Home namma chikmagalur chikamagalur ಭಾರತ ಸಾರ್ವಭೌಮ ಪ್ರಜಾ ಪ್ರಭುತ್ವ ರಾಷ್ಟ್ರ
chikamagalurHomeLatest Newsnamma chikmagalur

ಭಾರತ ಸಾರ್ವಭೌಮ ಪ್ರಜಾ ಪ್ರಭುತ್ವ ರಾಷ್ಟ್ರ

Share
Share

ಚಿಕ್ಕಮಗಳೂರು:  ಭಾರತ ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರ ಇಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ಕಲ್ಪಿಸುವುದು ಸರ್ಕಾರಗಳ ಮೂಲ ಕರ್ತವ್ಯ ಎಂದು ಹಿರಿಯ ಕಲಾವಿದ ಡಾ. ಮುಖ್ಯಮಂತ್ರಿ ಚಂದ್ರು ಹೇಳಿದರು.

ನಗರದ ಶ್ರೀ ಶಾರದ ಸ್ಕೂಲ್ ಆಫ್ ಲಾ ಕಾಲೇಜಿನಲ್ಲಿ ಸೋಮವಾರ ದಾರಿ ಫೌಂಡೇಷನ್, ಪರಿಸರ ಸ್ನೇಹಿ ಘಟಕ, ಶ್ರೀ ಶಾರದ ಸ್ಕೂಲ್ ಆಫ್ ಲಾ ಸಹಯೋಗದಲ್ಲಿ ಆಯೋಜಿಸಿದ್ಧ ‘ಭವಿಷ್ಯದಲ್ಲಿ ಪ್ರಜಾಪ್ರಭು ತ್ವದ ರಕ್ಷಣೆ ಜವಾಬ್ದಾರಿ, ಯುವಶಕ್ತಿಯ ಕೈಯಲ್ಲಿ ಮುಕ್ತ-ಸಂವಾದ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವ ರು ಮಾತನಾಡಿದರು.

ಚುನಾವಣೆಗಳಲ್ಲಿ ಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡುವ ಮುನ್ನ ಮತದಾರ ಜವಾಬ್ದಾರಿ ವಹಿಸಬೇ ಕು. ಮಕ್ಕಳ ಮದುವೆ ಬಗ್ಗೆ ಅಪಾರ ಕಾಳಜಿ ತೋರುತ್ತೇವೆ. ಅದರಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸಾರ್ವ ಜನಿಕರು ಮತ ಚಲಾಯಿಸುವಾಗ ಕಾಳಜಿ ತೋರುತ್ತಿಲ್ಲ. ಹೀಗಾಗಿಯೇ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಯು ವಕರಿಗೆ ಜಾಗೃತಿ ಮೂಡಿಸುವುದು ಅಗತ್ಯ ಎಂದರು.

ಸAವಿಧಾನದ ಮೂಲಕ ಆಶಯಗಳು ಹಾಗೂ ಅಡಕವಾಗಿರುವ ಅಂಶಗಳ ಬಗ್ಗೆ ಸರಳವಾಗಿ ಪ್ರತಿಯೊ ಬ್ಬರು ಕೂಲಂಕೂಷವಾಗಿ ತಿಳಿದುಕೊಳ್ಳಬೇಕು. ಸರ್ವ ಜನಾಂಗದ ಅಭಿವೃಧ್ದಿಗೆ ಶ್ರಮಿಸಿದ ಗಾಂಧೀಜಿ, ಅಂ ಬೇಡ್ಕರ್ ಸೇರಿದಂತೆ ಅನೇಕರ ಆದರ್ಶಗಳನ್ನು ಪ್ರೇರಣೆಯಾಗಬೇಕು. ಜ್ಞಾನ ಗಳಿಸಲು ಭಾಷೆ ಎಂದಿಗೂ ಅಡ್ಡಿಯಾಗದು. ಹಾಗಾಗಿಯೇ ಎಲ್ಲರೂ ಒಂದಾಗಿ ಆತ್ಮವಿಶ್ವಾಸದಿಂದ ಕಲಿಕೆಗೆ ಒತ್ತು ನೀಡಬೇಕು ಎಂದರು.

ರಾಷ್ಟç ಹಾಗೂ ರಾಜ್ಯವನ್ನಾಳಿದ ಅನೇಕ ರಾಜಕೀಯ ಪಕ್ಷಗಳು ಸಂವಿಧಾನ ತಿದ್ದುಪಡಿ ಮಾಡಬಹು ದೇ ಹೊರತು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ. ಯಾವುದೇ ಪಕ್ಷ ಸಂವಿಧಾನ ಬದಲಾವಣೆ ಮುಂ ದಾದಲ್ಲಿ ನೈಜವಾಗಿ ಅದು ದೇಶದ್ರೋಹದ ಕೆಲಸವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ಸಂವಿಧಾನ ಆಶಯ ಗಳನ್ನು ರಾಜಕೀಯಕ್ಕೆ ಬಲಿಕೊಡಬಾರದು ಎಂದು ಹೇಳಿದರು.

ದಾನಗಳಲ್ಲಿ ಮತದಾನವೇ ಶ್ರೇಷ್ಟದಾನ. ಪ್ರತಿ ಐದು ವರ್ಷಗಳ ಜನಪ್ರತಿನಿಧಿಗಳ ಚುನಾವಣೆಗೆ ಉತ್ತ ಮ ಅಭ್ಯರ್ಥಿ ಆಯ್ಕೆ ಮಾಡಿದಾಗ ರಾಷ್ಟçತಂತ್ರ ಉಳಿಸಲು ಸಾಧ್ಯ. ನಾಡಿನ ಯುವಜನತೆ ಈ ಬಗ್ಗೆ ಆಲೋ ಚಿಸಬೇಕು. ಭವಿಷ್ಯವಿರುವ ಇಂದಿನ ವಿದ್ಯಾರ್ಥಿಗಳೇ ಮುಂದಿನ ರಾಷ್ಟç ಕಟ್ಟುವವರು. ಜೀವನದ ಜೊತೆಗೆ ಸಮಾಜಕ್ಕೆ ಕೈಲಾದ ಒಂದು ಸೇವೆ ಸಲ್ಲಿಸಬೇಕು ಎಂದರು.

ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಿಸಲು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಬಹಳ ಮುಖ್ಯವಾಗಿದೆ. ಈ ಮೂರು ಅಂಗಗಳ ಜೊತೆಗೆ ಪತ್ರಿಕಾ ರಂಗವು ಮುಖ್ಯ. ಆದರೆ ಈಚೆಗೆ ಸಮಾಜ ಕೆಡ ಲು ಈ ಎಲ್ಲಾ ರಂಗಗಳು ಒಂದೂ ರೀತಿ ಕಾರಣವಾಗುತ್ತಿವೆ. ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರ ತು, ಧರ್ಮವೇ ರಾಜಕಾರಣ ಆಗಬಾರದು ಎಂದು ತಿಳಿಸಿದರು.

ಜಗತ್ತಿನಲ್ಲೇ ಅತಿದೊಡ್ಡ ಸಂವಿಧಾನ, ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ಭಾರತ. ಅನೇಕ ಜಾ ತಿ, ಧರ್ಮ, ಪರಂಪರೆ, ಭಾಷೆಗಳನ್ನು ಒಳಗೊಂಡಿದೆ. ಈ ವ್ಯವಸ್ಥೆಗೆ ಅನುಗುಣವಾಗಿ ಅಂಭೇಡ್ಕರ್ ಉತ್ತಮ ಚೌಕಟ್ಟಿನಲ್ಲಿ ಸಂವಿಧಾನ ನೀಡಿದ್ದಾರೆ. ಸಮಾಜವನ್ನು ಕಾಪಾಡಿದರೆ ದೇಶವನ್ನು ಉಳಿಸಿದಂತೆ. ದೇಶವನ್ನು ಉಳಿಸಿದಾಗ ಸಂವಿಧಾನ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯ ಎಂದರು.

ಮೈಸೂರು ದಾರಿ ಫೌಂಡೇಷನ್ ಕಾರ್ಯದರ್ಶಿ ತಗಡೂರು ವೀರೇಶ್‌ಕುಮಾರ್ ಮಾತನಾಡಿ ದೇಶ ದಲ್ಲಿ ಸಂವಿಧಾನ ಸಂಪೂರ್ಣ ಜಾರಿಗೊಂಡಿಲ್ಲ. ಕೇವಲ ರಾಜಪ್ರಭುತ್ವದಡಿ ರಾಜಕಾರಣಿಗಳು ಆಡಳಿತ ನಡೆ ಸುತ್ತಿದ್ದಾರೆ. ಅನೇಕ ದಶಕಗಳಿಂದ ಕುಟುಂಬ ರಾಜಕಾರಣ ಮಾಡಿ, ಸಂವಿಧಾನ ಆಶಯಕ್ಕೆ ಒತ್ತು ನೀಡದೇ, ವಂಶಪಾರAಪರ್ಯ ಆಡಳಿತಕ್ಕೆ ಮಣೆಹಾಕುತ್ತಿವೆ ಎಂದು ಹೇಳಿದರು.

ಅನೇಕ ರಾಜಕೀಯ ಮುಖಂಡರು ಸಾಮಾನ್ಯ ಜನರಿಗೆ ರಾಜಕೀಯ ಪ್ರವೇಶದಂತೆ ಅಡ್ಡಿಪಡಿಸುತ್ತಿವೆ. ಸಾರ್ವಜನಿಕರನ್ನು ಕೇವಲ ಮತದಾರರ ಗುಲಾಮರನ್ನಾಗಿ ಮಾಡಿಕೊಂಡಿದೆ. ಆ ನಿಟ್ಟಿನಲ್ಲಿ ಭವಿಷ್ಯದಲ್ಲಿ ವಕೀ ಲರು, ನ್ಯಾಯಾಧೀಶರಾಗುವ ವಿದ್ಯಾರ್ಥಿಗಳು ಜಾತಿ, ಧರ್ಮಕ್ಕೆ ಆದ್ಯತೆ ನೀಡದೇ ಸಂವಿಧಾನದಡಿ ಅಡಕ ಗೊಳಿಸಿರುವ ನ್ಯಾಯಯುತ ಅಂಶವನ್ನು ಜನರಿಗೆ ಅರಿವು ಮೂಡಿಸಬೇಕು ಎಂದರು.

ದಾರಿ ಫೌಂಡೇಷನ್ ಜಿಲ್ಲಾ ಸಂಚಾಲಕ ಡಾ|| ಕೆ.ಸುಂದರಗೌಡ ಮಾತನಾಡಿ ಭವಿಷ್ಯದ ನ್ಯಾಯಾಂಗ ವ್ಯವಸ್ಥೆಯನ್ನು ಬುಡಸಮೇತ ಗಟ್ಟಿಗೊಳಿಸಲು ಮಹತ್ತರ ಕಾರ್ಯ ಯುವ ನ್ಯಾಯಾಂಗದ ವಿದ್ಯಾರ್ಥಿಗಳ ಮೇಲಿದೆ. ಅಲ್ಲದೇ ಶಾಸಕಾಂಗ ಹಾಗೂ ಕಾರ್ಯಾಂಗದ ವ್ಯವಸ್ಥೆಯಲ್ಲಿ ಪ್ರತಿನಿಧಿಗಳು ಭ್ರಷ್ಟಚಾರ ತೊಡಗಿ ಕೊಂಡಿದ್ದು ಇವರನ್ನು ತಿದ್ದಿತಿಡುವ ಕೆಲಸ ಪ್ರಾಮಾಣಿಕವಾಗಿ ನ್ಯಾಯಾಂಗ ಮಾಡಬೇಕಿದೆ ಎಂದರು.

ಶ್ರೀ ಶಾರದ ಸ್ಕೂಲ್ ಆಫ್ ಲಾ ಪ್ರಭಾರ ಪ್ರಾಂಶುಪಾಲ ಎಸ್.ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಲಾ ಕಾಲೇಜು ಕಾರ್ಯದರ್ಶಿ ಜಿ.ಆರ್.ಶ್ರವಣ್, ವಕೀಲರ ಸಂಘದ ಕಾ ರ್ಯದರ್ಶಿ ಆರ್.ಅನಿಲ್‌ಕುಮಾರ್, ಪ್ರೆಸ್ ಕ್ಲಬ್ ಅಧ್ಯಕ್ಷ ಸಿ.ಡಿ.ಚಂದ್ರೇಗೌಡ, ಪರಿಸರ ಸ್ನೇಹಿ ಘಟಕದ ಎಸ್. ಸ್ಪೂರ್ತಿ, ಮೈಸೂರು ದಾರಿ ಫೌಂಡೇಷನ್ ಅಧ್ಯಕ್ಷ ಎಲ್.ರಂಗಯ್ಯ, ಸಂಚಾಲಕ ಪ್ರಭಾಕರ್ ಹಾಗೂ ವಿದ್ಯಾ ರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

India is a sovereign people’s republic

Share

Leave a comment

Leave a Reply

Your email address will not be published. Required fields are marked *

Don't Miss

ಚಿಕ್ಕಮಗಳೂರು ತಾಲೂಕು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೆ ಆಗ್ರಹ

ಚಿಕ್ಕಮಗಳೂರು: ಈ ಬಾರಿಯ ಮುಂಗಾರು ಅವಧಿಯಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಕೃಷಿ, ತೋಟಗಾರಿಕೆ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು...

ಕಡೂರು ಬಸ್ ನಿಲ್ದಾಣದಲ್ಲಿ 50 ಗ್ರಾಂ ತೂಕದ ಚಿನ್ನದ ಸರ ಕಳ್ಳತನ

ಕಡೂರು: ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗ್ಯಾಂಗ್ ಒಂದು, ಬಸ್ ಹತ್ತುವ ವೇಳೆ ಮಹಿಳೆಯ ಗಮನ ಬೇರೆಡೆ ಸೆಳೆದು ಕುತ್ತಿಗೆಯಲ್ಲಿದ್ದ ಬರೋಬ್ಬರಿ 50 ಗ್ರಾಂ ತೂಕದ ಚಿನ್ನದ ಸರವನ್ನು ಕ್ಷಣಾರ್ಧದಲ್ಲಿ ಎಗರಿಸಿ...

Related Articles

ಕೋಟ್ಯಂತರ ರೂಪಾಯಿ ವಂಚಿಸಿದ ನಕಲಿ ಲೇಡಿ ಪಿಎಸ್‌ಐ ಬಂಧನ

ಚಿಕ್ಕಮಗಳೂರು: ತಾನು ಬೆಂಗಳೂರಿನ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎಂದು ನಂಬಿಸಿ, ಚಿನ್ನ, ಹಣ, ಮೊಬೈಲ್ ಹಾಗೂ ಕಾರು...

ನಲಪಾಡ್ ಹೇಳಿಕೆ ಖಂಡಿಸಿ ಜೆಡಿಎಸ್ ಅಲ್ಪಸಂಖ್ಯಾತ ಘಟಕ ಆಕ್ರೋಶ

ಚಿಕ್ಕಮಗಳೂರು: ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯ ಯುವ ಘಟಕದ...

ಮಳಲೂರು ಏತ ನೀರಾವರಿ ಯೋಜನೆ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಮಳಲೂರು ಏತ ನೀರಾವರಿ ಅನುಷ್ಠಾನ ಮತ್ತು ಅರಸನ ನಾಲೆ ಪುನಶ್ಚೇತನ ಯೋಜನೆಗಳ ಕಾಮಗಾರಿಗಳಿಗೆ ಉಂಟಾಗಿರುವ...

2ಬಿ ಮೀಸಲಾತಿ ಮರುಸ್ಥಾಪನೆಗೆ ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಚಿಕ್ಕಮಗಳೂರು: ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇ.4ರಷ್ಟು 2ಬಿ ಮೀಸಲಾತಿಯನ್ನು ಮರುಸ್ಥಾಪಿಸಲು ರಾಜ್ಯ ಸರ್ಕಾರ ಕೂಡಲೇ...