Home namma chikmagalur chikamagalur ಬಾಕಿ ಪಾವತಿಸಲು ಟ್ರಾವೆಲ್ ಏಜೆನ್ಸಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ
chikamagalurHomeLatest Newsnamma chikmagalur

ಬಾಕಿ ಪಾವತಿಸಲು ಟ್ರಾವೆಲ್ ಏಜೆನ್ಸಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ

Share
Share

ಚಿಕ್ಕಮಗಳೂರು: ವೀಸಾ ಒದಗಿಸಲು ವಿಫಲವಾದ ಪ್ರಯಾಣ ಸೇವೆಗಳ ಪ್ರತಿನಿಧಿ ಸಂಸ್ಥೆ(ಟ್ರಾವೆಲ್ ಏಜೆನ್ಸಿ)ಯು ಪೂರ್ಣ ಹಣ ಹಿಂದಿರುಗಿಸದೆ ಸೇವಾ ನ್ಯೂನತೆ ಎಸಗಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರರಿಗೆ ಬಾಕಿ ಹಣ ಪಾವತಿಸುವಂತೆ ಸಂಸ್ಥೆಗೆ ಸೂಚಿಸಿದೆ.

ಚಿಕ್ಕಮಗಳೂರು ತಾಲ್ಲೂಕು ಆವತಿ ಗ್ರಾಮದ ಎ.ಪಿ.ರಾಜಾರಾಮ್ ಎಂಬುವರು ತಮ್ಮ ಕುಟುಂಬದೊಂದಿಗೆ ಜಪಾನ್ ಪ್ರವಾಸ ಕೈಗೊಳ್ಳಲು ವೀಸಾ ಮತ್ತು ಟಿಕೆಟ್ ವ್ಯವಸ್ಥೆ ಮಾಡುವಂತೆ ಕೋರಿ ಬೆಂಗಳೂರು ಬಸವನಗುಡಿಯ ಫ್ಲೈಟ್ ಶಾಪ್‌ಗೆ ೨,೩೪,೫೦೦ ರೂ.ಗಳನ್ನು ನೀಡಿದ್ದರು.

ಆದರೆ ಫ್ಲೈಟ್ ಶಾಪ್ ವೀಸಾ ಒದಗಿಸಲು ವಿಫಲವಾಯಿತು ಎನ್ನಲಾಗಿದೆ. ಹಣ ಪಾವತಿಸುವ ಸಂದರ್ಭ ೧,೫೨,೫೦೦ ರೂ.ಗಳನ್ನು ಮಾತ್ರ ದೂರುದಾರರ ಖಾತೆಗೆ ವರ್ಗಾಯಿಸಿತ್ತು. ಮಿಕ್ಕ ೮೨ ಸಾವಿರ ರೂ.ಗಳನ್ನು ನೀಡುವಂತೆ ಕೋರಿದರೂ ಪಾವತಿಸದೆ ಫ್ಲೈಟ್ ಶಾಪ್ ಸೇವಾ ನ್ಯೂನತೆ ಎಸಗಿತೆನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ರಾಜಾರಾಮ್ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಫ್ಲೈಟ್ ಶಾಪ್ ವಿರುದ್ಧ ಜನವರಿ ೨೨ ರಂದು ದೂರು ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ಮಾರ್ಚ್ ೨೭ ರಂದು ತೀರ್ಪು ನೀಡಿದ್ದು, ಪಾವತಿಸದೆ ಏಜೆನ್ಸಿಯು ಬಾಕಿ ಉಳಿಸಿಕೊಂಡಿದ್ದ ೮೨ ಸಾವಿರ ರೂ.ಗಳನ್ನು ಕಳೆದ ವರ್ಷದ ಮಾರ್ಚ್ ೩ ರಿಂದ ಇದುವರೆಗೆ ವಾರ್ಷಿಕ ಶೇ.೯ರ ದರದ ಬಡ್ಡಿ ಸಹಿತ ದೂರುದಾರರಿಗೆ ನೀಡುವಂತೆ ಸೂಚಿಸಿದೆ.

ಅಲ್ಲದೆ, ಪರಿಹಾರವಾಗಿ ೧೦ ಸಾವಿರ ರೂ. ಹಾಗೂ ಖರ್ಚು-ವೆಚ್ಚವೆಂದು ೫ ಸಾವಿರ ರೂ.ಗಳನ್ನು ರಾಜಾರಾಮ್ ಅವರಿಗೆ ನೀಡುವಂತೆ ಆದೇಶಿಸಲಾಗಿದೆ. ಈ ತೀರ್ಪನ್ನು ಮುಂದಿನ ೪೫ ದಿನಗಳ ಒಳಗೆ ಪಾಲಿಸಬೇಕಾಗಿದ್ದು, ತಪ್ಪಿದಲ್ಲಿ ಸೂಚಿಸಿದ ಮೊತ್ತವನ್ನು ಪಾವತಿಸುವವರೆಗೂ ಶೇ.೬ರ ಬಡ್ಡಿಯನ್ನು ಪಾವತಿಸುವಂತೆ ತಿಳಿಸಲಾಗಿದೆ.

ಆಯೋಗದ ಅಧ್ಯಕ್ಷರಾದ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಈ.ಪ್ರೇಮಾ, ಡಾ.ಮಂಜುನಾಥ ಎಂ.ಬಮ್ಮನಕಟ್ಟಿ ಇವರು ಈ ಆದೇಶವನ್ನು ನೀಡಿದ್ದು, ಎದುರುದಾರರು ಸೇವಾ ನ್ಯೂನತೆ ಎಸಗಿರುವುದನ್ನು ಪುರಾವೆ ಸಹಿತ ಸಾಬೀತುಪಡಿಸಿದ್ದು, ಗ್ರಾಹಕರಿಗೆ ನ್ಯಾಯ ಒದಗಿಸಿದ್ದಾರೆ. ಪ್ರಕರಣದಲ್ಲಿ ದೂರುದಾರರ ಪರವಾಗಿ ವಕೀಲರಾದ ಜಿ.ಆರ್.ಶ್ರವಣ್ ಅವರು ವಾದ ಮಂಡಿಸಿದ್ದರು.

Consumer Disputes Redressal Forum orders travel agency to pay dues

Share

Leave a comment

Leave a Reply

Your email address will not be published. Required fields are marked *

Don't Miss

ಡಾ.ಮಂಜುನಾಥ್ ಚಿಕ್ಕ‌ಮಗಳೂರು ಡಿಎಚ್ಒ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕ‌ಮಗಳೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಡಾ.ಎಚ್.ಕೆ.ಮಂಜುನಾಥ್ ನೇಮಕಗೊಂಡಿದ್ದಾರೆ. ಈ ಹಿಂದೆ ಡಿಎಚ್ ಒ ಆಗಿದ್ದ ಅಶ್ವಥ್ ಬಾಬು ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಜಿಲ್ಲಾ ಸಂತಾನೋತ್ಪತ್ತಿ...

ಹಸಿರು ಚಾದರ್ ಅರ್ಪಿಸುವುದು ಹೊಸದಾಗಿ ಸೃಷ್ಟಿಸಿದ ಆಚರಣೆಯಲ್ಲ

ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಪೀಠ ಬಾಬಾ ಬುಡನ್ ದರ್ಗಾದ ಐತಿಹಾಸಿಕ ಸ್ವರೂಪ, ಧಾರ್ಮಿಕ ಆಚರಣೆಗಳು ಹಾಗೂ ಭಕ್ತರ ಹಕ್ಕುಗಳ ಕುರಿತು ಸಯ್ಯದ್ ಬುಡನ್ ಶಾ ಖಾದ್ರಿ ವಂಶಸ್ಥರು ಸ್ಪಷ್ಟನೆಯನ್ನು ನೀಡಿದ್ದಾರೆ. ಇತ್ತೀಚೆಗೆ...

Related Articles

ಕಳಸದಲ್ಲಿ ಕಾಡುಕೋಣ ದಾಳಿಗೆ ಮಹಿಳೆ ಬಲಿ

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಬಿಳಗುಳಿ ಗ್ರಾಮದ ಸಮೀಪ ಕಾಡುಕೋಣ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ...

ರೈತ ಸಂಘ-ಹಸಿರು ಸೇನೆ ಸಂಘಟನೆಗೆ ನೂತನ ಪದಾಧಿಕಾರಿಗಳ ನೇಮಕ

ಚಿಕ್ಕಮಗಳೂರು: ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗೆ ನೂತನ...

ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಂಗಾರು ಮಳೆ ತಡವಾಗಿ ಆರಂಭಗೊಂಡಿದ್ದರೂ ಇದೀಗ ಭರ್ಜರಿಯಾಗಿ ಸುರಿಯುತ್ತಿದ್ದು, ಮಲೆನಾಡು ಭಾಗದಲ್ಲಿ ಭಾರೀ...

ಕಳಸದಲ್ಲಿ ಬೃಹತ್ ಮರ ಬಿದ್ದು ಆಟೋರಿಕ್ಷಾ ಜಖಂ

ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗುಡ್ಡೆಮಕ್ಕಿ ಗ್ರಾಮದಲ್ಲಿ ಭಾರಿ ಗಾಳಿ-ಮಳೆಯ ಆರ್ಭಟಕ್ಕೆ ಸುಧೀರ್ ಆಚಾರ್...