Home namma chikmagalur ಸಮಯೋಚಿತ ಬೆಂಬಲಕ್ಕಾಗಿ ಪ್ಲಾಂಟೇಶನ್ ನಿರ್ದೇಶನಾಲಯ ಸ್ಥಾಪಿಸಿ
namma chikmagalurchikamagalurHomeLatest News

ಸಮಯೋಚಿತ ಬೆಂಬಲಕ್ಕಾಗಿ ಪ್ಲಾಂಟೇಶನ್ ನಿರ್ದೇಶನಾಲಯ ಸ್ಥಾಪಿಸಿ

Share
Share

ಚಿಕ್ಕಮಗಳೂರು:  ಪ್ಲಾಂಟೇಷನ್ ವಲಯ ಪುನಶ್ಛೇತನಗೊಳಿಸಲು ನೀತಿ ಸಮನ್ವಯ ಮತ್ತು ಸಮಯೋಚಿತ ಬೆಂಬಲಕ್ಕಾಗಿ ಮಿಸಲಾದ ಪ್ಲಾಂಟೇಶನ್ ನಿರ್ದೇಶನಾಲಯ ಸ್ಥಾಪಿಸಬೇಕೆಂದು ಕೆಪಿಎ ಅಧ್ಯಕ್ಷ ಎ.ಅರವಿಂದರಾವ್ ಆಗ್ರಹಿಸಿದರು.

ಕರ್ನಾಟಕ ಪ್ಲಾಂಟರ್‍ಸ್ ಅಸೋಸಿಯೇಷನ್ ತೋಟಗಾರಿಕಾ ವಲಯದ ಸಮಸ್ಯೆಗಳು ಕುರಿತಂತೆ ನಗರದ ದಿ ಸೆರಾಯ್ ಹೋಟೇಲ್ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಅಭಿಪ್ರಾಯ ಹಂಚಿಕೊಂಡರು.

ಹವಾಮಾನದಲ್ಲಿ ವೈಪರಿತ್ಯ, ಕಾರ್ಮಿಕರ ಕೊರತೆ, ಮಾನವ-ಪ್ರಾಣಿ ಸಂಘರ್ಷ, ಬ್ರ್ಯಾಂಡಿಂಗ್‌ನಲ್ಲಿ ತೊಡಕು, ಮಾರುಕಟ್ಟೆ ಅಸ್ಥಿರv, ನಿಯಂತ್ರಿತ ಹೊರೆಗಳನ್ನು ನಿಭಾಯಿಸಲು ವಿಶೇಷ ಪರಿಣಿತಿಯನ್ನು ಒದಗಿಸುವಂತೆ ಪ್ಲಾಂಟೇಷನ್ ನಿರ್ದೇಶನಾಲಯ ಕಾರ್‍ಯನಿರ್ವಹಿಸಬೇಕೆಂದವರು ಆಗ್ರಹಿಸಿದರು. ಕೇರಳ ಮಾದರಿಯ ಪ್ಲಾಂಟೇಶನ್ ಡೈರಕ್ಟರಿ ಅಗತ್ಯವೆಂದು ಪ್ರತಿಪಾದಿಸಿದರು.

ಕಾಫಿ, ಟೀ, ಏಲಕ್ಕಿ, ಮೆಣಸು, ರಬ್ಬರ್ ಮತ್ತಿತರರ ತೋಟಗಾರಿಕಾ ವಲಯದ ವಿವಿಧ ಬೆಳೆಗಳಲ್ಲಿ ತೊಡಗಿರುವ ವೈಯಕ್ತಿಕ ತೋಟಗಾರರು, ಸಂಸ್ಥೆಗಳು, ಕಂಪನಿಗಳನ್ನು ಒಳಗೊಂಡ ಸಂಸ್ಥೆ ಕರ್ನಾಟಕ ಪ್ಲಾಂಟರ್‍ಸ್ ಅಸೋಸಿಯೇಷನ್ ೧೯೫೮ರಲ್ಲಿ ಸ್ಥಾಪನೆಗೊಂಡಿದೆ. ಚಿಕ್ಕಮಗಳೂರು, ಕೊಡಗು, ಹಾಸನ, ಚಾಮರಾಜನಗರ, ದಕ್ಷಿಣಕನ್ನಡ ಮತ್ತು ಮೈಸೂರು ಸೇರಿದಂತೆ ಪ್ರಮುಖ ತೋಟಗಾರಿಕಾ ಜಿಲ್ಲೆಗಳಲ್ಲಿ ಸದಸ್ಯರನ್ನು ಹೊಂದಿದೆ. ತೋಟಗಾರಿಕೆ-ಕೈಗಾರಿಕೆಯನ್ನು ಸಬಲೀಕರಣಗೊಳಿಸುವ ಉದ್ದೇಶ ಹೊಂದಿದೆ ಎಂದರು.

ಉದ್ಯಮವನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸುವುದು, ತೋಟದಾದ್ಯಂತ ಜೈವಿಕ ವೈವಿಧ್ಯತೆ ಮತ್ತು ಪರಿಸರ ಸಂರಕ್ಷಣೆ ಉತ್ತೇಜಿಸುವುದು, ತೋಟಗಾರಿಕೆ ಸಮಸ್ಯೆ ನಿವಾರಿಸಲು ಸರ್ಕಾರಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವ ಹಿನ್ನಲೆ ಹೊಂದಿರುವ ಕೆಪಿಎ ತೋಟಗಾರರು ಮತ್ತು ಕಾರ್ಮಿಕರ ಹಿತಾಸಕ್ತಿ ರಕ್ಷಿಸಲು ಬದ್ಧತೆ ಹೊಂದಲಾಗಿದೆ ಎಂದರು.

ಉದ್ಯಮದ ಬೆಳವಣಿಗೆಗೆ ಅನುಕೂಲಕರವಾದ ಪರಿಸರ ನಿರ್ಮಾಣ, ಸರ್ಕಾರಿ ನೀತಿಗಳು ಹಾಗೂ ಶಾಸಕಾಂಗ ಕ್ರಮಗಳ ಮೇಲೆ ಕೆಪಿಎ ಸಕ್ರಿಯವಾದ ಪ್ರಭಾವ ಬೀರುತ್ತಿದೆ. ತೋಟದ ಕಾರ್ಮಿಕರಿಗಾಗಿ ವೇತನ ಮತ್ತು ಕೆಲಸದ ಪರಿಸ್ಥಿತಿಗಳ ಕುರಿತು ಕಾರ್ಮಿಕ ಸಂಘಗಳೊಂದಿಗೆ ಅಗತ್ಯ ಮಾತುಕತೆಗಳನ್ನು ನಡೆಸುತ್ತದೆ. ಸ್ಥಿರತೆಯನ್ನು ಉತ್ತೇಜಿಸುತ್ತದೆ. ಸದಸ್ಯರ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯ ಮಾಡಲು ಪ್ರಮುಖ ಅಂಕಿ ಅಂಶಗಳನ್ನು ನೀಡುವುದರ ಜೊತೆಗೆ ಉತ್ತಮ ಅಭ್ಯಾಸಗಳನ್ನು ಸಂಗ್ರಹಿಸಿ ಪ್ರಸಾರ ಮಾಡುತ್ತಿದೆ ಎಂದು ರಮೇಶರಾವ್ ವಿವರಿಸಿದರು.

ಉತ್ಪಾದಕತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ಆಧುನಿಕ ಮತ್ತು ವೈಜ್ಞಾನಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವತ್ತ ಗಮನಹರಿಸುವ ತರಬೇತಿ ಕಾರ್‍ಯಕ್ರಮಗಳನ್ನು ಉತ್ತೇಜಿಸಲಾಗುತ್ತಿದೆ. ಕೆಪಿಎ ಸಚಿವಾಲಯ ಮತ್ತು ಆಡಳಿತ ಕಛೇರಿಯು ಚಿಕ್ಕಮಗಳೂರಿನಲ್ಲಿ ನೆಲೆಗೊಂಡಿದೆ ಎಂದರು.

ರಾಜ್ಯದ ತೋಟಗಾರಿಕಾ ಉದ್ಯಮದ ಮೇಲೆ ಹವಾಮಾನದ ಬದಲಾವಣೆಯು ಗಣನೀಯ ಮತ್ತು ಗಂಭೀರ ಪರಿಣಾಮ ಬೀರಿದೆ. ಅನಿರೀಕ್ಷಿತ ಮಳೆಯೊಂದಿಗೆ ಜಾಗತಿಕ ತಾಪಮಾನ ಏರಿಕೆಯು ಸಂಕಷ್ಟಕ್ಕೀಡು ಮಾಡಿದೆ. ತೀವ್ರ ಬರ, ಭೂಕುಸಿತ ಮತ್ತು ಮಣ್ಣಿನ ಸವೆತ ಕಾಣುತ್ತಿದ್ದೇವೆ. ಇವೆಲ್ಲ ಮಣ್ಣು ಮತ್ತು ಸಸ್ಯಗಳ ಆರೋಗ್ಯ ಕುಂದಿಸುತ್ತಾ ಬೆಳೆಗಳಿಗೆ ಹಾನಿ ಮಾಡುತ್ತಿದೆ. ಸಸ್ಯಗಳ ಬದುಕುಳಿಯುವಿಕೆಗೆ ಧಕ್ಕೆ ತರುತ್ತಿದ್ದು, ಬೆಳೆ ಇಳುವರಿ ಕುಂದಿಸಿರುವುದು ಸುಸ್ಥಿರತೆಗೆ ಬೆದರಿಕೆಯಾಗಿದೆ ಎಂದರು.

ನುರಿತ ಕಾರ್ಮಿಕರ ಕೊರತೆ ನಿರಂತರವಾಗಿ ಹೆಚ್ಚುತ್ತಿದ್ದು, ಕಾರ್ಮಿಕರು ಕೃಷಿಯೇತರ ವಲಯಗಳಿಗೆ ವಲಸೆ ಹೋಗುತ್ತಿರುವುದು ಕಾಣುತ್ತಿದ್ದೇವೆ. ತೋಟಗಾರಿಕೆ ನಿರ್ಧಿಷ್ಠ ಕಾರ್‍ಯಾಚರಣೆಗಳಿಗೆ ಅಗತ್ಯ ತರಬೇತಿಗೆ ಒತ್ತು ನೀಡಬೇಕಾಗಿದೆ. ಕಾರ್ಮಿಕರ ಅವಲಂಬನೆ ಮತ್ತು ವೆಚ್ಚಗಳನ್ನು ತಗ್ಗಿಸಲು ಯಾಂತ್ರಿಕರಣಕ್ಕಾಗಿ ಉಪಕರಣಗಳನ್ನು ಅಭಿವೃದ್ಧಿಪಡಿಸಲು ಆಕ್ರಮಣಕಾರಿ ಸಂಶೋಧನೆ ಮತ್ತು ಬೆಂಬಲದೊಂದಿಗೆ ಮಾನವ ಶಕ್ತಿಗೆ ತರಬೇತಿ ನೀಡುವುದರ ಜೊತೆಗೆ ಸಂಬಂಧಪಟ್ಟ ಯಂತ್ರೋಪಕರಣಗಳಿಗೆ ಸರ್ಕಾರ ಅಧಿಕ ಸಹಾಯಧನ ನೀಡಿ ಬೆಂಬಲಿಸಬೇಕೆಂದು ಕೆಪಿಎ ಆಗ್ರಹಿಸಿದೆ.

ತೋಟಗಳಲ್ಲಿ ಮೂಲಭೂತ ಸುಧಾರಣೆ ಸಂಬಂಧಿಸಿದ ಹೂಡಿಕೆಗಳಿಗೆ ತೆರಿಗೆ ವಿನಾಯ್ತಿ, ಪ್ರಧಾನಮಂತ್ರಿ ಫಸಲ್ ಭೀಮಾಯೋಜನೆ ಅಡಿಯಲ್ಲಿ ಕಾಫಿ ಮತ್ತು ಟೀಯನ್ನು ತರಲು ಹವಾಮಾನ ಆಧರಿತ ಬೆಳೆ ವಿಮಾಯೋಜನೆ ಒದಗಿಸಬೇಕು. ಸಿಐಬಿಐಎಲ್ ನಿಂದ ಕೃಷಿ ಸ್ವರೂಪದ ತೋಟಗಾರಿಕೆಯನ್ನು ಹೊರಗಿಡಬೇಕು. ಭಾರತೀಯ ಕಾಫಿ ಮತ್ತು ಟೀ ಬ್ರ್ಯಾಂಡ್‌ಗಳನ್ನು ಉತ್ತೇಜಿಸಬೇಕು. ಉದ್ಯಮದಲ್ಲಿ ನಾವಿನ್ಯತೆ ಪ್ರೋತ್ಸಾಹಿಸಲು ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವ ವಿದ್ಯಾನಿಲಯಗಳೊಂದಿಗೆ ಸಹಕರಿಸಬೇಕೆಂದು ಅವರು ಆಗ್ರಹಿಸಿದರು.

ಪ್ಲಾಂಟೇಶನ್ ಜಿಲ್ಲೆಗಳಲ್ಲಿ ಸಾಗಾಣೆ ಮತ್ತು ಪ್ರಯಾಣಕ್ಕೆ ರಸ್ತೆಗಳ ದುರಸ್ತಿ ಮತ್ತು ನಿರ್ವಹಣೆ ಮಾಡಬೇಕು, ಬಿಳಿಕಾಂಡಕೊರಕ, ರೋಗನಿರೋಧಕ ತಳಿಗಳ ಮೇಲೆ ಗಮನಕೇಂದ್ರೀಕರಿಸಿ ಹೆಚ್ಚು ಇಳುವರಿ ನೀಡುವ ರೋಗ ಮತ್ತು ಬರನಿರೋಧಕ ಕಾಫಿ ತಳಿಗಳ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿದ ರಮೇಶರಾವ್, ಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸಲು ರಾಜ್ಯಸರ್ಕಾರ ವಿಶೇಷ ಗಮನಹರಿಸಬೇಕು. ಕಾಫಿ ಸಂಸ್ಕರಣಾ ಸಂದರ್ಭದಲ್ಲಿ ನಿರಂತರ ವಿದ್ಯುತ್ ಪೂರೈಕೆ, ನೀರು ಸಂಗ್ರಹಣಾ ಟ್ಯಾಂಕ್‌ಗಳ ನಿರ್ಮಾಣಕ್ಕೆ ನೆರವು ನೀಡಬೇಕೆಂದವರು ಆಗ್ರಹಿಸಿದರು.

ಕೆಪಿಎ ಸಹಕಾರ್‍ಯದರ್ಶಿ ಭವೀಶ್‌ನಾಚಪ್ಪ, ಉಪಾಧ್ಯಕ್ಷ ಸಲ್ಮಾನ್‌ಬಷೀರ್, ಉಪಾಸಿ ಅಧ್ಯಕ್ಷ ಅಜಯ್‌ತಿಪ್ಪಯ್ಯ, ಕಾರ್‍ಯದರ್ಶಿ ಆರ್.ಸಂಜಿತ್, ಕಾಫಿ ಸಮಿತಿ ಅಧ್ಯಕ್ಷ ಸಹದೇವಬಾಲಕೃಷ್ಣ ವೇದಿಕೆಯಲ್ಲಿದ್ದು ತೋಟಗಾರಿಕಾ ಬೆಳೆಗಳ ಸಮಸ್ಯೆ ಚರ್ಚಿಸಿದರು.

Establish a Plantation Directorate for timely support

Share

Leave a comment

Leave a Reply

Your email address will not be published. Required fields are marked *

Don't Miss

ಮುಸ್ಲಿಂ ಕುಟುಂಬ ಇಲ್ಲದ ಬಿ. ಹೊಸಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲ್ಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ಈ ಬಾರಿಯ ಮೊಹರಂ ಹಬ್ಬವು ಭಕ್ತಿ, ಸಂಭ್ರಮ ಹಾಗೂ ಅಭೂತಪೂರ್ವ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಸುಮಾರು 100 ವರ್ಷಗಳ ಸುದೀರ್ಘ ಇತಿಹಾಸ...

ಜಿಲ್ಲಾ ಆಟದ ಮೈದಾನದ ಬಳಿ ಎ.ಎಸ್.ಐ ಮೇಲೆ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದ ಗೇಟ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಹೀಂದ್ರ ಥಾರ್ ಜೀಪನ್ನು ಅಡ್ಡವಾಗಿ ನಿಲ್ಲಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳು, ಬುದ್ದಿ ಹೇಳಲು ಹೋದ ಎ.ಎಸ್.ಐ ಭುವನೇಶ್...

Related Articles

ಧರ್ಮಸ್ಥಳ ಸಂಘದ ಸಾಲದ ವಿಚಾರ-ದಂಪತಿಗಳ ಮೇಲೆ ದೊಣ್ಣೆಗಳಿಂದ ಹಲ್ಲೆ

ಶೃಂಗೇರಿ: ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಉಂಟಾದ ಸಣ್ಣ ಭಿನ್ನಾಪ್ರಾಯ ವಿಕೋಪಕ್ಕೆ ತಿರುಗಿ, ದಂಪತಿಗಳ ಮೇಲೆ...

ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟ ಪ್ರದರ್ಶಿಸಿ

ಚಿಕ್ಕಮಗಳೂರು: ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟಿನ ಮಂತ್ರ ಪಠಿಸಬೇಕು. ಪರಸ್ಪರ ಒಡೆದಾಳುವ ನೀತಿ ಅನುಸರಿಸಿದರೆ, ಸರ್ಕಾರಗಳು...

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ...