Home Latest News ಅರಣ್ಯ ಇಲಾಖೆಯ ಬುಲ್ಡೋಜರ್ ನೀತಿ-ಸಂಕಷ್ಟದಲ್ಲಿ ರೈತರು, ಕಾರ್ಮಿಕರು, ಬೆಳೆಗಾರರು
Latest NewschikamagalurHomenamma chikmagalur

ಅರಣ್ಯ ಇಲಾಖೆಯ ಬುಲ್ಡೋಜರ್ ನೀತಿ-ಸಂಕಷ್ಟದಲ್ಲಿ ರೈತರು, ಕಾರ್ಮಿಕರು, ಬೆಳೆಗಾರರು

Share
Share

ಚಿಕ್ಕಮಗಳೂರು: ಅರಣ್ಯ ಇಲಾಖೆಯ ಬುಲ್ಡೋಜರ್ ನೀತಿಯಿಂದ ರಾಜ್ಯದ ಸಮಸ್ಯೆಯಾಗಿರುವ ಒತ್ತುವರಿ, ಫಾರಂ ನಂಬರ್ 53-57, ಸಾಗುವಳಿದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅರಣ್ಯ ಇಲಾಖೆಯವರು ಹಕ್ಕು ದಾಖಲಿಸದೆ ಕಂದಾಯ ಇಲಾಖೆಯ ಹೆಸರಿನಲ್ಲಿ ಇರುವ ಜಾಗ ನಮ್ಮ ಇಲಾಖೆಯದ್ದು ಎಂಬ ರಣ ನೀತಿಯಿಂದಾಗಿ ದಿನೇ,ದಿನೇ ಸಮಸ್ಯೆ ಉಲ್ಬಣಗೊಂಡಿದೆ.

ಈಗಾಗಲೇ ಹಲವರಿಗೆ ಮಂಜೂರು ಆಗಿರುವ ಜಾಗ ಕಂದಾಯ ಇಲಾಖೆಯ ಹೆಸರಿನಲ್ಲಿ ಇದ್ದರೂ ಅರಣ್ಯ ಇಲಾಖೆಯ ಜಾಗ ಎಂದು ತೆರವುಗೊಳಿಸಲು ಮುಂದುವರಿದಿದೆ. ಆದರೆ ಅರಣ್ಯ ಇಲಾಖೆಗೆ ಯಾವುದೇ ಹಕ್ಕು ಇರುವುದಿಲ್ಲ ಆದರೂ ದಬ್ಬಾಳಿಕೆ ಮತ್ತು ದರ್ಪದಿಂದ ವರ್ತಿಸುತ್ತಿರುವುದರ ಬಗ್ಗೆ ವ್ಯಾಪಕ ದೂರುಗಳು ಇವೆ.

ಅರಣ್ಯ ಉದ್ದೇಶಕ್ಕೆ ಸರ್ಕಾರಿ ಭೂಮಿ ಕಾಯ್ದಿರಿಸಲು ಕಂದಾಯ ಇಲಾಖೆಯ ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ.1964 ಕಲಂ71ರಲ್ಲಿ ಮತ್ತೆ ಅಧಿಕಾರ ನೀಡಲಾಗಿದೆ. ಆದಾಗ್ಯೂ ಅರಣ್ಯ ಇಲಾಖೆಯ ಬುಲ್ಡೋಜರ್ ನೀತಿಯಿಂದ ಕಂದಾಯ ಇಲಾಖೆಯೆ ಗೌಣವಾಗಿಸಿದೆ.ಜೊತೆಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಒಂದೇ ಉದ್ದೇಶಕ್ಕಾಗಿ 1888 ಮತ್ತು1963 ಜಾರಿಗೊಳಿಸಲು ಅವಕಾಶ ನೀಡಿರುವುದು ಅವೈಜ್ಞಾನಿಕವಾಗಿದೆ ಇದರ ದುರುಪಯೋಗ ಕೂಡ ಅಗಿದೆ ಎನ್ನುತ್ತಾರೆ ಪರಿಣಿತರು.

ಕಂದಾಯ ಮತ್ತು ಅರಣ್ಯ ಇಲಾಖೆಯ ಮಧ್ಯೆ ಸಮನ್ವಯತೆ ಇಲ್ಲದಿರುವುದು, ಕಂದಾಯ ಇಲಾಖೆಯನ್ನು ಲೆಕ್ಕಿಸದೆ ಇರುವುದರಿಂದ ಕಲಾಂ71 ರಂತೆ ಅರಣ್ಯಕ್ಕೆ ಭೂಮಿ ಕಾಯ್ದಿರಿಸುವ ಅಧಿಕಾರ ಇರುವುದರಿಂದ ಕಂದಾಯ ಇಲಾಖೆಯವರು ಕ್ರಮವಹಿಸಿದರೆ ಜನರಿಗೆ ಆಗುತ್ತಿರುವ ಹಲವು ತೊಂದರೆ ಗಳು ನಿವಾರಣೆ ಆಗುತ್ತವೆ .

ಸರ್ಕಾರಿ ಸೌಮ್ಯದ ಭೂಮಿಯ ನಿರ್ವಹಣಾ ಜವಾಬ್ದಾರಿ ಕಂದಾಯ ಇಲಾಖೆಯದ್ದು ಆದರೆ ಅರಣ್ಯ ಉದ್ದೇಶಕ್ಕೆ ಭೂಮಿ ಕಾಯ್ದಿರಿಸುವ ಪ್ರಕ್ರಿಯೆ ಯಲ್ಲಿ ಕಂದಾಯ ಇಲಾಖೆ ನಿರ್ಲಕ್ಷಿಸಿ ಹಕ್ಕು ದಾಖಲೆಗಳನ್ನು ಪರಿಶೀಲನೆ ನಡೆಸದೆ ,ಸ್ಥಳದ ವಾಸ್ತವಿಕ ಭೂ ಮಂಜೂರಿಗಳು ಮತ್ತು ಮಂಜೂರಿ ಕೋರಿಕೆಗಳ ಪರಿಶೀಲನೆ ಕೈ ಗೊಳ್ಳದೆ ಮತ್ತು ಕಂದಾಯ ಇಲಾಖೆಯ ಸರ್ವೇಯರ್ ಗಳಿಂದ ಭೌತಿಕ ಸ್ಥಿತಿಯನ್ನು ತಪಾಸಣೆ ಮಾಡದೆ ಅರಣ್ಯ ಇಲಾಖೆಯ ಏಕ ಪಕ್ಷೀಯವಾಗಿ ಅರಣ್ಯಕ್ಕೆ ಭೂಮಿ ಕಾಯ್ದಿರಿಸಿ ಕೊಂಡಿರುವುದು ಸಮಸ್ಯೆ ಉಲ್ಬಣವಾಗಲು ಕಾರಣವಾಗಿದೆ.ಇದರಿಂದಾಗಿ ಜನಸಾಮಾನ್ಯರು ಮತ್ತು ಒತ್ತುವರಿದಾರರು ಹಾಗೂ ಸಾಗುವಳಿದಾರರು ಸಂಕಷ್ಟಕ್ಕೆ ಸಿಲುಕಿ ತತ್ತರಿಸುತ್ತಿದ್ದಾರೆ.

ಅರಣ್ಯ ಭೂಮಿಯನ್ನು ಇಂಡಿಕರಿಸಿ ಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸ ಬೇಕು ದಾಖಲೆಗಳನ್ನು ಪಕ್ಕ ಮಾಡಿಕೊಳ್ಳವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಅರಣ್ಯ ಕಾಯ್ದೆಗೆ ತಿದ್ದುಪಡಿ ತರಬೇಕು ಇದರಿಂದಾಗಿ ಭೂ ಕಂದಾಯ ಕಾಯ್ದೆಯಡಿ ಅರಣ್ಯ ಭೂಮಿ ಕಾಯ್ದಿರಿಸಿದರೆ ರೈತರಿಗೆ,ಕಾರ್ಮಿಕರಿಗೆ ಮತ್ತು ಕಾಫಿ ಬೆಳೆಗಾರರು ಹಾಗು ಅಂಗಾಮಿ ಸಾಗುವಳಿದಾರರ ಸಮಸ್ಯೆ ಕಾನೂನಿನಂತೆ ಬಗೆಹರಿಸಲು ಸಾಧ್ಯ.ಇಲ್ಲದಿದ್ದರೆ ಅರಣ್ಯ ಇಲಾಖೆ ಮತ್ತು ಜನರ ಮಧ್ಯೆ ಇರುವ ಸಮಸ್ಯೆಗಳು ತೀವ್ರವಾಗುತ್ತವೆ ಎಂದು ಕಂದಾಯ ಇಲಾಖೆ ಮತ್ತು ಹೋರಾಟಗಾರರ ಅಭಿಪ್ರಾಯ ವಾಗಿದೆ.

 

Forest Department’s Bulldozer Policy

Share

Leave a comment

Leave a Reply

Your email address will not be published. Required fields are marked *

Don't Miss

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು ಜಾನುವಾರುಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಘಟನೆ ನರಸಿಂಹರಾಜಪುರ ತಾಲೂಕಿನ ಗದ್ದೆಮನೆ ಕಾನೂರು ಗ್ರಾಮದಲ್ಲಿ ನಡೆದಿದೆ....

ಜಿಲ್ಲೆಯಲ್ಲಿ ಮಂತ್ರಿಯಾಗಲಿಲ್ಲ ರಗಳೆ ಬಿಟ್ಟಿಲ್ಲ

ಚಿಕ್ಕಮಗಳೂರು; ಮದುವೆ ಆಗಲಿಲ್ಲ, ಹುಚ್ಚು ಬಿಡಲಿಲ್ಲ ಎಂಬ ಸ್ಥಿತಿ ಮಂತ್ರಿ ಆಗಲಿಲ್ಲ, ಓಡಾಡುವುದು ತಪ್ಪಲಿಲ್ಲ.ಎಂಬ ದುಸ್ಥಿತಿ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳದ್ದು. ಜಿಲ್ಲೆಗೆ ಯಾವುದೇ ಕಾರಣಕ್ಕೂ ಮಂತ್ರಿಗಿರಿ ಸಿಗುವುದಿಲ್ಲ ಎಂಬುದಕ್ಕೆ ಕಾರಣ ನೀಡಿ...

Related Articles

ಪ್ರತ್ಯೇಕ ಭೀಕರ ರಸ್ತೆ ಅಪಘಾತ-9 ಕ್ಕೂ ಹೆಚ್ಚು ಮಂದಿ ಗಾಯ

ಚಿಕ್ಕಮಗಳೂರು:  ಜಿಲ್ಲೆಯ ವಿವಿಧೆಡೆ ಸಂಭವಿಸಿದ ಮೂರು ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳಲ್ಲಿ ಶಾಲಾ ವಿದ್ಯಾರ್ಥಿನಿ ಹಾಗೂ...

ಆಗಸ್ಟ್ 21ರಿಂದ 25ರವರೆಗೆ ವಿಶ್ವ ಬಂಧುತ್ವದ ರಕ್ತದಾನ ಮಹಾ ಅಭಿಯಾನ

ಚಿಕ್ಕಮಗಳೂರು: ಬ್ರಹ್ಮಾಕುಮಾರೀಸ್ ಸಂಸ್ಥೆಯ ಪೂರ್ವ ಮುಖ್ಯ ಆಡಳಿತಾಧಿಕಾರಿಣಿ ರಾಜಯೋಗಿನಿ ಡಾ. ದಾದೀ ಪ್ರಕಾಶಮಣೀಜೀಯವರ 19ನೇ ಪುಣ್ಯಸ್ಮೃತಿ...

ಆಗಸ್ಟ್ 25ರಂದು ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಚಿಕ್ಕಮಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 25ರಂದು ರಾಜ್ಯದ...

ಸೆಪ್ಟೆಂಬರ್ 10ಕ್ಕೆ ಟಿ.ಡಿ. ರಾಜೇಗೌಡ-ಡಿ.ಎನ್. ಜೀವರಾಜ್ ಅಂತಿಮ ವಿಚಾರಣೆ

ಚಿಕ್ಕಮಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ...