Home namma chikmagalur chikamagalur ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ
chikamagalurHomeLatest Newsnamma chikmagalur

ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ

Share
Share

ಚಿಕ್ಕಮಗಳೂರು: ನಗರದಲ್ಲಿ ಶನಿವಾರ ಮಧ್ಯಾಹ್ನ ಅರ್ಧಗಂಟೆಗೂ ಹೆಚ್ಚುಕಾಲ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ನಗರದ ಎಂ.ಜಿ ರಸ್ತೆ, ಬಸ್ ನಿಲ್ದಾಣ, ಎಐಟಿ ವೃತ್ತ, ಕಲ್ಯಾಣನಗರ, ಹಿರೇಮಗಳೂರು ಸೇರಿದಂತೆ ನಗರ ಹೊರವಲಯವಾದ ಅಲ್ಲಂಪುರ, ಮೂಗುತ್ತಿಹಳ್ಳಿ, ಶಿರಗುಂದ, ಅಲದಗುಡ್ಡೆ ಭಾಗದಲ್ಲಿ ಬಿರುಗಾಳಿ ಸಹಿತ ಉತ್ತಮ ಮಳೆಯಾಗಿದೆ.

ಗಾಳಿ ಸಹಿತ ಮಳೆಗೆ ಚಿಕ್ಕಮಗಳೂರು ಮೂಡಿಗೆರೆ ಹೆದ್ದಾರಿ ಕೆಳಗೂರು ಸಮೀಪ ಮರ ಧರೆಗುರುಳಿ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿತ್ತು. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಕೆಳಗೂರಿನಿಂದ ವಾಪಸ್ ತೆರಳಿ ಆಲ್ಲೂರು ಮೂಲಕ ಮೂಡಿಗೆರೆ ತಲುಪಿದವು.

ಬೃಹತ್ ಮರ ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಹೆದ್ದಾರಿ ಬಂದ್ ಮಾಡಿದ ಪರಿಣಾಮ ಕೆಲಹೊತ್ತು ಕೆಳಗೂರು ಬಳಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ಮಾರ್ಗವಾಗಿ ಸಂಚಾರ ಮಾಡುವ ಮೂಡಿಗೆರೆ, ಧರ್ಮಸ್ಥಳ, ಉಜಿರೆ, ಮಂಗಳೂರು ಪ್ರಯಾಣಿಕರಿಗೆ ಸಂಚಾರ ವ್ಯತ್ಯಯವಾಗಿತ್ತು.

ಮೂಡಿಗೆರೆ ತಾಲ್ಲೂಕಿನಾದ್ಯಂತ ಶನಿವಾರ ಮಧ್ಯಾಹ್ನ ಧಾರಾಕಾರ ಮಳೆಯಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಬೆಳಿಗ್ಗೆ 7ಕ್ಕೆ ಪ್ರಾರಂಭವಾದ ಮಳೆ ಒಂದು ಗಂಟೆಗೂ ಅಧಿಕ ಕಾಲ ಸುರಿಯಿತು. ಬಳಿಕ ಬಿಡುವು ನೀಡಿದ ಮಳೆಯು, ಮಧ್ಯಾಹ್ನ 2ಕ್ಕೆ ಮತ್ತೆ ಪ್ರಾರಂಭವಾಗಿ ಸಂಜೆ 4ರವರೆಗೂ ಗುಡುಗು ಸಿಡಿಲು ಗಾಳಿಯೊಂದಿಗೆ ಆರ್ಭಟಿಸಿತು.

ಪಟ್ಟಣ ಸೇರಿದಂತೆ ಬಣಕಲ್, ಕೊಟ್ಟಿಗೆಹಾರ, ಗುತ್ತಿ, ಮೂಲರಹಳ್ಳಿ, ದೇವರುಂದ, ಹಂತೂರು, ಕುಂದೂರು, ನಿಡುವಾಳೆ, ಬಾಳೂರು ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿತ್ತು.

ಮಳೆಯಿಂದ ಕಾಫಿ ತೋಟಗಳಲ್ಲಿ ಹಲವೆಡೆ ಮರಗಳು ಧರೆಗುರುಳಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಬೆಳಿಗ್ಗೆಯೇ ಮಳೆ ಕಾಣಿಸಿಕೊಂಡಿದ್ದರಿಂದ ಕಾಫಿ ತೋಟದ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು ರಜೆ ಹಾಕಿದ್ದರು.

Heavy rain accompanied by thunderstorms in the district

Share

Leave a comment

Leave a Reply

Your email address will not be published. Required fields are marked *

Don't Miss

ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪುಂಡಾಟ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ವಲಯ ವ್ಯಾಪ್ತಿಯ ಭದ್ರಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಯುವಕರ ತಂಡವೊಂದು ಖಾಸಗಿ ಓಪನ್ ಜೀಪಿನಲ್ಲಿ ಅಕ್ರಮವಾಗಿ ಪ್ರವೇಶಿಸಿ ಕಾಡಾನೆಗಳನ್ನು ಕಾಡಿರುವ ಆರೋಪ ಕೇಳಿಬಂದಿದ್ದು,...

ರೈತ ಸಂಘದ ಡಿ.ರಾಮೇಗೌಡ ಕಲ್ಲಹಳ್ಳಿ ಆಯ್ಕೆ ಕ್ರಮಬದ್ಧ

ಚಿಕ್ಕಮಗಳೂರು: ತಾಲ್ಲೂಕು ಅಧ್ಯಕ್ಷರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ತಾಲ್ಲೂಕು ಸಮಿತಿಯ ಸಭೆಯಲ್ಲಿ ಹಾಜರಿದ್ದ ಪದಾಧಿಕಾರಿಗಳ ನಿರ್ಣಯದಂತೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಡಿ.ರಾಮೇಗೌಡ ಕಲ್ಲಹಳ್ಳಿ ಅವರ ಆಯ್ಕೆ ಕ್ರಮಬದ್ಧವಾಗಿದೆ ಎಂದು ಕರ್ನಾಟಕ ರಾಜ್ಯ...

Related Articles

ಜನಪ್ರತಿನಿಧಿ ನಿರ್ಲಕ್ಷ್ಯಕ್ಕೆ ಬೇಸತ್ತು ದಂಪತಿ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ

ಮೂಡಿಗೆರೆ: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ದಂಪತಿ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ....

ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ

ಚಿಕ್ಕಮಗಳೂರು: ರಾಜ್ಯದ ಅತ್ಯುನ್ನತ ಶಿಖರವಾದ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಹಾಗೂ...

ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮಿನಿ ಪಲ್ಟಿ

ಚಿಕ್ಕಮಗಳೂರು : ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮಿನಿ ಕಾರೊಂದು ಚಾಲಕನ ನಿರ್ಲಕ್ಷ್ಯದಿಂದ ಪಲ್ಟಿಯಾದ ಘಟನೆ ಚಿಕ್ಕಮಗಳೂರು...

ಆಲ್ದೂರು ಸಮೀಪ ಅಪರಿಚಿತ ವ್ಯಕ್ತಿ ಶವ ಪತ್ತೆ

ಚಿಕ್ಕಮಗಳೂರು: ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಾಣಿಮಕ್ಕಿ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ...