವಸ್ತುಗಳ ಮಾಲೀಕರಾಗಿದ್ದಾರೆ.ಅವರಾಯಿತು ಅವರ ಉದ್ಯಮವಾಯಿತು ಎಂಬಂತೆ ಇದ್ದವರು ಕಳೆದ ಎರಡು ವರ್ಷಗಳಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವರ ಮೇಲೆ ಏಕಾ,ಏಕಿ ರೈಡ್ ನಡೆದಿರುವ ಉದ್ದೇಶ ಗೊತ್ತಾಗುತ್ತಿಲ್ಲಾ ಎನ್ನುತ್ತಾರೆ.

ಪ್ರತಿಯೊಂದು ವ್ಯವಹಾರ ಲೆಕ್ಕಾಚಾರವಾಗಿ ಮಾಡುತ್ತಿದ್ದರು ಎಂದರೆ ಐದು ದಿನ ಹಗಲು ರಾತ್ರಿ ನಡೆಸಿರುವ ತನಿಖೆಯಾದರು ಏನು. ಆದಾಯ ತೆರಿಗೆ ಇಲಾಖೆಯವರು ಕಳೆದ ಕೆಲ ವರ್ಷಗಳಿಂದ ಇವರ ವ್ಯವಹಾರ ಮೇಲೆ ಹದ್ದಿನ ಕಣ್ಣು ಇಟ್ಟು ಮೊನ್ನೆ ಹೆಗ್ಡೆ ಸೇರಿದಂತೆ ಅವರ ನೌಕರ ವರ್ಗದವರಿಗೆ ನಲವತ್ತಕ್ಕೂ ಹೆಚ್ಚು ಅಧಿಕಾರಿಗಳು ತೀವ್ರ ತನಿಖೆ ನಡೆಸಿ ಇಂಚು,ಇಂಚು ಮಾಹಿತಿ ಸಂಗ್ರಹಿಸಿದ್ದಾರೆ ಜೊತೆಗೆ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ.ತನಿಖೆಯ ಸಮಯದಲ್ಲಿ ಮಾನಸಿಕ ದೈಹಿಕ ಹಿಂಸೆ ಅನುಭವಿಸಿದವರು ಅಲ್ಲಿ ಇಲ್ಲಿ ಮಾತನಾಡುತ್ತಿದ್ದಾರೆ.

ಆದಾಯ ತೆರಿಗೆ ಇಲಾಖೆ ತನಿಖೆಯಿಂದ ವ್ಯವಹಾರದ ಮೇಲೆ ಪೆಟ್ಟು ಬೀಳುವುದರಲ್ಲಿ ಅನುಮಾನವಿಲ್ಲ ಎಂದು ಪರಿಣಿತರ ಅಭಿಪ್ರಾಯವಾಗಿದೆ.ಇಷ್ಟೆಲ್ಲಾ ನಡೆದರೂ ಪತ್ರಿಕೆಗಳಲ್ಲಿ ಸುದ್ದಿ ಆಗದಿರುವುದರ ಹಿಂದೆ ಆದಾಯ ಇಲಾಖೆಯವರ ಭಯವೋ ಅಥವಾ ಹೆಗ್ಡೆ ಮೇಲಿನ ಪ್ರೀತಿಯೋ ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ.

IT Raid – Lifeline Feeds in the Middle?

Share

Leave a comment

Leave a Reply

Your email address will not be published. Required fields are marked *

Don't Miss

ಚಿಕ್ಕಮಗಳೂರು ತಾಲೂಕು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೆ ಆಗ್ರಹ

ಚಿಕ್ಕಮಗಳೂರು: ಈ ಬಾರಿಯ ಮುಂಗಾರು ಅವಧಿಯಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಕೃಷಿ, ತೋಟಗಾರಿಕೆ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು...

ಕಡೂರು ಬಸ್ ನಿಲ್ದಾಣದಲ್ಲಿ 50 ಗ್ರಾಂ ತೂಕದ ಚಿನ್ನದ ಸರ ಕಳ್ಳತನ

ಕಡೂರು: ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗ್ಯಾಂಗ್ ಒಂದು, ಬಸ್ ಹತ್ತುವ ವೇಳೆ ಮಹಿಳೆಯ ಗಮನ ಬೇರೆಡೆ ಸೆಳೆದು ಕುತ್ತಿಗೆಯಲ್ಲಿದ್ದ ಬರೋಬ್ಬರಿ 50 ಗ್ರಾಂ ತೂಕದ ಚಿನ್ನದ ಸರವನ್ನು ಕ್ಷಣಾರ್ಧದಲ್ಲಿ ಎಗರಿಸಿ...

Related Articles

ಕೋಟ್ಯಂತರ ರೂಪಾಯಿ ವಂಚಿಸಿದ ನಕಲಿ ಲೇಡಿ ಪಿಎಸ್‌ಐ ಬಂಧನ

ಚಿಕ್ಕಮಗಳೂರು: ತಾನು ಬೆಂಗಳೂರಿನ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎಂದು ನಂಬಿಸಿ, ಚಿನ್ನ, ಹಣ, ಮೊಬೈಲ್ ಹಾಗೂ ಕಾರು...

ನಲಪಾಡ್ ಹೇಳಿಕೆ ಖಂಡಿಸಿ ಜೆಡಿಎಸ್ ಅಲ್ಪಸಂಖ್ಯಾತ ಘಟಕ ಆಕ್ರೋಶ

ಚಿಕ್ಕಮಗಳೂರು: ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯ ಯುವ ಘಟಕದ...

ಮಳಲೂರು ಏತ ನೀರಾವರಿ ಯೋಜನೆ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಮಳಲೂರು ಏತ ನೀರಾವರಿ ಅನುಷ್ಠಾನ ಮತ್ತು ಅರಸನ ನಾಲೆ ಪುನಶ್ಚೇತನ ಯೋಜನೆಗಳ ಕಾಮಗಾರಿಗಳಿಗೆ ಉಂಟಾಗಿರುವ...

2ಬಿ ಮೀಸಲಾತಿ ಮರುಸ್ಥಾಪನೆಗೆ ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಚಿಕ್ಕಮಗಳೂರು: ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇ.4ರಷ್ಟು 2ಬಿ ಮೀಸಲಾತಿಯನ್ನು ಮರುಸ್ಥಾಪಿಸಲು ರಾಜ್ಯ ಸರ್ಕಾರ ಕೂಡಲೇ...