Home namma chikmagalur chikamagalur ರಾಷ್ಟ್ರ ಮೊದಲೆಂಬ ಧ್ಯೇಯದೊಂದಿಗೆ ಭಾಜಪ ಕೆಲಸ
chikamagalurHomeLatest Newsnamma chikmagalur

ರಾಷ್ಟ್ರ ಮೊದಲೆಂಬ ಧ್ಯೇಯದೊಂದಿಗೆ ಭಾಜಪ ಕೆಲಸ

Share
Share

ಚಿಕ್ಕಮಗಳೂರು: ರಾಷ್ಟ್ರ ಮೊದಲು ಎಂಬ ಧ್ಯೇಯದೊಂದಿಗೆ ಸ್ಥಾಪಿತಗೊಂಡಿರುವ ಏಕೈಕ ರಾಜಕೀಯ ಪಕ್ಷ ಭಾಜಪ. ರಾಷ್ಟ್ರೀಯ ಹಿತಚಿಂತನೆ ಹಾಗೂ ದೇಶಸೇವೆಯೇ, ಜನಾರ್ಧನ ಸೇವೆ ಎಂಬ ನಂಬಿಕೆ ಮತ್ತು ವಿಶ್ವಾಸದಡಿ ಸಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ತಾಲ್ಲೂಕಿನ ಹುಕ್ಕುಂದ ಗ್ರಾಮದಲ್ಲಿ ಪಂ.ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಗ್ರಾಮಾಂತರ ಮಂಡಳ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ಅವರು ಮಾ ತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ದೇಶ ಕಾಂಗ್ರೆಸ್ ಸರ್ಕಾರದಿಂದ ಮುನ್ನೆಡೆದಿಲ್ಲ. ಸರ್ವರ ಹೊಂದಾಣಿಕೆ ಮೇ ರೆಗೆ ರಾಷ್ಟ್ರೀಯ ಸರ್ಕಾರವಾಗಿತ್ತು. ಅಲ್ಲದೇ ರಾಷ್ಟ್ರದ ಸಂಸ್ಕೃತಿ, ಪರಂಪರೆಯನ್ನು ಬೆಂಬಲಿಸುತ್ತಿರಲಿಲ್ಲ. ಬ್ರಿಟಿ ಷರ ಆಳ್ವಿಕೆಯಂತೆ ವರ್ತಿಸುತ್ತಿತ್ತು. ಇದನ್ನು ವಿರೋಧಿಸಿ ಸರ್ಕಾರದಲ್ಲಿ ಸಚಿವರಾಗಿದ್ಧ ಶ್ಯಾಮ್‌ಪ್ರಕಾಶ್ ಮು ಖರ್ಜಿ ಹಾಗೂ ಅಂಬೇಡ್ಕರ್ ಸ್ಥಾನ ತ್ಯಜಿಸಿ ಹೊರಬಂದಿದ್ದರು ಎಂದರು.

ದೇಶದ ಅವಿಭಾಜ್ಯ ಅಂಗವಾದ ಕಾಶ್ಮಿರಕ್ಕೆ ಪ್ರತ್ಯೇಕ ಪ್ರಧಾನಿ, ಕಾನೂನು ಹಾಗೂ ಧ್ವಜವನ್ನು ಕಾಂಗ್ರೆಸ್ ಆಡಳಿತದಲ್ಲಿ ನೀಡಿತ್ತು. ಇದನ್ನು ವಿರೋಧಿಸಿಕೊಂಡೇ ಬಂದಿದ್ಧ ಮುಖರ್ಜಿಯವರು ಒಂದೇ ದೇಶದಲ್ಲಿ ಎ ರಡು ಕಾನೂನು, ಧ್ವಜ ಖಂಡಿಸಿ ಜನಸಂಘ ಸ್ಥಾಪಿಸುವ ಮುಖೇನಾ ಪ್ರತಿಭಟನಾ ಹೋರಾಟವನ್ನು ರೂಪಿ ಸುತ್ತಿದ್ದರು ಎಂದು ಹೇಳಿದರು.

ಅಂದಿನ ಕಾಲಘಟ್ಟದಲ್ಲಿ ದೇಶದ ಹಿತಕ್ಕಾಗಿ ಜನಸಂಘ ವಿಸರ್ಜಿಸಿ, ಜನತಾಪಾರ್ಟಿ ಎಂಬ ರಾಜಕೀಯ ಪಕ್ಷ ಕಟ್ಟಿತು, ಈ ಪಕ್ಷವು ಜಿಲ್ಲೆಯಲ್ಲ್ಲೂ ಶಕ್ತಿ ತುಂಬಿಸಿದೆ. ಆರಂಭದಲ್ಲಿ ಜನಸಂಘವು ಜಿಲ್ಲೆಯ ನಗರಸಭೆ, ಪುರಸಭೆಗಳಲ್ಲಿ ನಾಲ್ಕೈದು ಸ್ಥಾನಗಳನ್ನು ಪಡೆದುಕೊಂಡಿತು. ಈ ಗೆಲುವಿನ ಹಿಂದೆ ಲಾಲ್‌ಕೃಷ್ಣ ಅಡ್ವಾಣಿ ಜಿ ಲ್ಲೆಗೆ ಭೇಟಿ ನೀಡಿ ಸಭೆ ನಡೆಸಿದ ಪರಿಣಾಮವು ಒಂದು ಎಂದರು.

ಪ್ರಶಿಕ್ಷಣ ಮಹಾಭಿಯಾನ ರಾಜ್ಯ ಸಂಚಾಲಕ ವಿಕಾಸ್ ಪುತ್ತೂರು ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿ ಭಾಜಪ ಇತರೆ ಎಲ್ಲಾ ಪಕ್ಷಕ್ಕಿಂತ ಭಿನ್ನವಾದದು. ಈ ಸಿದ್ಧಾಂತವನ್ನು ಜನರೇ ಒಪ್ಪಿಕೊಂಡು ಚುನಾ ವಣೆಗಳಲ್ಲಿ ವಿಶ್ವಾಸದ ಬಲ ಮತ್ತು ಆರ್ಶೀವಾದಿಸಿ ದ್ವಿಗುಣಗೊಳಿಸಿದೆ. ಅಲ್ಲದೇ ಪಕ್ಷದ ಮೇಲಿರುವ ಅಚಲ ವಾದ ನಂಬಿಕೆಯು ಒಂದು ಕಾರಣ ಎಂದರು.

ಪ್ರಪಂಚದಲ್ಲೇ ಭಾಜಪ ಅತಿದೊಡ್ಡ ಹಾಗೂ ೧೫ ಕೋಟಿ ಗೂ ಹೆಚ್ಚು ಸದಸ್ಯತ್ವ ಹೊಂದಿರುವ ಏಕೈಕ ಪಕ್ಷ. ಪ್ರಜಾಪ್ರಭುತ್ವದ ಆಧಾರದಲ್ಲಿ ನೆಲೆಕಂಡಿರುವ ಬಿಜೆಪಿ ಕೇವಲ ಅಧಿಕಾರವನ್ನೇ ಗುರಿಯಾಗಿಸದೇ, ಜನ ಸೇವೆ ಹಾಗೂ ಕಾರ್ಯಕರ್ತರಿಗೆ ಪ್ರಶಿಕ್ಷಣ ಅಭಿಯಾನ ಹಮ್ಮಿಕೊಂಡು ರಾಷ್ಟ್ರದ ಸದ್ವಿಚಾರವನ್ನು ಕಾರ್ಯಾ ಗಾರದ ಮೂಲಕ ಪರಿಚಯಿಸುತ್ತಿದೆ ಎಂದು ತಿಳಿಸಿದರು.

ರಾಷ್ಟ್ರದಲ್ಲಿ ಅನೇಕ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಿವೆ. ಆದರೆ ಕಾರ್ಯಕರ್ತರು, ಮುಖಂಡ ರುಗಳಿಗೆ ರಾಷ್ಟ್ರಚಿಂತನೆ ಬೋಧಿಸುವುದು ಕೇವಲ ಬಿಜೆಪಿ ಹೊರತು, ಬೇರ್‍ಯಾವ ಪಕ್ಷದಲಿಲ್ಲ. ಇತರೆ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಸೀಮಿತವಾದರೆ, ಭಾಜಪ ರಾಷ್ಟ್ರದ ಉಜ್ವಲ ಭವಿಷ್ಯದ ಉಳಿವಿಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್‌ನ ದುರಾಡಳಿತದಲ್ಲಿ ಭಾರತೀಯ ಸಂಸ್ಕೃತಿ ಎತ್ತಿಹಿಡಿಯಲು ಜನಸಂಘವನ್ನು, ಜನತಾ ಪಾ ರ್ಟಿಯಾಗಿ ಪರಿವರ್ತನೆ ಮಾಡಿತು. ಶ್ರೀರಾಮನ ಮಂದಿರ ಹೋರಾಟ, ದೇಶದ ಭಾಗ ಕಾಶ್ಮೀರಕ್ಕೆ ಇತರೆ ಸ್ಥಾನಮಾನ ವಿರೋಧಿಸಿ ಚಳುವಳಿ ನಡೆಸಿಕೊಂಡು ಬಂದಿತ್ತು. ಈ ಚಳುವಳಿ ಪ್ರತಿಫಲವಾಗಿ ಪ್ರಧಾನಿ ನರೇ ಂದ್ರ ಮೋದಿ ಕಾಲಘಟ್ಟದಲ್ಲಿ ಈಡೇರಿಸಿದ್ದು ಇನ್ನೂ ಅನೇಕ ಕಾರ್ಯಗಳು ಬಾಕಿಯಿವೆ ಎಂದರು.

ಪ್ರಶಿಕ್ಷಣ ಅಭಿಯಾನವು ಇದೀಗ ಮೂರು ವರ್ಗಗಳಾಗಿ ವಿಂಗಡಿಸಿದ್ದು ಇಲ್ಲಿ ಕಾರ್ಯಕರ್ತರಿಗೆ ಪಕ್ಷ ದ ಸಿದ್ದಾಂತ, ಕೇಂದ್ರ ಸರ್ಕಾರ ಹಾಗೂ ರಾಜ್ಯದ ಹಿಂದಿನ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನದಟ್ಟಾಗಿ ಸಿ ಬೂತ್ ಮಟ್ಟದಲ್ಲಿ ಜನಸಾಮಾನ್ಯರಿಗೆ ಅರಿವು ಮೂಡಿಸಲು ನಡೆಸಲಾಗುತ್ತಿದೆ. ಜವಾಬ್ದಾರಿಯಿಂದ ಪಾ ಲ್ಗೊಂಡು ದೇಶದ ಉತ್ತಮ ಭವಿಷ್ಯಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

ಮಹಾಭಿಯಾನದ ಚಿಕ್ಕಮಗಳೂರು ಕ್ಷೇತ್ರದ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ರಾಜೀವ್ ಮಾ ತನಾಡಿ ಕಸಬಾ, ಜಾಗರ, ಕಳಸಾಪುರ ಮಹಾಶಕ್ತಿ ಕೇಂದ್ರದ ಗ್ರಾಮಾಂತರ ಮಂಡಲದಿಂದ ಪ್ರಶಿಕ್ಷಣ ಮಹಾ ಭಿಯಾನ ಹಮ್ಮಿಕೊಂಡಿದ್ದು ದಿನಪೂರ್ತಿ ಕಾರ್ಯಾಗಾರದಲ್ಲಿ ಕಾರ್ಯಕರ್ತರಿಗೆ ಸಂಪೂರ್ಣ ವಿವರ ತಿಳಿಸಿ ಕೊಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಪ್ರಶಿಕ್ಷಣ ಮಹಾಭಿಯಾನ ವರ್ಗದ ಪ್ರಮುಖ್ ಈಶ್ವರಹಳ್ಳಿ ಮಹೇಶ್, ಜಿಲ್ಲಾ ಬಿಜೆ ಪಿ ಉಪಾಧ್ಯಕ್ಷ ಕನಕರಾಜ್‌ಅರಸ್, ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಮಹಿಳಾ ಘಟಕದ ಜಿಲ್ಲಾ ಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟೇಶ್, ಜಿ.ಪಂ. ಮಾಜಿ ಉಪಾಧ್ಯ ಕ್ಷ ಬಿ.ಜಿ.ಸೋಮಶೇಖರ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

BJP works with the motto of nation first

Share

Leave a comment

Leave a Reply

Your email address will not be published. Required fields are marked *

Don't Miss

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದ್ದು, ೮೧ ಸಾವಿರ ರೂ.ಗಳ ದಂಡ...

ಹುಬ್ಬಳ್ಳಿ-ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ

ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ಚಲಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಹಿಂದೆ ಜೂನ್ 21,...

Related Articles

ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಚಿಕ್ಕಮಗಳೂರು: RVR ಹೆಲ್ತ್ ಕೇರ್ ವತಿಯಿಂದ, ಶ್ರೀ ವಿಜಯ್ ಎಂ.ಎನ್. ಶೆಟ್ಟಿ ಹಾಗೂ ಡಾ. (ಪ್ರೊ). ರಾಘವೇಂದ್ರ...

ಧುಮ್ಮಿಕ್ಕಿ ಹರಿಯುತ್ತಿರುವ ಹೆಬ್ಬೆ ಫಾಲ್ಸ್‌

ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ತರೀಕೆರೆ (Tarikere) ತಾಲೂಕಿನಲ್ಲಿರುವ ಹೆಬ್ಬೆ...

ಶ್ರೀಈಶ್ವರ-ಚೌಡೇಶ್ವರಿ ದೇವಾಲಯಗಳಲ್ಲಿ ಆಭರಣ ಕಳವು

ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ ಎಸ್.ಡಿ. ಕೊಪ್ಪಲು ಗ್ರಾಮದ ಶ್ರೀಈಶ್ವರ ಹಾಗೂ ಚೌಡೇಶ್ವರಿ ದೇವಾಲಯಗಳಲ್ಲಿ ದೇವರ...

ತರೀಕೆರೆಯ ಗೋಪಿಕೃಷ್ಣಗೆ ಎಂಎಲ್ ಸಿ ಸ್ಥಾನ ನೀಡಬೇಕು

ಚಿಕ್ಕಮಗಳೂರು: ಅಹಿಂದ ಪರವಾಗಿ ಮಾತಾಡುವ ಕಾಂಗ್ರೆಸ್ ಪಕ್ಷ ಮಡಿವಾಳ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ನೀಡುತ್ತಿಲ್ಲ....