Home namma chikmagalur chikamagalur ಕಾಂಗ್ರೆಸ್ ಕೆಂಗಣ್ಣಿಗೆ ನಲುಗಿರುವ ಡಿ.ಸಿ.ಸಿ.ಬ್ಯಾಂಕ್ ಗೆ ಜನವರಿ 17 ಚುನಾವಣೆ
chikamagalurHomeLatest Newsnamma chikmagalur

ಕಾಂಗ್ರೆಸ್ ಕೆಂಗಣ್ಣಿಗೆ ನಲುಗಿರುವ ಡಿ.ಸಿ.ಸಿ.ಬ್ಯಾಂಕ್ ಗೆ ಜನವರಿ 17 ಚುನಾವಣೆ

Share
Share

ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಚುನಾವಣೆ ಜನವರಿ 17 ಕ್ಕೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಡಿ.ಎಸ್.ಸುರೇಶ್ ಅಧ್ಯಕ್ಷ ರಾಗಿ ಅಪೆಕ್ಸ್ ಬ್ಯಾಂಕ್ ಗೆ ಬೆಳ್ಳಿ ಪ್ರಕಾಶ್ ಅಧ್ಯಕ್ಷರಾಗಿದ್ದರ ಫಲ ರೈತರಿಗೆ ಹೆಚ್ಚಿನ ಸಾಲ ನೀಡಲಾಗಿದೆ.ಬ್ಯಾಂಕ್ ನ ಹೊಸ ಕಟ್ಟಡ ಕಟ್ಟಲಾಗಿದೆ ಆದರೂ ಕಾಂಗ್ರೆಸ್ ನವರ ಕೆಂಗಣ್ಣಿಗೆ ಗುರಿಯಾಗಿ ಒತ್ತಡ ತಂದು ಚುನಾವಣೆಗೆ ತಡೆ ಒಡ್ಡುವ ಮೂಲಕ ರೈತರಿಗೆ ತೊಂದರೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಕಿಸಿಯಲಾರದವರಿಗೆ ಯಾವುದಾದರೂ ನೆಪ ಬೇಕಿತ್ತು ಹೀಗಾಗಿ ಚುನಾವಣೆ ತಡೆಯಿಡಿಯುವ ಪ್ರಯತ್ನ ನಡೆಸಿದವರಿಗೆ ಕೋರ್ಟ್ ತಪರಾಕಿ ಬಾರಿಸಿದೆ ಜೊತೆಗೆ ಚುನಾವಣೆ ನಡೆಸುವಂತೆ ಆದೇಶ ನೀಡಿದೆ ಇದರ ಫಲವಾಗಿ ಜನವರಿ 17 ರೊಳಗೆ ಚುನಾವಣೆ ಪ್ರಕ್ರಿಯೆ ಮುಗಿಸಬೇಕಾಗಿದೆ.

ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಬರಬಾರದು ಆದರೆ ತರೀಕೆರೆ ಶಾಸಕ ಶ್ರೀನಿವಾಸ್ ,ಕಡೂರು ಶಾಸಕ ಆನಂದ್ ಸರ್ಕಾರದ ಮೇಲೆ ಒತ್ತಡ ತಂದು ತಡೆಹಿಡಿಸಿರುವುದು ಗುಟ್ಟಾಗಿ ಉಳಿದಿಲ್ಲ. ಸೊಸೈಟಿಯಲ್ಲಿ ಅಧಿಕಾರ ಪಡೆಯದೆ ಪೇಚಾಡುವ ಇವರುಗಳು ಆನೆ,ಒಂಟೆ ಹತ್ತುವ ಕನಸು ಕಂಡು ಚುನಾವಣೆ ಪ್ರಕ್ರಿಯೆ ಪ್ರಾರಂಭವಾದ ನಂತರ ಚುನಾವಣೆ ತಡೆಯಿಡಿಸಿದ್ದರಿಂದ ಕಳೆದ ಎರಡು ತಿಂಗಳಿಂದ ಬ್ಯಾಂಕ್ ವ್ಯವಹಾರಕ್ಕೆ ತೀರ ಹಿನ್ನೆಡೆಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾಂಗ್ರೆಸ್ ಗೆಲ್ಲುವುದು ಒಂದರಿಂದ ಎರಡು ಸ್ಥಾನ ಗೆದ್ದರೆ ದೊಡ್ಡ ಸಾಧನೆ ಆದರೂ ನಾನು ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಆಗಬೇಕು ಎಂದು ಹಗಲುಗನಸು ಕಾಣುವುದು ಎಷ್ಟರ ಮಟ್ಟಿಗೆ ಸರಿ ಅಧಿಕಾರಸ್ಥರ ಮಾತಿಗೆ ಮಣಿಯಾಕುವ ಅಧಿಕಾರಿಗಳ ಎಡವಟ್ಟಿನಿಂದ ಬ್ಯಾಂಕ್ ಜೊತೆಗೆ ರೈತರಿಗೆ ತೊಂದರೆ ಆಗಿರುವುದನ್ನು ಯಾರು ಸರಿಪಡಿಸುತ್ತಾರೆ.

DCC Bank which is facing Congress’s wrath will have elections on January 17.

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...