Home namma chikmagalur chikamagalur ರಾಜ್ಯಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ
chikamagalurHomeLatest Newsnamma chikmagalur

ರಾಜ್ಯಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ

Share
Share

ಚಿಕ್ಕಮಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ರೈತವಿರೋಧಿ ನೀತಿಯನ್ನು ಖ ಂಡಿಸಿ ಶುಕ್ರವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ತಾಲ್ಲೂಕು ಕಚೇರಿಯಿಂದ ಆಜಾದ್‌ಪಾರ್ಕ್ ವೃ ತ್ತದವರೆಗೆ ಎತ್ತಿನಗಾಡಿ ಮುಖಾಂತರ ಮೆರವಣಿಗೆ ಜಾಥಾ ನಡೆಸಿ ರಾಜ್ಯಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ರಾಜ್ಯದಲ್ಲಿ ರೈತರು ಅತಿವೃಷ್ಟಿ, ಅನಾವೃಷ್ಟಿಯಿಂದ ತೀವ್ರತರವಾಗಿ ಬಳಲುತ್ತಿದ್ದಾರೆ. ಆದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಬಾಡೂ ಟ ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸದೇ ಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿದ್ದಾರೆ ಎಂದು ದೂರಿದರು.

ರೈತರ ಬೆಳೆ ನಷ್ಟಕ್ಕಾಗಿ ಸೂಕ್ತ ಪರಿಹಾರ ಒದಗಿಸದೇ, ಇದ್ದು ಸತ್ತಂತಾದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅಗತ್ಯ ರಾಜ್ಯಕ್ಕಿಲ್ಲ. ಭೂಮಿಗೆ ತನ್ನ ರಕ್ತವನ್ನ ಬೆವರಾಗಿ ಸುರಿಸುತ್ತಿರುವ ಎಲ್ಲಾ ರೈತರ ಪರವಾಗಿ ರೈತಾಪಿ ವ ರ್ಗವು ನಿತ್ಯ ಹೋರಾಟ ನಡೆಸಿದರೆ ಮಾತ್ರ ರೈತರ ಬೇಡಿಕೆಗಳು ಈಡೇರಲಿದೆ ಎಂದು ಹೇಳಿದರು.

ರೈತರ ಆತ್ಮಹತ್ಯೆಯಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿರುವುದು ಆತಂಕಕಾರಿ ವಿಷ ಯ, ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳು ಆತ್ಮಹತ್ಮೆಗೆ ಶರಣಾಗುತ್ತಿದ್ದಾರೆ. ಮಲೆನಾಡು ಭಾಗಕ್ಕೆ ಕಾಡುಪ್ರಾ ಣಿಗಳ ಹಾವಳಿ, ಅರಣ್ಯ ಇಲಾಖೆ ಒಕ್ಕಲೆಬ್ಬಿಸುವ ಕಾಟ ಹೆಚ್ಚಾಗಿ ಜನಸಾಮಾನ್ಯರು ಬದುಕಲಾರದ ಸ್ಥಿತಿಗೆ ತಂದೊಡ್ಡಿದೆ ಎಂದು ಆರೋಪಿಸಿದರು.

ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರ ೩೫೫೦ ರೂ. ದರ ನಿಗಧಿಗೊಳಿಸಿದೆ. ನೆರೆ ರಾಜ್ಯ ಮಹಾರಾಷ್ಟ್ರದ ಮುಖ್ಯಮಂತ್ರಿ ಸಕ್ಕರೆ ಕಾರ್ಖಾನೆ ಮಾಲಿಕರು, ರೈತ ಸಂಘಟನೆ ಜೊತೆಗೂಡಿ ೩೪೦೦ ರೂ.ಗೆ ಖರೀದಿಸಲು ಸೂಚನೆ ನೀಡಿ ಖರೀದಿಸುತ್ತಿದೆ. ಆದರೆ ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕ ರು ಕೇವಲ ೨೯೦೦ ರೂ. ದರ ನಿಗಧಿಗೊಳಿಸಿ ಅನ್ಯಾಯ ಮಾಡುತ್ತಿದೆ ಎಂದರು.

ಮೆಕ್ಕೆಜೋಳ ಬೆಳೆಗೆ ೨೪೦೦ ರೂ. ನಿಗಧಿಗೊಂಡಿದೆ, ಆದರೆ ರಾಜ್ಯದಲ್ಲಿ ಕೇವಲ ೧೮೦೦ ರೂ. ದರದಲ್ಲಿ ಖರೀದಿಯಾಗುತ್ತಿದೆ. ಕೇಂದ್ರ ಸರ್ಕಾರ ಎನ್‌ಎಸ್‌ಪಿ ನಿಗಧಿಗೊಳಿಸಿದ್ದು ರಾಜ್ಯಸರ್ಕಾರ ಮದ್ಯಪ್ರವೇಶಿಸಿ ಖರೀದಿ ಕೇಂದ್ರ ತೆರೆದರೆ ಮಾತ್ರ ಬೆಲೆ ವ್ಯತ್ಯಾಸ ಹಾಗೂ ರೈತರಿಗಾಗುವ ಅನ್ಯಾಯವನ್ನು ತಡೆಗಟ್ಟಬಹುದು ಎಂದು ಹೇಳಿದರು.

ಸತತ ಒಂದೂವರೆ ತಿಂಗಳು ಚಳುವಳಿ ನಡೆಸಿದ ರೈತರಿಗೆ ರಾಜ್ಯಸರ್ಕಾರ ಬದುಕಿದ್ದು ಸತ್ತಾಂತಾಗಿದೆ. ಇದೀಗ ಎಲ್ಲಾ ಬೆಳೆಗಳು ಖರೀದಿಯಾಗಿ, ದಲ್ಲಾಳ್ಳಿಗೋಸ್ಕರ ಖರೀದಿ ಕೇಂದ್ರ ತೆರೆದಿದೆ. ಬಿಜೆಪಿ ಭತ್ತ, ಮೆಕ್ಕೆ ಜೋಳ ಖರೀದಿ ಕೇಂದ್ರ ತೆರೆಯಲು ಹೇಳಿದರೆ, ರಾಜ್ಯಸರ್ಕಾರ ಶಾಸಕರ ಖರೀದಿ ಕೇಂದ್ರ ತೆರೆಯುತ್ತಿದೆ ಎಂದು ಲೇವಡಿ ಮಾಡಿದರು.

ಜನತೆಗೆ ಅಭಿವೃದ್ದಿಗಾಗಿ ರಾಜ್ಯದ ಮತದಾರರು ಅಧಿಕಾರಕ್ಕೆ ಕೂರಿಸಿರುವುದೇ ಹೊರತು ನಾಟಿ ಕೋಳಿ ರುಚಿ ಸವಿಯಲಲ್ಲ. ರಾಜ್ಯದಲ್ಲಿ ರೈತ ವಿದ್ಯಾನಿಧಿಗೆ ಕಲ್ಲುಬಿದ್ದಿದೆ. ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯ ಡಿ ೬ ಸಾವಿರ, ಅಂದಿನ ಬಿಜೆಪಿ ಸರ್ಕಾರದಲ್ಲಿ ೪ ಸಾವಿರ ಒಟ್ಟಾಗಿ ೧೦ ಸಾವಿರ ರೈತರಿಗೆ ನೀಡಲಾಗುತ್ತಿತ್ತು. ಇದೀಗ ಅದನ್ನು ಕಾಂಗ್ರೆಸ್ ಸರ್ಕಾರ ಹಣ ಕಡಿತಗೊಳಿಸಿ ಪಕ್ಷದ ಜೇಬಿಗೆ ತುಂಬಿಸಿಕೊಳ್ಳುತ್ತಿದೆ ಎಂದು ದೂ ರಿದರು.

ಮಾಜಿ ಶಾಸಕ ಹರತಾಳಪ್ಪ ಹಾಲಪ್ಪ ಮಾತನಾಡಿ ಉತ್ತರ ಕರ್ನಾಟಕ ಕಬ್ಬು ಕಟಾವಿನ ವೇಳೆಯಲ್ಲಿ ನೆರೆರಾಜ್ಯದಲ್ಲಿ ೩೫೦೦ ದರವಿದ್ದರೆ, ರಾಜ್ಯದಲ್ಲಿ ಕೇವಲ ೩ ಸಾವಿರವು ಇಲ್ಲ. ಈ ಬಗ್ಗೆ ಬಿಜೆಪಿ ರಾಜ್ಯ ನಾಯ ಕರುಗಳು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ಮೇರೆಗೆ ರಾಜ್ಯ ಸರ್ಕಾರ ರೈತರು, ಕಾರ್ಖಾನೆ ಮಾಲೀ ಕರ ಸಭೆ ಕರೆದು ದರ ನಿಗಧಿಗೊಳಿಸಿದ್ದು ಇಂದಿಗೂ ಹೊಸ ದರದಲ್ಲಿ ಖರೀದಿಸುತ್ತಿಲ್ಲ ಎಂದು ಹೇಳಿದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ ಮಾತನಾಡಿ ಕಬ್ಬು ಬೆಳೆಗೆ ಸೂಕ್ತ ದರ ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರವಿಲ್ಲದೇ ರಾಜ್ಯದ ಸಾವಿರಾರು ರೈತರು ಕಂಗಾಲಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಯಡ್ಡಿಯೂರಪ್ಪ ಮುಖ್ಯಮಂತ್ರಿ ಕಾಲದಲ್ಲಿ ರೈತರಿಗೆ ಸಕಲ ಸೌಕರ್ಯವು ಲಭ್ಯವಿತ್ತು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ರೈತ ಆತ್ಮಹತ್ಯೆ ದಾರಿ ಹಿಡಿಯುವಂತಾಗಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ನಗರಾಧ್ಯಕ್ಷ ಪುಷ್ಪರಾಜ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಆನಂದಪ್ಪ, ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಪುಣ್ಯಪಾಲ್, ಡಾ| ನರೇಂ ದ್ರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ವೀಣಾಶೆಟ್ಟಿ, ಕವೀಶ್, ಸೋಮಶೇಖರ್, ಮಹಿಳಾ ಮೋರ್ಚಾ ಜಿಲ್ಲಾ ಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ಮುಖಂಡರುಗಳಾದ ಕೋಟೆ ರಂಗನಾಥ್, ದಿನೇಶ್, ಪುಟ್ಟಸ್ವಾಮಿ, ಕೌ ಶಿಕ್, ದಿನೇಶ್ ಪಾದಮನೆ, ಕೆ.ಪಿ,ವೆಂಕಟೇಶ್, ಸೀತರಾಮಭರಣ್ಯ, ನಂದೀಶ್ ಮದಕರಿ, ಕಬೀರ್, ಆಲ್ದೂರು ರವಿ ಮತ್ತಿತರರು ಹಾಜರಿದ್ದರು.

BJP protests against state government’s anti-farmer policies

Share

Leave a comment

Leave a Reply

Your email address will not be published. Required fields are marked *

Don't Miss

ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ ರೈತರ ಸ್ಥಿತಿ ಅವಲೋಕಿಸಿದ ಸಚಿವ ಜಾರ್ಜ್

ಚಿಕ್ಕಮಗಳೂರು: ಸಕಾಲದಲ್ಲಿ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರು, ಒಣಗಿ ನಿಂತಿರುವ ಭೂಮಿ, ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆ ಒಡೆಯದೆ ಬಿಸಿಲಿನ ಝಳಕ್ಕೆ ಸಿಲುಕಿ ಸುಟ್ಟುಹೋಗಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ...

ಸಚಿವ ಕೆ.ಜೆ. ಜಾರ್ಜ್ ಬೆಂಗಾವಲು ವಾಹನ ಅಪಘಾತ

ಚಿಕ್ಕಮಗಳೂರು : ಅಜ್ಜಂಪುರ ಜಿಲ್ಲೆಯ ಬಯಲುಸೀಮೆ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆಗಾಗಿ ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರ ಬೆಂಗಾವಲು (Escort) ವಾಹನ ಅಪಘಾತಕ್ಕೀಡಾದ ಘಟನೆ ಅಜ್ಜಂಪುರ ಪಟ್ಟಣದಲ್ಲಿ...

Related Articles

ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಮಲೆನಾಡಿಗೆ ಕಂಟಕ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯದ ೧೦ ಜಿಲ್ಲೆಗಳ ೨೦ ಸಾವಿರಕ್ಕೂ ಅಧಿಕ ಚದರ ಕಿಲೋ...

ಅಂಗಾಂಗ ದಾನ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿ

ಚಿಕ್ಕಮಗಳೂರು: ಅಂಗಾಂಗ ದಾನ ಮಾಡಿ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ ಎಂದು ನಗರಸಭೆ ಪೌರಾಯುಕ್ತ...

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪ...

ಫಸಲ್ ಬಿಮಾ ನೋಂದಣಿ ಹೆಚ್ಚಿಸಲು ಜಿಲ್ಲಾಧಿಕಾರಿ ನಿರ್ದೇಶನ

ಚಿಕ್ಕಮಗಳೂರು: ಫಸಲ್ ಬಿಮಾ ಯೋಜನೆಯಡಿ ನೋಂದಣಿ ಕಡಿಮೆಯಾಗಿದ್ದು, ತಕ್ಷಣ ಅಗತ್ಯ ಪ್ರಚಾರ ಕೈಗೊಂಡು ರೈತರ ಮನವೊಲಿಸಿ...