ಬಾಳೆಹೂನ್ನೂರು: ಮುಖ್ಯಮಂತ್ರಿ ಯ ಕುರ್ಚಿಯ ಕಿತ್ತಾಟ ಹಾಗೂ ಮುಖ್ಯಮಂತ್ರಿ ಅವರ ಸರ್ವಾಧಿಕಾರಿ ಧೋರಣೆಯಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಆರೋಪಿಸಿದರು.
ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜಗದ್ಗುರು ಶ್ರೀ ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ ಪೀಠಾರೋಹಣದ ಶತಮಾನೋತ್ಸವದ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮತದಾರ ಹಾಗೂ ನಾಗರಿಕರು ಸರಕಾರದಿಂದ ಬಯಸುವುದು ಆರೋಗ್ಯ, ಶಿಕ್ಷಣ ಹಾಗೂ ಸುರಕ್ಷಿತ ರಸ್ತೆ ಸಂಚಾರ ಆದರೆ ರಾಜ್ಯದ ರಸ್ತೆ ಅಭಿವೃದ್ಧಿ ಕಾಣದೆ ಇರೋದಕ್ಕೆ ಚಿಕ್ಕಮಗಳೂರು ಶೃಂಗೇರಿ ರಸ್ತೆ ಸಾಕ್ಷಿಯಾಗಿದೆ ನಿತ್ಯವೂ ಸಾವಿರಾರು ನಾಗರಿಕರು ಭಕ್ತರು ಶೃಂಗೇರಿ ಹಾಗೂ ರಂಭಾಪುರಿ ಪೀಠ, ಹೊರನಾಡು ಇನ್ನಿತರ ಕ್ಷೇತ್ರಗಳಿಗೆ ಪ್ರಯಾಣ ಮಾಡುತ್ತಾರೆ. ರಸ್ತೆ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಜನರ ಭಾವನೆಗಳಿಗೆ ಬೆಲೆ ಕೊಡದ ಸರಕಾರ ಇದ್ದು ಇಲ್ಲದಂತಾಗಿದೆ. ಸರ್ಕಾರವನ್ನು ವಿಸರ್ಜನೆ ಮಾಡಿ ಚುನಾವಣೆಗೆ ಹೋಗುವುದು ಒಳಿತು ಎಂದರು.
ಬಿಜೆಪಿ ೪೦% ಸರ್ಕಾರ ಎಂದು ಆರೋಪವನ್ನು ಮಾಡಿದ್ದ ಕಾಂಗ್ರೆಸ್ ಆರೋಪವನ್ನು ಸಾಬೀತು ಮಾಡಲಾಗದೆ ಅಸಹಾಯಕತೆಯನ್ನು ತೋರಿz.ೆ ಆದರೆ ಇದೀಗ ಶೇಕಡ ೬೦% ಹೆಚ್ಚು ಕಮಿಷನ್ ಪಡೆಯುವ ಸರ್ಕಾರವಾಗಿದೆ. ಗ್ಯಾರಂಟಿ ಗಳಿಗಾಗಿ ಹಣ ಒದಗಿಸಲು ಆಗದೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದಾರೆ, ೫೦೦ ವರ್ಷಗಳಲ್ಲಿ ಆಗದ ಮಳೆ ಈ ಬಾರಿ ಬಂದಿದ್ದು ರೈತರ ಬೆಳೆ ನಾಶಗೊಂಡು ಸಂಕಷ್ಟದಲ್ಲಿ ಇದ್ದಾರೆ. ರೈತರಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ ರಾಜ್ಯದಲ್ಲಿ ೪೯ ಸಾವಿರ ಕೋಟಿ ಅನುದಾನದಲ್ಲಿ ರೈಲ್ವೆ ಮಾರ್ಗ ಅಭಿವೃದ್ಧಿಯಾಗುತ್ತಿದೆ.
ಶಿವಮೊಗ್ಗದಿಂದ ಶೃಂಗೇರಿಗೆ ಹೊಸ ರೈಲು ಮಾರ್ಗದ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿಸಿ ರಾಷ್ಟ್ರದ ರಾಜಧಾನಿಯಲ್ಲಿ ಬಸವೇಶ್ವರ ಹಾಗೂ ಕಿತ್ತೂರು ರಾಣಿ ಚೆನ್ನಮ್ಮನವರ ಪುತ್ಥಳಿ ನಿರ್ಮಿಸಲಾಗುತ್ತಿದೆ. ಚಿಕ್ಕಮಗಳೂರು ಶೃಂಗೇರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಸೇರಿಸಲು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರೊಂದಿಗೆ ಮಾತುಕತೆ ನಡೆಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಕಾಮಗಾರಿ ಜಲಜೀವನ್ ಮಿಷನ್ ಕಾಮಗಾರಿ ಕುಂಟುತ್ತಾ ಸಾಗಿದ್ದು ಕೆಲವೆಡೆ ಕಳಪೆ ಕಾಮಗಾರಿಯಾಗಿದೆ ಎಂದು ದೂರು ಬಂದಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು.
ಭಾರತದ ಅಭಿವೃದ್ಧಿಯನ್ನು ವಿಶ್ವವೇ ತಿರುಗಿ ನೋಡುತ್ತಿದ್ದು, ಆದರೆ ರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರವು ಪ್ರಧಾನಮಂತ್ರಿಯವರನ್ನು ದೂರವ ಪರಿಪಾಠ ಬೆಳೆಸಿಕೊಂಡಿದೆ ಎಂದು ತಿಳಿಸಿದರು. ಡಿ ಕೆ ಶಿವಕುಮಾರ್ ರವರು ಮುಖ್ಯಮಂತ್ರಿ ಯಾಗುವ ಬಗ್ಗೆ ಪ್ರಶ್ನಿಸಿದಾಗ ಸಂಪುಟ ಪುನ ರಚನೆ ಹಾಗೂ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಮಾತನಾಡದೆ ಇರುವುದು ಒಳಿತೆಂದು ತಿಳಿಸಿದರು.
Due to the dictatorial attitude of the Chief Minister the development of the state is stunted
Leave a comment