Home namma chikmagalur chikamagalur ನಕಲಿ ಪೊಲೀಸ್ ಇನ್ಸ್‌ಪೆಕ್ಟರ್‌ ಹೆಸರಿನಲ್ಲಿ ಚಿನ್ನದ ಸರ ಪಡೆದು ವಂಚನೆ
chikamagalurCrime NewsHomeLatest Newsnamma chikmagalur

ನಕಲಿ ಪೊಲೀಸ್ ಇನ್ಸ್‌ಪೆಕ್ಟರ್‌ ಹೆಸರಿನಲ್ಲಿ ಚಿನ್ನದ ಸರ ಪಡೆದು ವಂಚನೆ

Share
Share

ಚಿಕ್ಕಮಗಳೂರು: ತಾನು ಪೊಲೀಸ್ ಇನ್ಸ್‌ಪೆಕ್ಟರ್ ಎಂದು ಪರಿಚಯಿಸಿಕೊಂಡು ಆಭರಣ ಮಳಿಗೆಯಿಂದ ₹1.82 ಲಕ್ಷ ಮೌಲ್ಯದ ಚಿನ್ನದ ಸರ ಪಡೆದು, ನಕಲಿ ಚೆಕ್ ನೀಡಿ ವಂಚಿಸಿರುವ ಆರೋಪದಡಿ ಮಹಿಳೆಯೊಬ್ಬರ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಎಂ.ಜಿ. ರಸ್ತೆಯಲ್ಲಿರುವ ಹರಹಂ ಜುವೆಲರ್ಸ್ ಮಾಲೀಕ ಹಂಸರಾಜ್ ಜೈನ್ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಸೆ.28ರಂದು ಬೆಳಗ್ಗೆ 10.45ರ ಸುಮಾರಿಗೆ ಮಹಿಳೆಯೊಬ್ಬರು ಆಭರಣ ಮಳಿಗೆಗೆ ಆಗಮಿಸಿ, ತಾನು ಪೊಲೀಸ್ ಇನ್ಸ್‌ಪೆಕ್ಟರ್ ನಿವೇದಿತಾ ಎಂದು ಪರಿಚಯಿಸಿಕೊಂಡಿದ್ದಾರೆ. ಅಲ್ಲದೆ, ತಮ್ಮ ಮೊಬೈಲ್‌ನಲ್ಲಿದ್ದ ಪೊಲೀಸ್ ಸಮವಸ್ತ್ರ ಧರಿಸಿರುವ ಫೋಟೋವನ್ನೂ ತೋರಿಸಿದ್ದಾರೆ ಎನ್ನಲಾಗಿದೆ.

ನಂತರ 42 ಗ್ರಾಂ ಚಿನ್ನದ ಆಭರಣಗಳನ್ನು ಖರೀದಿಸಲು ಮುಂದಾದ ಅವರು, ₹6.21 ಲಕ್ಷ ಮೊತ್ತದ ಯುಕೋ ಬ್ಯಾಂಕ್ ಚೆಕ್ ನೀಡಿದ್ದಾರೆ. ಚೆಕ್‌ಗೆ ಹಣ ಬಂದ ಬಳಿಕವೇ ಆಭರಣ ನೀಡುವುದಾಗಿ ಅಂಗಡಿ ಮಾಲೀಕರು ತಿಳಿಸಿದಾಗ, ಮೊದಲು 12.5 ಗ್ರಾಂ ತೂಕದ ಒಂದು ಚಿನ್ನದ ಸರವನ್ನು ನೀಡುವಂತೆ ಕೇಳಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಎಂದು ನಂಬಿದ ಹಿನ್ನೆಲೆಯಲ್ಲಿ ₹1.82 ಲಕ್ಷ ಮೌಲ್ಯದ ಚಿನ್ನದ ಸರವನ್ನು ಅವರಿಗೆ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಂತರ ಚೆಕ್‌ನ್ನು ಬ್ಯಾಂಕ್‌ಗೆ ಜಮೆ ಮಾಡಿ ಹಣ ಪಡೆಯಲು ಮುಂದಾದಾಗ, ಖಾತೆಯಲ್ಲಿ ಹಣವಿಲ್ಲದ ಕಾರಣ ಚೆಕ್ ಬೌನ್ಸ್ ಆಗಿದೆ. ನಿವೇದಿತಾ ಅವರ ಮೊಬೈಲ್‌ಗೆ ಕರೆ ಮಾಡಿದಾಗ ಅದು ಸ್ವಿಚ್‌ಆಫ್ ಆಗಿತ್ತು. ಈ ನಡುವೆ ವಿಚಾರಣೆ ನಡೆಸಿದಾಗ, ಇದೇ ಮಹಿಳೆಯ ವಿರುದ್ಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ. ಆಕೆ ನಕಲಿ ಪೊಲೀಸ್ ಇನ್ಸ್‌ಪೆಕ್ಟರ್ ಎಂದು ಪರಿಚಯಿಸಿಕೊಂಡು ನಗರದಲ್ಲಿ ಹಲವರಿಗೆ ವಂಚಿಸಿರುವ ಮಾಹಿತಿ ದೊರೆತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ನಿವೇದಿತಾ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಹಂಸರಾಜ್ ಜೈನ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Fraud committed by obtaining a gold chain by posing as a police inspector.

Share

Leave a comment

Leave a Reply

Your email address will not be published. Required fields are marked *

Don't Miss

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳತನ

ಕೊಪ್ಪ: ತಾಲೂಕಿನ ಕುಂಚೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ದೇವಿಗೆ ಅಲಂಕರಿಸಿದ್ದ ಚಿನ್ನಾಭರಣ, ಬೆಳ್ಳಿಯ ವಿಗ್ರಹಗಳು ಹಾಗೂ ಕಾಣಿಕೆ ಹುಂಡಿಯ ಹಣವನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ...

ನೂತನ ಚಿಕ್ಕಮಗಳೂರು ಜಿಪಂ ಸಿಇಒ ಮೀನಾಕ್ಷಿ ಆರ್ಯ ನೇಮಕ

ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಎಚ್.ಎಸ್. ಕೀರ್ತನಾ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ 2023ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಮೀನಾಕ್ಷಿ ಆರ್ಯ ಅವರನ್ನು ನೇಮಿಸಿ ರಾಜ್ಯ ಸರ್ಕಾರ...

Related Articles

ಏಷ್ಯನ್ ಗೇಮ್ಸ್‌ನಲ್ಲಿಶಾನುವಳ್ಳಿಯ ಎಸ್.ಎಸ್. ಸ್ನೇಹಾಗೆ ಕಂಚು

ಚಿಕ್ಕಮಗಳೂರು: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 2026ರ ಏಷ್ಯನ್ ಗೇಮ್ಸ್‌ನ ಮಿಶ್ರ 4×100 ಮೀಟರ್ ರಿಲೇ...

ಮಾಣಿಕ್ಯಾಧಾರ ಜಲಪಾತದ ಬಳಿ ಪ್ರವಾಸಿಗರ ಹುಚ್ಚಾಟ

ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ಪ್ರವಾಸಿ ತಾಣವಾದ ದತ್ತಪೀಠದ ತಪ್ಪಲಿನ ಮಾಣಿಕ್ಯಾಧಾರ ಜಲಪಾತದ ಬಳಿ ಪ್ರವಾಸಿಗರ ಅತಿರೇಕದ...

ಮಹಾತ್ಮಗಾಂಧೀಜಿ-ಲಾಲ್ ಬಹದ್ದೂರ್ ಶಾಸ್ತ್ರೀಜಿ ಮಾರ್ಗದರ್ಶನ ಇಂದಿಗೂ ಪ್ರಸ್ತುತ

ಚಿಕ್ಕಮಗಳೂರು: ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕೆ ನೀಡಿದ ಸಂದೇಶಗಳು ಮತ್ತು...

ರಸ್ತೆಯ ಮೇಲೆ ಹೆಡ್‌ಲೈಟ್ ಇಲ್ಲದ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ

ಚಿಕ್ಕಮಗಳೂರು: ದಟ್ಟ ಅರಣ್ಯ, ಕಾಫಿ ತೋಟಗಳ ನಡುವೆ ಸಾಗುವ ಕಡಿದಾದ ತಿರುವುಗಳು, ಹೊಂಡ-ಗುಂಡಿಗಳ ರಸ್ತೆಯ ಮೇಲೆ...