Home namma chikmagalur chikamagalur ವೇಗದ ಚಾಲನೆಗೆ ಬುಲೆರೋ ಪಿಕಪ್ ಅಪಘಾತದಲ್ಲಿ ಚಾಲಕ ಸಾವು
chikamagalurHomeLatest Newsnamma chikmagalur

ವೇಗದ ಚಾಲನೆಗೆ ಬುಲೆರೋ ಪಿಕಪ್ ಅಪಘಾತದಲ್ಲಿ ಚಾಲಕ ಸಾವು

Share
Share

ಬೀರೂರು: ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಮಹೇಂದ್ರ ಬುಲೆರೋ ಪಿಕಪ್ ವಾಹನ ಸಿಮೆಂಟ್ ಕಟ್ಟೆಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಬೀರೂರು ಸಮೀಪ ರಾಷ್ಟ್ರೀಯ ಹೆದ್ದಾರಿ-69ರ ಬೈಪಾಸ್ ಫ್ಲೈಓವರ್‌ನಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.

ಮೃತರನ್ನು ಕಡೂರು ತಾಲೂಕಿನ ಕೆ.ದಾಸರಹಳ್ಳಿ ಗ್ರಾಮದ ರಜಿತ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಶೇಖರಪ್ಪ ಹಾಗೂ ರಾಜೇಶ್ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ಅ.05ರಂದು ರಜಿತ್ ಅವರು ಕೆಎ-66-1488 ನೋಂದಣಿ ಸಂಖ್ಯೆಯ ಮಹೇಂದ್ರ ಬುಲೆರೋ ಪಿಕಪ್ ವಾಹನದಲ್ಲಿ ಶೇಖರಪ್ಪ ಅವರೊಂದಿಗೆ ಎಳನೀರು ಲೋಡ್ ಮಾಡಿಕೊಂಡು ಕೊಪ್ಪಕ್ಕೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ಶೇಖರಪ್ಪ, ರಜಿತ್ ಹಾಗೂ ರಾಜೇಶ್ ಅವರು ಅದೇ ವಾಹನದಲ್ಲಿ ಕೆ.ದಾಸರಹಳ್ಳಿ ಗ್ರಾಮಕ್ಕೆ ವಾಪಸಾಗುತ್ತಿದ್ದರು.

ಅ.06ರಂದು ಮುಂಜಾನೆ ಸುಮಾರು 2.30ರ ವೇಳೆಗೆ ತರೀಕೆರೆ ಕಡೆಯಿಂದ ಬೀರೂರು ಕಡೆಗೆ ಬರುತ್ತಿದ್ದಾಗ, ಬೀರೂರು ಸಮೀಪದ ಎನ್‌ಎಚ್-69 ಬೈಪಾಸ್ ಫ್ಲೈಓವರ್‌ನಲ್ಲಿ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ರಸ್ತೆ ಎಡಭಾಗದಲ್ಲಿದ್ದ ಸಿಮೆಂಟ್ ಕಟ್ಟೆಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ರಜಿತ್ ಅವರ ತಲೆ, ಕೈ ಹಾಗೂ ಮೈಗೆ ಗಂಭೀರ ಗಾಯಗಳಾಗಿವೆ. ತಲೆಗೆ ತೀವ್ರ ರಕ್ತಸ್ರಾವವಾಗಿತ್ತು. ಶೇಖರಪ್ಪ ಹಾಗೂ ರಾಜೇಶ್ ಅವರಿಗೂ ಗಾಯಗಳಾಗಿವೆ.

ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಬೀರೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ರಜಿತ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಶೇಖರಪ್ಪ ಹಾಗೂ ರಾಜೇಶ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಅಮೃತ್ ಆಸ್ಪತ್ರೆ/ಮೆಗ್ಗಾನ್‌ಗೆ ಸ್ಥಳಾಂತರಿಸಲಾಗಿದೆ.

ಈ ಸಂಬಂಧ ಮೃತ ರಜಿತ್ ಅವರ ಪತ್ನಿ ಶಿಲ್ಪ ಅವರು ನೀಡಿದ ದೂರಿನ ಮೇರೆಗೆ ಬೀರೂರು ಪೊಲೀಸ್ ಠಾಣೆಯಲ್ಲಿ ಮೊ.ನಂ.155/2026, ಬಿಎನ್‌ಎಸ್ ಕಲಂ 281, 125(a), 106(1) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Driver dies in Bolero pickup accident caused by speeding.

Share

Leave a comment

Leave a Reply

Your email address will not be published. Required fields are marked *

Don't Miss

ಫೇಸ್‌ಬುಕ್‌ನ ‘ಕೇರಳ ಲಾಟರಿ’ ಜಾಹೀರಾತು ನಂಬಿ ₹4.30 ಲಕ್ಷ ಕಳೆದುಕೊಂಡ ವ್ಯಕ್ತಿ

ಚಿಕ್ಕಮಗಳೂರು: ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡ ‘ಕೇರಳ ಲಾಟರಿ’ ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿ, ಲಾಟರಿ ಗೆದ್ದಿರುವುದಾಗಿ ನಂಬಿ ಹಂತ ಹಂತವಾಗಿ ವಿವಿಧ ಶುಲ್ಕಗಳ ಹೆಸರಿನಲ್ಲಿ ಹಣ ಪಾವತಿಸಿದ ವ್ಯಕ್ತಿಯೊಬ್ಬರು ₹4.30 ಲಕ್ಷ ಕಳೆದುಕೊಂಡಿರುವ...

ನಿಗಮ ಮಂಡಳಿ ಸ್ಥಾನ ನೀಡಲು ಪರದಾಡುತ್ತಿರುವ ಕಾಂಗ್ರೆಸ್

ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಪತ್ತರಗುಟ್ಟುತ್ತಿದೆ.ಶಾಸಕರು ಮತ್ತು ಕಾಂಗ್ರೆಸ್ ದುಡಿದ ಮುಖಂಡರು ಕಣ್ಣ್ ,ಕಣ್ಣ್ ಬಿಡುತ್ತಿದ್ದಾರೆ. ನಾಲ್ಕು ಮಂತ್ರಿಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಅದರಲ್ಲೂ ಮಹಿಳಾ ಖೋಟದಡಿ ಸಚಿವರಾಗಲು ಪರದಾಡುತ್ತಿರುವ...

Related Articles

ಜಿಲ್ಲೆಯಲ್ಲಿ ಐದು ಪ್ರತ್ಯೇಕ ಅಪಘಾತದಲ್ಲಿ ಹಲವರಿಗೆ ಗಾಯ

ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಐದು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಹಲವರು...

ವಿಕಸಿತ ಭಾರತ ನಿರ್ಮಾಣಕ್ಕೆ ‘ವೋಕಲ್ ಫಾರ್ ಲೋಕಲ್’ ಸಂಕಲ್ಪ ಅಗತ್ಯ

ಚಿಕ್ಕಮಗಳೂರು: ಕಳೆದ 25 ವರ್ಷಗಳ ಕಾಲ ಯಾವುದೇ ಕಳಂಕವಿಲ್ಲದೆ, ರಜೆಯನ್ನೂ ಪಡೆಯದೆ, ನಿರಂತರವಾಗಿ ರಾಷ್ಟ್ರಕ್ಕಾಗಿ ಕೆಲಸ...

ಅತ್ಯಾಚಾರ ಆರೋಪಿ ಪರ ನಿಂತಿದ್ದ ಪೇದೆ ಅಮಾನತು

ಚಿಕ್ಕಮಗಳೂರು: ತಲೆಮರೆಸಿಕೊಂಡಿರುವ ಅತ್ಯಾಚಾರ ಪ್ರಕರಣದ ಆರೋಪಿ ಸತೀಶ್ ಪಾತ್ರಿ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪೊಲೀಸ್ ಠಾಣೆಯಲ್ಲಿನ...

ಜಲ ಜೀವನ ಮಿಷನ್ ಅಸಮರ್ಪಕತೆ: 3ನೇ ವ್ಯಕ್ತಿಯ ಪರಿಶೀಲನೆ

ಚಿಕ್ಕಮಗಳೂರು: ಮಳೆಯ ಕೊರತೆ, ಬರದ ನಡುವೆಯೂ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕೆ ರಾಜ್ಯ...