Home namma chikmagalur chikamagalur ‘ಫಸ್ಟ್ ಬ್ಯಾಂಕ್ ರಾಜು’ ಖ್ಯಾತಿಯ ನಟನ ರೆಸಾರ್ಟ್‌ಗೆ ಒಂಟಿ ಸಲಗವೊಂದು ಲಗ್ಗೆ
chikamagalurHomeLatest Newsnamma chikmagalur

‘ಫಸ್ಟ್ ಬ್ಯಾಂಕ್ ರಾಜು’ ಖ್ಯಾತಿಯ ನಟನ ರೆಸಾರ್ಟ್‌ಗೆ ಒಂಟಿ ಸಲಗವೊಂದು ಲಗ್ಗೆ

Share
Share

ಮೂಡಿಗೆರೆ: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿರುವ ‘ಫಸ್ಟ್ ಬ್ಯಾಂಕ್ ರಾಜು’ ಖ್ಯಾತಿಯ ನಟ ಗುರುನಂದನ್ ಅವರ ರೆಸಾರ್ಟ್‌ಗೆ ಒಂಟಿ ಸಲಗವೊಂದು ಲಗ್ಗೆ ಇಟ್ಟಿದೆ.

ರೆಸಾರ್ಟ್ ಕಾರಿಡಾರ್‌ನಲ್ಲಿ ರಾಜಾರೋಷವಾಗಿ ಓಡಾಡಿರುವ ಆನೆ, ಬಿರು ಬೇಸಿಗೆಯ ದಾಹಕ್ಕೆ ದಣಿವಾರಿಸಿಕೊಳ್ಳಲು ಈಜುಕೊಳದ ನೀರನ್ನೇ ಕುಡಿದು ಲಾನ್ ಮೇಲೆ ಓಡಾಟ ನಡೆಸಿರುವ ದೃಶ್ಯಗಳು ಅಲ್ಲಿನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಪ್ರತಿ ವರ್ಷ ಬೇಸಿಗೆಯ ಅವಧಿಯಲ್ಲಿ ಈ ಭಾಗಕ್ಕೆ ಕಾಡಾನೆಗಳ ಕಾಟ ಹೆಚ್ಚಾಗುತ್ತಿದ್ದು, ಒಮ್ಮೊಮ್ಮೆ 20 ರಿಂದ 30 ಆನೆಗಳ ಹಿಂಡು ಬಂದು ತೋಟ ಮತ್ತು ಮನೆಗಳಿಗೆ ಹಾನಿ ಮಾಡುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಡಾನೆಗಳ ಹಾವಳಿಯಿಂದ ಸ್ಥಳೀಯ ನಿವಾಸಿಗಳು ಮತ್ತು ಕೃಷಿಕರು ನಿರಂತರವಾಗಿ ತೊಂದರೆ ಅನುಭವಿಸುತ್ತಿದ್ದರೂ ಅಧಿಕಾರಿಗಳು ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂಬ ದೂರು ಕೇಳಿ ಬಂದಿದೆ.

ಆನೆಗಳ ದಂಡು ಪದೇ ಪದೇ ಗ್ರಾಮಕ್ಕೆ ನುಗ್ಗುತ್ತಿರುವುದರಿಂದ ಜನರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಎದುರಾಗಿದೆ. ವನ್ಯಜೀವಿಗಳ ಹಾವಳಿ ತಡೆಯಲು ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

A lone wolf attacks the resort of the actor of ‘First Bank Raju’ fame

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧ ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ’ರಾಷ್ಟ್ರೀಯ ಲೋಕ್ ಅದಾಲತ್’ ಹಮ್ಮಿಕೊಳ್ಳಲಾಗಿದೆ ಎಂದು ಗೌ.ಪ್ರಧಾನ ಜಿಲ್ಲಾ...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ ಸಂಚಾರ) ಬಂದ ಕಾರೊಂದು ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ದುಡುಕುತನದಿಂದ ಡಿಕ್ಕಿ ಹೊಡೆದ ಪರಿಣಾಮ...

Related Articles

ಅಮೃತ್ 2.0 ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ

ಚಿಕ್ಕಮಗಳೂರು: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಮೃತ್ 2.0 ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಕುಡಿಯುವ ನೀರಿನ...

ವಿಕಲಚೇತನ ವ್ಯಕ್ತಿಯ ₹8 ಲಕ್ಷ ಬ್ಯಾಂಕ್ ಸಾಲ ಕೇವಲ ₹15,000 ಕ್ಕೆ ಇತ್ಯರ್ಥ

ಚಿಕ್ಕಮಗಳೂರು:  ಇಲ್ಲಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಮ್ಮಿಕೊಂಡಿದ್ದ ಮೆಗಾ ಲೋಕ ಅದಾಲತ್‌ನಲ್ಲಿ ನ್ಯಾಯಾಂಗದ ವಿಶೇಷ...

ಎಟಿಎಂ ಕಾರ್ಡ್ ಬದಲಿಸಿ ₹3.09 ಲಕ್ಷ ವಂಚನೆ

ಕಡೂರು: ಪಟ್ಟಣದ ಜೈನ್ ಟೆಂಪಲ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹಣ ಹಿಂಪಡೆಯಲು ಯತ್ನಿಸುತ್ತಿದ್ದ ವೇಳೆ...

ಕೆಪಿಟಿಸಿಎಲ್ ಸಿಎಸ್‌ಆರ್ ಅನುದಾನ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಕಣ್ಣಾವಲಿಗೆ ನೆರವು

ಚಿಕ್ಕಮಗಳೂರು: ಸರ್ಕಾರದ ಅನುದಾನದ ಕೊರತೆ ನಡುವೆ ಕೆಪಿಟಿಸಿಎಲ್ ಸಿಎಸ್‌ಆರ್ (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ) ಅನುದಾನ...