Home namma chikmagalur ಬಿಜೆಪಿ ಮತ ಕಳ್ಳತನ-ಕಾಂಗ್ರೆಸ್ ಮತ ಖರೀದಿ
namma chikmagalurchikamagalurHomeLatest News

ಬಿಜೆಪಿ ಮತ ಕಳ್ಳತನ-ಕಾಂಗ್ರೆಸ್ ಮತ ಖರೀದಿ

Share
????????????????????????????????????
Share

ಚಿಕ್ಕಮಗಳೂರು:  ದೇಶದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕಾಗಿ ಮತ ಕಳ್ಳತನದಲ್ಲಿ ತೊಡಗಿ ದರೆ, ಕಾಂಗ್ರೆಸ್ ಪಕ್ಷ ಆಡಳಿತಾವಧಿಯಲ್ಲಿ ಮತಗಳನ್ನು ಖರೀದಿಸಿ, ಅಧಿಕಾರ ಗಿಟ್ಟಿಸಿಕೊಂಡು ಬಹುಸಂಖ್ಯಾ ತ ಸಮುದಾಯಕ್ಕೆ ದ್ರೋಹವೆಸಗಿದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಆರೋಪಿಸಿದರು.

ನಗರದ ಡಾ|| ಬಿ.ಆರ್.ಅಂಭೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕದಿಂದ ಆಯೋಜಿಸಿದ್ಧ ಜಿಲ್ಲಾ ಸಮಿತಿ ಸಮೀಕ್ಷಾ ಸಭಾ ಕಾರ್ಯಕ್ರಮವನ್ನು ಉದ್ಘಾ ಟಿಸಿ ಅವರು ಮಾತನಾಡಿ ಅಂಬೇಡ್ಕರ್ ಸಂವಿಧಾನದ ಆಶಯಕ್ಕೆ ವಿರುದ್ಧ ದೇಶವನ್ನಾಳಿದ ಎರಡು ರಾಷ್ಟ್ರೀಯ ಪಕ್ಷಗಳು ಮತ ಖರೀದಿ ಮತ್ತು ಮತಗಳ್ಳತನ ನಡೆಸಿ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದ್ದು ಇವೆರಡು ಪಕ್ಷಗಳು ಒಂದೇ ನಾಣ್ಯ ದ ಎರಡು ಮುಖಗಳಾಗಿವೆ. ಈ ವಿರುದ್ಧ ನ್ಯಾಯಾಧೀಶರು ತನಿಖೆ ನಡೆಸಿ ಸಂಬಂಧಿಸಿದ ರಾಜಕೀಯ ಮುಖಂಡರು, ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.

ಕೇಂದ್ರ ಸರ್ಕಾರ ಹಲವಾರು ವರ್ಷಗಳಿಂದ ಭೂಹೂಳುಮೆ ಮಾಡಿಕೊಂಡಿರುವ ರೈತನಿಗೆ ಸೂಕ್ತ ದಾ ಖಲಾಗಿ ಒದಗಿಸಿದರೆ ಭೂಮಿಯನ್ನು ವಿತರಿಸಲು ಮೀನಾಮೇಷ ಎಣಿಸುತ್ತಿದೆ. ಅದೇ ಅಂಬಾನಿ, ಅದಾನಿ ಗಳಂಥ ದೊಡ್ಡ ದೊಡ್ಡ ಉದ್ಯಮಿಗಳಿಗೆ ಪುಕ್ಕಟ್ಟೆಯಾಗಿ ಸಾವಿರಾರು ಎಕರೆ ಭೂಪ್ರದೇಶವನ್ನು ನೀಡಿ, ಬಡ ವರ್ಗದ ಜನರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿ ಸತತ ಹನ್ನೊಂದು ವರ್ಷಗಳಿಂದ ಪ್ರಧಾನಿಯಾದ ಮೋದಿಯವರು ಶೂನ್ಯ ಸಾಧನೆ ಮಾಡಿದ್ದಾರೆ. ಅ ವಧಿಯಲ್ಲಿ ರೈತರ ಆಧಾಯ ದ್ವಿಗುಣವಾಗಿಲ್ಲ, ಆತ್ಮಹತ್ಯೆ ಸಂಖ್ಯೆ ಹೆಚ್ಚಳ, ಇಂದಿಗೂ ರಸಗೊಬ್ಬರಕ್ಕಾಗಿ ರೈತಾ ರ ಪರದಾಟ, ಬಡವರಿಗೆ ಸ್ವಂತ ಮನೆ, ಗ್ಯಾಸ್ ಸೌಲಭ್ಯ ನೀಡುತ್ತೇವೆಂದು ಹೇಳಿ ಅರ್ಜಿ ಸಲ್ಲಿಸಿದರೂ ನಿವೇ ಶನ ನೀಡಿಲ್ಲ, ಕೇವಲ ಬಾಯಿ ಮಾತಲ್ಲಿ ಅಭಿವೃದ್ಧಿ ಎಂದು ಘೋಷಿಸುತ್ತಿದ್ದಾರೆ ಎಂದರು.

ದೇಶದ ಶೇ.೬೬ರಷ್ಟು ಯುವಜನತೆಗೆ ಕೇಂದ್ರ ಸರ್ಕಾರ ಉದ್ಯೋಗ ಕಲ್ಪಿಸದೇ ವಿಫಲತೆ ಹೊಂದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮೋದಿಯವರ ಸಂಬಂಧ ಕ್ಷೀಣಿಸುತ್ತಿರುವ ಕಾರಣ ಅಮೇರಿಕಾವು ಭಾರತದ ಮೇಲೆ ಅತಿಹೆಚ್ಚು ತೆರಿಗೆ ವಿಧಿಸಿದೆ ಜೊತೆಗೆ ರೂಪಾಯಿ ಮೌಲ್ಯ ಕುಸಿದಿದೆ. ಇದರಿಂದ ದೇಶದ ಅರ್ಥವ್ಯ ವಸ್ಥೆ ಮೇಲೆ ಬಹಳಷ್ಟು ಅಪಾಯ ತಂದೊಡ್ಡಿದೆ ಎಂದು ಎಚ್ಚರಿಸಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಶೇ.೧೨ ರಿಂದ ೨೮ರಷ್ಟು ಜಿಎಸ್‌ಟಿ ಏರಿಕೆ ಮಾಡಿ ಬಡವರ ಕೋಟ್ಯಾಂತರ ಹಣವನ್ನು ದೋಚುತ್ತಿದೆ. ಶೇ.೬೬ರಷ್ಟು ದುಡಿಯುವ ವರ್ಗ ಹೆಚ್ಚಿನ ಪ್ರಮಾಣದಲ್ಲಿ ಜಿಎಸ್‌ಟಿ ಕಟ್ಟಿದರೆ, ಶ್ರೀಮಂತ ಉದ್ಯಮಿಗಳು ಶೇ.೪ ರಷ್ಟು ಮಾತ್ರ ತೆರಿಗೆ ಕಟ್ಟುತ್ತಿದ್ದಾರೆ. ಈ ಪರಿಣಾಮದಿಂದ ರೈತರು, ಕಾರ್ಮಿಕರು ಮತ್ತು ಬಡವರ ರಕ್ತವನ್ನು ಮೋದಿ ಸರ್ಕಾರ ಹೀರುತ್ತಿದೆ ಎಂದು ಟೀಕಿಸಿದರು.

ಸದ್ಯದಲ್ಲೇ ಬಿಹಾರ ರಾಜ್ಯದ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಿಎಸ್‌ಟಿ ಇಳಿಸಿ ಜನಸಾಮಾನ್ಯರ ಉದ್ದಾರ ಮಾಡಿದ್ದೇವೆ ಎಂದು ಹೇಳುತ್ತಿದೆ. ಆದರೆ ಮೊದಲು ಜಿಎಸ್‌ಟಿ ವಿಪರೀತ ಏರಿಸಿ, ಈಗ ಸ್ವಲ್ಪಮಟ್ಟಿನ ಇಳಿಕೆಗೊಳಿಸಿ ಸಾಧನೆಯೆಂಬಂತೆ ಬಿಂಬಿಸಿಕೊಂಡು ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರ ಮಾಡುತ್ತಿದೆ ಎಂದು ದೂರಿ ರಾಜ್ಯದ ಜನರು ಉಚಿತ ಬಸ್, ವಿದ್ಯುತ್ ಸೌಲಭ್ಯ ಕಲ್ಪಿಸಿ ಎಂದು ಕೇಳಿರಲಿಲ್ಲ. ಅಧಿಕಾರಕ್ಕಾಗಿ ಗ್ಯಾರಂ ಟಿ ಯೋಜನೆ ಜಾರಿಗೊಳಿಸಿ ಜನರಿಂದ ಹಣ ಕಸಿದು, ಜನರಿಗೆ ನೀಡುವ ಪದ್ಧತಿ ಕಾಂಗ್ರೆಸ್ ಮಾಡುತ್ತಿದೆ. ಬದಲಾಗಿ ಬಡವರ್ಗದ ಜನರಿಗೆ ಉಚಿತ ಆರೋಗ್ಯ, ಶಿಕ್ಷಣ ಸೌಲಭ್ಯ ಹಾಗೂ ಯುವಕರಿಗೆ ಉದ್ಯೋಗ ಕಲ್ಪಿಸಿದರೆ ಸ್ವಾವಲಂಬಿ ಜೀವನಕ್ಕೆ ದಾರಿಯಾಗುತ್ತಿತ್ತು ಎಂದು ಹೇಳಿದರು.

ದೇಶ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುವ ಎರಡು ಪಕ್ಷಗಳು ಅಂಬೇಡ್ಕರ್ ಆಶಯಕ್ಕೆ ಕೊಡಲಿಪೆ ಟ್ಟು ಹಾಕಿದ್ದು ಬಹುಸಂಖ್ಯಾತರು ಜಾಗೃತರಾಗಬೇಕು. ಮುಂದಿನ ಎಲ್ಲಾ ಚುನಾವಣೆಗಳಲ್ಲಿ ರಾಷ್ಟ್ರದ ಮೂರ ನೇ ಅತಿದೊಡ್ಡ ಪಕ್ಷ ಹಾಗೂ ಅಂಬೇಡ್ಕರ್ ಆಶಯವನ್ನು ಅಳವಡಿಸಿಕೊಂಡಿರುವ ಬಿಎಸ್ಪಿ ಪಕ್ಷವನ್ನು ಬಲಪ ಡಿಸುವ ಮೂಲಕ ಮುಖ್ಯಮಂತ್ರಿ, ಪ್ರಧಾನಿಗಳಾಗಿಸಲು ಎಂದರು. ಕ್ಷೇತ್ರದಲ್ಲಿ ಮಾಜಿ ಶಾಸಕ ಸಿ.ಟಿ.ರವಿ ಗಣಪತಿ ಉತ್ಸವದ ಕಲ್ಲು ತೂರಾಟದ ಬಗ್ಗೆ ಕೈಕಾಲು ತೆಗೆಯುತ್ತೇ ವೆಂಬ ಪ್ರಚೋದಕಾರಿ ಮಾತುಗಳಾಡುತ್ತಾರೆ. ಇನ್ನೋರ್ವ ಶಾಸಕಿ ನಯನ ಮೋಟಮ್ಮ ಕೋಮುಗಲಭೆಗಳ ಂತ ಸಂಘಟನೆಗಳ ಜೊತೆಗೆ ವೇದಿಕೆ ಹಂಚಿಕೊಂಡಿದ್ದು ಮುಂದೆ ಮತದಾರರು ಎಚ್ಚೆತ್ತುಕೊಂಡು ಕೋಮು ವಾದಿ ಪ್ರತಿನಿಧಿಗಳನ್ನು ಮನೆಗೆ ಕಳುಹಿಸಬೇಕು ಎಂದು ಹೇಳಿದರು.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ನಾಲ್ಕು ಭಾರಿ ರಾಜ್ಯದ ಚುಕ್ಕಾಣಿ ಹಿಡಿ ದು ಸುಮಾರು ೨೩ ಲಕ್ಷ ನಿರುದ್ಯೋಗಗಳಿಗೆ ಉದ್ಯೋಗ ಕಲ್ಪಿಸಿದರು. ಹೂಳುವವನೇ ಭೂಮಿಯ ಒಡೆಯ ನಾಗಬೇಕೆಂಬ ದೃಷ್ಟಿಯಿಂದ ಸಾವಿರಾರು ಎಕರೆ ಪ್ರದೇಶವನ್ನು ರೈತರಿಗೆ ನೀಡಿದ ಮಾಯಾವತಿ ಅವರನ್ನು ಮುಂದಿನ ಪ್ರಧಾನಿಯಾಗಿಸಲು ಎಲ್ಲರೂ ಒಟ್ಟಾಗಬೇಕು ಎಂದರು. ಬಿಎಸ್ಪಿ ರಾಜ್ಯ ಉಸ್ತುವಾರಿ ದಿನೇಶ್ ಗೌತಮ್ ಮಾತನಾಡಿ ಅಂಬೇಡ್ಕರ್ ನೀಡಿದಂಥ ಮತದಾನ ಪವಿ ತ್ರವಾದದು. ದೇಶದಲ್ಲಿ ಉದ್ಯಮಿಗಳು, ಸಿರಿವಂತರಿದ್ದು ಆಳ್ವಿಕೆ ನಡೆಸಲು ಹಣದಿಂದ ಸಾದ್ಯವಿಲ್ಲ. ಮತದಾನ ಬ್ರಹ್ಮಸ್ತ್ರ. ಹೀಗಾಗಿ ಮುಂದಿನ ಚುನಾವಣೆಗಳಲ್ಲಿ ಅಂಬೇಡ್ಕರ್, ಕಾನ್ಸಿರಾಮ್‌ರವರ ಚಿಂತನೆಯುಳ್ಳ ಬಿಎಸ್ಪಿ ಪರವಾಗಿ ಮತಯಾಚಿಸಬೇಕು ಎಂದು ಮನವಿ ಮಾಡಿದರು.

ಮತದಾನ ಬಳಕೆಯನ್ನು ಇತರೆ ವ್ಯಕ್ತಿಗಳು ಶಾಸಕರು, ಸಂಸದರಾಗಲೀ ಎಂಬ ಉದ್ದೇಶವಲ್ಲ. ಬಹು ಸಂಖ್ಯಾತರು ಅಧಿಕಾರ ಚುಕ್ಕಾಣಿ ಹಿಡಿಯವುದು ಉದ್ದೇಶ. ಹೀಗಾಗಿಯೇ ಅಂಬೇಡ್ಕರ್ ಸರ್ವಸಮಾನ ಜನರಿಗೆ ಮತದಾನ ಅವಕಾಶ ಕಲ್ಪಿಸಿಕೊಟ್ಟಿದೆ. ಒಟ್ಟಾರೆ ಬಹುಸಂಖ್ಯಾತರು ಪಂಚಾಯಿತಿಯಿಂದ ಪಾರ್ಲಿ ಮೆಂಟ್‌ವರೆಗೂ ಅಧಿಕಾರ ನಡೆಸುವಂತಾಗಬೇಕು ಎಂದರು. ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ ಜಿಲ್ಲೆಯ ಪ್ರತಿ ಪಂಚಾಯಿತಿ, ಬೂತ್, ತಾಲ್ಲೂಕು, ಜಿ.ಪಂ. ಮಟ್ಟದಿಂದ ಪದಾಧಿಕಾರಿಗಳನ್ನು ಕರೆಸಿ ಪಕ್ಷದ ನಿಲುವುಗಳನ್ನು ಮನದಟ್ಟು ಮಾಡಿ ಬೂತ್‌ಮಟ್ಟದಿಂದಲೇ ಪಕ್ಷವನ್ನು ಸಂಘಟಿಸುವ ಮೂಲಕ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ವಿಜಯ ಸಾಧಿಸಬೇಕು ಚಿಂತನೆ ನಡೆಸಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ ವಹಿಸಿದ್ದರು. ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಯಾಕೀರ್‌ಹುಸೇನ್, ರಾಜ್ಯ ಉಸ್ತುವಾರಿ ಗಂಗಾಧರ್ ಬಹುಜನ್, ಕಾರ್ಯದರ್ಶಿ ಗಳಾದ ಕೆ.ಬಿ.ಸುಧಾ, ಝಾಕೀರ್ ಆಲಿಖಾನ್, ಮುಖಂಡರುಗಳಾದ ವೇಲಾಯುಧನ್, ಗಂಗಾಧರ್, ಶಂ ಕರ್, ಕೆ.ಎಂ.ಗೀಪಾಲ್, ಮಂಜಯ್ಯ, ಬಾಬು, ಆನಂದ್, ತಂಬನ್, ಪುಟ್ಟಸ್ವಾಮಿ ಕಿರಣ್‌ಕುಮಾರ್ ಇದ್ದರು.

BJP vote theft-Congress vote buying

Share

Leave a comment

Leave a Reply

Your email address will not be published. Required fields are marked *

Don't Miss

ಮಂಜೆಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಬಲಪಡಿಸಲು ಸಂಕಲ್ಪ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೂತ್‌ಮಟ್ಟದಿಂದ ಮತ್ತಷ್ಟು ಬಲಪಡಿಸುವ ಮೂಲಕ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಸಜ್ಜಾಗಬೇಕು ಎಂದು ಕಾಂಗ್ರೆಸ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್...

ರಾಷ್ಟ್ರೀಯ ಹೆದ್ದಾರಿ 173ರ ರಸ್ತೆ ಅಗಲೀಕರಣಕ್ಕೆ ಬೃಹತ್ ಮರಗಳಿಗೆ ಕೊಡಲಿ ಪೆಟ್ಟು

ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ 173ರ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣದ ಹೆಸರಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಶತಮಾನದ ಇತಿಹಾಸವಿರುವ ಬೃಹತ್ ಮರಗಳಿಗೆ ಕೊಡಲಿ ಪೆಟ್ಟು ನೀಡುತ್ತಿರುವುದಕ್ಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮೂಡಿಗೆರೆಯಿಂದ ಮೂಗ್ತಿಹಳ್ಳಿವರೆಗಿನ...

Related Articles

ನಕಲಿ ಪೊಲೀಸ್ ಇನ್ಸ್‌ಪೆಕ್ಟರ್‌ ಹೆಸರಿನಲ್ಲಿ ಚಿನ್ನದ ಸರ ಪಡೆದು ವಂಚನೆ

ಚಿಕ್ಕಮಗಳೂರು: ತಾನು ಪೊಲೀಸ್ ಇನ್ಸ್‌ಪೆಕ್ಟರ್ ಎಂದು ಪರಿಚಯಿಸಿಕೊಂಡು ಆಭರಣ ಮಳಿಗೆಯಿಂದ ₹1.82 ಲಕ್ಷ ಮೌಲ್ಯದ ಚಿನ್ನದ...

ಬರಪೀಡಿತ ತಾಲ್ಲೂಕುಗಳ ಮೂರನೇ ಪಟ್ಟಿಯಲ್ಲಿ ಚಿಕ್ಕಮಗಳೂರು-ಕಳಸ ಸೇರ್ಪಡೆ

ಚಿಕ್ಕಮಗಳೂರು: ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರಪೀಡಿತ ತಾಲ್ಲೂಕುಗಳ ಮೂರನೇ ಪಟ್ಟಿಯಲ್ಲಿ ಜಿಲ್ಲೆಯ ಎರಡು ತಾಲ್ಲೂಕುಗಳು...

ಮನೆ ಬೀಗ ಮುರಿದು ₹7.06 ಲಕ್ಷ ಮೌಲ್ಯದ ನಗ-ನಗದು ಕಳವು

ಕಡೂರು: ಮನೆಯವರು ಕಣ್ಣಿನ ಚಿಕಿತ್ಸೆಗಾಗಿ ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು...

ಮೆಸ್ಕಾಂ ಸಬ್‌ಸ್ಟೇಷನ್‌ನಿಂದ ₹31 ಲಕ್ಷ ಮೌಲ್ಯದ ಟ್ರಾನ್ಸ್‌ಫಾರ್ಮರ್ ಆಯಿಲ್ ಕಳವು

ಚಿಕ್ಕಮಗಳೂರು: ಹೊಸದಾಗಿ ನಿರ್ಮಿಸಲಾಗಿದ್ದ 66/11 ಕೆ.ವಿ. ವಿದ್ಯುತ್ ಉಪಕೇಂದ್ರದಲ್ಲಿನ ಟ್ರಾನ್ಸ್‌ಫಾರ್ಮರ್‌ಗೆ ತುಂಬಿಸಲಾಗಿದ್ದ ಸುಮಾರು 12,400 ಲೀಟರ್,...