Home namma chikmagalur chikamagalur ರಾಜ್ಯದ ಪ್ರಗತಿ-ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ನಿರ್ಣಾಯಕ
chikamagalurHomeLatest Newsnamma chikmagalur

ರಾಜ್ಯದ ಪ್ರಗತಿ-ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ನಿರ್ಣಾಯಕ

Share
Share

ಚಿಕ್ಕಮಗಳೂರು: ರಾಜ್ಯದ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ನಿರ್ಣಾಯಕ ಹಾಗೂ ಅಮೂಲ್ಯವಾದುದು ಎಂದು ಜಿಲ್ಲಾ ಶಿಕ್ಷಣ ಇಲಾಖೆ ನೌಕರರ ಡಾ ರಾಧಾಕೃ?ನ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಲ್.ಜಿ.ಪರಮೇಶ್ವರಪ್ಪ ಹೇಳಿದರು.

ನಗರದ ಬಸವನಹಳ್ಳಿ ಸರ್ಕಾರಿ ಮಾದರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಭಾನುವಾರ ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಶಿಕ್ಷಕರು ಕೇವಲ ಅಕ್ಷರ ಕಲಿಸುವವರಲ್ಲ, ಬದಲಾಗಿ ಭವಿಷ್ಯದ, ಪ್ರಜಾಪ್ರಭುತ್ವದ ನಾಗರೀಕರನ್ನು ರೂಪಿಸುವ ರಾ? ನಿರ್ಮಾತೃಗಳು,ದೇಶದ ಆಧಾರ ಸ್ತಂಭಗಳು ಎಂದರು.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸೃಜನಶೀಲತೆ ಹಾಗೂ ಆಧುನಿಕ ಜಗತ್ತಿಗೆ ಬೇಕಾದ ತಾಂತ್ರಿಕ ಕೌಶಲಗಳನ್ನು ಶಿಕ್ಷಕರು ಬೆಳೆಸುತ್ತಾರೆ, ಉತ್ತಮ ನಡವಳಿಕೆ, ವಿನಯ, ಪ್ರಾಮಾಣಿಕತೆ ಮತ್ತು ದೇಶಭಕ್ತಿಯನ್ನು ಬೋಧಿಸುವ ಮೂಲಕ ವಿದ್ಯಾರ್ಥಿಗಳನ್ನು ಸಂಸ್ಕಾರವಂತರನ್ನಾಗಿ ಮಾಡಿ ಆ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸುತ್ತಾರೆ ಎಂದು ತಿಳಿಸಿದರು.

ssಜಿಲ್ಲಾ ಶಿಕ್ಷಣ ಇಲಾಖೆ ನೌಕರರ ಡಾ.ರಾಧಾಕೃ?ನ್ ವಿವಿಧೋದ್ದೇಶ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ ೬೬.೯೪೦ ರೂ ನಿವ್ವಳ ಲಾಭಗಳಿಸಿದ್ದು ಅದರಲ್ಲಿ ಶೇ ನಾಲ್ಕು ಲಾಭಾಂಶವನ್ನು ಸದಸ್ಯರಿಗೆ ವಿತರಿಸಲಾಗುವುದು ಎಂದು ತಿಳಿಸಿದರು.

ನಗರದ ಕಡೂರು ರಸ್ತೆಯಲ್ಲಿ ಒಂಬತ್ತು ಎಕರೆ ಭೂಮಿಯನ್ನು ಖರೀದಿಸಿ, ಬಡಾವಣೆ ನಿರ್ಮಿಸಿ, ಸಂಘದ ಸದಸ್ಯರಿಗೆ ವಿತರಿಸಲಾಗುವುದು, ಸದಸ್ಯರಿಗೆ ನೀಡುವ ಸಾಲದ ಮೊತ್ತವನ್ನು ೫೦ ಸಾವಿರದಿಂದ ಒಂದು ಲಕ್ಷ ರೂಗೆ ಹೆಚ್ಚಿಸಲಾಗುವುದು ಎಂದು ಹೇಳಿದರು.

ಸಂಘದ ಸದಸ್ಯರ ಮಕ್ಕಳನ್ನು ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿವ? ಪ್ರತಿಭಾ ಪುರಸ್ಕಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷೆ ಸಿ.ಕೆ.ವಿಜಯಲಕ್ಷ್ಮಿ ಮಾತನಾಡಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರಾಗಬೇಕು, ಸಂಘದೊಂದಿಗೆ ವ್ಯವಹರಿಸುವ ಮೂಲಕ ಅದನ್ನು ಬೆಳೆಸಬೇಕು ಎಂದು ಮನವಿ ಮಾಡಿದರು.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಸಭೆಯಲ್ಲಿ ಪ್ರತಿಭಾ ಪುರಸ್ಕಾರ ಮಾಡಲಾಯಿತು, ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಹಿರೇಮಗಳೂರು ಸರ್ಕಾರಿ ಶಾಲೆಯ ಶಿಕ್ಷಕಿ ವಿಲ್ಮಾ ಗೊನ್ಸಾಲೀಸ್ ಮತ್ತು ಶ್ರೀನಿವಾಸಪುರ ಶಾಲೆಯ ಶಿಕ್ಷಕಿ ಲಾವಣ್ಯ ಅವರನ್ನು ಸನ್ಮಾನಿಸಿ ಅಭಿನಂಧಿಸಲಾಯಿತು.

ಸಂಘದ ಕಾರ್ಯದರ್ಶಿ ಆರ್.ಬಸವ ಕುಮಾರ್ ವಾರ್ಷಿಕ ವರದಿಯನ್ನು ಮಂಡಿಸಿದರು, ನಿರ್ದೇಶಕರಾದಎಲ್.ಟಿ. ಅಜ್ಜಯ್ಯ, ಕೆ.ಅಣ್ಣಾನಾಯ್ಕ, ಬಸವರಾಜು, ಕೆ.ಚಂದ್ರಶೇಖರಪ್ಪ, ಎಸ್. ಜೋಗಪ್ಪ, ಆರ್.ಲೀಲಾವತಿ, ಕೆ. ಲೋಕೇಶ್, ಎಲ್.ಸಿ.ಪುಟ್ಟಸ್ವಾಮಿ, ಆರ್.ರವಿ, ಕೆ.ವಿ.ಶಿವಣ್ಣ, ಸ್ವಾಮಿ ಉಪಸ್ಥಿತರಿದ್ದರು.

The role of teachers is extremely crucial in the progress and development of the state.

Share

Leave a comment

Leave a Reply

Your email address will not be published. Required fields are marked *

Don't Miss

ಜಯಪುರ ಠಾಣೆಯ ಮಹಿಳಾ ಸಿಬ್ಬಂದಿಗೆ ಬಾಗಿನ

ಕೊಪ್ಪ : ಹಬ್ಬ-ಹರಿದಿನಗಳಲ್ಲೂ ಕರ್ತವ್ಯದಲ್ಲೇ ನಿರತರಾಗಿರುವ ಪೊಲೀಸ್ ಸಿಬ್ಬಂದಿಯ ಮೊಗದಲ್ಲಿ ಹಬ್ಬದ ಸಂಭ್ರಮ ಮೂಡಿಸುವ ಅರ್ಥಪೂರ್ಣ ಕಾರ್ಯಕ್ರಮವೊಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಗೌರಿ ಹಬ್ಬದ...

ಟ್ರಾಕ್ಟರ್ ಹರಿಸಿ ₹1.15 ಲಕ್ಷ ಮೌಲ್ಯದ ರಾಗಿ ಬೆಳೆ ನಾಶ

ತರೀಕೆರೆ : ನ್ಯಾಯಾಲಯದ ಸ್ಪಷ್ಟ ತಡೆಯಾಜ್ಞೆ ಇದ್ದರೂ ಅದ್ಯಾವುದನ್ನೂ ಲೆಕ್ಕಿಸದೆ, ಜಮೀನಿಗೆ ಅಕ್ರಮವಾಗಿ ನುಗ್ಗಿ ಕಟಾವಿಗೆ ಬಂದಿದ್ದ ರಾಗಿ ಬೆಳೆಯ ಮೇಲೆ ಟ್ರಾಕ್ಟರ್ ಹರಿಸಿ ನಾಶಪಡಿಸಿರುವ ಆಘಾತಕಾರಿ ಘಟನೆಯೊಂದು ತರೀಕೆರೆ ತಾಲೂಕಿನ...

Related Articles

ಮೂಡಿಗೆರೆಯಲ್ಲಿ ಮುಸುಕುಧಾರಿ ಖದೀಮರಿಂದ ಸರಗಳ್ಳತನ

ಮೂಡಿಗೆರೆ: ಮುಂಜಾನೆಯ ತಂಪಾದ ವಾತಾವರಣದಲ್ಲಿ ರಸ್ತೆ ಬದಿಯಲ್ಲಿ ನಿರಾತಂಕವಾಗಿ ವಾಕಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳೆಯೊಬ್ಬರನ್ನು...

ಅರಸನ ನಾಲೆ ಪುನಶ್ಚೇತನ‌ಕ್ಕೆ ಆಗ್ರಹಿಸಿ ಇಂದು ರೈತರ ಬೃಹತ್ ಪಾದಯಾತ್ರೆ

ಚಿಕ್ಕಮಗಳೂರು: ಮಳಲೂರು ಏತ ನೀರಾವರಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುವುದು ಹಾಗೂ...

ಸವದಳ ಸೂತ್ರದಡಿ ಎಲ್ಲರನ್ನು ಒಂದುಗೂಡಿಸಿ

ಚಿಕ್ಕಮಗಳೂರು: ಸವದಳ ಸೂತ್ರದಡಿ ಎಲ್ಲರನ್ನು ಒಂದುಗೂಡಿಸಿ : ಡಾ.ಮಾತೆ ಗಂಗಾದೇವಿನಾಡಿನ ವೀರಶೈವ-ಲಿಂಗಾಯಿತ ಜನಾಂಗವನ್ನು ಬಸವದಳ ಸೂತ್ರದಡಿ...

ಪ್ರತಾಪ ಸಿಂಹ ವಿರುದ್ಧ ಭೀಮ್ ಆರ್ಮಿ ಪ್ರತಿಭಟನೆ

ಚಿಕ್ಕಮಗಳೂರು: ದಲಿತ ಸಂಘಟನೆಗಳ ಬಗ್ಗೆ ಮಾಜಿ ಸಂಸದ ಪ್ರತಾಪ ಸಿಂಹ ಲಘುವಾಗಿ ಮಾತನಾಡಿದ್ದು, ಕೂಡಲೇ ಕ್ಷಮೆ...