Home ಬರಗಾಲದಲ್ಲಿ ಅಧಿಕ ಮಾಸ ! ಶಾಸಕರುಗಳ ಮೂಗಿನ ನೇರಕ್ಕೆ.ಮೀಸಲಾತಿ ?
HomeLatest Newsnamma chikmagalurPolitical News

ಬರಗಾಲದಲ್ಲಿ ಅಧಿಕ ಮಾಸ ! ಶಾಸಕರುಗಳ ಮೂಗಿನ ನೇರಕ್ಕೆ.ಮೀಸಲಾತಿ ?

Share
Share

ಹೊಸ ಮುಖಗಳಿಗೆ ಛಾನ್ನ್.!!

ಚಿಕ್ಕಮಗಳೂರು; ಜಿಲ್ಲಾದ್ಯಂತ ಬರದಿಂದ ಜನತೆ ತತ್ತರಿಸಿದ್ದಾರೆ.ಮಲೆನಾಡು ಮತ್ತು ಬಯಲು ನಾಡು ಎಂಬುದು ಬರಗಾಲಕ್ಕೆ ಸಿಕ್ಕಿ ಜನರಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಒಂದು ಕಡೆ ಮಳೆ ಬಾರದೇ ತತ್ತರಿಸುತ್ತಿರುವಾಗ ಬಿಸಿಲು ದಿನದಿಂದ,ದಿನಕ್ಕೆ ಹೆಚ್ಚಾಗುತ್ತಿದೆ.

ಅಕ್ಟೋಬರ್‌ ತಿಂಗಳಿಗೆ ಇಂತಹ ದುಸ್ಥಿತಿ ಉಂಟಾಗಿರುವಾಗ ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಬಹುದು ಮಲೆನಾಡಿನಲ್ಲಿ ಅಡಿಕೆ, ಕಾಫಿ,ಮೆಣಸು,ಏಲಕ್ಕಿ, ಟೀ,ಇನ್ನಿತರ ವಾಣಿಜ್ಯ ಬೆಳೆಗಳ ಜೊತೆಗೆ ದಿನ ನಿತ್ಯ ಉಪಯೋಗಿಸುವ ಭತ್ತ,ತರಕಾರಿಗಳನ್ನು ಬ್ಯಾಟರಿ ಹಾಕಿ ಹುಡುಕಬೇಕಾಗಿದೆ.ಇನ್ನೂ ಬಯಲು ಸೀಮೆಯಲ್ಲಿ ಬೆಳೆದು ಬೆಳೆ ಕೊಡುತ್ತಿದ್ದ ಅಡಿಕೆ ಮತ್ತು ಮೆಣಸು ಇಲ್ಲ.

ಇರುವ ಅಡಿಕೆ ಗಿಡಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ನಲ್ಲಿ ನೀರು ತೋರುತ್ತಿದ್ದಾರೆ ಆದರೆ ಬೋರ್ ವೆಲ್ ಗಳು ಬತ್ತಿ ನಿಂತಿವೆ.ಹೀಗಾಗಿ ತೋಟಗಳು ಒಣಗುತ್ತಿವೆ. ಈ ಬಾರಿ ತೋಟ ಉಳಿದರೆ ಪವಾಡ ಎಂದು ಅನುಭವಿಗಳು ಹೇಳುತ್ತಾರೆ. ಇನ್ನೂ ಈರುಳ್ಳಿ ಕಣ್ಣೀರು ತರಿಸಿದರೆ ರಾಗಿ,ಜೋಳ, ಮೆಣಸಿನ ಗಿಡಗಳು ಒಣಗಿ ನಿಂತಿವೆ ದನಕರುಗಳಿಗೆ ಮೇವು ನೀರಿಗಾಗಿ ರೈತರು ಮತ್ತು ಜನತೆ ತತ್ತರಿಸಿ ಚಿಂತಿಸ ತೊಡಗಿದ್ದಾರೆ.

ಜಿಲ್ಲಾ ಆಡಳಿತ ಮತ್ತು ಸರ್ಕಾರ ಹೊಸ,ಹೊಸ ಘೋಷಣೆ ಗಳೊಂದಿಗೆ ಡಂಗುರ ಬಾರಿಸುತ್ತಿದೆ.ಮಾನ ಮರ್ಯಾದೆ ಬಿಟ್ಟು ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ತಯಾರಿ ನಡೆಸಿದೆ. ಸರ್ಕಾರ ಚುನಾವಣೆ ನಡೆಸುತ್ತದೆ ಎಂಬುದು ಡೌಟ್ ಮೀಸಲಾತಿ ಅಷ್ಟರ ಮಟ್ಟಿಗೆ ಶಾಸಕರು ಮತ್ತು ಅವರ ಹೆಂಡತಿ ಮಕ್ಕಳ ಮೂಗಿನ ನೇರಕ್ಕೆ ನಿಗಧಿ ಮಾಡಿರುವುದು ಅವರ ಹಿಂದೆ, ಮುಂದೆ ಸುತ್ತಿ ಸಾಕಷ್ಟು ಹಣ ಕಳೆದುಕೊಂಡವರು ಇಡೀ ಶಾಪ ಹಾಕುತ್ತಿದ್ದಾರೆ.ಮೀಸಲಾತಿ ಬದಲಾವಣೆ ಆಗುತ್ತದೆ ಎಂದು ಮೂಗಿಗೆ ತುಪ್ಪ ಸವರಿದವರು ಮತ್ತಷ್ಟು ಹಣ ಖರ್ಚು ಮಾಡಿಸುತಿದ್ದಾರೆ.

ಇದನ್ನೆಲ್ಲಾ ನೋಡಿದರೆ ” ಮೂಗಿಗಿಂತ ಮೂಗುತಿ ಭಾರ”,ಎನ್ನುವ ಪರಿಸ್ಥಿತಿ ಯಲ್ಲಿ ರಾಜಕಾರಣಿಗಳು ದಿಕ್ಕು ತಪ್ಪಿಸುವುದರ ಜೊತೆಗೆ ಜೇಬು ಖಾಲಿ ಮಾಡಿಸುವ ಕ್ಷೀಮ್ ಗಳನ್ನು ಬಿಟ್ ಸಂಕಷ್ಟದ ಸಮಯದಲ್ಲಿ ಮೊದಲು ಕುಡಿಯುವ ನೀರು, ದನಕರಗಳಿಗಸ ಮೇವ ಜೊತೆಗೆ ಜನಸಾಮಾನ್ಯರಿಗೆ ಧವಸ ಧಾನ್ಯಗಳನ್ನು ಒದಗಿಸಲಜ ಆದ್ಯತೆ ನೀಡುವುದು ನೀಡುವುದು ಒಳ್ಳೆಯದು.

Reservation tailored to the whims of MLAs?

Share

Leave a comment

Leave a Reply

Your email address will not be published. Required fields are marked *

Don't Miss

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ

ಚಿಕ್ಕಮಗಳೂರು: ವಿದ್ಯುತ್ ಪೂರೈಕೆಯಲ್ಲಿ ಇತ್ತೀಚೆಗೆ ಉಂಟಾದ ತಾತ್ಕಾಲಿಕ ವ್ಯತ್ಯಯವನ್ನು ದೊಡ್ಡ ಸಮಸ್ಯೆಯಾಗಿ ಬಿಂಬಿಸುವ ಅಗತ್ಯವಿಲ್ಲ. ಮುಂದಿನ ಬೇಸಿಗೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ...

ಕೊಳವೆಬಾವಿ ಕೊರೆಯಲು ಬೇಕಾಬಿಟ್ಟಿ ದರ ನಿಗದಿ ಮಾಡಲು ಅವಕಾಶ ನೀಡಬಾರದು

ಚಿಕ್ಕಮಗಳೂರು: ಬರಗಾಲದ ಸಂದರ್ಭದಲ್ಲಿ ಕೊಳವೆಬಾವಿ ಕೊರೆಯಲು ಬೇಕಾಬಿಟ್ಟಿ ದರ ನಿಗದಿ ಮಾಡಲು ಅವಕಾಶ ನೀಡಬಾರದು. ನಿಯಮಾವಳಿ ರೂಪಿಸಿ ನಿಯಂತ್ರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು....

Related Articles

ಜಿ.ಪಂ.ತಾ.ಪಂ.ಕ್ಷೇತ್ರಗಳ ಮೀಸಲಾತಿ ನಿಗದಿಯಲ್ಲಿಯೂ ರಾಜಕೀಯ ಹಿತಾಸಕ್ತಿಗಳಿಗೆ ಆದ್ಯತೆ

ಕಡೂರು: ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಬದಲು, ಆಡಳಿತಾರೂಢ...

ಬೀಕನಹಳ್ಳಿಯಲ್ಲಿ ಮಹಿಳೆಯ ತಾಳಿಸರ ಕಿತ್ತು ಪರಾರಿ

ಚಿಕ್ಕಮಗಳೂರು:  ನಗರದ ಹೊರವಲಯದ ಬೀಕನಹಳ್ಳಿ ಕೆರೆ ಏರಿಯ ಮೇಲೆ ದನಗಳನ್ನು ಹೊಡೆದುಕೊಂಡು ಬರಲು ತೆರಳಿದ್ದ ಮಹಿಳೆಯೊಬ್ಬರ...

ತರೀಕೆರೆಯಲ್ಲಿ 20 ಕ್ವಿಂಟಾಲ್ ಹಸಿ ಅಡಿಕೆ ಕಳವು

ತರೀಕೆರೆ: ತಾಲೂಕಿನ ದುಗ್ಗಲಾಪುರ ಗ್ರಾಮದ ಅಡಿಕೆ ತೋಟವೊಂದರಿಂದ ಸುಮಾರು 20 ಕ್ವಿಂಟಾಲ್ ಹಸಿ ಅಡಿಕೆಯನ್ನು ಕಳವು...

ತುಂಗಾ ನದಿಯಲ್ಲಿ ಮುಳುಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಶೃಂಗೇರಿ, ಅ. 11: ಪೋಷಕರೊಂದಿಗೆ ನವರಾತ್ರಿ ಪೂಜೆಗೆ ಶೃಂಗೇರಿಗೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತುಂಗಾ ನದಿಯಲ್ಲಿ...