ಚಿಕ್ಕಮಗಳೂರು: ಕನ್ನಡ ನಾಡು-ನುಡಿ, ನೆಲ-ಜಲ ಸಂರಕ್ಷಣೆ ಬಗ್ಗೆ ಮಾತೃ ಸಂಸ್ಥೆ ಕನ್ನಡಸೇನೆಯೊಂದಿಗೆ ಈಗ ಮಹಿಳಾ ಘಟಕ ಸ್ಥಾಪನೆಯಾಗಿರುವುದು ಸಂಘಟನೆಗೆ ಬಲ ಬಂದಂತಾಗಿದೆ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಸೇನೆ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಸಾಮಾಜಿಕ ಕಾರ್ಯಕರ್ತರಾದ ಚೈತ್ರಾ ಎಸ್ ಗೌಡ ಅವರನ್ನು ನೇಮಿಸಿದ್ದು, ದ್ರಾಕ್ಷಾಯಿಣಿ ವೈಲೇಟ್ (ಕಾರ್ಯದರ್ಶಿ), ರಾಧಾಮಣಿ, ಗಿರಿಜ ಅರುಣ್(ಉಪಾಧ್ಯಕ್ಷರು), ವಿನಿತ (ಜಿಲ್ಲಾ ಸಂಘಟನಾ ಕಾರ್ಯದರ್ಶಿ), ದೀಕ್ಷಾ (ಸಾಮಾಜಿಕ ಜಾಲತಾಣದ ಪದಾಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದರು.
ಚಿಕ್ಕಮಗಳೂರು ನಗರ ಘಟಕಕ್ಕೆ ಸುಜಾತಯಾಲಕಪ್ಪ(ಅಧ್ಯಕ್ಷರು), ಸರಸ್ವತಿ (ಉಪಾಧ್ಯಕ್ಷರು), ಭವ್ಯ (ಖಜಾಂಚಿ), ಗೀತಾ(ಕಾರ್ಯದರ್ಶಿ), ಸುಜಾತಶಂಕರ್( ಸಂಘಟನಾ ಕಾರ್ಯದರ್ಶಿ), ತಾಲೂಕು ಘಟಕದ ಪದಾಧಿಕಾರಿಗಳನ್ನಾಗಿ ಇಂದಿರಾಯೋಗೀಶ್( ಅಧ್ಯಕ್ಷೆ), ಲೀಲಾವರುಣ್, ಜಯದೊಡ್ಡಮನಿ(ಉಪಾಧ್ಯಕ್ಷರು), ವಿಶಾಲ(ಕಾರ್ಯದರ್ಶಿ), ಸ್ವರ್ಣ(ಖಜಾಂಚಿ) ಆಗಿ ನೇಮಕಗೊಂಡಿದ್ದು, ಇವರೊಂದಿಗೆ ೫೦-೬೦ ಮಂದಿ ಸಕ್ರಿಯ ಮಹಿಳಾ ಕಾರ್ಯಕರ್ತರಿದ್ದಾರೆ ಎಂದು ಹೇಳಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಚೈತ್ರಾ ಎಸ್ ಗೌಡ ಮಾತನಾಡಿ, ಶಾಲಾ-ಕಾಲೇಜು ಹೆಣ್ಣು ಮಕ್ಕಳ ಮೇಲೆ ಶೋಷಣೆ, ದೌರ್ಜನ್ಯವಾದಾಗ ಯಾವುದೇ ರಾಜಿ ಪಂಚಾಯಿತಿಗೆ ಆಸ್ಪದ ನೀಡದಂತೆ, ಅದನ್ನು ಖಂಡಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಲಿದ್ದೇವೆ. ಹೆಣ್ಣು ಮಕ್ಕಳ ಹಕ್ಕುಗಳನ್ನು ಚಲಾಯಿಸಲು ಅನುವು ಮಾಡಿಕೊಡುವುದು ಈ ಬಗ್ಗೆ ಜಾಗೃತಿ ಮೂಡಿಸುವುದು ಜತೆಗೆ ನಾಡಿನ ಜಲ, ನೆಲ, ಭಾಷೆ ಉಳಿವಿಗೆ ಕಟಿಬದ್ಧರಾಗಿರುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕನ್ನಡಸೇನೆ ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ, ಜಯಪ್ರಕಾಶ್, ಸತೀಶ್ ಮತ್ತಿತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
Establishment of a women’s unit with the Kannada Army
Leave a comment