Home namma chikmagalur chikamagalur ವಿಮಾನ ಬಂತು ವಿಮಾನ ಅಚ್ಚರಿ ! ಆತಂಕ !! ಅನುಮಾನ ?
chikamagalurHomeLatest Newsnamma chikmagalur

ವಿಮಾನ ಬಂತು ವಿಮಾನ ಅಚ್ಚರಿ ! ಆತಂಕ !! ಅನುಮಾನ ?

Share
Share

ಚಿಕ್ಕಮಗಳೂರು: ವಿಮಾನ ಹಾರಾಟ ನೋಡಿ ಮಕ್ಕಳಿಗೆ ಖುಷಿಯೋ ಖಷಿ, ಕೆಲವರಿಗೆ ಆತಂಕ ,ಹಿರಿಯರಿಗೆ ಅನುಮಾನ ಕಳೆದ ಒಂದುವರೆ ತಿಂಗಳಿಂದ ವಿಮಾನ ಹಾರಾಟ ನೋಡಿ ಕೆಳ ಮಟ್ಟದಲ್ಲಿ ತಲೆಗೆ ತಾಗಿತೇನೋ ಎಂಬುವ ಅನುಭವ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅನೇಕ ಕಡೆ ವಿಮಾನ ಹಾರಾಟ ನಡೆಸುತ್ತಿರುವುದನ್ನು ಜನ ಹೌಹಾರಿದ್ದಾರೆ ಹಲವರ ಬಳಿ ಈ ಬಗ್ಗೆ ಮಾತನಾಡಿದ್ದಾರೆ ಪೊಲೀಸರಿಗೆ ಮತ್ತು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.ಈ ಬಗ್ಗೆ ಪತ್ರಿಕೆಗಳಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸುದ್ದಿ ಕೂಡ ಬಂದಿದೆ.ಅಧಿಕಾರಿಗಳು ಯಾವುದು ನಮಗೆ ಗೊತ್ತಿಲ್ಲ ಎನ್ನುತ್ತಲೇ ಸರ್ವೇ ಗೀರ್ವೇ ಮಾಡುತ್ತಿರಬಹುದು ಎಂದಿದ್ದಾರೆ.ಆದರೆ ಜನ ಮಾತ್ರ ಗಾಬರಿ ಗೊಂಡಿದ್ದಾರೆ.

ಕಳೆದ ಒಂದುವರೆ ತಿಂಗಳ ಹಿಂದೆ ಚಿಕ್ಕಮಗಳೂರು ಮತ್ತು ಅಂಬಳೆ,ಮರ್ಲೆ,ಕೈಮಾರ ಮತ್ತಿತರ ಕಡೆ ಮೊದಲು ವಿಮಾನ ಹಾರಾಟ ನೋಡಿ ಆಶ್ಚರ್ಯ, ಅನುಮಾನ,ಆತಂಕ ವ್ಯಕ್ತಪಡಿಸಿ ಹಲವು ಕಡೆ ವಿಚಾರ ಮಾಡಿದರೂ ಪ್ರಯೋಜನವಾಗಿಲ್ಲಾ. ಇದಕ್ಕೂ ಮೊದಲು ಬಾಳೆಹೊನ್ನುರು, ಸಿ.ಆರ್.ಎಸ್ ಮತ್ತು ಕಡಬಗೆರೆ ಸುತ್ತಲೂ ಮನೆಗೆ ತಾಗುವಂತೆ ವಿಮಾನ ಹಾರಾಟ ನೋಡಿ ಜನ ಗಾಬರಿಗೊಂಡಿದ್ದಾರೆ.

ಕಳೆದ ವಾರ ಅಜ್ಜಂಪುರ ಸುತ್ತ ಮುತ್ತ ಇರುವ ಹಣ್ಣೇ ಗುಡ್ಡ ಸೇರಿದಂತೆ ಕರಡಿಪುರ,ದೇವಿಕೆರೆ ಹೊಸೂರು,ರಂಗಾಪುರ,ತಿಮ್ಮಾಪುರ,ಕಲ್ಲುಶೆಟ್ಟಿಹಳ್ಳಿ ಹಾಗೂ ಅತ್ತಿಮೊಗ್ಗೆ ಬಳಿ ದಿನವಿಡೀ ವಿಮಾನ ಹಾರಾಟ ನಡೆಸಿದ್ದನ್ನು ನೋಡಿ ಬಂಗಾರ ಸಿಗುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ನಿನ್ನೆ, ಮೊನ್ನೆ ಮಲ್ಲಂದೂರು ಮೊತ್ತೋಡಿ,ಮಾಡ್ಲಾ,ಹಿಪ್ಲಾದ ಬಳಿ ತೀರ ಕೆಳ ಮಟ್ಟದಲ್ಲಿ ವಿಮಾನ ಹಾರಾಟ ನಡೆಸಿದೆ.ನಿನ್ನೆ ಎನ್.ಆರ್.ಪುರದ ಸೀತೂರು,ಬೆಮ್ಮನೆ,ಬೆಳ್ಳೂರು,ಹಾತೂರಿನಲ್ಲಿ ವಿಮಾನ ಮೊಬೈಲ್ ಟವರ್ ಮಟ್ಟದಲ್ಲಿ ಹಾರಾಟ ನಡೆಸಿದ್ದು ಜನ ಪೊಲೀಸರು ಮತ್ತು ಅರಣ್ಯ ಇಲಾಖೆಯ ಗಮನಕ್ಕೆ ತಂದು ಪ್ರಶ್ನಿಸಿದ್ದಾರೆ.

ಮಾಮುಲಿಯಂತೆ ವಿಮಾನ ಹಾರಾಟ ಮಾಡಿದ್ದರೆ ಯಾರಿಗೂ ಅನುಮಾನ ಇರುತ್ತಿರಲಿಲ್ಲ. ಆದರೆ ಮನೆಗಳ ಮೇಲೆ, ಜನರ ತಲೆಯ ಮೇಲೆ ಹೋಗುವಂತೆ ವಿಮಾನ ದಿನವಿಡೀ ಹಾರಾಟ ಮಾಡುವುದನ್ನು ನೋಡಿದರೆ ಸಹಜವಾಗಿ ಅನುಮಾನ, ಅಚ್ಚರಿ, ಆತಂಕ ಬಂದೇ ಬರುತ್ತದೆ. ಜೊತೆಗೆ ಪದೇ,ಪದೇ ಹೋಗಿ ಬರುತ್ತಿರುವ ವಿಮಾನದ ಬಗ್ಗೆ ಗಾಬರಿಯಿಂದ ಮಾತನಾಡುತ್ತಿದ್ದಾರೆ.ಜಿಲ್ಲಾಡಳಿತ ಆಥವಾ ಪೊಲೀಸ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡುವುದು ಒಳ್ಳೆಯದು.

ವಿಮಾನ ಹಾರಾಟದಿಂದ ಮಕ್ಕಳು ಶಾಲೆಯಿಂದ ಹೊರಬಂದು ಕೇಕೆ ಹಾಕಿ ಖುಷಿ ಪಟ್ಟರೆ ಹಿರಿಯರು ಇದು ಎಂತಹ ಕಾಲ ಮಾರಾಯ ಎನ್ನುತ್ತಿದ್ದಾರೆ ಮಧ್ಯ ವಯಸ್ಕ ರು ಹೆಣ್ಣುಮಕ್ಕಳು ಗಾಬರಿಯ ಜೊತೆಗೆ ಆಶ್ಚರ್ಯ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.ಇದಕ್ಕೆ ಜಿಲ್ಲಾಡಳಿತ ಆಥವಾ ಜನಪ್ರತಿನಿಧಿಗಳು ಸ್ಪಷ್ಟ ಪಡಿಸುವುದು ಒಳ್ಳೆಯದು.

The plane arrived the plane was surprised! Anxiety!! Doubt?

Share

Leave a comment

Leave a Reply

Your email address will not be published. Required fields are marked *

Don't Miss

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದ್ದು, ೮೧ ಸಾವಿರ ರೂ.ಗಳ ದಂಡ...

ಹುಬ್ಬಳ್ಳಿ-ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ

ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ಚಲಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಹಿಂದೆ ಜೂನ್ 21,...

Related Articles

ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಚಿಕ್ಕಮಗಳೂರು: RVR ಹೆಲ್ತ್ ಕೇರ್ ವತಿಯಿಂದ, ಶ್ರೀ ವಿಜಯ್ ಎಂ.ಎನ್. ಶೆಟ್ಟಿ ಹಾಗೂ ಡಾ. (ಪ್ರೊ). ರಾಘವೇಂದ್ರ...

ಧುಮ್ಮಿಕ್ಕಿ ಹರಿಯುತ್ತಿರುವ ಹೆಬ್ಬೆ ಫಾಲ್ಸ್‌

ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ತರೀಕೆರೆ (Tarikere) ತಾಲೂಕಿನಲ್ಲಿರುವ ಹೆಬ್ಬೆ...

ಶ್ರೀಈಶ್ವರ-ಚೌಡೇಶ್ವರಿ ದೇವಾಲಯಗಳಲ್ಲಿ ಆಭರಣ ಕಳವು

ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ ಎಸ್.ಡಿ. ಕೊಪ್ಪಲು ಗ್ರಾಮದ ಶ್ರೀಈಶ್ವರ ಹಾಗೂ ಚೌಡೇಶ್ವರಿ ದೇವಾಲಯಗಳಲ್ಲಿ ದೇವರ...

ತರೀಕೆರೆಯ ಗೋಪಿಕೃಷ್ಣಗೆ ಎಂಎಲ್ ಸಿ ಸ್ಥಾನ ನೀಡಬೇಕು

ಚಿಕ್ಕಮಗಳೂರು: ಅಹಿಂದ ಪರವಾಗಿ ಮಾತಾಡುವ ಕಾಂಗ್ರೆಸ್ ಪಕ್ಷ ಮಡಿವಾಳ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ನೀಡುತ್ತಿಲ್ಲ....