ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ಜಾತ್ಯಾತೀತ ಜನತಾದಳ ಬಿಜೆಪಿ ಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೇಂದ್ರ ಸರ್ಕಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಎರಡು ಬೃಹತ್ ಖಾತೆಗಳ ಸಚಿವರಾಗಿದ್ದಾರೆ.ಆದರೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಕ್ಷೇತ್ರದಲ್ಲಿ ಇದಕ್ಕೆ ತದ್ವಿರುದ್ಧವಾಗಿ ಕಾಂಗ್ರೆಸ್ ಮತ್ತು ಜನತಾದಳ ಹೊಂದಾಣಿಕೆ ಮಾಡಿಕೊಂಡು ತಾಲ್ಲೂಕು ವ್ಯವಸಾಯ ಸಹಕಾರ ಮಾರುಕಟ್ಟೆಯ ಚುನಾವಣೆಯಲ್ಲಿ ಗೆದ್ದಿರುವುದು ಸೋಜಿಗದ ಸಂಗತಿ ಅಲ್ಲವೇ ಅಲ್ಲ .
ಅಜ್ಜಂಪುರ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಶಾಸಕ ಶ್ರೀನಿವಾಸ್ ಮೈ ಮರೆತು ಅಧಿಕಾರ ಕಳೆದುಕೊಂಡು ಕೈ,ಕೈ ಹಿಸುಕಿ ಕೊಂಡ ನಂತರ ಎಚ್ಚೆತ್ತು ಕೊಂಡರೆ.ಬಿಜೆಪಿ ಮಾಜಿ ಶಾಸಕ ಡಿ.ಎಸ್.ಸುರೇಶ್ ಮೈ ಮರೆತ ಫಲ ಕಳೆದ ಇಪ್ಪತ್ತು ವರ್ಷಗಳಿಂದ ಅಧಿಕಾರ ಹಿಡಿತ ಸಾಧಿಸಿದ್ದನ್ನು ಕೈ ಚೆಲ್ಲಿ ಕುಳಿತು ಕೊಳ್ಳುವಂತೆ ಮಾಡಿಕೊಂಡಿದ್ದಾರೆ.
ವಿ.ಎಸ್.ಎಸ್. ಎನ್ ಯಿಂದ ಆರು ಸ್ಥಾನ ಗೆದ್ದ ಬಿಜೆಪಿ ಯಾರು ಏನೂ ಮಾಡಲು ಸಾಧ್ಯ ಎಂಬ ಭ್ರಮೆ ಅಧಿಕಾರ ಕಳೆದುಕೊಳ್ಳುವಂತೆ ಮಾಡಿದೆ. ಜನತಾದಳದ ಎಂ.ನರೇಂದ್ರ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಮಾತನಾಡಲು ಮೊಬೈಲ್ ಕರೆ ಮಾಡಿದಾಗ ಡಿ.ಎಸ್.ಸುರೇಶ್ ಕರೆ ಸ್ವೀಕರಿಸದೆ ನಿರ್ಲಕ್ಷ್ಯ ಮಾಡಿದ್ದರ ಫಲ ಹಾಲಿ ಶಾಸಕ ಕೈ ಎತ್ತಿ ಹಾರ ಹಾಕಿಸಿಕೊಂಡು ವಿಜಯೋತ್ಸವ ಆಚರಣೆ ಮಾಡಿಕೊಳ್ಳುತ್ತಿದ್ದರೆ ಸುರೇಶ್ ದಿಗಿಲು ಬೀಳುವಂತೆ ಮಾಡಿದೆ.
ಬಿಡಿ ಕ್ಷೇತ್ರದ ಏಳು ಸ್ಥಾನಗಳಗೆ ಚುನಾವಣೆ ನಡೆದುಕಾಂಗ್ರೆಸ್ ನ ಪ್ರಕಾಶ್ ವರ್ಮ,ದಯಾನಂದ, ಮಮತಾ, ಶೈಲ ಶ್ರೀ ಗೆಲುವು ಸಾಧಿಸಿದರೆ ಜನತಾದಳದ ಎಂ.ನರೇಂದ್ರ, ಉಮಾಶಂಕರ್ ಮತ್ತು ಹೆಚ್.ಸಿ.ಬಸವರಾಜಪ್ಪ ಗೆಲುವು ಸಾಧಿಸಿದರೆ ದಳದ ಇಟ್ಟಿಗೆ ಹಾಲಪ್ಪ ಅವಿರೋಧ ಆಯ್ಕೆ ಆಗಿದ್ದರು.ಹೀಗಾಗಿ ಜನತಾದಳ ಮತ್ತು ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತವಾಗಿದೆ.ಇದನ್ನು ನೋಡಿದರೆ ಅವಕಾಶವಾದಿ ರಾಜಕಾರಣಕ್ಕೆ ಜನ ಮಣಿ ಹಾಕುತ್ತಾರೆ ಎನ್ನಿಸುತ್ತಿದೆ ಎಂದು ಜನ ಮಾತನಾಡಿತ್ತಿರುವುದು ಸುಳ್ಳೇನಲ್ಲಾ.
ಕುಟುಂಬದ ರಾಜಕಾರಣ ಮಾಡದ ಸುರೇಶ್ ಯಾರಿಗೂ ತೊಂದರೆ ಕೊಡಲ್ಲ ಆದರೆ ಯಾವುದನ್ನು ಸಿರಿಯಸ್ ಗೆ ಪರಿಗಣಿಸಲ್ಲ ಜೊತೆಗೆ ಮೊಬೈಲ್ ತೆಗೆಯುವುದಿಲ್ಲ.ಇದರ ಪರಿಣಾಮ ಅನುಭವಿಸಿದರು ಎಚ್ಚೆತ್ತು ಕೊಳ್ಳದಿರುವುದು ಟಿ.ಎ.ಪಿ.ಸಿ.ಎಂ.ಎಸ್ ಅಧಿಕಾರ ಕಳೆದುಕೊಳ್ಳುವಂತಾಗಿದೆ.ಈ ಹಿಂದೆ ವಿಧಾನ ಸಭ ಚುನಾವಣೆಗೆ ಕೆಜೆಪಿ ಯಿಂದ ಸ್ಪರ್ಧೆ ಮಾಡಿದಾಗ ಹಲವು ಮುಂಖಡರು ಸುರೇಶ್ ಬೆಂಬಲಿಸಲು ಕಾದು ಕುಳಿತಿದ್ದರು ಸುರೇಶ್ ನಿರ್ಲಕ್ಷ್ಯ ಮಾಡಿದ್ದರಿಂದ ಐನೂರು ಮತಗಳಿಂದ ಸೋಲು ಅನುಭವಿಸಿದರೆ ಈಗ ನಡೆಯುತ್ತಿರುವ ಕುಟುಂಬ ರಾಜಕಾರಣಕ್ಕೆ ಕಾರಣರಾಗಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ.
BJP’s Janata Dal’s Thakkar Congress’s tonic BJP’s comeback!
Leave a comment