ಚಿಕ್ಕಮಗಳೂರು: ಕಾಂಗ್ರೆಸ್ ಸಾಂಪ್ರದಾಯಿಕ ಮತದಾರರನ್ನು ಮತದಾರ ಪಟ್ಟಿಗೆ ಸೇರಿಸುವಲ್ಲಿ ಬಿಎಲ್‌ಒ-೨ ಗಳು ಕಾಳಜಿ ವಹಿಸಿದಲ್ಲಿಮಾತ್ರ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಗಟ್ಟಿಯಾಗಿ ಎದುರಿಸಲು ಸಾಧ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ರೋಟರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಬಿಎಲ್‌ಎ -೨ ಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ ಮಾರ್ಚ್ ೩೧ ಕ್ಕೆ ಬೂತ್‌ಮಟ್ಟಲ್ಲಿ ಮ್ಯಾಪಿಂಗ್ ಮಾಡುವುದು ಕೊನೆಯಾಗಲಿದೆ ಎಂದು ಡಿಸಿ ಹೇಳಿದ್ದಾರೆ. ಮ್ಯಾಪಿಂಗ್ ನಲ್ಲಿ ನಮ್ಮ ಪಕ್ಷದ ಮತದಾರರೆ ಹಿಂದುಳಿದಿದ್ದಾರೆ. ೫೧ ಸಾವಿರ ಮತದಾರರು ಕ್ಷೇತ್ರದಲ್ಲಿ ಮ್ಯಾಪಿಂಗ್ ಆಗಿಲ್ಲ ಎಂದರು.
ಅದರಲ್ಲೂ ಕಾಂಗ್ರೆಸ್ ಸಾಂಪ್ರದಾಯಿಕ ಮರದಾರರೇ ಕೈಬಿಟ್ಟು ಹೋಗಿದ್ದಾರೆ. ಸದ್ಯದಲ್ಲೇ ಗ್ರಾಮ, ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗಳು ಬರಲಿವೆ. ಇದರಲ್ಲಿ ನಮ್ಮ ಕಾರ್ಯಕರ್ತರೇ ಚುನಾವಣೆಯಲ್ಲಿ ನಿಲ್ಲಲಿದ್ದಾರೆ. ನಮ್ಮ ಕಾರ್ಯಕರ್ತರ ಚುನಾವಣೆಗೆ ನ್ಯಾಯ ಒದಗಿಸಬೇಕು ಎಂಬ ಕಾರಣಕ್ಕೆ ಈ ಕಾರ್ಯಗಾರ ಅತಿ ಮುಖ್ಯವಾಗಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ಸಂಸದರು, ಶಾಸಕರನ್ನು ಗೆಲ್ಲಿಸುವಂತಹ ಚುನಾವಣೆಯಲ್ಲಿ ಪಕ್ಷ ಸಕ್ರೀಯ ಆಗುವುದು ಸಹಜ. ನಮ್ಮ ಪಕ್ಷ ಉಳಿಯಬೇಕು ಎಂದರೆ ಕಾರ್ಯಕರ್ತರು ಬೆನ್ನೆಲುಬಾಗಿ ನಿಲಬೇಕು. ನಮ್ಮ ಸಕ್ರೀಯ ಕಾರ್ಯಕರ್ತರು ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಸದೃಢ ಆಗುವ ನಿಟ್ಟಿನಲ್ಲಿ ಇಂದಿನ ತರಬೇತಿ ಮಹತ್ವದ್ದು ಎಂದರು.
ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ ಮಾತನಾಡಿ, ಬಿಎಲ್‌ಎ-೨ ಅವರನ್ನು ಬದಲಾವಣೆ ಮಾಡಬಾರದು. ಅವರನ್ನೇ ಬೂತ್ ಹೆಡ್ ಆಗಿ ಮಾಡಬೇಕು.ಆಗ ಪಕ್ಷ ಸಂಘಟನೆ ಯಾಗುತ್ತದೆ. ಪದೇ ಪದೆ ಬದಲಾಯಿಸುತ್ತಿದ್ದರೆ ಪಕ್ಷಕ್ಕೆ ಪೆಟ್ಟು ಬೀಳಲಿದೆ ಎಂದರು.
ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ ಬಡವರು, ದೀನ ದಲಿತರು ಮತ್ತು ಜನಸಾಮಾವನ್ಯರ ಪರವಾಗಿ ಕೆಲಸ ಮಾಡುವಂತಹ ಸರಕಾರ ಇದ್ದರೆ ಅದು ಕಾಂಗ್ರೆಸ್ ಸರಕಾರ ಮಾತ್ರ. ಬಡವರ ಪರವಾದ ಹಲವು ಯೋಜನೆಗಳು ಹಿಂದಿನಿಂದ ಅನುಷ್ಠಾನ ಆಗಿರುವುದು ಇದಕ್ಕೆ ಸಾಕ್ಷಿ ಎಂದರು.
ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡೀಮನೆ ಸತೀಶ್, ಪ್ರಚಾರ ಸಮಿತಿ ಅಧ್ಯಕ್ಷ ಷರೀಫ್, ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ರೇಖಾಹುಲಿಯಪ್ಪಗೌಡ, ಸಿಡಿಎ ಮಾಜಿ ಅಧ್ಯಕ್ಷ ನಯಾಜ್, ಕೆಫೆಕ್ ಅಧ್ಯಕ್ಷ ಹರೀಶ್, ಗ್ಯಾರಂಟಿ ಪ್ರಾಕಾರದ ಅಧ್ಯಕ್ಷ ಶಿವಾನಂದಸ್ವಾಮಿ, ಮಲ್ಲೇಶಸ್ವಾಮಿ, ತನೋಜ್ ಶವು ಮತ್ತಿತರರಿದ್ದರು.
BLO-2s to take care in adding voters to the voter list
Leave a comment