Home namma chikmagalur ಸಹಕಾರಿ ಚುನಾವಣೆಗಳಲ್ಲಿ ಕಾಂಗ್ರೆಸ್ ಚಿತ್
namma chikmagalurchikamagalurHomeLatest News

ಸಹಕಾರಿ ಚುನಾವಣೆಗಳಲ್ಲಿ ಕಾಂಗ್ರೆಸ್ ಚಿತ್

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದು ಜನ ಕಾಂಗ್ರೆಸ್ ಶಾಸಕರು,ಐದು ವಿವಿಧ ನಿಗಮಗಳ ಅಧ್ಯಕ್ಷರು ಕೈ,ಕೈಗೆ ಸಿಗುವ ಮುಖಂಡರು ಕಡಿದು ಗುಡ್ಡೇ ಹಾಕುತ್ತಿದ್ದವೆ ಎಂದು ಕೋಟಿ,ಕೋಟಿ ಲೆಕ್ಕ ಹೇಳುತ್ತಿದ್ದಾರೆ.ಆದರೆ ರಸ್ತೆಯಲ್ಲಿ ಗುಂಡಿ ಹುಡುಕುವ ಬದಲು ಗುಂಡಿಗಳಲ್ಲಿ ರಸ್ತೆ ಹುಡುಕ ಬೇಕಾದ ದುಸ್ಥಿತಿ ಉಂಟಾಗಿದೆ.ಕನಿಷ್ಟ ರಸ್ತೆ ಗುಂಡಿ ಮುಚ್ಚಲು ಆಗಿಲ್ಲ ಎಂದು ಜನ ಹಾದಿ,ಬೀದಿಯಲ್ಲಿ ಹಿಡಿ ಶಾಪ ಹಾಕುತ್ತಿದ್ದಾರೆ.

ಕಾಂಗ್ರೆಸ್ ಶಾಸಕರುಗಳ ಬಗ್ಗೆ ಕಾಂಗ್ರೆಸ್ ನವರೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಮುಂದೆ ಚುನಾವಣೆ ಬರಲಿ ಕಾದು ನೋಡಿ ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ತಂದಿರುವುದನ್ನು ಹೇಳುವುದು ಬಿಟ್ಟರೆ ಸ್ಪಷ್ಟವಾಗಿ ಎರುಡು ಗುಂಪುಗಳಾಗಿ ಕುರ್ಚಿಗಾಗಿ ದಿನ ಬೆಳಗಾದರೆ ಕಿತ್ತಾಡವುದು ಅವರ ಕಾಲು ಇವರು,ಇವರ ಕಾಲು ಅವರು ಜಗ್ಗಾಡುತ್ತಿದ್ದಾರೆ.

ಚಿಕ್ಕಮಗಳೂರು ಕಾಂಗ್ರೆಸ್ ಇದೆಯೋ,ಇಲ್ಲವೋ ಎಂದು ಹುಡುಕ ಬೇಕಾಗಿದೆ ಎಂದು ಪ್ರಮುಖ ಮುಖಂಡ ಹೇಳುವುದು ನೋಡಿದರೆ ಈಗ ನಡೆಯುತ್ತಿರುವ ಚುನಾವಣಾ ಫಲಿತಾಂಶ ಮುಂದಿನ ದಿಕ್ಸೂಚಿ ಎನ್ನುತ್ತಾರೆ. ಜಿಲ್ಲೆಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ದಳದವರು ವಿಜಯದ ನಗೆ ಬೀರಿದರೆ ಕಾಂಗ್ರೆಸ್ ಚಿತ್ ಆಗಿ ಮಲಗಿದೆ.

ಮೂಡಿಗೆರೆ ಕ್ಷೇತ್ರದಲ್ಲಿ ನಡೆದ ಟಿ,ಎ,ಪಿ,ಸಿ,ಎಂಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಗೆದ್ದಿಲ್ಲ.ಚಿಕ್ಕಮಗಳೂರು ಜಿಲ್ಲೆಯ ಸಹಕಾರ ಯೂನಿಯನ್ ನಲ್ಲೂ ಕೂಡ ಕಾಂಗ್ರೆಸ್ ಒಂದು ಸ್ಥಾನ ಗೆದ್ದಿಲ್ಲಾ.ಕಡೂರು ಪಿ,ಎಲ್,ಡಿ ಬ್ಯಾಂಕ್ ಚುನಾವಣೆಯಲ್ಲಿ ಎರಡು ಸ್ಥಾನ ಗೆದ್ದಿದ್ದಾರೆ. ಇನ್ನೂ ಉಳಿದ ಹತ್ತು ಸ್ಥಾನಗಳನ್ನು ಬಿಜೆಪಿ ದಳ ಮೈತ್ರಿ ಗೆದ್ದುಕೊಂಡಿದೆ.ತರೀಕೆರೆ ಕ್ಷೇತ್ರದಲ್ಲಿ ಅಜ್ಜಂಪುರ ಪಟ್ಟಣ ಪಂಚಾಯತಿಯಲ್ಲಿ ತೀವ್ರ ಪೈಪೋಟಿ ನಡೆದು ಕಾಂಗ್ರೆಸ್ ಐದು ಸ್ಥಾನ ಗೆದ್ದರೆ ಬಿಜೆಪಿ ಆರು ಸ್ಥಾನ ಪಡೆದು ಅಧಿಕಾರದ ಗದ್ದುಗೆ ಏರಿದೆ.

ಇದಕ್ಕೆಲ್ಲ ಶಾಸಕರು ಹೊಣೆ ಎಂದು ಕಾಂಗ್ರೆಸ್ ನವರೇ ಹೇಳುವುದು ನೋಡಿದರೆ ಮುಂದೆ ಐತಿ ಮಾರಿ ಹಬ್ಬ ಎನ್ನಿಸುತ್ತಿದೆ. ಬಿಹಾರದ ಚುನಾವಣಾ ಫಲಿತಾಂಶ ನೋಡಿಯಾದರು ಎಚ್ಚರಿಕೆ ವಹಿಸದಿದ್ದರೆ ಬಿಜೆಪಿ ದಳದ ಮೈತ್ರಿ ಹಬ್ಬ ಆಚರಿಸುವುದು ಖಚಿತ.ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಾಣಿಸಿ ಅಧಿಕಾರ ಮದ,ಹಣ ಮದ,ಲಿಕ್ಕರ್ ಮದ,ಕ್ವಾರಿ ಕಾರ್ಯಾಚರಣೆ ಕುಟುಂಬ ದಾಹ ನೋಡಿ ಜನ ರೋಸಿ ಹೋಗಿದ್ದಾರೆ.

Congress loses in cooperative elections

Share

Leave a comment

Leave a Reply

Your email address will not be published. Required fields are marked *

Don't Miss

ಮುಸ್ಲಿಂ ಕುಟುಂಬ ಇಲ್ಲದ ಬಿ. ಹೊಸಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲ್ಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ಈ ಬಾರಿಯ ಮೊಹರಂ ಹಬ್ಬವು ಭಕ್ತಿ, ಸಂಭ್ರಮ ಹಾಗೂ ಅಭೂತಪೂರ್ವ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಸುಮಾರು 100 ವರ್ಷಗಳ ಸುದೀರ್ಘ ಇತಿಹಾಸ...

ಜಿಲ್ಲಾ ಆಟದ ಮೈದಾನದ ಬಳಿ ಎ.ಎಸ್.ಐ ಮೇಲೆ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದ ಗೇಟ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಹೀಂದ್ರ ಥಾರ್ ಜೀಪನ್ನು ಅಡ್ಡವಾಗಿ ನಿಲ್ಲಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳು, ಬುದ್ದಿ ಹೇಳಲು ಹೋದ ಎ.ಎಸ್.ಐ ಭುವನೇಶ್...

Related Articles

ಧರ್ಮಸ್ಥಳ ಸಂಘದ ಸಾಲದ ವಿಚಾರ-ದಂಪತಿಗಳ ಮೇಲೆ ದೊಣ್ಣೆಗಳಿಂದ ಹಲ್ಲೆ

ಶೃಂಗೇರಿ: ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಉಂಟಾದ ಸಣ್ಣ ಭಿನ್ನಾಪ್ರಾಯ ವಿಕೋಪಕ್ಕೆ ತಿರುಗಿ, ದಂಪತಿಗಳ ಮೇಲೆ...

ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟ ಪ್ರದರ್ಶಿಸಿ

ಚಿಕ್ಕಮಗಳೂರು: ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟಿನ ಮಂತ್ರ ಪಠಿಸಬೇಕು. ಪರಸ್ಪರ ಒಡೆದಾಳುವ ನೀತಿ ಅನುಸರಿಸಿದರೆ, ಸರ್ಕಾರಗಳು...

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ...