ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಚುನಾವಣೆ ನಡೆಸಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಬ್ಯಾಂಕ್ ನ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿ ಪ್ರತಿನಿಧಿಗಳ ಆಯ್ಕೆ ಕೂಡ ನಡೆದಿತ್ತು. ರಾಜಕೀಯ ಒತ್ತಡದಿಂದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಚುನಾವಣಾ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ್ದರು.
ಆಡಳಿತ ಮಂಡಳಿ ಅವಧಿ ಕೂಡ ಮುಗಿದಿದ್ದು ಇದಕ್ಕೂ ಹೈಕೋರ್ಟ್ ತಡೆ ನೀಡಿತ್ತು.ಚುನಾವಣೆ ಸ್ಥಗಿತಗೊಳಿಸಿದ್ದನ್ನು ಹೈಕೋರ್ಟ್ನಲ್ಲಿ ಡಿ.ಸಿ.ಸಿ.ಬ್ಯಾಂಕ್ ಮತ್ತು ಸಿಂಗಟಗೆರೆ ಸಹಕಾರ ಸಂಘದವರು ಪ್ರಶ್ನೆ ಮಾಡಿದ್ದರು.ಕಳೆದ ಎರಡು ತಿಂಗಳಿಂದ ಹೈಕೋರ್ಟ್ ನಲ್ಲಿ ಸುಧೀರ್ಘ ವಿಚಾರಣೆ ನಡೆದು ಜಿಲ್ಲಾಧಿಕಾರಿ ತಡೆ ನೀಡಿದ್ದ ಪ್ರಕ್ರಿಯೆಯನ್ನು ತೆರವು ಗೊಳಿಸಿ ಈ ಹಿಂದಿನಂತೆ ಚುನಾವಣೆ ನಡೆಸಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ ಎಂದು ತಿಳಿದುಬಂದಿದೆ.
ರಾಜಕೀಯ ಒತ್ತಡಕ್ಕೆ ಮಣಿದ ಜಿಲ್ಲಾಧಿಕಾರಿಯ ನಡೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು ಇದರ ಜೊತೆಗೆ ಒತ್ತಡ ತಂದವರಿಗೆ ಮುಖ ಭಂಗವಾಗಿದೆ ಎಂದು ಸಹಕಾರಿಗಳ ವಿಶ್ಲೇಷಣೆ.
High Court gives green signal for District Central Cooperative Bank elections
Leave a comment