ಚಿಕ್ಕಮಗಳೂರು: ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸೌಲಭ್ಯ ವಿತರಣೆಯಲ್ಲಿ ಆಗು ತ್ತಿರುವ ವಿಳಂಬ ಮತ್ತು ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ ದ ಪದಾಧಿಕಾರಿಗಳು ಬುಧವಾರ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿ ದರು.
ಈ ಕುರಿತು ಮಾತನಾಡಿದ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ವಸಂತ್ಕುಮಾರ್ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಫಲಾನುಭವಿ ಕಾರ್ಮಿಕರು ಹತ್ತಾರು ಸ ಮಸ್ಯೆಗಳನ್ನು ಎದುರಿಸುತ್ತಿದ್ದು ಶೈಕ್ಷಣಿಕ, ಸ್ವಾಭಾವಿಕ ಮರಣ ಮತ್ತು ಮದುವೆ ಧನಸಹಾಯ ಸೇರಿದಂತೆ ವಿ ವಿಧ ಸೌಲಭ್ಯ ನೀಡುವಲ್ಲಿ ವಿಳಂಭ ನೀತಿ ಅನುಸರಿಸುತ್ತಿದೆ ಎಂದರು.
ದೈನಂದಿನ ದುಡಿಮೆಯ ಹಿನ್ನೆಲೆಯಲ್ಲಿ ಒಂದೂರಿನಿಂದ ಮತ್ತೊಂದು ಊರಿಗೆ ವಲಸೆ ಬರುವ ಕಟ್ಟಡ ಕಾರ್ಮಿಕರು ಉಳಿದುಕೊಳ್ಳಲು ತಾತ್ಕಾಲಿಕ ವಸತಿ ಸಮುಚ್ಚಯ ನಿರ್ಮಿಸಲು ಕಲ್ಯಾಣ ಮಂಡಳಿಯು ಮುಂ ದಾಗಿದೆ. ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ವಸತಿ ಅತ್ಯಗತ್ಯವಾಗಿ ಬೇಕೆಂಬುದರಲ್ಲಿ ಸಹಮತವಿದೆ. ಆದರೆ ಈ ವ್ಯವಸ್ಥೆ ಎಲ್ಲಾ ಕಾರ್ಮಿಕರಿಗೂ ಅಗತ್ಯವಾಗಿ ಮಾಡಿಕೊಡಬೇಕು ಎಂದರು.
ಈ ಸಂಬಂಧ ರಾಜ್ಯಸರ್ಕಾರ ಟ್ರಾನ್ಸಿಸ್ಟ್ ಮನೆಗಳನ್ನು ನಿರ್ಮಿಸುವುದು ಸೂಕ್ತ. ಕಾರ್ಮಿಕರಿಗೆ ಉಪ ಯೋಗವಾಗುವ ಬದಲು, ಇದರ ನಿರ್ವಹಣೆಯೇ ಮಂಡಳಿಗೆ ಹೊರೆಯಾಗುವ ಅಪಾಯವಿದೆ. ಕಲ್ಯಾಣ ಮಂಡಳಿಯ ಇಂತಹ ಹಲವು ಯೋಜನೆಗಳಿಗೆ ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿ ಸುಮಾರು ೨ ಸಾವಿರ ಕೋಟಿ ಬಳಕೆ ಮಾಡಲು ಹೊರಟಿರುವ ತೀರ್ಮಾನ ಕೈಬೀಡಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರ ಕಲ್ಯಾಣ ಮಂಡಳಿಯು ನೈಜವಾಗಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸು ವಂಥಹ ಕಲ್ಯಾಣ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಆದ್ಯತೆ ನೀಡಿ ಪರಿಣಾಮಕಾರಿಯಾಗಿ ಜಾರಿ ಮಾಡು ವಂತೆ ನಿರ್ದೇಶನ ನೀಡಬೇಕು. ಮತ್ತು ಪ್ರೊಕ್ಯೂರ್ಮೆಂಟ್ ಆಧಾರಿತ ಖರೀದಿ ಯೋಜನೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರ ಮೂಲ ಬೇಡಿಕೆಗಳಾದ ಹೈಕೋರ್ಟಿನ ತೀರ್ಪಿನಂತೆ ಶೈಕ್ಷಣಿಕ ಧನಸಹಾಯ ಪಾವತಿಸ ಬೇಕು. ನೋಂದಣಿ ಹಾಗೂ ನವೀಕರಣ ಸಮಸ್ಯೆಗಳು ಇತ್ಯರ್ಥವಾಗಬೇಕು. ಬಾಕಿ ಅರ್ಜಿಗಳು ವಿಲೇವಾರಿ ಆಗಬೇಕು. ಪಿಂಚಣಿ ಅರ್ಜಿಗಳಿಗೆ ಹಣ ಫಾವತಿಸಬೇಕು. ಮನೆ ನಿರ್ಮಿಸಲು ೫ ಲಕ್ಷ ರೂ. ಧನ ಸಹಾಯ ನೀಡಬೇಕು. ವೈದ್ಯಕೀಯ ನೆರವು ಹೆಚ್ಚಿಸಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಜಯಕುಮಾರ್, ತಾಲ್ಲೂಕು ಉಪಾಧ್ಯಕ್ಷರಾದ ಸಿ.ಸಿ.ಮಂಜೇಗೌಡ, ಕೆ.ಕುಪ್ಪನ್, ಸದಸ್ಯ ಚಂದ್ರಚಾರ್ ಉಪಸ್ಥಿತರಿದ್ದರು.
Appeal to curb the wasteful spending of the Labour Board
Leave a comment