Home namma chikmagalur chikamagalur ಬಿ.ಎಲ್.ಶಂಕರ್ ರ ರಾಜಕೀಯ ಹಪ ಹಪಿಗೆ ಮತ್ತೆ ಮತ್ತೆ ತಣ್ಣೀರು !
chikamagalurHomeLatest Newsnamma chikmagalurPolitical News

ಬಿ.ಎಲ್.ಶಂಕರ್ ರ ರಾಜಕೀಯ ಹಪ ಹಪಿಗೆ ಮತ್ತೆ ಮತ್ತೆ ತಣ್ಣೀರು !

Share
DAYANANDApressss-CHIKMAGG<0,,
Share

ಬಿ.ಎಲ್.ಶಂಕರ್ ಕಾಂಗ್ರೆಸ್ ನ ರಾಜ್ಯ ನಾಯಕರು ನಿಜ,ಆದರೆ ಇವರು ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ನಲ್ಲಿ ಕಡ್ಡಿ ಆಡಿಸುವುದರಲ್ಲಿ ನಿಪುಣ.

ಕಾಂಗ್ರೆಸ್ ಸೇರಿ ಎಲ್ಲಾ ಚುನಾವಣೆಯಲ್ಲಿ ಸೋತು ದಾಖಲೆ ಮಾಡಿದ್ದಾರೆ.ಚಿತ್ರಕಲಾ ಪರಿಷತ್ತಗೆ ಗೂಟಾ ಹೊಡೆದುಕೊಂಡು ಸಮಯಕ್ಕೆ ,ವಿಷಯಕ್ಕೆ ಸರಿಯಾಗಿ ಭಾಷಣದ ಕಲೆ ಕರಗತ ಮಾಡಿಕೊಂಡು ಮಾತನಾಡುವ ಶಂಕರ್ ಹೆಸರು ಮತ್ತೊಮ್ಮೆ ಪೇಪರ್ ನಲ್ಲಿ ಬರುವುದು ಖಚಿತ .

ಜಿಲ್ಲೆಯ ಶಾಸಕರಲ್ಲಿ ಶೃಂಗೇರಿಯ ಶಾಸಕ ಟಿ.ಡಿ.ರಾಜೇಗೌಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ತಮ್ಮಯ್ಯ ಅನಿವಾರ್ಯವಾಗಿ ನಿಲ್ಲುತ್ತಾರೆ.ಆದರೆ ಶಾಸಕಿ ನಯನ ಮೋಟಮ್ಮ ಮಾತ್ರ ಶಂಕರ್ ಯಾರು ಎಂದು ಪ್ರಶ್ನಿಸಿದರೆ, ತರೀಕೆರೆ ಶಾಸಕ ಶ್ರೀನಿವಾಸ್‌ ಮತ್ತು ಕೆಡೂರು ಕ್ಷೇತ್ರದ ಶಾಸಕ ಆನಂದ್ ಸಾಲು ಸಾಲು ಸೋತ ಮುಖ ಇಟ್ಟುಕೊಂಡು ಸ್ಥಾನ ಮಾನ ಕೇಳವುದಾರೂ ಹೇಗೆ ಎಂಬ ಪ್ರಶ್ನೆ ಕಾಡುತ್ತದೆ.

ನಮ್ಮ ಕುಟುಂಬದವರು ಎಷ್ಟು ಕಷ್ಟ ಪಟ್ಟು ಜನಸೇವೆ ಮಾಡುತ್ತಿದ್ದಾರೆ ನಮಗೆ ಕೊಡಲಿ ಎನ್ನುತ್ತಿದ್ದಾರಂತೆ.ಇನ್ನೂ ಕಡೂರು ಶಾಸಕ ಆನಂದ್ ಶಂಕರ್ ಗೂ ನಮಗೂ ಸಂಬಂಧವಿಲ್ಲ ಎಂದು ಒಂದೇ ಮಾತಿನಲ್ಲಿ ಹೇಳುತ್ತಾರೆ .

ಸಂಕರಣ್ಣ ಮಾತ್ರ ಎಲ್ಲಾ ಸ್ವಾಭಿಮಾನ ಬದಿಗಿಟ್ಟು ಜುಬ್ಬಾ,ಪ್ಯಾಂಟ್ ಜೊತೆಗೆ ಸೆಂಟ್ ಹಾಕಿಕೊಂಡು ಭಾಷಣ ಮಾಡಲು ತಯಾರಿ ನಡೆಸಿಕೊಂಡು ಬಂದು ಚಪ್ಪಾಳೆ ತಟ್ಟಿಸಿಕೊಂಡು ಸಮಾಧಾನ ಪಡುತ್ತಿದ್ದಾರೆ.

ಜನತಾ ಪರಿವಾರ ತೊರೆದು ಬಂದವರು ಒಮ್ಮೆ ಲೋಕಸಭೆ ಮೂರು ಬಾರಿ ವಿದಾನ ಸಭಾ ಚುನಾವಣೆಗೆ ಸ್ಪರ್ಧಿಸಿ ಸೋತು ಗೌರವಾನ್ವಿತವಾಗಿ ಬದುಕು ಸಾಗಿಸುವ ಬದಲಿಗೆ ರಾಜ್ಯಸಭೆ,ಆಥವಾ ವಿಧಾನ ಪರಿಷತ್ ಗೆ ಒಳ ಹೋಗಲು ರಾಜಕೀಯ ಸಂಚಿಗೆ ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ,ಮತ್ತೊಂದು ಕಡೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹದವಾಗಿ ಕಾಯಿಸಿದ ಕಬ್ಬಿಣದ ಬರೆ ಹಾಕುತ್ತಿದ್ದಾರೆ.

ಎಪ್ಪತ್ತು ವರ್ಷಗಳಾದರೂ ಬುದ್ದಿ ಕಲಿಯದ ಬಿ.ಎಲ್.ಶಂಕರ್ ಅಧಿಕಾರಕ್ಕೆ ಹಾತೊರೆಯುತ್ತಿರುವುದು ನೋಡಿ ಕಾಂಗ್ರೆಸ್ ನಲ್ಲಿ ಗೇಲಿ ಮಾಡುತ್ತಿರುವುದು ನಿಜತಾನೇ. ವಯಸ್ಸು ಆದ ನಂತರ ರಾಜಕೀಯ ಮಾರ್ಗದರ್ಶನ ಮಾಡ ಬೇಕು,ಇಲ್ಲದಿದ್ದರೆ ಮನೆ ಸೇರಿಕೋ ಬೇಕು ಅದು ಬಿಟ್ಟು ಅಧಿಕಾರಕ್ಕಾಗಿ ಹಪಹಪಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಾಂಗ್ರೆಸ್ ನಲ್ಲಿ ಲೇವಡಿಗೆ ಒಳಗಾಗುತ್ತಿರುವಾಗ ಕನಿಷ್ಟ ಪಕ್ಷ ” ಜೆನ್ ಝೀ”ಗಳಿಂದಾಗುತ್ತಿರುವ.

ಬದಲಾವಣೆಗಳನ್ನು ನೋಡಿ ಕಲಿಯಬೇಕು. ವೇದಿಕೆ ಮೇಲೆ ನಿಂತು ಭಾಷಣ ಮಾಡುವುದು ಸುಲುಭ ಆದರೆ ಅನುಸರಿಸದಿರುವುದು ಎಷ್ಟರ ಮಟ್ಟಿಗೆ ಸರಿ. ರಾಜಕೀಯ ಅರಿದು ಕುಡಿದು, ಹಾಸಿ,ಹೊದ್ದು ಮಲಗಿದ ಅಸಾಮಿ ಬಿ.ಎಲ್.ಶಂಕರ್ ರಾಜಕೀಯ ತೂಕ ಕಳೆದುಕೊಂಡಿದ್ದಾರೆ ಎಂಬುದನ್ನು ಅರಿಯುವ ಬದಲಿಗೆ ಮತ್ತೆ,ಮತ್ತೆ ಎಡವಿ ಬೀಳುತ್ತಿದ್ದಾರೆ.ಎಚ್ಚರಿಕೆ ವಹಿಸದಿದ್ದರೆ ಹಾದಿ,ಬೀದಿಯಲ್ಲಿ ನಗೆಪಾಟಲಿಗೆ ಒಳಗಾಗುವುದು ಖಚಿತ.

B.L. Shankar’s political ambitions have been met with cold water again and again!

Share

Leave a comment

Leave a Reply

Your email address will not be published. Required fields are marked *

Don't Miss

ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ ರೈತರ ಸ್ಥಿತಿ ಅವಲೋಕಿಸಿದ ಸಚಿವ ಜಾರ್ಜ್

ಚಿಕ್ಕಮಗಳೂರು: ಸಕಾಲದಲ್ಲಿ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರು, ಒಣಗಿ ನಿಂತಿರುವ ಭೂಮಿ, ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆ ಒಡೆಯದೆ ಬಿಸಿಲಿನ ಝಳಕ್ಕೆ ಸಿಲುಕಿ ಸುಟ್ಟುಹೋಗಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ...

ಸಚಿವ ಕೆ.ಜೆ. ಜಾರ್ಜ್ ಬೆಂಗಾವಲು ವಾಹನ ಅಪಘಾತ

ಚಿಕ್ಕಮಗಳೂರು : ಅಜ್ಜಂಪುರ ಜಿಲ್ಲೆಯ ಬಯಲುಸೀಮೆ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆಗಾಗಿ ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರ ಬೆಂಗಾವಲು (Escort) ವಾಹನ ಅಪಘಾತಕ್ಕೀಡಾದ ಘಟನೆ ಅಜ್ಜಂಪುರ ಪಟ್ಟಣದಲ್ಲಿ...

Related Articles

ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಮಲೆನಾಡಿಗೆ ಕಂಟಕ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯದ ೧೦ ಜಿಲ್ಲೆಗಳ ೨೦ ಸಾವಿರಕ್ಕೂ ಅಧಿಕ ಚದರ ಕಿಲೋ...

ಅಂಗಾಂಗ ದಾನ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿ

ಚಿಕ್ಕಮಗಳೂರು: ಅಂಗಾಂಗ ದಾನ ಮಾಡಿ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ ಎಂದು ನಗರಸಭೆ ಪೌರಾಯುಕ್ತ...

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪ...

ಫಸಲ್ ಬಿಮಾ ನೋಂದಣಿ ಹೆಚ್ಚಿಸಲು ಜಿಲ್ಲಾಧಿಕಾರಿ ನಿರ್ದೇಶನ

ಚಿಕ್ಕಮಗಳೂರು: ಫಸಲ್ ಬಿಮಾ ಯೋಜನೆಯಡಿ ನೋಂದಣಿ ಕಡಿಮೆಯಾಗಿದ್ದು, ತಕ್ಷಣ ಅಗತ್ಯ ಪ್ರಚಾರ ಕೈಗೊಂಡು ರೈತರ ಮನವೊಲಿಸಿ...