ಚಿಕ್ಕಮಗಳೂರು: ಪ್ರಸಿದ್ಧ ಪ್ರವಾಸಿ ತಾಣ ಮಾಣಿಕ್ಯಧಾರಾದಲ್ಲಿ ಕಳೆದ ಮಂಗಳವಾರ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ ಮೃತದೇಹ ಇಂದು ಮಧ್ಯಾಹ್ನ ಕಡಿದಾದ ಪ್ರದೇಶದಲ್ಲಿ ಪತ್ತೆಯಾಗಿದೆ. ಕಳೆದ ಮೂರು ದಿನಗಳಿಂದ ಸ್ಥಳೀಯ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದರು.
ಇಂದು ಕಾರ್ಯಾಚರಣೆ ಮುಂದುವರಿಯುತ್ತಿದ್ದಾಗ, ಕೊಳೆತ ವಾಸನೆ ಬರುತ್ತಿದ್ದ ದಿಕ್ಕಿನತ್ತ ತೆರಳಿದ ಸಿಬ್ಬಂದಿಗೆ ಬಾಲಕಿಯ ಶವ ಸಿಕ್ಕಿದೆ. ಈ ಕಷ್ಟಕರವಾದ ಶೋಧ ಕಾರ್ಯದಲ್ಲಿ ಥರ್ಮಲ್ ಡೋನ್ ತಂತ್ರಜ್ಞಾನವೂ ಪ್ರಮುಖ ಪಾತ್ರ ವಹಿಸಿದ್ದು,
ಮೃತದೇಹದ ದೃಶ್ಯಗಳು ಡೋನ್ನಲ್ಲಿ ಸೆರೆಯಾದ ಕಾರಣ ಕಾರ್ಯಾಚರಣೆ ನಡೆಸಲು ಅನುಕೂಲವಾಗಿದೆ ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದು ಬಾಲಕಿಯ ಸಾವಿಗೆ ನಿಖರ ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ.
ಶೋಕಸಾಗರ: ಕಾಫಿನಾಡಿನಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ ಪ್ರಕರಣವು ಇಂದು ಅತ್ಯಂತ ದುಃಖದಾಯಕ ಅಂತ್ಯ ಕಂಡಿದೆ. ಪ್ರವಾಸಕ್ಕೆಂದು ಬಂದು ಕಣ್ಮರೆಯಾಗಿದ್ದ ಬಾಲಕಿಯ ಮೃತದೇಹವು ಕಡಿದಾದ ಪ್ರಪಾತದಲ್ಲಿ ಪತ್ತೆಯಾಗಿದ್ದು, ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದ
ಮೃತದೇಹವು ಪತ್ತೆಯಾದ ಸ್ಥಳವು ತೀರ ಇಳಿಜಾರಿನಿಂದ ಕೂಡಿದ ದುರ್ಗಮ ಪ್ರದೇಶವಾದ ಕಾರಣ, ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿಗೆ ಶವವನ್ನು ಮೇಲಕ್ಕೆ ತರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಅಗ್ನಿಶಾಮಕ ದಳ, ಪೊಲೀಸರು, ಅರಣ್ಯ ಸಿಬ್ಬಂದಿ ಹಾಗೂ ಪ್ರವಾಸಿ ಮಿತ್ರರು ಜಂಟಿಯಾಗಿ ಹರಸಾಹಸ ಪಡುತ್ತಿದ್ದು, ಮೃತದೇಹ ಕೊಳೆತ ಸ್ಥಿತಿಯಲ್ಲಿರುವುದರಿಂದ ಕಾರ್ಯಾಚರಣೆ ಮತ್ತಷ್ಟು ಸಂಕಷ್ಟಕ್ಕೆ ಈಡಾಗಿದೆ. ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿರುವ ಸೋಕೋ ತಂಡವು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿದುಬರಬೇಕಿದೆ.
ಪ್ರಕೃತಿಯ ಮಡಿಲಲ್ಲಿ ಸಂಭ್ರಮಿಸಲು ಬಂದ ಕುಟುಂಬಕ್ಕೆ ಈಗ ವಿಧಿಯಾಟವು ಅರಗಿಸಿಕೊಳ್ಳಲಾಗದ ನೋವನ್ನು ನೀಡಿದೆ.
Family in mourning after discovery of Srinanda’s body
Leave a comment