Home ಥ್ರೋಬಾಲ್‌ನಲ್ಲಿ ಪ್ರಥಮ: ಮೈಸೂರು ವಿಭಾಗ ಮಟ್ಟಕ್ಕೆ ಎಂ.ಸಿ.ಹಳ್ಳಿ ಸರ್ಕಾರಿ ಶಾಲಾ ಬಾಲಕಿಯರು
HomeLatest Newsnamma chikmagalurTarikere

ಥ್ರೋಬಾಲ್‌ನಲ್ಲಿ ಪ್ರಥಮ: ಮೈಸೂರು ವಿಭಾಗ ಮಟ್ಟಕ್ಕೆ ಎಂ.ಸಿ.ಹಳ್ಳಿ ಸರ್ಕಾರಿ ಶಾಲಾ ಬಾಲಕಿಯರು

Share
Share

ತರೀಕೆರೆ: ತಾಲೂಕಿನ ಎಂ.ಸಿ.ಹಳ್ಳಿಯ ಶ್ರೀ ಲಕ್ಷ್ಮಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು 17ರ ವಯೋಮಾನದ ಜಿಲ್ಲಾಮಟ್ಟದ ಗುಂಪು ಆಟಗಳ ಕ್ರೀಡಾಕೂಟದಲ್ಲಿ ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ 17ರ ವಯೋಮಾನದ ಬಾಲಕಿಯರ ಗುಂಪು ಆಟಗಳ ಜಿಲ್ಲಾಮಟ್ಟದ ಕ್ರೀಡಾಕೂಟವು ಅ.3ರಂದು ಕಡೂರಿನ ಬಿಜಿಎಸ್ ಹೆರಿಟೇಜ್ ಶಾಲೆಯಲ್ಲಿ ನಡೆಯಿತು. ಕ್ರೀಡಾಕೂಟದಲ್ಲಿ ಎಂ.ಸಿ.ಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಅತ್ಯುತ್ತಮ ಪ್ರದರ್ಶನ ನೀಡಿ ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದರು. ಈ ಮೂಲಕ ಸತತವಾಗಿ ನಾಲ್ಕನೇ ಬಾರಿಗೆ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.

ತಂಡದ ಸಾಧಕ ವಿದ್ಯಾರ್ಥಿನಿಯರಾದ ಷಂಷಾದ್, ಅನುಶ್ರೀ, ಆತ್ಮೀಕ, ಭೂಮಿಕಾ, ಭೂಮಿಕಾ ಎನ್., ಅರ್ಪಿತಾ ಲಕ್ಷ್ಮೀ, ಅಭಿನಯ, ಪ್ರಿಯಾಂಕ, ಯಶಸ್ವಿನಿ, ಪುಷ್ಪಾ ಮತ್ತು ಮಧುರ ಅವರನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.

ವಿದ್ಯಾರ್ಥಿನಿಯರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಬಿ.ಪಿ. ಕುಮಾರಸ್ವಾಮಿ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರು, ಹಾಗೂ ಜಿ.ಎಚ್.ಎಸ್. ಹಳಿಯೂರಿನ ದೈಹಿಕ ಶಿಕ್ಷಕರಾದ ಜಿ. ಪರಮೇಶ್ವರಪ್ಪ ತರಬೇತಿ ನೀಡಿದ್ದಾರೆ.

ವಿದ್ಯಾರ್ಥಿನಿಯರ ಸಾಧನೆಯನ್ನು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಹೇಶ್ ಜಿ., ದೈಹಿಕ ಶಿಕ್ಷಣ ಪರಿವೀಕ್ಷಕರಾದ ಪ್ರಸಾದ್ ಆರ್.ಕೆ., ಎಸ್‌ಡಿಎಂಸಿ ಅಧ್ಯಕ್ಷ ಮಹಿನುದ್ದೀನ್, ಸದಸ್ಯರಾದ ಧನಂಜಯ, ಏಳುಮಲೆ, ಕಾರ್ತಿಕ್, ಸುಶೀಲಮ್ಮ, ರಾಮಚಂದ್ರ, ಕುಮಾರ್ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.

ಶಾಲಾ ಸ್ಥಾಪನಾ ಸಮಿತಿ ಅಧ್ಯಕ್ಷ ರಾಮೇಗೌಡ ಎನ್., ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಸದಸ್ಯರು, ಎಂ.ಸಿ.ಹಳ್ಳಿ ಗ್ರಾಮ ಪಂಚಾಯಿತಿ, ಶಾಲೆಯ ಮುಖ್ಯ ಶಿಕ್ಷಕಿ ಬಿ.ಎಂ. ವೀಣಾಬಾಯಿ, ಸಹ ಶಿಕ್ಷಕರಾದ ಅಶೋಕ್ ಕುಮಾರ್, ಅನಿತಾ, ಮೂಡಲಗಿರಿಯಪ್ಪ, ಸುರೇಶ್, ರಾಜಶೇಖರ್, ಸೌಮ್ಯ, ನಂದಿನಿ, ಮುಕುಂದಮ್ಮ, ಬೀಬಿ ಫಾತಿಮಾ, ಅಡುಗೆ ಸಿಬ್ಬಂದಿ, ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ಪೋಷಕರು ವಿದ್ಯಾರ್ಥಿನಿಯರ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಶುಭಾಶಯ ಕೋರಿದ್ದಾರೆ.

First in Throwball: M.C. Halli Government School Girls Advance to Mysuru Divisional Level

Share

Leave a comment

Leave a Reply

Your email address will not be published. Required fields are marked *

Don't Miss

12 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಜಿಲ್ಲೆಯ 12 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಸಂಘಟನ್ ಸೃಜನ್ ಅಭಿಯಾನ–2 ಅಡಿ ಪ್ರಕ್ರಿಯೆ ಆರಂಭವಾಗಿದೆ. ಬ್ಲಾಕ್...

ಕಳಸದಲ್ಲಿ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷ

ಕಳಸ : ಮನೆಯಂಗಳದಲ್ಲೇ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿ ಸ್ಥಳೀಯರನ್ನು ಬೆಚ್ಚಿಬೀಳಿಸಿದ ಘಟನೆ ಕಳಸ ತಾಲೂಕಿನ ಕಾರ್ಗದ್ದೆ ಗ್ರಾಮದಲ್ಲಿ ನಡೆದಿದೆ. ಸುಮಾರು 14 ಅಡಿ ಉದ್ದದ ಈ ಕಾಳಿಂಗ ಸರ್ಪವು ನಾಗರಹಾವನ್ನೇ...

Related Articles

ಚಿಕ್ಕಮಗಳೂರು ಮೋಟಾರು ವಾಹನ ನಿರೀಕ್ಷಕ ವಿರುದ್ಧ ಎಫ್‌ಐಆರ್

ಚಿಕ್ಕಮಗಳೂರು: ವಾಹನಗಳನ್ನು ಭೌತಿಕವಾಗಿ ಪರಿಶೀಲಿಸದೇ ಫಿಟ್‌ನೆಸ್ ಸರ್ಟಿಫಿಕೇಟ್‌ (FC) ನೀಡಿರುವ ಆರೋಪ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ...

ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಚಿಕ್ಕಮಗಳೂರು: ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಹುದ್ದೆಯ ಕನಸು ಹೊತ್ತು ಕಠಿಣ ಅಭ್ಯಾಸದಲ್ಲಿ ತೊಡಗಿದ್ದ 24 ವರ್ಷದ ಯುವಕನೊಬ್ಬ...

ಮೂರು ಪ್ರತ್ಯೇಕ ಅಪಘಾತ ಪ್ರಕರಣ ದಾಖಲು; ಹಲವರಿಗೆ ಗಾಯ

ಚಿಕ್ಕಮಗಳೂರು: ಚಿಕ್ಕಮಗಳೂರು, ಲಿಂಗದಹಳ್ಳಿ ಹಾಗೂ ಯಗಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ರಸ್ತೆ...

ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಚಿಕ್ಕಮಗಳೂರು: ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ೧೫ ಸಾವಿರ ಮಾಸಿಕ ಗೌರವಧನ ನೀಡುವುದು ಸೇರಿದಂತೆ ವಿವಿಧ ನ್ಯಾಯಯುತ...