Home Crime News ರಿಪೇರಿಗೆ ಬಿಟ್ಟಿದ್ದ ₹4.80 ಲಕ್ಷ ಮೌಲ್ಯದ ಅಶೋಕ್ ಲೇಲ್ಯಾಂಡ್ ವಾಹನ ಕಳವು
Crime NewsHomeKadurLatest Newsnamma chikmagalur

ರಿಪೇರಿಗೆ ಬಿಟ್ಟಿದ್ದ ₹4.80 ಲಕ್ಷ ಮೌಲ್ಯದ ಅಶೋಕ್ ಲೇಲ್ಯಾಂಡ್ ವಾಹನ ಕಳವು

Share
Share

ಚಿಕ್ಕಮಗಳೂರು: ಕಡೂರು ಪಟ್ಟಣದ ಆಟೋ ಡೀಸೆಲ್ ವರ್ಕ್‌ಶಾಪ್‌ನಲ್ಲಿ ರಿಪೇರಿಗಾಗಿ ಬಿಟ್ಟಿದ್ದ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನವನ್ನು ಕಳ್ಳರು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಕಳುವಾದ ವಾಹನದ ಮೌಲ್ಯ ಅಂದಾಜು ₹4.80 ಲಕ್ಷ ಎಂದು ತಿಳಿದುಬಂದಿದೆ. ಈ ಸಂಬಂಧ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರಿನ ಟಿಪ್ಪು ನಗರದ ನಿವಾಸಿ ಸಿಕಂದರ್ ಆಲಿ ಎಂಬುವರು ತಮ್ಮ ಜೀವನೋಪಾಯಕ್ಕಾಗಿ ಕಳೆದ ಐದು ವರ್ಷಗಳಿಂದ ಕೆಎ 18 ಸಿ 5909 ನೋಂದಣಿ ಸಂಖ್ಯೆಯ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನವನ್ನು ಚಾಲನೆ ಮಾಡುತ್ತಿದ್ದರು. ವಾಹನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 23ರಂದು ಕಡೂರಿನ ಜಿಯಾವುಲ್ಲಾ ಎಂಬುವರಿಗೆ ಸೇರಿದ ಕೆ.ಆರ್. ಆಟೋ ಡೀಸೆಲ್ ವರ್ಕ್‌ಶಾಪ್‌ನಲ್ಲಿ ರಿಪೇರಿಗಾಗಿ ಬಿಟ್ಟಿದ್ದರು.

ವಾಹನದ ದುರಸ್ತಿ ಕಾರ್ಯ ಪೂರ್ಣಗೊಂಡ ಬಳಿಕ ಅಕ್ಟೋಬರ್ 8ರಂದು ರಾತ್ರಿ 8 ಗಂಟೆಗೆ ವರ್ಕ್‌ಶಾಪ್ ಮುಂಭಾಗದಲ್ಲಿ ನಿಲ್ಲಿಸಿ ಹೋಗಲಾಗಿತ್ತು. ಮರುದಿನ ಅಂದರೆ ಅಕ್ಟೋಬರ್ 9ರಂದು ಬೆಳಿಗ್ಗೆ 6 ಗಂಟೆಗೆ ಪರಿಶೀಲಿಸಿದಾಗ ವಾಹನ ನಿಲ್ಲಿಸಿದ್ದ ಸ್ಥಳದಲ್ಲಿ ಕಾಣಿಸಿರಲಿಲ್ಲ. ಯಾರೋ ಕಳ್ಳರು ವಾಹನವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ವರ್ಕ್‌ಶಾಪ್‌ನವರು ವಾಹನದ ಮಾಲೀಕರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದ ತಕ್ಷಣ ಚಿಕ್ಕಮಗಳೂರಿನಿಂದ ಕಡೂರಿಗೆ ಬಂದ ಸಿಕಂದರ್ ಆಲಿ, ವರ್ಕ್‌ಶಾಪ್ ಮಾಲೀಕ ಜಿಯಾವುಲ್ಲಾ ಹಾಗೂ ಅಲ್ಲಿನ ಸಿಬ್ಬಂದಿ ಸೈಯದ್ ಅಜರ್ ಅವರೊಂದಿಗೆ ಸೇರಿ ಕಡೂರು, ಬೀರೂರು ಮತ್ತು ಬಾಣಾವರ ಸುತ್ತಮುತ್ತ ವಾಹನಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಆದರೂ ವಾಹನ ಪತ್ತೆಯಾಗದ ಹಿನ್ನೆಲೆಯಲ್ಲಿ ಅಕ್ಟೋಬರ್ 11ರಂದು ಬೀರೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಕಳುವಾದ ವಾಹನವು ಕ್ರೀಮ್ ಬಣ್ಣದ್ದಾಗಿದ್ದು, ಅದರ ಮೇಲೆ ‘ಕೆಜಿಎನ್’ ಎಂಬ ನಾಮಫಲಕವಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರನ್ನು ಸ್ವೀಕರಿಸಿದ ಪೊಲೀಸರು ಪ್ರಕರಣ ಸಂಖ್ಯೆ 157/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 303(2)ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Ashok Leyland vehicle worth ₹4.80 lakh stolen after being left for repairs.

Share

Leave a comment

Leave a Reply

Your email address will not be published. Required fields are marked *

Don't Miss

ಭದ್ರೆಯ ಕೃಪೆಯಿಂದ ಕೋಡಿಬಿದ್ದ ಕುಕ್ಕಸಮುದ್ರ ಕೆರೆ

ಚಿಕ್ಕಮಗಳೂರು: ಭದ್ರಾ ಮೇಲ್ದಂಡೆಯ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಹರಿದು ಬಂದ ಭದ್ರಾ ನೀರು ಕಡೂರು ತಾಲೂಕಿನ ಗಡಿಭಾಗದ ಬಯಲುಸೀಮೆ ರೈತರಿಗೆ ಪುನರ್ಜನ್ಮ ನೀಡಿದೆ. ಅಂತರಘಟ್ಟೆ ಕೆರೆ, ಕಲ್ಕೆರೆಯ ಕುಕ್ಕಸಮುದ್ರ ಕೆರೆಗಳು...

ಮಹೇಶ್ ಜೋಷಿಗೆ ಹಿನ್ನೆಡೆ-ಮತ್ತೆ ಕೋರ್ಟ್ ನಲ್ಲಿ ಹೋರಾಟಕ್ಕೆ ಜಯ

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನಡೆದಿದೆ ಎನ್ನಲಾದ ಆಡಳಿತಾತ್ಮಕ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಕುರಿತು ಹಿರಿಯ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಹಾಗೂ ಪರಿಷತ್‌ನ ಸದಸ್ಯರು ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರ...

Related Articles

ತರೀಕೆರೆ ಡಿ. ಸುರೇಶ್‌ಗೆ ಮೈಸೂರು ದಸರಾ ಗೌರವ

ತರೀಕೆರೆ: ತಮ್ಮ ವಿಶಿಷ್ಟ ಕುಂಚದ ಕಲಾ ಶೈಲಿಯ ಮೂಲಕ ಕಲಾ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿರುವ ತರೀಕೆರೆಯ...

ಪ್ರಧಾನ ಮಂತ್ರಿ ವಿಕಸಿತ ಭಾರತ ಸಂಕಲ್ಪದಡಿ ತರೀಕೆರೆ ಅಭಿವೃದ್ಧಿಗೆ ಆದ್ಯತೆ

ತರೀಕೆರೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಸಂಕಲ್ಪದಂತೆ ತರೀಕೆರೆ ಪಟ್ಟಣದ ಅಭಿವೃದ್ಧಿಗೆ ಆದ್ಯತೆ...

ಬಾಬಾ ಬುಡನ್ ದರ್ಗಾ ವಿವಾದ: ಪೊಲೀಸರ ‘ಬಿ’ ರಿಪೋರ್ಟ್‌ಗೆ ಆಕ್ಷೇಪ

ಚಿಕ್ಕಮಗಳೂರು: ಚಿಕ್ಕಮಗಳೂರಿನ ಐತಿಹಾಸಿಕ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ನಡೆದಿದೆಯೆನ್ನಲಾದ ಅಕ್ರಮ ಕೃತ್ಯಗಳ...

ಅ. 15ರಂದು ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಜಿಲ್ಲಾ ತಂಡದ ಆಯ್ಕೆ

ಚಿಕ್ಕಮಗಳೂರು: 5ನೇ ಕರ್ನಾಟಕ ರಾಜ್ಯ ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟ–2026 ಹಾಗೂ ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ 2026–27ರಲ್ಲಿ...