ಚಿಕ್ಕಮಗಳೂರು: “ಪ್ರಾಣಿಗಳ ಮೇಲೆ ದಯೆ” ಇರಲಿ”ಕಾಡು ಮಾತ್ರ ನಾಶ”ವಾಗಲಿ”ಹಣ ಮಾತ್ರ ಝಣ,ಝಣ “ನಮಗೆ ಬರಲಿ ಎಂಬುದು ಅರಣ್ಯ ಇಲಾಖೆಯ ಘೋಷ ವಾಕ್ಯವಾದರೆ ಒಳ್ಳೆಯದು ಎಂಬುದಕ್ಕೆ ಇಂಬು ಕೊಡುತ್ತದೆ ಆಕ್ರಮವಾಗಿ ರೆಸಾರ್ಟ್ ನಿರ್ಮಾಣವಾಗುತ್ತಿರುವುದು ಸಾಕ್ಷಿ ಕೊಡುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಹಿಂದೆ ಎಷ್ಟು ಅರಣ್ಯ ಇತ್ತು ಸದ್ಯ ಏಷ್ಟಿದೆ ಎಂಬುದರ ಬಗ್ಗೆ ಮಾಹಿತಿ ನೋಡಿದರೆ ತಿಳಿಯುತ್ತದೆ.ಅರಣ್ಯ ನಾಶವಾಗಲು 30/ರಷ್ಟು ಜನ ಕಾರಣವಾದರೆ70/ರಷ್ಟು ಅರಣ್ಯ ನಾಶವಾಗಲು ಇಲಾಖೆ ಕಾರಣ ಎಂಬುದನ್ನು ಹೆಬೆಟ್ಟು ರಾಮಕ್ಕ ಬೇಕಾದರೂ ಹೇಳುತ್ತಾರೆ.
ಅರಣ್ಯ ಇಲಾಖೆಗೆ ನೀಡುವ ಸಂಬಳ,ಸಾರಿಗೆ, ಟಿ,ಎ ಡಿ,ಎ ಮತ್ತು ಪ್ರಾಣಿಗಳಿಗೆ ಆಹಾರ ಸೇರಿದಂತೆ, ಬೆಂಕಿ ನಂದಿಸಲು ಮತ್ತು ಕೆರೆ,ಕಟ್ಟಿ, ಬದು ನಿರ್ಮಾಣ, ಟ್ರಂಚ್ ಹೊಡೆಸಲು ನೀಡುವ ಹಣ ಉಳಿಸಿದ್ದರೆ ಇನ್ನೊಂದು ಅರಣ್ಯ ನಿರ್ಮಾಣ ಮಾಡಬಹುದಿತ್ತು ಎಂದು ಅನುಭವಿಗಳು ಹೇಳುತ್ತಾರೆ. ಇಷ್ಟೊಂದು ಹಣ ಖರ್ಚು ಮಾಡಿರುವುದು ನೋಡಲಿಕ್ಕೆ ಸಾಧ್ಯವಿಲ್ಲ ಏಕೆಂದರೆ ಅರಣ್ಯ ಇಲಾಖೆಯ ಒಳಗಡೆ ಬಿಡುವುದಿಲ್ಲ ಹೀಗಾಗಿ ಅರಣ್ಯ ಇಲಾಖೆಯ ಲೆಕ್ಕಪತ್ರ ತಿರುಪತಿ ಹುಂಡಿ ಸೇರುತ್ತಿಲ್ಲ ಅರಣ್ಯ ಇಲಾಖೆಯವರ ಜೇಬಿಗೆ ಸೇರುತ್ತಿದೆ .
ಅರಣ್ಯ ಇಲಾಖೆ ಹಣವಂತರಿಗೆ ಒಂದು ಕಾನೂನು ಹಣ ಇಲ್ಲದವರಿಗೆ ಮತ್ತೊಂದು ಕಾನೂನು ಜಾರಿಗೊಳಿಸುತ್ತಿದೆ ಇದಕ್ಕೆ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ರೆಸಾರ್ಟ್ ಮತ್ತು ಹೊಮ್ ಸ್ಟೇ ಗಳ ನಿರ್ಮಾಣ ನೋಡಿದರೆ ತಿಳಿಯುತ್ತದೆ. ಒಂದು ಕಾಲದಲ್ಲಿ ಜಿಲ್ಲೆ ಪ್ರವಾಸಿ ತಾಣವಾಗಲಿ ಎನ್ನುತ್ತಿದ್ದವರು ಬೇಕಿತ್ತಾ ಇದು ಎನ್ನುತ್ತಿದ್ದಾರೆ. ಆನೆಯ ಲದ್ದಿಯನ್ನು ಬಿಡದವರು ಕಾಡು ಬಿಡುತ್ತಾರಾ.
ಚಂದ್ರದ್ರೋಣ ಪರ್ವತದ ಪಶ್ಚಿಮ ಘಟ್ಟಗಳಲ್ಲಿ ಕಾಡು ಉಳಿಸ ಬೇಕು ಆದರೆ ಅದು ಸಾಧ್ಯವಿಲ್ಲ ಎನ್ನುತ್ತಿದೆ ಅರಣ್ಯ ಇಲಾಖೆ ದಿನೇ,ದಿನೇ ಪ್ರಾಣಿಗಳ ಸಂಖ್ಯೆ ಕುಸಿಯುತ್ತಿದೆ, ಪಕ್ಷಿ ಸಂಕುಲ ನಶಿಸುತ್ತಿದೆ ,ಅರಣ್ಯ ಮಾಯಾವಾಗುತ್ತಿದೆ, ಪರಿಸರ ವ್ಯಾಧಿ ಗಳು ಕಾರ್ಪೊರೇಟ್ ಮಟ್ಟದಲ್ಲಿ ಲಾಬಿ ಮಾಡಿ ಫಂಡ್ ತರುವ ಪ್ರಯತ್ನದಲ್ಲಿದ್ದಾರೆ ಇದಕ್ಕೆ ಅಪ್ಪಟ ಉದಾಹರಣೆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಪಾಲುದಾರಿಕೆಯಲ್ಲಿ ನಿರ್ಮಾಣವಾಗುತ್ತಿರುವ ರೆಸಾರ್ಟ್ .
ಜಾಗರ ಹೋಬಳಿ ಕೊಳಗಾಮೆ ಬಳಿಯ ಸರ್ವೆ ನಂಬರ್ 58 ಮತ್ತು58/* /* ಕೋಪ್ಪರಿಖಾನ್ ಎಸ್ಟೇಟ್ ಕಂ ಬೃಹತ್ ರೆಸಾರ್ಟ್ ನಿರ್ಮಾಣ ಕ್ಕೆ 4.35ಗುಂಟೆ ಭೂಮಿಯನ್ನು ನಿವೇಶನವಾಗಿ ಭೂಪರಿವರ್ತನೆ ಮಾಡಲಾಗಿದೆ.ಇದಕ್ಕೆ ಹೊಂದಿಕೊಂಡು ಇರುವ ಬಿ ಖರಾಬ್ ಜಾಗವನ್ನು ಸಾರ್ವಜನಿಕರು ಉಪಯೋಗಿಸಲು ಕಾಯ್ದಿರಿಸಲಾಗಿದೆ.
ಮೆ/ಸಿದ್ದಾರ್ಥ ಹೆಲ್ತ ರೆಸಾರ್ಟ್ ನಲ್ಲಿ ಏಕಕಾಲದಲ್ಲಿ 250 ಕ್ಕೂ ಹೆಚ್ಚು ಜನ ಉಳಿದು ಕೊಳ್ಳಬಹುದಾಗಿದೆ ಎನ್ನಲಾಗುತ್ತಿದೆ.ಇಂತಹ ರೆಸಾರ್ಟ್ ಮತ್ತು ಹೊಮ್ ಸ್ಟೇ ಗಳು ಈಗಾಗಲೇ ನಿರ್ಮಾಣ ವಾಗಿದ್ದರು ಅರಣ್ಯ ಇಲಾಖೆ,ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಮೌನವಾಗಿರುವುದು ನೋಡಿದರೆ ವ್ಯವಹಾರದ ಘಾಟು ಮೂಗಿಗೆ ಬಡೆಯುತ್ತದೆ.
ನ್ಯೂಸ್ ಕಿಂಗ್ ಪ್ರಾರಂಭದಲ್ಲಿ ಈ ಬಗ್ಗೆ ಸುದ್ದಿ ಬರೆದಿತ್ತು ಇದರ ಜೊತೆಗೆ ಹಲವು ಪತ್ರಿಕೆಗಳಲ್ಲೂ ಬಂದರು ಹಣದ ಮುಂದೆ ಯಾವ ಸುದ್ದಿ ಎನ್ನುವಂತೆ ಆಗಿದೆ. ಒಮ್ಮೆ ಮಾತ್ರ ಅರಣ್ಯ ಇಲಾಖೆ ನೋಟೀಸ್ ನೀಡಿ ಕೈ ತೊಳೆದುಕೊಂಡು ಕೈ ಒಡ್ಡುತ್ತಿದೆ ಎನ್ನುವಂತಾಗಿದೆ.ಭೂ ಪರಿವರ್ತನೆ ಮಾಡಲು ಹಿಂದಿನ ಜಿಲ್ಲಾಧಿಕಾರಿ ಮೀನಾ ನಾಗರಜ್ ಹಗಲು ರಾತ್ರಿ ಶ್ರಮ ಪಟ್ಟಿದ್ದರ ಫಲ ಫಸಲು ಬರುವ ಅಯಾಕಟ್ಟಿನ ಸ್ಥಳದಲ್ಲಿದ್ದಾರೆ ಎಂದು ಕಂದಾಯ ಇಲಾಖೆಯವರು ಹೇಳುತ್ತಿದ್ದಾರೆ.
ಕಾನೂನು ಬಾಹಿರ ರೆಸಾರ್ಟ್ ನಿರ್ಮಾಣದ ಬಗ್ಗೆ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದು ಅರಣ್ಯ ಇಲಾಖೆಯ ಕಾನೂನು ಸ್ಪಷ್ಟವಾಗಿ ಉಲ್ಲಂಘನೆಯಾಗಿದೆ ಜೊತೆಗೆ ಕೇಂದ್ರ ಪರಿಸರ ಇಲಾಖೆ ಕೂಡ ಕಾರಣ ಕೇಳಿದೆ ಎನ್ನಲಾಗಿದೆ. ಆದರೆ ಜಿಲ್ಲೆಯ ಜನಪ್ರತಿನಿಧಿ ಗಳು ಜಾಣ ಮೌನಕ್ಕೆ ಜಾರಿದ್ದಾರೆ.ಪವರ್ ಪುಲ್ ಉಪ ಮುಖ್ಯಮಂತ್ರಿ ಡಿ.ಕೆ.ಮಾಡಿದ್ದು ಕಾನೂನು ಎನ್ನುವಂತಾಗಿದೆ.ವಿಧಾನ ಪರಿಷತ್ ನಲ್ಲಿ ಎಲ್ಲಾ ವಿಚಾರಗಳನ್ನು ಪ್ರಸ್ತಾಪ ಮಾಡಿ ಇಡೀ ಸದನವನ್ನು ಅವರಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಮತ್ತು ಎಸ್.ಎಲ್.ಬೋಜೇಗೌಡರವರಿಗೆ ಗೊತ್ತಿಲ್ಲದಿರುವುದರ ಹಲವು ಒಳ ಸುಳಿವು ಅರಿಯಾಲಾಗುತ್ತಿಲ್ಲ.ಶಿವಮೊಗ್ಗದ ಅರುಣ್ ಈ ಬಗ್ಗೆ ಪ್ರಶ್ನೆ ಮಾಡಿದಾಗ ಕಿವಿ ಕೇಳುವುದಿಲ್ಲ ಕಣ್ಣು ಕಾಣುವುದಿಲ್ಲ ಎನ್ನುವಂತಾಗಿರುವುದು ಮಾತ್ರ ಸ್ಪಷ್ಟ.
ಜಿಲ್ಲೆಯಲ್ಲಿ ಹಲವು ರಾಜಕಾರಣಿಗಳು ಮತ್ತು ನಿವೃತ್ತ ಅಧಿಕಾರಿಗಳು ಹಾಲಿ ಅಧಿಕಾರಿಗಳು ಕಾಫಿ ತೋಟದ ಜೊತೆಗೆ ರೆಸಾರ್ಟ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಸ್ಥಳೀಯರಿಗೆ ಓಡಾಡಲು ದಾರಿ ಸಹ ಬಿಡದೆ ಸತಾಯಿಸಿ ಕಾಟ ಕೊಟ್ಟು ಪಕ್ಕದ ತೋಟಗಳ ಮೇಲೆ ಕಣ್ಣು ಹಾಕಿ ಕುಳುತ್ತಿದ್ದಾರೆ. ಸಂಘಟನೆಗಳು ಇಂತಹ ವಿಚಾರಗಳಿಗೂ ನಮಗೂ ಸಂಬಂಧ ಇಲ್ಲ ಎಂದು ಕುಳಿತಿದ್ದಾರೆ.ನಾವು,ನೀವು ಎಲ್ಲಾ ಮಾಯಾ ಎನ್ನುವಂತಾಗುವ ದಾರಿಯಲ್ಲಿ ಇರುವಂತೆ ಕಾಣುತ್ತಿದೆ.ಮಲೆನಾಡಿನ ಸೊಬಗು ಕಾಣೆಯಾಗಿ ರೆಸಾರ್ಟ್ ಅಬ್ಬರ ತಲೆ ಎತ್ತುತ್ತಿರುವುದು ಮಾತ್ರ ಸತ್ಯ.
Illegal resort construction near Bhadra Sanctuary?
Leave a comment