Home namma chikmagalur chikamagalur ಜಿಲ್ಲಾಧಿಕಾರಿಯಿಂದ ಮಳಲೂರು ಏತನೀರಾವರಿ ಸ್ಥಳ ಪರಿಶೀಲನೆ
chikamagalurHomeLatest Newsnamma chikmagalur

ಜಿಲ್ಲಾಧಿಕಾರಿಯಿಂದ ಮಳಲೂರು ಏತನೀರಾವರಿ ಸ್ಥಳ ಪರಿಶೀಲನೆ

Share
Share

ಚಿಕ್ಕಮಗಳೂರು:  ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ತಾಲೂಕಿನ ಮಳಲೂರು ಏತನೀರಾವರಿ ಯೋಜನೆಯ ಕಾಮಗಾರಿಗಳನ್ನು ಸಮಗ್ರವಾಗಿ ಪೂರ್ಣಗೊಳಿಸಲು ಕಾವೇರಿ ನೀರಾವರಿ ನಿಗಮದಿಂದ (ಸಿಎನ್‌ಎನ್‌ಎಲ್) ರೂ.೨೧.೫ ಕೋಟಿ ವೆಚ್ಚದ ನೂತನ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ತಿಳಿಸಿದರು.

ಶುಕ್ರವಾರ ಮಳಲೂರು ಏತನೀರಾವರಿ ಯೋಜನೆಯ ನೀರಾವರಿ ಮೂಲ ಹಾಗೂ ಪೈಪ್‌ಲೈನ್ ಹಾದುಹೋಗುವ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಮಳಲೂರು ಏತನೀರಾವರಿ ಯೋಜನೆ ಪೂರ್ಣಗೊಳಿಸುವಂತೆ ರೈತರಿಂದ ತೀವ್ರ ಬೇಡಿಕೆ ಹಾಗೂ ಪ್ರತಿಭಟನೆಗಳು ನಡೆದಿದ್ದವು. ಈ ಕುರಿತು ಕಳೆದ ತಿಂಗಳ ೨೯ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರೊಂದಿಗೆ ಸಭೆ ನಡೆಸಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗಷ್ಟೇ ವಾಸ್ತವ ಸ್ಥಿತಿ ಮತ್ತು ತಾಂತ್ರಿಕ ತೊಡಕುಗಳು ಸ್ಪಷ್ಟವಾಗುತ್ತವೆ ಎಂಬ ಕಾರಣಕ್ಕೆ ಇಂದು ನೀರಾವರಿ ಮೂಲದಿಂದ ಆರಂಭಿಸಿ ಪೈಪ್‌ಲೈನ್ ಸಾಗುವ ಮಾರ್ಗದುದ್ದಕ್ಕೂ ವೀಕ್ಷಣೆ ನಡೆಸಲಾಗುತ್ತಿದೆ” ಎಂದು ಜಿಲ್ಲಾಧಿಕಾರಿ ಹೇಳಿದರು.

ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸಿದ್ಧಪಡಿಸಿರುವ ರೂ.೨೧.೫ ಕೋಟಿ ಮೊತ್ತದ ನೂತನ ಅಂದಾಜು ಪಟ್ಟಿ ಸಿದ್ದಪಡಿಸಲಾಗಿದೆ. ಅರ್ಧಕ್ಕೆ ನಿಂತಿರುವ ಪಂಪ್‌ಹೌಸ್ ನಿರ್ಮಾಣ ಮತ್ತು ಬಾಕಿ ಉಳಿದಿರುವ ಸಿವಿಲ್ ಕೆಲಸಗಳನ್ನು ಪೂರ್ಣಗೊಳಿಸುವುದು. ಪೈಪ್‌ಲೈನ್ ಲೋಪದೋಷ ದುರಸ್ತಿ: ಹಿಂದೆ ಅಳವಡಿಸಲಾದ ಪೈಪ್‌ಲೈನ್‌ನಲ್ಲಿ ಕಂಡುಬಂದಿರುವ ಸೋರಿಕೆ ಹಾಗೂ ಲೋಪದೋಷಗಳನ್ನು ಸರಿಪಡಿಸುವುದು. ವಿದ್ಯುತ್ ಸಂಪರ್ಕ ಕಲ್ಪಿಸಿ (ಎನರ್ಜೈಸೇಶನ್) ಪ್ರಾಯೋಗಿಕ ನೀರು ಪೂರೈಕೆ (ಟ್ರಯಲ್ ರನ್) ನಡೆಸುವುದು.

ಯೋಜನೆಗಾಗಿ ಜಮೀನು ನೀಡಿದ ರೈತರಿಗೆ ನೀಡಬೇಕಾದ ಭೂಸ್ವಾಧೀನ ಪರಿಹಾರದ ಬೇಡಿಕೆಯನ್ನು ಇತ್ಯರ್ಥಪಡಿಸುವುದು. ಉನ್ನತಾಧಿಕಾರಿಗಳಿಗೆ ವರದಿ ಸಲ್ಲಿಕೆ, ಯೋಜನೆ ಬಹಳ ಹಳೆಯದಾಗಿದ್ದು, ಇದನ್ನು ಅಲ್ಪಸ್ವಲ್ಪ ಸರಿಪಡಿಸುವ ಬದಲು ಸಮಗ್ರವಾಗಿ ಕಾರ್ಯಗತಗೊಳಿಸುವ ಅಗತ್ಯವಿದೆ. ಸಿದ್ಧಪಡಿಸಲಾದ ನೂತನ ಡಿಪಿಆರ್ ರಾಜ್ಯಮಟ್ಟದ ಉನ್ನತಾಧಿಕಾರ ಸಮಿತಿ ಅನುಮೋದನೆಗೆ ಸಲ್ಲಿಕೆಯಾಗಲಿದೆ. ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ (ಒಆ) ನಮ್ಮ ಹಂತದಿಂದಲೂ ಸೂಕ್ತ ಅಭಿಪ್ರಾಯ ಮತ್ತು ಶಿಫಾರಸನ್ನು ಕಳುಹಿಸಿಕೊಡಲಾಗುವುದು” ಎಂದು ಭಂವರ್ ಸಿಂಗ್ ಮೀನಾ ಭರವಸೆ ನೀಡಿದರು.

ಕಳೆದ ಎರಡು ದಶಕಗಳಿಂದ ಈ ಭಾಗದ ರೈತರು ನೀರಾವರಿಗಾಗಿ ಹೋರಾಟ ನಡೆಸುತ್ತಿದ್ದು, ಹಂತ ಹಂತವಾಗಿ ಪರಿಶೀಲಿಸಿ ಶೀಘ್ರವೇ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು (ಂಇಇ), ಇಂಜಿನಿಯರ್‌ಗಳು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

Deputy Commissioner Bhanwar Singh Meena inspects the Malaluru lift irrigation site.

Share

Leave a comment

Leave a Reply

Your email address will not be published. Required fields are marked *

Don't Miss

12 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಜಿಲ್ಲೆಯ 12 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಸಂಘಟನ್ ಸೃಜನ್ ಅಭಿಯಾನ–2 ಅಡಿ ಪ್ರಕ್ರಿಯೆ ಆರಂಭವಾಗಿದೆ. ಬ್ಲಾಕ್...

ಕಳಸದಲ್ಲಿ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷ

ಕಳಸ : ಮನೆಯಂಗಳದಲ್ಲೇ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿ ಸ್ಥಳೀಯರನ್ನು ಬೆಚ್ಚಿಬೀಳಿಸಿದ ಘಟನೆ ಕಳಸ ತಾಲೂಕಿನ ಕಾರ್ಗದ್ದೆ ಗ್ರಾಮದಲ್ಲಿ ನಡೆದಿದೆ. ಸುಮಾರು 14 ಅಡಿ ಉದ್ದದ ಈ ಕಾಳಿಂಗ ಸರ್ಪವು ನಾಗರಹಾವನ್ನೇ...

Related Articles

ಚಿಕ್ಕಮಗಳೂರು ಮೋಟಾರು ವಾಹನ ನಿರೀಕ್ಷಕ ವಿರುದ್ಧ ಎಫ್‌ಐಆರ್

ಚಿಕ್ಕಮಗಳೂರು: ವಾಹನಗಳನ್ನು ಭೌತಿಕವಾಗಿ ಪರಿಶೀಲಿಸದೇ ಫಿಟ್‌ನೆಸ್ ಸರ್ಟಿಫಿಕೇಟ್‌ (FC) ನೀಡಿರುವ ಆರೋಪ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ...

ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಚಿಕ್ಕಮಗಳೂರು: ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಹುದ್ದೆಯ ಕನಸು ಹೊತ್ತು ಕಠಿಣ ಅಭ್ಯಾಸದಲ್ಲಿ ತೊಡಗಿದ್ದ 24 ವರ್ಷದ ಯುವಕನೊಬ್ಬ...

ಮೂರು ಪ್ರತ್ಯೇಕ ಅಪಘಾತ ಪ್ರಕರಣ ದಾಖಲು; ಹಲವರಿಗೆ ಗಾಯ

ಚಿಕ್ಕಮಗಳೂರು: ಚಿಕ್ಕಮಗಳೂರು, ಲಿಂಗದಹಳ್ಳಿ ಹಾಗೂ ಯಗಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ರಸ್ತೆ...

ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಚಿಕ್ಕಮಗಳೂರು: ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ೧೫ ಸಾವಿರ ಮಾಸಿಕ ಗೌರವಧನ ನೀಡುವುದು ಸೇರಿದಂತೆ ವಿವಿಧ ನ್ಯಾಯಯುತ...