Home namma chikmagalur chikamagalur ಯುದ್ಧ ನಿಲ್ಲಿಸಬೇಕಾದವರು ಮೌನವಾಗಿರುವುದು ಮಾನವತೆಯ ಸೋಲು
chikamagalurHomeLatest Newsnamma chikmagalur

ಯುದ್ಧ ನಿಲ್ಲಿಸಬೇಕಾದವರು ಮೌನವಾಗಿರುವುದು ಮಾನವತೆಯ ಸೋಲು

Share
Share

ಚಿಕ್ಕಮಗಳೂರು: ಯುದ್ಧದ ಬೆಂಕಿ ವಿಶ್ವವನ್ನು ಸುಡುತ್ತಿರುವಾಗ, ಶಾಂತಿಯ ಮಾತುಗಳನ್ನು ಹೇಳಬೇಕಾದ ಸಂಘಟನೆಗಳು ರಾಜಕೀಯ ಲಾಭ-ನ?ದ ಲೆಕ್ಕಾಚಾರದಲ್ಲಿ ಮೌನವಾಗಿರುವುದು ಮಾನವೀಯತೆಯ ಸೋಲು ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಎಸ್.ಶೆಟ್ಟಿ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಾಲದಲ್ಲಿ ಯುದ್ಧ ಎಂದರೆ ಸೈನಿಕರ ನಡುವಿನ ನೇರ ಹೋರಾಟವಾಗಿತ್ತು. ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ನಿರ್ದಿಷ್ಠ ಯುದ್ಧಭೂಮಿಯಲ್ಲಿ ಮುಖಾಮುಖಿಯಾಗುತ್ತಿದ್ದವು. ಆದರೆ ಇಂದಿನ ಯುದ್ಧದ ಸ್ವರೂಪ ಸಂಪೂರ್ಣ ಬದಲಾಗಿದೆ. ಈಗ ಯುದ್ಧ ಗಡಿಗಳೊಳಗೆ ಸೀಮಿತವಾಗಿಲ್ಲ. ನಗರಗಳು ಗುರಿಯಾಗುತ್ತಿವೆ. ಸಾಮಾನ್ಯ ಜನರು ಬಲಿಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದಿನ ಜಗತ್ತು ಒಂದು ಅಪಾಯಕಾರಿ ತಿರುವಿನಲ್ಲಿದೆ. ಕ್ಷಿಪಣಿಗಳು, ಡ್ರೋನ್‌ಗಳು, ಬಾಂಬ್‌ಗಳು ಮತ್ತು ಆಧುನಿಕ ಯುದ್ಧ ತಂತ್ರಜ್ಞಾನಗಳು ಕೆಲವೇ ನಿಮಿ?ಗಳಲ್ಲಿ ಸಾವಿರಾರು ಜನ ಜೀವವನ್ನು ಕಳೆದುಕೊಳ್ಳುವ? ಭಯಾನಕವಾಗಿವೆ. ಇದರ ದು?ರಿಣಾಮವನ್ನು ಹೆಚ್ಚು ಅನುಭವಿಸುವವರು ಅಭಿವೃದ್ಧಿಶೀಲ ರಾಷ್ಟ್ರಗಳ ನಿರಪರಾಧಿ ನಾಗರಿಕರು. ಕಳೆದ ಕೆಲವು ವಾರಗಳು ಜಾಗತಿಕ ಶಾಂತಿಯ ನಾಜೂಕನ್ನು ಮತ್ತೆ ನೆನಪಿಸಿವೆ. ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಭೀತಿ, ಅಸ್ಥಿರತೆ ಮತ್ತು ಅನಿಶ್ಚಿತತೆಯನ್ನು ಉಂಟುಮಾಡಿದೆ. ಕ್ಷಿಪಣಿ ದಾಳಿ, ವಾಯು ದಾಳಿ ಮತ್ತು ಯುದ್ಧದ ಬೆದರಿಕೆಗಳು ಈಗ ಕೇವಲ ಸುದ್ದಿಗಳಲ್ಲ. ಅವು ನಿಜವಾದ ಸ್ಥಿತಿಯಾಗಿದೆ ಎಂದರು.

ಯುದ್ಧದಿಂದಾಗಿ ತೈಲ ಮಾರುಕಟ್ಟೆಗಳು ಅಸ್ಥಿರವಾಗುತ್ತಿವೆ. ಜಾಗತಿಕ ವ್ಯಾಪಾರ ಮಾರ್ಗಗಳು ಅಪಾಯದಲ್ಲಿವೆ. ಇಂಧನದ ಬೆಲೆ ಏರಿಕೆ, ವಸ್ತುಗಳ ಸರಬರಾಜು ಸರಪಳಿ ವ್ಯತ್ಯಯ ಮತ್ತು ಆರ್ಥಿಕ ಒತ್ತಡವು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತಿದೆ. ಭಾರತದಂಥ ದೇಶಗಳು ಇಂಧನದ ಬೆಲೆ ಏರಿಕೆ ಮತ್ತು ಆರ್ಥಿಕ ಒತ್ತಡವನ್ನು ಅನುಭವಿಸುವ ಪರಿಸ್ಥಿತಿಯನ್ನು ಎದುರಿಸುತ್ತಿವೆ ಎಂದು ಹೇಳಿದರು.

ಆದರೆ ಇದೇ ವೇಳೆ ಶಾಂತಿಯನ್ನು ಕಾಪಾಡಲು ಆರಂಭಗೊಂಡ ಜಾಗತಿಕ ಸಂಸ್ಥೆಗಳು ಎಲ್ಲಿವೆ?

ಜಗತ್ತು ಹೊತ್ತಿ ಉರಿಯುತ್ತಿರುವಾಗ ಅವು ಏನು ಮಾಡುತ್ತಿವೆ? ಎಂದು ಪ್ರಶ್ನಿಸಿದ ಅವರು, ಜಗತ್ತಿನಲ್ಲಿ ಹಲವಾರು ಶಕ್ತಿಶಾಲಿ ಸಂಘಟನೆಗಳಿವೆ. ಬ್ರಿಕ್ಸ್, ನ್ಯಾಟೋ, ಯುರೋಪಿಯನ್ ಯೂನಿಯನ್ ಮತ್ತು ಯುನೈಟೆಡ್ ನೇ?ನ್ಸ್ ಜಾಗತಿಕ ಭದ್ರತೆ, ಆರ್ಥಿಕ ಸ್ಥಿರತೆ ಮತ್ತು ಸಹಕಾರವನ್ನು ನಿರ್ಧರಿಸುವ ಪ್ರಮುಖ ಶಕ್ತಿಗಳಾಗಿವೆ. ನ್ಯಾಟೋ ಸಾಮೂಹಿಕ ರಕ್ಷಣೆಗೆ ಒಂದು ಸೈನಿಕ ಮೈತ್ರಿ. ಹೀಗಿದ್ದರೂ ಜಗತ್ತಿನಲ್ಲಿ ಸಂಘ?ಗಳು ಏಕೆ ಹೆಚ್ಚುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಬ್ರಿಕ್ಸ್ ಅಭಿವೃದ್ಧಿಶೀಲ ದೇಶಗಳ ಧ್ವನಿ ಎಂದು ಪರಿಗಣಿಸಲಾಗುತ್ತದೆ. ಹಾಗಿದ್ದರೆ ಗ್ಲೋಬಲ್ ಸೌತ್ ಮೇಲೆ ನಡೆಯುವ ಯುದ್ಧಗಳ ವಿರುದ್ಧ ಅದರ ಧ್ವನಿ ಇನ್ನ? ಗಟ್ಟಿಯಾಗಬೇಕಿಲ್ಲವೇ?. ಯುರೋಪಿಯನ್ ಒಕ್ಕೂಟ ಶಾಂತಿ ಮತ್ತು ಸಹಕಾರದ ಪ್ರತೀಕ. ಹಾಗಿದ್ದರೆ ಯುರೋಪ್ ಸುತ್ತಲಿನ ಉದ್ವಿಗ್ನತೆ ಏಕೆ ಕಡಿಮೆಯಾಗುತ್ತಿಲ್ಲ?. ಇವು ಕೇವಲ ರಾಜಕೀಯ ಪ್ರಶ್ನೆಗಳಲ್ಲ. ಮಾನವೀಯ ಕಾಳಜಿಯಾಗಿದೆ ಎಂದರು.

ಜಾಗತಿಕ ನಾಯಕತ್ವದ ಪಾತ್ರವೂ ಇಲ್ಲಿ ಮಹತ್ವದ್ದಾಗಿದೆ. ವಿಶ್ವದ ಪ್ರಮುಖ ಶಕ್ತಿಗಳ ನಿರ್ಧಾರಗಳು ದೂರವ್ಯಾಪಿ ಪರಿಣಾಮಗಳನ್ನು ಉಂಟುಮಾಡುತ್ತವೆ. ಅಮೆರಿಕದಂತಹ ರಾಷ್ಟ್ರ  ವಿದೇಶಾಂಗ ನೀತಿ, ಮಧ್ಯಪ್ರಾಚ್ಯದ ಪರಿಸ್ಥಿತಿಗಳು ಮತ್ತು ಪ್ರಾದೇಶಿಕ ಸಂಘ?ಗಳು ಜಾಗತಿಕ ಸಮತೋಲನವನ್ನು ಪ್ರಭಾವಿಸುತ್ತವೆ. ಯುದ್ಧದ ಸ್ವರೂಪ ಬದಲಾಗಿರುವುದರಿಂದ ಅದರ ಪರಿಣಾಮವೂ ಹೆಚ್ಚಾಗಿದೆ. ಹಿಂದಿನಂತೆ ಗಡಿಭಾಗಗಳಲ್ಲಿ ನಡೆಯುತ್ತಿದ್ದ ಯುದ್ಧಗಳು ಈಗ ನಾಗರಿಕ ಪ್ರದೇಶಗಳಿಗೆ ತಲುಪುತ್ತಿವೆ. ಡ್ರೋನ್ ದಾಳಿಗಳು, ಕ್ಷಿಪಣಿ ದಾಳಿಗಳು ಮತ್ತು ತಂತ್ರಜ್ಞಾನಾಧಾರಿತ ಯುದ್ಧ ಕ್ರಮಗಳು ಮಾನವೀಯ ದುರಂತವನ್ನು ಮತ್ತಷ್ಟು ಗಂಭೀರಗೊಳಿಸುತ್ತಿವೆ.

ಜಾಗತಿಕ ಸಂಸ್ಥೆಗಳು ಶಾಂತಿ ಕಾಪಾಡುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟಿದ್ದರೂ, ಅವುಗಳು ಅನೇಕ ಬಾರಿ ರಾಜಕೀಯ ಹಿತಾಸಕ್ತಿಗಳು ಮತ್ತು ಶಕ್ತಿ ಅಸಮತೋಲನದಿಂದ ದುರ್ಬಲವಾಗುತ್ತಿವೆ. ಉದಾಹರಣೆಗೆ, ಯುನೈಟೆಡ್ ನೇಶನ್ಸ್ ಭದ್ರತಾ ಮಂಡಳಿಯ ವೀಟೋ ಅಧಿಕಾರ ವ್ಯವಸ್ಥೆ ದೊಡ್ಡ ರಾ?ಗಳಿಗೆ ಹೆಚ್ಚಿನ ಪ್ರಭಾವವನ್ನು ನೀಡುತ್ತದೆ. ಇದರ ಪರಿಣಾಮವಾಗಿ ಅನೇಕ ಮಹತ್ವದ ನಿರ್ಧಾರಗಳು ರಾಜಕೀಯ ಅಡೆತಡೆಗಳಲ್ಲಿ ಸಿಲುಕುತ್ತವೆ ಎಂದು ವಿವರಿಸಿದರು .

The silence of those who should stop war is a defeat for humanity

Share

Leave a comment

Leave a Reply

Your email address will not be published. Required fields are marked *

Don't Miss

ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ

ಶೃಂಗೇರಿ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ  ಹಾಜರುಪಡಿಸಿದರು. ಶೃಂಗೇರಿ ತಾಲೂಕಿನ ಬುಕ್ಕಡಿಬೈಲು ಗ್ರಾಮದ ನಿವಾಸಿಯಾಗಿರುವ ಬಿ.ಜಿ. ಕೃಷ್ಣಮೂರ್ತಿ ವಿರುದ್ಧ ಕರ್ನಾಟಕದಲ್ಲಿ ಒಟ್ಟು 54...

ವಾಹನಗಳ ಮಿರರ್ ತಗುಲಿ-ಕತ್ತಿ-ಬಂದೂಕು ಝಳಪಿಸಿದ ಗಲಾಟೆ

ಚಿಕ್ಕಮಗಳೂರು: ವಾಹನಗಳ ಮಿರರ್ ಪರಸ್ಪರ ತಗುಲಿದ ಸಣ್ಣ ವಿಚಾರ ಕತ್ತಿ-ಬಂದೂಕು ಝಳಪಿಸುವ ಹಂತಕ್ಕೆ ತಲುಪಿರುವ ಆರೋಪವೊಂದು ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಸರವಳ್ಳಿ ಗ್ರಾಮದಲ್ಲಿ ಜುಲೈ 2...

Related Articles

ಮಹಿಳೆ ಗಮನ ಬೇರೆಡೆ ಸೆಳೆದು ₹ 3.90 ಲಕ್ಷ ವಂಚನೆ

ಕಡೂರು: ಕಳೆದ ಜೂನ್‌ನಲ್ಲಿ ಗಮನ ಬೇರೆಡೆಗೆ ಸೆಳೆದು ಗ್ರಾಹಕರೋರ್ವರ ಖಾತೆಯಿಂದ ₹3.90 ಲಕ್ಷಡ್ರಾ ಮಾಡಿರುವ ಪ್ರಕರಣ...

ಶಿವಮೊಗ್ಗ-ಶೃಂಗೇರಿ ಮಾರ್ಗ ಪರಿಗಣಿಸಿ

ಚಿಕ್ಕಮಗಳೂರು: ನೂತನ ರೈಲ್ವೆ ಯೋಜನೆಗೆ ಅಂತಿಮ ಸ್ಥಳ ನಿರ್ಧಾರ ಸಮೀಕ್ಷೆ ಮಾಡುವ ವೇಳೆ ಶಿವಮೊಗ್ಗ, ಭದ್ರಾವತಿ,...

ಕವಿಕಲ್ ಮಠದ ರಸ್ತೆಯಲ್ಲಿ ಹುಲಿ ದಿಢೀರನೆ ಪ್ರತ್ಯಕ್ಷ

ಚಿಕ್ಕಮಗಳೂರು: ಕಾಫಿನಾಡಿನ ಹಸಿರು ಕಾಡುಗಳ ನಡುವೆ ಸಂಚರಿಸುತ್ತಿದ್ದ ಪ್ರವಾಸಿಗರಿಗೆ ಮರೆಯಲಾಗದ ಅನುಭವವೊಂದು ಎದುರಾಗಿದೆ. ಚಿಕ್ಕಮಗಳೂರು ತಾಲೂಕಿನ...

ಭದ್ರಾ ಜಲಾಶಯದ ನೀರು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲು ಸೂಚನೆ

ಚಿಕ್ಕಮಗಳೂರು: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿದ್ದು,...