Home namma chikmagalur chikamagalur ಜಲಜೀವನ್ ಮಿಷನ್ ಕಾಮಗಾರಿ ಭ್ರಷ್ಟಾಚಾರ ಸಮಗ್ರ ತನಿಖೆಗೆ ಒತ್ತಾಯ
chikamagalurHomeLatest Newsnamma chikmagalur

ಜಲಜೀವನ್ ಮಿಷನ್ ಕಾಮಗಾರಿ ಭ್ರಷ್ಟಾಚಾರ ಸಮಗ್ರ ತನಿಖೆಗೆ ಒತ್ತಾಯ

Share
Share

ಚಿಕ್ಕಮಗಳೂರು:ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಸ್ಟಾಂಪ್‌ಪೇಪರ್ ಹಗರಣ ಮತ್ತು ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಸರ್ಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಮಾತನಾಡಿ,ದಿಶ ಸಭೆಯಲ್ಲಿ ಸಂಸದ ಕೋಟಶ್ರೀನಿವಾಸಪೂಜಾರಿ ಜಲಜೀವನ ಮಿಷನ್‌ನಲ್ಲಿ ನಡೆದಿರುವ ಭ್ರಷ್ಟಾಚಾರ ಕುರಿತು ತನಿಖೆಗೆ ಒತ್ತಾಯಿಸಿದ್ದಾರೆ. ಆಡಳಿತ ಪಕ್ಷದ ಮುಖಂಡರಾದ ಡಾ.ಅಂಶುಮಂತ್, ಹೆಚ್.ಎಂ. ಸತೀಶ್ ಅವರುಗಳು ಜೆಜೆಎಂ ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ.ಅಶ್ವನ್ ಎಂಬುವರು ಸಮಗ್ರ ತನಿಖೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ, ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದಾರೆ. ಆದರೂ ತನಿಖೆ ಆರಂಭವಾಗುವ ಲಕ್ಷಣಗಳು ಕಂಡುಬರುತ್ತಿಲ್ಲವೆಂದು ಹೇಳಿದರು.

ಜಲಜೀವನಮಿಷನ್‌ನಲ್ಲಿ ನಡೆದಿರುವ ಕಾಮಗಾರಿಗಳ ಮಾಹಿತಿಯನ್ನು ಕೇಳಿದ್ದು, ದಾಖಲೆನೀಡಲು ೨.೬ಲಕ್ಷ ಖರ್ಚಾಗುತ್ತದೆ.ಹಣ ಕಟ್ಟಿದರೆ ದಾಖಲೆ ಒದಗಿಸುವುದಾಗಿ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದು, ಅಷ್ಟು ಹಣ ಕಟ್ಟಲು ಸಾಧ್ಯವಿಲ್ಲದ್ದರಿಂದ ಹಣಕಟ್ಟಿ ಕೇವಲ ೩೦ ದಾಖಲೆಗಳನ್ನು ಪಡೆದುಕೊಂಡು ಅವುಗಳನ್ನು ಪರಿಶೀಲಿಸಲಾಯಿತು. ಅಸಲಿ ಸ್ಟಾಂಪ್‌ಪೇಪರ್‌ನಲ್ಲಿ ಪ್ರತಿಯೊಂದಕ್ಕೆ ಬೇರೆಬೇರೆ ನಂಬರ್‌ಗಳಿರುತ್ತವೆ. ಕ್ಯೂಆರ್‌ಕೋಡ್ ಸ್ಕ್ಯಾನ್‌ಮಾಡಿದಾಗ ಯಾರಹೆಸರಿನಲ್ಲಿ ಸ್ಟಾಂಪ್‌ಪೇಪರ್ ಪಡೆದವರ ಮಾಹಿತಿ ಲಭ್ಯವಾಗುತ್ತದೆ ಎಂದರು.

ಆದರೆ ಜಲಜೀವನ ಯೋಜನೆಯಡಿ ಆರ್‌ಡಬ್ಲ್ಯುಎಸ್ ಮತ್ತು ಗುತ್ತಿಗೆದಾರರ ನಡುವೆ ಆಗಿರುವ ಒಪ್ಪಂದ ಪತ್ರಕ್ಕಾಗಿ ಪಡೆದಿರುವ ಛಾಪಾಕಾಗದಗಳು ನಕಲಿಯಾಗಿರುವುದು ಕಂಡು ಬಂದಿದೆ. ೧ರಿಂದ ೯ವರೆಗಿನ ಒಂದೇ ನಂಬರಿನ ಛಾಪಾಕಾಗದಗಳು ಮುದ್ರಣಗೊಂಡಿವೆ. ಇ ಸ್ಟ್ಯಾಂಪಿಂಗ್ ತಂತ್ರಾಂಶದಲ್ಲಿ ಪರಿಶೀಲಿಸಿದಾಗ ನೋ ಸ್ಟಾಂಪ್‌ಸರ್ಟಿಫಿಕೆಟ್ ಹ್ಯಾಸ್‌ಬೀನ್‌ಫೌಂಡ್ ಎಂದು ಕಂಡುಬರುತ್ತದೆ. ಇದನ್ನು ಗಮನಿಸಿದರೆ ಸ್ಟಾಂಪ್‌ಪೇಪರ್‌ನಲ್ಲೂ ಹಗರಣ ನಡೆದಿರುವುದು ಕಂಡುಬರುತ್ತದೆ ಎಂದು ತಿಳಿಸಿದರು.

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಯೊಂದು ಮನೆಗೂ ಕುಡಿಯುವ ನೀರು ನೀಡುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಜಲಜೀವನ ಮಿಷನ್ ಕಾಮಗಾರಿ ನಡೆಯುತ್ತಿದೆ. ಕೆಲವೆಡೆ ಕೊಳವೆಬಾವಿ ಕೊರೆಸಲಾಗಿದೆ.ಪೈಪ್‌ಲೈನ್ ಮಾಡಲಾಗಿದೆ. ಓವರ್‌ಹೆಡ್ ಟ್ಯಾಂಕ್ ನಿರ್ಮಿಸಿದ್ದು, ನೀರು ಮಾತ್ರ ನಲ್ಲಿಗಳಿಗೆ ಹರಿದಿಲ್ಲ. ಜಲಜೀವನ ಮಿಷನ್ ಈಗ ಜಲಜೀವನ್ ಕಮಿಷನ್ ಆಗಿ ಪರಿವರ್ತನೆಗೊಂಡಿದೆ ಎಂದು ವ್ಯಂಗ್ಯವಾಡಿದರು.

ಕೊಪ್ಪ ತಾಲೂಕಿನಲ್ಲಿ ಕೊರೆಯಿಸಲಾಗಿರುವ ಕೊಳವೆಬಾವಿಗಳ ಆಳದ ಅಳತೆಯಲ್ಲಿ ಮತ್ತು ಸರ್ಕಾರದಿಂದ ಹಣ ಸಂದಾಯವಾಗಿರುವ ಅಳತೆಯಲ್ಲಿ ವ್ಯತ್ಯಾಸಗಳು ಕಂಡುಬರುತ್ತಿದೆ. ಉದಾಹರಣೆಗೆ ಬಿಂತ್ರವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಡೆಗದ್ದೆ ಗ್ರಾಮದಲ್ಲಿ ೨೨೮ ಅಡಿಆಲ ಕೊಳವೆಬಾವಿ ಕೊರೆದಿದ್ದು ಸರ್ಕಾರಿ ಲೆಕ್ಕದಲ್ಲಿ ೫೮೭ ಅಡಿ ದಾಖಲಾಗಿದೆ. ಇದರ ವ್ಯತ್ಯಾಸ ೩೬೦ ಅಡಿಯಾಗಿದೆ. ಮುತ್ತುಗದಾನಿಯಲ್ಲಿ ೨೬೦ ಅಡಿ ಕೊಳವೆಬಾವಿ ಕೊರೆದಿದ್ದು, ಸರ್ಕಾರಿ ಲೆಕ್ಕದಲ್ಲಿ ೫೮೭ಅಡಿಯಾಗಿದೆ. ವ್ಯತ್ಯಾಸ ೩೨೭ ಅಡಿ.ವಿಠಲಮಕ್ಕಿಯಲ್ಲಿ ೪೮೦ ಅಡಿ ಕೊರೆದಿದ್ದರೆ ಸರ್ಕಾರಿ ಲೆಕ್ಕ ೫೮೭ ಅಡಿ ವ್ಯತ್ಯಾಸ ೧೦೭ ಅಡಿಯಾಗಿದೆ ಎಂದು ಮಾಹಿತಿ ನೀಡಿದರು.

ಮತ್ತಿನಕೊಪ್ಪ ಪಂಚಾಯಿತಿ ವ್ಯಾಪ್ತಿಯ ಅಸಾಪುರದಲ್ಲಿ ೪೦೫ ಅಡಿ ಕೊಳವೆಬಾವಿ ಕೊರೆದಿದ್ದು, ಸರ್ಕಾರಿ ಲೆಕ್ಕದಲ್ಲಿ ಸರ್ಕಾರಿ ಲೆಕ್ಕದಲ್ಲಿ ೫೫೧ ಅಡಿಯಾಗಿದೆ. ವ್ಯತ್ಯಾಸ ೧೫೬ ಅಡಿ. ಭೌತಿಕವಾಗಿ ೬೦ ಅಡಿ ಕೇಸಿಂಗ್ ಪೈಪ್‌ಹಾಕಿದ್ದರೆ ಸರ್ಕಾರಿ ಲೆಕ್ಕದಲ್ಲಿ ೧೦೬ ಅಡಿಯಾಗಿದೆ. ವ್ಯತ್ಯಾಸ ೪೫ ಅಡಿಯಾಗಿದೆ. ಶಂಕರಪುರದಲ್ಲಿ ೪೮೫ ಅಡಿಕೊಳವೆಬಾಗಿ ಕೊರೆದು,ಸರ್ಕಾರಿ ಲೆಕ್ಕದಲ್ಲಿ ೫೨೮ ಅಡಿಯಾಗಿದೆ.

೭೭ ಅಡಿಕೇಸಿಂಗ್‌ಪೈಲ್‌ನಲ್ಲಿ ೧೦೫ ಕೇಸಿಂಗ್ ಲೆಕ್ಕತೋರಿಸಲಾಗಿದೆ. ವ್ಯತ್ಯಾಸ೨೮ ಅಡಿಯಾಗಿದೆ. ಬಾಳೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಾಳೆಗ್ರಾಮದಲ್ಲಿ ೨೬೫ ಅಡಿಕೊಳವೆಬಾವಿ ಕೊರೆದು೫೨೫ ಅಡಿ ಆಳವನ್ನು ಸರ್ಕಾರಿ ಲೆಕ್ಕದಲ್ಲಿ ತೋರಿಸಲಾಗಿದೆ. ತಲಮಕ್ಕಿ, ಬಲಗಾರು ಮ್ತು ಗೌರಿಹಳ್ಳದಲ್ಲಿ ಕೊಳವೆಬಾವಿ ಕೊರೆಯದೆ. ೧.೬೦ ಲಕ್ಷ, ೧.೪೯ಲಕ್ಷ, ೧.೩೮ ಲಕ್ಷ ರೂ. ಹಣವನ್ನು ಪಾವತಿಸಲಾಗಿದೆ ಎಂದು ಹೇಳಿದರು.

ಈ ಕ್ಷೇತ್ರದಲ್ಲಿ ೧೧೫ಕೋಟಿಗೂ ಹೆಚ್ಚು ಹಣ ನೀಡಲಾಗಿದೆ. ಈ ಕೆಲಸದಲ್ಲಿ ಶಾಸಕರ ಎಡಗೈ, ಬಲಗೈ, ಹೃದಯಕ್ಕೆ ಸಂಬಂಧಿಸಿದ ವ್ಯಕ್ತಿಗಳಾಗಿದ್ದಾರೆಂದು ಆರೋಪಿಸಿ, ಸದಸ್ಯದಲ್ಲೇ ಈ ಹಗರಣ, ಹಣದುರುಪಯೋಗಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮುಖ್ಯಮಂತ್ರಿ ಕಚೇರಿಗೆ ದೂರು ನೀಡಲಾಗುವುದು. ದೆಹಲಿಗೆ ತೆರಳಿ ಕೇಂದ್ರ ಸಚಿವರಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ, ರೈತಮೋರ್ಚಾ ರಾಜ್ಯ ಪ್ರಧಾನಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ, ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮಾಧ್ಯಮ ಪ್ರಮುಖ್ ಕೋಟೆ ದಿನೇಶ್, ನಗರಮಂಡಲ ಅಧ್ಯಕ್ಷ ಕೆ.ಎಸ್.ಪುಷ್ಪರಾಜ್, ಪ್ರಕೋಸ್ಟ ಮುಖಂಡ ಚಮಿನ್ ಇದ್ದರು.

Demand for a comprehensive investigation into corruption in the Jaljeevan Mission work

Share

Leave a comment

Leave a Reply

Your email address will not be published. Required fields are marked *

Don't Miss

ಶ್ರೀನಂದಾ ಮೃತದೇಹ ಪತ್ತೆ ಶೋಕಸಾಗರದಲ್ಲಿ ಕುಟುಂಬ

ಚಿಕ್ಕಮಗಳೂರು: ಪ್ರಸಿದ್ಧ ಪ್ರವಾಸಿ ತಾಣ ಮಾಣಿಕ್ಯಧಾರಾದಲ್ಲಿ ಕಳೆದ ಮಂಗಳವಾರ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ ಮೃತದೇಹ ಇಂದು ಮಧ್ಯಾಹ್ನ ಕಡಿದಾದ ಪ್ರದೇಶದಲ್ಲಿ ಪತ್ತೆಯಾಗಿದೆ. ಕಳೆದ ಮೂರು ದಿನಗಳಿಂದ ಸ್ಥಳೀಯ ಪೊಲೀಸರು...

ಬಗ‌ರ್ ಹುಕುಂ ಸಾಗುವಳಿ: ಹಕ್ಕುಪತ್ರಕ್ಕಾಗಿ ಮೇ. 1ರಿಂದ ಹೋರಾಟ

ಚಿಕ್ಕಮಗಳೂರು: ‘ಬಗರ್ ಹುಕುಂ ಸಾಗುವಳಿದಾರರಿಗೆ ತಿಂಗಳೊಳಗೆ ಹಕ್ಕುಪತ್ರ ನೀಡದಿದ್ದಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೇ 1ರಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು’ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ...

Related Articles

ಬಾಕಿ ಪಾವತಿಸಲು ಟ್ರಾವೆಲ್ ಏಜೆನ್ಸಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ

ಚಿಕ್ಕಮಗಳೂರು: ವೀಸಾ ಒದಗಿಸಲು ವಿಫಲವಾದ ಪ್ರಯಾಣ ಸೇವೆಗಳ ಪ್ರತಿನಿಧಿ ಸಂಸ್ಥೆ(ಟ್ರಾವೆಲ್ ಏಜೆನ್ಸಿ)ಯು ಪೂರ್ಣ ಹಣ ಹಿಂದಿರುಗಿಸದೆ...

ಯಡಿಯೂರಪ್ಪ ಸ್ವಾಗತಿಸುವ ವೇಳೆ ದಿಕ್ಕಾರ…?

ಚಿಕ್ಕಮಗಳೂರು: ನಗರಕ್ಕೆ ಆಗಮಿಸಿದ ಬಿ.ಎಸ್. ಯಡಿಯೂರಪ್ಪ ಅವರನ್ನು ಸ್ವಾಗತಿಸುವ ವೇಳೆ ಒಂದು ವಿಚಿತ್ರ ಘಟನೆ ಗಮನಸೆಳೆಯಿತು....

ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

ಕಡೂರು: ಪರೀಕ್ಷೆಗೆಂದು ವಿದ್ಯಾರ್ಥಿ ಕಾಲೇಜಿಗೆ ತೆರಳಿದ್ದ ಸಮಯ ಸಾಧಿಸಿದ ಖದೀಮರು, ಮನೆಯ ಬೀಗ ಮುರಿದು ಒಳನುಗ್ಗಿ...

ವೃದ್ಧರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ವಂಚನೆ

ಚಿಕ್ಕಮಗಳೂರು: ಎಪಿಕೆ (APK) ಫೈಲ್ ಬಳಸಿ ವೃದ್ಧರೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ಲಪಟಾಯಿಸಿರುವ ಗಂಭೀರ...