ಚಿಕ್ಕಮಗಳೂರು: ಜಿಲ್ಲೆಯ 36 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ 18 ಸ್ಥಾನಗಳು ಮಹಿಳೆಯರಿಗೆ ಮೀಸಲಿಡಲಾಗಿದೆ.ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಗೆ ಮೀಸಲಾತಿ ವರ್ಗೀಕರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ.
ಪರಿಶಿಷ್ಟ ಜಾತಿಗೆ 9 ಸ್ಥಾನ ನೀಡಲಾಗಿದ್ದು, ಅವುಗಳಲ್ಲಿ ಮಹಿಳೆಯರಿಗೆ 5 ಸ್ಥಾನ ದೊರಕಿದೆ. ಪರಿಶಿಷ್ಟ ಪಂಗಡಕ್ಕೆ ಎರಡು ಸ್ಥಾನ ಮೀಸಲಿಟ್ಟಿದ್ದು, ಈ ಪೈಕಿ ಒಂದು ಸ್ಥಾನ ಮಹಿಳೆಗೆ ನೀಡಲಾಗಿದೆ. ಹಿಂದುಳಿದ ವರ್ಗ-ಎಗೆ ದೊರೆತಿರುವ 6 ಸ್ಥಾನಗಳಲ್ಲಿ 3 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಹಿಂದುಳಿದ ವರ್ಗ-ಬಿಗೆ ಒಂದು ಸ್ಥಾನ ನೀಡಲಾಗಿದ್ದು, ಅದು ಮಹಿಳೆಗೆ ಮೀಸಲಾಗಿದೆ.
ಉಳಿದಂತೆ ಸಾಮಾನ್ಯ ಕ್ಷೇತ್ರಗಳಲ್ಲಿ 8 ಸ್ಥಾನಗಳು ಮಹಿಳೆಯರಿಗೆ ಮೀಸಲಿಡಲಾಗಿದೆ. ತಾಲ್ಲೂಕು ಪಂಚಾಯಿತಿಯ ಒಟ್ಟು 100 ಸ್ಥಾನಗಳ ಪೈಕಿ 54 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಪರಿಶಿಷ್ಟ ಜಾತಿಯ 25 ಸ್ಥಾನಗಳಲ್ಲಿ 14 ಸ್ಥಾನಗಳನ್ನು ಮಹಿಳೆಗೆ ಮೀಸಲಿಡಲಾಗಿದೆ.
ಪರಿಶಿಷ್ಟ ಪಂಗಡಕ್ಕೆ ದೊರಕಿರುವ 9 ಸ್ಥಾನಗಳೂ ಮಹಿಳೆಯರಿಗೆ ಮೀಸಲಾಗಿವೆ. ಹಿಂದುಳಿದ ವರ್ಗ-ಎ 11 ಸ್ಥಾನಗಳ ಪೈಕಿ 8 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಹಿಂದುಳಿದ ‘ವರ್ಗ- ಬಿ’ಗೆ ದೊರೆತ 1 ಸ್ಥಾನ ಮಹಿಳೆಗೆ ಮೀಸಲಾಗಿದೆ. ಸಾಮಾನ್ಯ ವರ್ಗಕ್ಕೆ 54 ಸ್ಥಾನಗಳು ದೊರೆತಿದ್ದು, ಇವುಗಳಲ್ಲಿ 22 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ತಾ.ಪಂ ಸ್ಥಾನ ಕುಸಿತ: ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ 34ರಿಂದ 36ಕ್ಕೆ ಏರಿಕೆಯಾಗಿದ್ದರೆ, ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು 108ರಿಂದ 100ಕ್ಕೆ ಕುಸಿದಿವೆ. ಚಿಕ್ಕಮಗಳೂರು ತಾಲ್ಲೂಕು ಪಂಚಾಯಿತಿಯಲ್ಲಿ ಈ ಹಿಂದೆ 19 ಸ್ಥಾನಗಳಿದ್ದವು. ಈಗಲೂ ಅಷ್ಟೇ ಉಳಿದುಕೊಂಡಿವೆ.
ಕಡೂರು ತಾಲ್ಲೂಕಿನಲ್ಲಿ 24 ಕ್ಷೇತ್ರಗಳಿದ್ದವು. ಈಗ 20ಕ್ಕೆ ಇಳಿಕೆಯಾಗಿವೆ. ತರೀಕೆರೆ ತಾಲ್ಲೂಕು ಪಂಚಾಯಿತಿಯಲ್ಲಿ 19 ಸ್ಥಾನಗಳಿದ್ದವು. ಈಗ 11ಕ್ಕೆ ಇಳಿಕೆಯಾಗಿದೆ. ಮೂಡಿಗೆರೆ ತಾಲ್ಲೂಕಿನಲ್ಲಿ 12 ಕ್ಷೇತ್ರಗಳಿದ್ದವು. ಈಗ 9ಕ್ಕೆ ಇಳಿಕೆಯಾಗಿವೆ.
ಶೃಂಗೇರಿ ತಾಲ್ಲೂಕಿನಲ್ಲಿ 11 ಸ್ಥಾನಗಳಿದ್ದವು, ಈಗ 7ಕ್ಕೆ ಇಳಿಕೆಯಾಗಿವೆ. ನರಸಿಂಹರಾಜಪುರದಲ್ಲೂ 11 ಕ್ಷೇತ್ರಗಳಿದ್ದವು. ಈಗ 7ಕ್ಕೆ ಇಳಿಕೆಯಾಗಿವೆ. ಕೊಪ್ಪ ತಾಲ್ಲೂಕಿನಲ್ಲಿ 12 ಸ್ಥಾನಗಳಿದ್ದವು, ಈಗ 9ಕ್ಕೆ ಇಳಿದಿವೆ.
ಕಳಸ ಮತ್ತು ಅಜ್ಜಂಪುರ ಹೊಸ ತಾಲ್ಲೂಕು ಪಂಚಾಯಿತಿಗಳಾಗಿದ್ದು, ಕಳಸ 7 ಸ್ಥಾನ ಮತ್ತು ಅಜ್ಜಂಪುರ 9 ಕ್ಷೇತ್ರಗಳನ್ನು ಪಡೆದುಕೊಂಡಿವೆ.
Increase in the number of Zilla Panchayats in the district – Decrease in the number of Taluk Panchayats
Leave a comment