Home namma chikmagalur chikamagalur ನೋಡುಗರ ಮನ ಸೂರೆಗೊಂಡ ಕಲಾ ಉತ್ಸವ
chikamagalurHomeLatest Newsnamma chikmagalur

ನೋಡುಗರ ಮನ ಸೂರೆಗೊಂಡ ಕಲಾ ಉತ್ಸವ

Share
Share

ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಶ್ರೀರಂಗರಾಮ್ ಆರ್ಟ್ಸ್ ಫೌಂಡೇಶನ್ ನಿಂದ ಭಾನುವಾರ ಸಂಜೆ ನಡೆದ ವಾರ್ಷಿಕ ಕಲಾ ಉತ್ಸವ ನೋಡುಗರ ಮನ ಸೂರೆಗೊಂಡಿತು.

ಶ್ರೀರಂಗರಾಮ್ ಆರ್ಟ್ಸ್ ಫೌಂಡೇಶನ್ ನ ಕಲಾವಿದರು ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರು ಉತ್ಸವದಲ್ಲಿ ಪಾಲ್ಗೊಂಡು ಸಂಗೀತದ ರಸಧೌತಣ ವನ್ನು ಪ್ರೇಕ್ಷಕರಿಗೆ ಉಣಬಡಿಸಿದರು.

ಸುಗಮ ಸಂಗೀತದೊಂದಿಗೆ ಉತ್ಸವಕ್ಕೆ ನಾಂದಿ ಹಾಡಿದ ಸಂಸ್ಥೆಯ ಸಂಸ್ಥಾಪಕಿ ಡಾ,ವಿದ್ಯಾಲಕ್ಷ್ಮಿ ಮತ್ತು ಗಾಯಕ ಕಿರಣ್ ತಂಡ ಪುರಂದರ ದಾಸರ ಗಜವದನ ಬೇಡುವೆ ಗೌರಿ ತನಯ ಕೃತಿಯೊಂದಿಗೆ ಗಾನಯಾನವನ್ನು ಆರಂಭಿಸಿ ಸಿ.ಅಶ್ವತ್ ಅವರ ಕಾಣದ ಕಡಲಿಗೆ ಹಂಬಲಿಸಿದೆ ಮನ, ಸಂತ ಶಿಶುನಾಳ ಶರೀಫರ ಕೋಡಗನ ಕೋಳಿ ನುಂಗಿತ್ತ, ಭಕ್ತಿ ಭಂಡಾರಿ ಬಸವಣ್ಣನವರ ವಚನ ಉಳ್ಳ ವರು ಶಿವಾಲಯ ಮಾಡುವರು ನಾನೇನ ಮಾಡಲಿ ಬಡವನಯ್ಯ ಕೃತಿಗಳನ್ನು ಸು ಶ್ರಾವ್ಯವಾಗಿ ಹಾಡುವ ಮೂಲಕ ಸಭಿಕರ ಮನ ಗೆದ್ದರು.

ನಂತರ ಡಾ,ವಿದ್ಯಾಲಕ್ಷ್ಮಿ ಅವರ ಶಿಷ್ಯರು ಭರತನಾಟ್ಯದ ಆರಂಭಿಕ ಹಂತದ ಪಾಠಗಳನ್ನು, ನೃತ್ಯದ ವಿವಿಧ ಮುದ್ರೆ, ವಿವಿಧ ಭಂಗಿಗಳನ್ನು ನೋಡುಗರೆದುರು ಸಮರ್ಥವಾಗಿ ಪ್ರಸ್ತುತಪಡಿಸಿದರು, ಈ ವೇಳೆ ಡಾ,ವಿದ್ಯಾಲಕ್ಷ್ಮಿ ಅವರ ಕಂಠಸಿರಿ ಯಲ್ಲಿ ಮೂಡಿ ಬಂದ ನಟುವಾಂಗ, ಅವರ ಶಿಷ್ಯರಿಂದ ನಡೆದ ತಿಲ್ಲಾನ, ನೃತ್ಯಗಳು ಗಮನ ಸೆಳೆದವು.

ಇದೇ ವೇಳೆ ಬೆಂಗಳೂರಿನ ನೂಪುರ ಆರ್ಟ್ಸ್ ಸಂಸ್ಥೆಯ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಶ್ರೀಹರಿ, ಚೇತನ, ಶ್ರೀಶ, ದೀಪಿಕಾ ಲುಂಬ ಅವರ ತಂಡದಿಂದ ನಡೆದ ಕಥಕ್ ನೃತ್ಯ ನೋಡುಗರನ್ನು ಬಾವಪರವಶ ಗೊಳಿಸಿತು.

ಗಣೇಶ ಸ್ತುತಿಯೊಂದಿಗೆ ನೃತ್ಯ ಆರಂಭಿಸಿದ ಕಲಾವಿದರು ಕ್ರಮವಾಗಿ ನಾಗೇಂದ್ರ ಹಾರಾಯ ಮಹೇಶ್ವರಾಯ ಶಿವಾಂಜಲಿ, ರಾಧಾಕೃಷ್ಣರ ರಾಸಲೀಲೆಯ ನೃತ್ಯಗಳನ್ನು ತನ್ಮಯರಾಗಿ ಅಭಿನಯಿಸುವ ಮೂಲಕ ಕಲಾಮಂದಿರದಲ್ಲಿ ಭಕ್ತಿಯ ತರಂಗಗಳನ್ನೆಬ್ಬಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷ ಡಿ.ಎಚ್.ನಟರಾಜ್ ಆಧುನಿಕ ಕವಿಗಳು ರಚಿಸಿರುವ ಕವಿತೆಗಳಿಗೆ ರಾಗ ಸಂಯೋಜಿಸಿ ಹಾಡುವ ಪದ್ಧತಿಯೇ ಸುಗಮಸಂಗೀತ, ನಮ್ಮಲ್ಲಿ ಪ್ರಾಚೀನ ಕಾಲದಿಂದಲೂ ಕಾವ್ಯಗಳನ್ನು ಹಾಡುವ ಪರಂಪರೆ ಬೆಳೆದು ಬಂದಿದೆ. ಗಮಕ ಕಲೆ ಅದಕ್ಕೊಂದು ಸಾಕ್ಷಿ. ಸುಗಮ ಸಂಗೀತಕ್ಕೆ ಸುಮಾರು ಐವತ್ತು ವರ್ಷಗಳ ಇತಿಹಾಸವಿದೆ ಎಂದರು.

ನಮ್ಮೂರಿನವರೇ ಆದ ಡಾ.ವಿದ್ಯಾ ಲಕ್ಷ್ಮೀ ಅವರು ೧೩ ವರ್ಷಗಳ ಹಿಂದೆಯೇ ರಂಗರಾಮ್ ಆರ್ಟ್ಸ್ ಫೌಂಡೇಶನ್ ಸಂಸ್ಥೆ ಯನ್ನು ಆರಂಭಿಸಿ ಶಾಸ್ತ್ರೀಯ ಕಲೆಯಾದ ಭರತನಾಟ್ಯವನ್ನು ಕಲಿಸುತ್ತಿರುವುದು ಅಭಿನಂದನೀಯ. ಇಂಜಿನಿಯರಿಂಗ್ ವಿದ್ಯಾರ್ಥಿಯಾದ ಅವರು ಆಸಕ್ತಿಯಿಂದ ಭರತನಾಟ್ಯ ಕಲೆಯನ್ನು ತಾವೂ ಕಲಿತು

ಇತರರಿಗೂ ಕಲಿಸುತ್ತಾ ಭರತನಾಟ್ಯದಲ್ಲಿ ಸಂಶೋಧನೆ ನಡೆಸಿ ಪಿಎಚ್.,ಡಿ ಪದವಿ ಪಡೆದಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ಸಾಹಿತಿ ಡಾ. ಬೆಳವಾಡಿ ಮಂಜುನಾಥ ಮಾತನಾಡಿ ಭಾರತೀಯ ಲಲಿತ ಕಲೆಗಳಿಗೆ ವಿಶ್ವದಲ್ಲೇ ಮಾನ್ಯತೆ ಇದೆ. ಅದರ ಪ್ರಾಚೀನತೆ ಮತ್ತು ವೈವಿಧ್ಯತೆ ವಿಶೇಷವಾದುದು. ದೇಶೀಯ ರಾಜರುಗಳು ನೀಡಿದ ಪ್ರೋತ್ಸಾಹ ದೇವಾಲಯಗಳಲ್ಲಿ ಸೇವೆ ಎಂಬ ಪರಿಕಲ್ಪನೆಯಲ್ಲಿ ಬೆಳೆದು ಬಂದ ಕಲೆ. ಕೇವಲ ಮನರಂಜನೆಯ ಮಾಧ್ಯಮವಾಗದೆ ಶಾಸ್ತ್ರೀಯ ಪ್ರಧಾನವಾದುದು. ಗುರುವಿನ ಸಾನ್ನಿಧ್ಯದಲ್ಲಿ ನಿರಂತರ ಅಭ್ಯಾಸದಿಂದ ಮಾತ್ರ ಸಿದ್ದಿಸುವಂತ ವಿದ್ಯೆ. ಭರತನಾಟ್ಯ ದಕ್ಷಿಣ ಭಾರತದ ಪ್ರಕಾರವಾದರೆ, ಕಥಕ್ ಹಿಂದೂಸ್ತಾನಿ ಸಂಗೀತವನ್ನು ಆಧರಿಸಿದ ಉತ್ತರಭಾರತದ ವಿಶಿಷ್ಟ ಎಂದರು.

ಶ್ರೀ ರಂಗರಾಮ್ ಆರ್ಟ್ಸ್ ಫೌಂಡೇಶನ್ ನ ಸಂಸ್ಥಾಪಕಿ ಡಾ, ವಿದ್ಯಾಲಕ್ಷ್ಮಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಸಂಸ್ಥೆಯ ಮುಖ್ಯಸ್ಥ ಸುರೇಶ್, ಗುರುಪ್ರಸಾದ್, ಲಕ್ಷ್ಮೀಬಾಯಿ ಉಪಸ್ಥಿತರಿದ್ದರು.

An art festival that captivated the audience

 

Share

Leave a comment

Leave a Reply

Your email address will not be published. Required fields are marked *

Don't Miss

ಚಿಕ್ಕಮಗಳೂರು ತಾಲೂಕು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೆ ಆಗ್ರಹ

ಚಿಕ್ಕಮಗಳೂರು: ಈ ಬಾರಿಯ ಮುಂಗಾರು ಅವಧಿಯಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಕೃಷಿ, ತೋಟಗಾರಿಕೆ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು...

ಕಡೂರು ಬಸ್ ನಿಲ್ದಾಣದಲ್ಲಿ 50 ಗ್ರಾಂ ತೂಕದ ಚಿನ್ನದ ಸರ ಕಳ್ಳತನ

ಕಡೂರು: ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗ್ಯಾಂಗ್ ಒಂದು, ಬಸ್ ಹತ್ತುವ ವೇಳೆ ಮಹಿಳೆಯ ಗಮನ ಬೇರೆಡೆ ಸೆಳೆದು ಕುತ್ತಿಗೆಯಲ್ಲಿದ್ದ ಬರೋಬ್ಬರಿ 50 ಗ್ರಾಂ ತೂಕದ ಚಿನ್ನದ ಸರವನ್ನು ಕ್ಷಣಾರ್ಧದಲ್ಲಿ ಎಗರಿಸಿ...

Related Articles

ಕೋಟ್ಯಂತರ ರೂಪಾಯಿ ವಂಚಿಸಿದ ನಕಲಿ ಲೇಡಿ ಪಿಎಸ್‌ಐ ಬಂಧನ

ಚಿಕ್ಕಮಗಳೂರು: ತಾನು ಬೆಂಗಳೂರಿನ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎಂದು ನಂಬಿಸಿ, ಚಿನ್ನ, ಹಣ, ಮೊಬೈಲ್ ಹಾಗೂ ಕಾರು...

ನಲಪಾಡ್ ಹೇಳಿಕೆ ಖಂಡಿಸಿ ಜೆಡಿಎಸ್ ಅಲ್ಪಸಂಖ್ಯಾತ ಘಟಕ ಆಕ್ರೋಶ

ಚಿಕ್ಕಮಗಳೂರು: ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯ ಯುವ ಘಟಕದ...

ಮಳಲೂರು ಏತ ನೀರಾವರಿ ಯೋಜನೆ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಮಳಲೂರು ಏತ ನೀರಾವರಿ ಅನುಷ್ಠಾನ ಮತ್ತು ಅರಸನ ನಾಲೆ ಪುನಶ್ಚೇತನ ಯೋಜನೆಗಳ ಕಾಮಗಾರಿಗಳಿಗೆ ಉಂಟಾಗಿರುವ...

2ಬಿ ಮೀಸಲಾತಿ ಮರುಸ್ಥಾಪನೆಗೆ ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಚಿಕ್ಕಮಗಳೂರು: ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇ.4ರಷ್ಟು 2ಬಿ ಮೀಸಲಾತಿಯನ್ನು ಮರುಸ್ಥಾಪಿಸಲು ರಾಜ್ಯ ಸರ್ಕಾರ ಕೂಡಲೇ...