Home namma chikmagalur chikamagalur ಚಿರತೆ ದಾಳಿಗೆ ಎರಡು ವರ್ಷದ ಕರು ಬಲಿ
chikamagalurCrime NewsHomeLatest Newsnamma chikmagalur

ಚಿರತೆ ದಾಳಿಗೆ ಎರಡು ವರ್ಷದ ಕರು ಬಲಿ

Share
Share

ನರಸಿಂಹರಾಜಪುರ: ತಾಲ್ಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಸಲವಾನಿಯಲ್ಲಿ ಸಿಬಿಅವರಿಗೆ ಸೇರಿದ ಎರಡು ವರ್ಷದ ಕರುವನ್ನು ಚಿರತೆ ಕೊಂದು ಹಾಕಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಸಿಬಿ ಅವರು ಕರುವನ್ನು ಮನೆಯ ಹಿತ್ತಲಿನಲ್ಲಿ ಮೇಯಲು ಬಿಟ್ಟಿದ್ದರು. ಸಂಜೆಯಾದರೂ ಕರು ಮನೆಗೆ ವಾಪಸಾಗಿರಲಿಲ್ಲ. ಭಾನುವಾರ ಬೆಳಿಗ್ಗೆ ಮನೆಯ ಸುತ್ತಲಿನ ಕಾಡು ಹಾಗೂ ಅಕ್ಕಪಕ್ಕದ ತೋಟಗಳಲ್ಲಿ ಹುಡು ಕಾಡಿದಾಗ ಸಮೀಪದ ಮತ್ತೊಬ್ಬರ ಅಡಿಕೆ ತೋಟದಲ್ಲಿ ಕರುವಿನ ಕಳೇಬರ ಪತ್ತೆಯಾಗಿದೆ. ಚಿರತೆ ಕರುವನ್ನು ಕೊಂದು, ಅದರ ದೇಹದ ಸ್ವಲ್ಪ ಭಾಗವನ್ನು ತಿಂದಿರುವುದು ತಿಳಿದುಬಂದಿದೆ.

ಸಿಬಿ ಅವರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪಶುವೈದ್ಯರು ಕರುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದು, ಚಿರತೆ ದಾಳಿಯಿಂದ ಕರು ಮೃತಪಟ್ಟಿರುವುದು ದೃಢಪಟ್ಟಿದೆ.

ಸೂಸಲವಾನಿ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಕರು ಮೃತಪಟ್ಟ ಸ್ಥಳ ರಸ್ತೆ ಪಕ್ಕದಲ್ಲಿದ್ದು, ಇದೇ ರಸ್ತೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ ನೂರಾರು ಜನರು ಸಂಚರಿಸುತ್ತಾರೆ. ಆದ್ದರಿಂದ ಅರಣ್ಯ ಇಲಾಖೆ ಕೂಡಲೇ ಗಮನಹರಿಸಿ ಚಿರತೆಯನ್ನು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Two-year-old calf falls prey to leopard attack

Share

Leave a comment

Leave a Reply

Your email address will not be published. Required fields are marked *

Don't Miss

ಜಯಪುರ ಠಾಣೆಯ ಮಹಿಳಾ ಸಿಬ್ಬಂದಿಗೆ ಬಾಗಿನ

ಕೊಪ್ಪ : ಹಬ್ಬ-ಹರಿದಿನಗಳಲ್ಲೂ ಕರ್ತವ್ಯದಲ್ಲೇ ನಿರತರಾಗಿರುವ ಪೊಲೀಸ್ ಸಿಬ್ಬಂದಿಯ ಮೊಗದಲ್ಲಿ ಹಬ್ಬದ ಸಂಭ್ರಮ ಮೂಡಿಸುವ ಅರ್ಥಪೂರ್ಣ ಕಾರ್ಯಕ್ರಮವೊಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಗೌರಿ ಹಬ್ಬದ...

ಟ್ರಾಕ್ಟರ್ ಹರಿಸಿ ₹1.15 ಲಕ್ಷ ಮೌಲ್ಯದ ರಾಗಿ ಬೆಳೆ ನಾಶ

ತರೀಕೆರೆ : ನ್ಯಾಯಾಲಯದ ಸ್ಪಷ್ಟ ತಡೆಯಾಜ್ಞೆ ಇದ್ದರೂ ಅದ್ಯಾವುದನ್ನೂ ಲೆಕ್ಕಿಸದೆ, ಜಮೀನಿಗೆ ಅಕ್ರಮವಾಗಿ ನುಗ್ಗಿ ಕಟಾವಿಗೆ ಬಂದಿದ್ದ ರಾಗಿ ಬೆಳೆಯ ಮೇಲೆ ಟ್ರಾಕ್ಟರ್ ಹರಿಸಿ ನಾಶಪಡಿಸಿರುವ ಆಘಾತಕಾರಿ ಘಟನೆಯೊಂದು ತರೀಕೆರೆ ತಾಲೂಕಿನ...

Related Articles

ಮೂಡಿಗೆರೆಯಲ್ಲಿ ಮುಸುಕುಧಾರಿ ಖದೀಮರಿಂದ ಸರಗಳ್ಳತನ

ಮೂಡಿಗೆರೆ: ಮುಂಜಾನೆಯ ತಂಪಾದ ವಾತಾವರಣದಲ್ಲಿ ರಸ್ತೆ ಬದಿಯಲ್ಲಿ ನಿರಾತಂಕವಾಗಿ ವಾಕಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳೆಯೊಬ್ಬರನ್ನು...

ಅರಸನ ನಾಲೆ ಪುನಶ್ಚೇತನ‌ಕ್ಕೆ ಆಗ್ರಹಿಸಿ ಇಂದು ರೈತರ ಬೃಹತ್ ಪಾದಯಾತ್ರೆ

ಚಿಕ್ಕಮಗಳೂರು: ಮಳಲೂರು ಏತ ನೀರಾವರಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುವುದು ಹಾಗೂ...

ಸವದಳ ಸೂತ್ರದಡಿ ಎಲ್ಲರನ್ನು ಒಂದುಗೂಡಿಸಿ

ಚಿಕ್ಕಮಗಳೂರು: ಸವದಳ ಸೂತ್ರದಡಿ ಎಲ್ಲರನ್ನು ಒಂದುಗೂಡಿಸಿ : ಡಾ.ಮಾತೆ ಗಂಗಾದೇವಿನಾಡಿನ ವೀರಶೈವ-ಲಿಂಗಾಯಿತ ಜನಾಂಗವನ್ನು ಬಸವದಳ ಸೂತ್ರದಡಿ...

ಪ್ರತಾಪ ಸಿಂಹ ವಿರುದ್ಧ ಭೀಮ್ ಆರ್ಮಿ ಪ್ರತಿಭಟನೆ

ಚಿಕ್ಕಮಗಳೂರು: ದಲಿತ ಸಂಘಟನೆಗಳ ಬಗ್ಗೆ ಮಾಜಿ ಸಂಸದ ಪ್ರತಾಪ ಸಿಂಹ ಲಘುವಾಗಿ ಮಾತನಾಡಿದ್ದು, ಕೂಡಲೇ ಕ್ಷಮೆ...