Home namma chikmagalur chikamagalur ಬಂಟರ ಯಾನೆ ನಾಡವರ ಸಂಘದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ
chikamagalurHomeLatest Newsnamma chikmagalur

ಬಂಟರ ಯಾನೆ ನಾಡವರ ಸಂಘದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

Share
Share

ಚಿಕ್ಕಮಗಳೂರು: ಸಮಾಜದಲ್ಲಿ ದುಡಿದಿದ್ದನ್ನು ಸಮಾಜಕ್ಕೆ ವಿನಿಯೋಗಿಸಿದಾಗ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ಉದ್ಯಮಿ ಕಿಶೋರ್ ಕುಮಾರ್ ಹೆಗ್ಡೆ ಹೇಳಿದರು.

ತಾಲೂಕಿನ ದಂಬದಹಳ್ಳಿ ಬಂಟರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಬಂಟರ ಯಾನೆ ನಾಡವರ ಸಂಘದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಹಾಗೂ ಸಂಘದ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಉಳ್ಳವರು ಸಮಾಜ ಕಟ್ಟುವ ಕೆಲಸ ಮಾಡಬೇಕು. ಗಳಿಸಿದ ಆದಾಯದಲ್ಲಿ ಕಿಂಚಿತ್ತು ಸಮಾಜಕ್ಕೆ ನೀಡಿದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ. ದುಡ್ಡನ್ನು ಚಿನ್ನದ ಗಟ್ಟಿತರ ಯಾರೂ ಕೂಡಿಡಬಾರದು ಅದು ವಿನಿಮಯವಾಗುತ್ತಿರಬೇಕು. ಹಾಗಂತ ಯಾರೂ ದಾನಶೂರ ಕರ್ಣನೂ ಆಗಬಾರದು. ದುಡಿದಿದ್ದರಲ್ಲಿ ಅಲ್ಪಪ್ರಮಾಣದಷ್ಟನ್ನು ಮಾತ್ರ ಸಮಾಜಕ್ಕೆ ಬಳಸಿ ಎಂದು ಸಮುದಾಯದ ಮುಖಂಡರಿಗ ಮನವಿ ಮಾಡಿದರು.

ಎಲ್ಲರೂ ಡಾಕ್ಟರ್, ಎಂಜಿನಿಯರ್, ಬ್ಯಾಂಕರ್‍ಸ್ ಆದರೆ, ದೇಶದಲ್ಲಿಮಿಲಿಟರಿ ಸೇರುವವರು, ಸ್ವ ಉದ್ಯೋಗ ಮಾಡುವವರು ಯಾರು ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಹೆಗ್ಡೆ ಕೇಂದ್ರ ಅಥವಾ ರಾಜ್ಯ ಸರಕಾರ ೧೦೦ ರಲ್ಲಿ ೩ ಜನರಿಗೆ ಮಾತ್ರ ಉದ್ಯೋಗ ನೀಡಲು ಸಾಧ್ಯ. ವಿವಿಧ ಇಲಾಖೆಯಲ್ಲಿ ಶೇ.೨.೮ ರಷ್ಟು ಉದ್ಯೋಗ ನೀಡಬಹುದು.ಇನ್ನೂ ಶೇ.೯೭ ರಷ್ಟು ಜನ ಏನು ಮಾಡಬೇಕು ಎಂದು ಪ್ರಶ್ನಿಸಿದರು.

ವಿದ್ಯಾರ್ಥಿಗಳನ್ನು ಬರಿ ಅಂಕಗಳಿಗೆ ಒತ್ತಡ ಹೇರುತ್ತಿರುವ ಪೋಷಕರ ಮನಸ್ಥಿತಿ ಬದಲಾಗಬೇಕು. ವಿದ್ಯಾರ್ಥಿಯೊಬ್ಬ ಜೀವನದಲ್ಲಿ ನಾನು ಎಲ್ಲಿ ಹೋದರೂ ಬದುಕುತ್ತೇನೆ ಎಂಬ ಆತ್ಮಸ್ಥೈರ್ಯ ಬೆಳಸಿಕೊಂಡಾಗ ಅಲ್ಲಿಂದಲೇ ಅವನ ಯಶಸ್ಸು ಶುರುವಾಗುತ್ತದೆ.ಹೀಗಾಗಿ ಮಕ್ಕಳೀಗೆ ಜೀವನ ಕಲೆ ಕಲಿಸಿಕೊಡಿ ಎಂದು ಹೇಳಿದ ಅವರು ಸರಕಾರಿ ಕೆಲಸದ ಕನಸು ಬಿಟ್ಟು ಸ್ವ ಉದ್ಯೋಗ , ಉದ್ದಿಮೆ ಮಾಡುವತ್ತ ಗಮನಹರಿಸಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಶೃಂಗೇರಿಯ ಜೀವನ್ ಎಂ ಶೆಟ್ಟಿ, ಕಳಸದ ಹಶ್ರಿತಾ ರೈ, ತರೀಕೆರೆಯ ಆದಿತಿ, ದ್ವಿತೀಯ ಪಿಯುಸಿಯಲ್ಲಿ ಶೃಂಗೇರಿಯ ಶ್ರೇಯಶೆಟ್ಟಿ, ಮನಸ್ವಿ ಎಸ್.ಶೆಟ್ಟಿ, ಕೊಪ್ಪ ತಾಲೂಕಿನ ಪ್ರಣೀತ, ಅಮೋಘ, ಮೂಡಿಗೆರೆಯ ಸ್ಪಂದನ ಜೆ.ಶೆಟ್ಟಿ ಅವರಿಗೆ ಸನ್ಮಾನಿಸಿ ಪ್ರೋತ್ಸಾಹಧನ ನೀಡಲಾಯಿತು. ಅಲ್ಲದೆ ಎಂಜಿನಿಯರಿಂಗ್, ಎಸ್‌ಎಸ್‌ಎಲ್‌ಸಿ, ಪಿಯುಸಿ ಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸಮಾಜದ ಗಣ್ಯರು ಪ್ರೋತ್ಸಾಹಧನ ನೀಡಿ ಗೌರವಿಸಿದರು. ಈ ಸಾಲಿನ ವಿದ್ಯಾರ್ಥಿ ವೇತನದ ದಾನಿಗಳು ಮತ್ತು ಕಟ್ಟಡದ ಅಭಿವೃದ್ಧಿ ಸಹಕರಿಸಿದ ದಾನಿಗಳಿಗೆ ಸನ್ಮಾನಿಸಲಾಯಿತು.

ಸವಿತಾ ಚಂದ್ರಹಾಸ ರೈ ಪ್ರಸ್ತಾವಿಕವಾಗಿ ಮಾತನಾಡಿ ಸಂಘ ನಡೆದು ಬಂದ ದಾರಿ ಪ್ರಸ್ತುತ ಪಡಿಸಿದರು. ಸಂಘದ ಅಧ್ಯಕ್ಷ ಡಿ.ಬಿ.ನರೇಂದ್ರಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಬಲಾರಿ ವಿನಯಶೆಟ್ಟಿ, ಉಪಾಧ್ಯಕ್ಷ ಪ್ರಕಾಶ್ ಎನ್ ಶೆಟ್ಟಿ ಆಲ್ದೂರು, ಕಾರ್ಯದರ್ಶಿ ಜಿ.ಎಸ್.ಆನಂದಶೆಟ್ಟಿ, ಸಹಕಾರ್ಯದರ್ಶಿ ಜನಾರ್ಧನಶೆಟ್ಟಿ, ಖಜಾಂಚಿ ಸಂಪತ್‌ಕುಮಾರ್ ಶೆಟ್ಟಿ ಹಾಗೂ ಸದಸ್ಯರು, ಮೂಡಿಗೆರೆ ಸಂಘದ ಅಧ್ಯಕ್ಷ ವಿನೋದ್‌ಕುಮಾರ್ ಶೆಟ್ಟಿ, ಕೊಪ್ಪ ಸುಬ್ರಮಣ್ಯ ಶೆಟ್ಟಿ, ಎನ್.ಆರ್.ಪುರ ಪ್ರಶಾಂತ್‌ಶೆಟ್ಟಿ, ಶೃಂಗೇರಿ ರಾಘವೇಂದ್ರ ಶೆಟ್ಟಿ, ಕಳಸ ಶ್ರೀಧರ ಶೆಟ್ಟಿ, ಬಾಳೆಹೊನ್ನೂರು ಪ್ರಭಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಆನಂದಕುಮಾರ್ ಶೆಟ್ಟಿ ಮತ್ತು ಶ್ರೀಕಾಂತ್ ಶೆಟ್ಟಿ ನಿರೂಪಿಸಿದರು.

Scholarship Distribution Ceremony of the Bunts (or Nadavara) Sangha

 

 

Share

Leave a comment

Leave a Reply

Your email address will not be published. Required fields are marked *

Don't Miss

ಭತ್ತದ ಗದ್ದೆಯಲ್ಲಿ 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ

ಕಳಸ: ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರ ಕಣ್ಣಿಗೆ ಸುಮಾರು 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಏಕಾಏಕಿ ಗೋಚರಿಸಿದ್ದು, ಸ್ಥಳೀಯರಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು....

ತಂದೆ-ಮಗಳ ಗಾಯನ ಮಾಧುರ್ಯಕ್ಕೆ ಮನಸೋತ ಶ್ರೋತೃಗಳು

ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಸಂಜೆ ಅನುರಣಿಸಿದ ಕರ್ನಾಟಕ ಶಾಸ್ತ್ರೀಯ ಹಾಗೂ ಹರಿದಾಸ ಸಾಹಿತ್ಯದ ಶ್ರೇಷ್ಠ ಗಾಯಕ ಡಾ.ವಿದ್ಯಾಭೂಷಣ ಹಾಗೂ ಅವರ ಪುತ್ರಿ ಮೇಧಾ ವಿದ್ಯಾಭೂಷಣ ಅವರ ಅಮೋಘ ಗಾಯನ...

Related Articles

ಅಧಿಕಾರಿಗಳು ಶೌಚಾಲಯ ನೀಡಲೂ ಜಾತಿ ಕೇಳುತ್ತಾರೆ

ಶೃಂಗೇರಿ: ಮೂಲಸೌಕರ್ಯ ಕಲ್ಪಿಸಬೇಕಾದ ಅಧಿಕಾರಿಗಳು ಶೌಚಾಲಯ ನೀಡಲೂ ಜಾತಿ ಕೇಳುತ್ತಾರೆ ಎಂದರೆ ನಂಬುತ್ತೀರಾ? ಹೌದು, ಇಂತಹದ್ದೊಂದು...

ಪೌರಕಾರ್ಮಿಕರು ಒಳಚರಂಡಿ ಮ್ಯಾನ್‌ಹೋಲ್‌ಗೆ ಇಳಿಯಬಾರದು

ಚಿಕ್ಕಮಗಳೂರು : ನಗರಸಭೆಯ ಯುಜಿಡಿ ಹಾಗೂ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್‌ಗೆ ಸಂಬಂಧಿಸಿದ ಸುರಕ್ಷತಾ ನಿಯಮಗಳ ಕುರಿತು ನಡೆದ...

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಯಮವೇ ಅಸ್ತ್ರ

ಚಿಕ್ಕಮಗಳೂರು : ಯುವಜನರು ಮಾದಕವಸ್ತು ಹಾಗೂ ಇತರ ದುಶ್ಚಟಗಳಿಂದ ದೂರವಿದ್ದು, ಸಂಯಮ ಮತ್ತು ಶಿಸ್ತಿನ ಜೀವನವನ್ನು...

ಗೋಕಳ್ಳರು ಹಸುವನ್ನು ಹೊತ್ತೊಯ್ಯುವಾಗ ಹಿಂದೆ ಓಡಿದ ತಾಯಿ ಹಸು

ಚಿಕ್ಕಮಗಳೂರು: ಹಸುವಿನ ಕತ್ತಿಗೆ ಹಗ್ಗ ಹಾಕಿ ಧರಧರನೆ ಎಳೆದುಕೊಂಡು ಹೋಗುತ್ತಿದ್ದ ಗೋಕಳ್ಳರ ಹಿಂದೆ ತಾಯಿ ಹಸುವೊಂದು...