Home namma chikmagalur chikamagalur ಅನುಸೂಚಿತ ಜಾತಿ-ಬುಡಕಟ್ಟುಗಳ ಆಯೋಗದ ಸಭೆಯಲ್ಲಿ ಸಮಸ್ಯೆಗಳ ಮಹಾಪೂರ
chikamagalurHomeLatest Newsnamma chikmagalur

ಅನುಸೂಚಿತ ಜಾತಿ-ಬುಡಕಟ್ಟುಗಳ ಆಯೋಗದ ಸಭೆಯಲ್ಲಿ ಸಮಸ್ಯೆಗಳ ಮಹಾಪೂರ

Share
Share

ಚಿಕ್ಕಮಗಳೂರು : ಇಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ರಾಜ್ಯ ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ ಅವರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿದ್ದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ಮತ್ತು ನೊಂದ ಜನರು ತಮ್ಮ ಅಹವಾಲುಗಳನ್ನು ಹೇಳಿಕೊಂಡರು.

ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನತೆ ಸಾಗುವಳಿಮಾಡಿಕೊಂಡಿರುವ ಭೂಮಿಗಳಿಗೆ ಹಕ್ಕು ಪತ್ರ ಕೊಡಿಸುವಂತೆ ಮನವಿ ಹಾಗೂ ಸಾಗುವಳಿ ಮಾಡಿಕೊಂಡಿರುವ ಭೂಮಿಯನ್ನು ಬಲಾಢ್ಯ ವರ್ಗದವರು ವಶಪಡಿಸಿಕೊಂಡಿದ್ದು, ಅದನ್ನು ಬಿಡಿಸಿಕೊಡುವಂತೆ ಮನವಿಗಳು ಹೆಚ್ಚಾಗಿದ್ದವು. ಪೌತಿಖಾತೆ, ಮಾಡಿಸುವುದರಲ್ಲಿ ನಿರ್ಲಕ್ಷ್ಯ, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಮನವಿಗಳನ್ನು ನೀಡಿ ತಮ್ಮ ಅಳಲು ತೋಡಿಕೊಂಡರು.

ಗೋಮಾಳಗಳನ್ನು ಪತ್ತೆಹಚ್ಚಿ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಭೂರಹಿತರಿಗೆ ಹಂಚಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಅನುಸೂಚಿತ ಜಾತಿ, ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ. ಎಲ್ ಮೂರ್ತಿ ಹೇಳಿದರು.

ತರೀಕೆರೆ ತಾಲ್ಲೂಕಿನ ಸ್ವಾಮಿ ಎಂಬುವವರು ಮಾತನಾಡಿ ಲಿಂಗದಹಳ್ಳಿಯ ಮೊರಾರ್ಜಿ ಶಾಲೆ ಅವ್ಯವಸ್ಥೆಯ ಆಗರವಾಗಿದ್ದು, ವಿದ್ಯತ್ ಚಕ್ತಿ ಇಲ್ಲದೆ ಮಕ್ಕಳು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಮಕ್ಕಳಿಗೆ ಸೂಕ್ತ ರಕ್ಷಣೆ ಇಲ್ಲ. ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಕೊಡಲಾಗುತ್ತಿಲ್ಲ. ಅವರಿಗೆ ಬಿಸಿ ನೀರಿನ ಸೌಲಭ್ಯವಿಲ್ಲ. ಅಸ್ಪೃಶ್ಯತೆ ಜೀವಂತವಿದೆ ಎಂದು ದೂರಿದರು. ಹಾಸ್ಟೆಲ್ ಗಳ ನಿರ್ವಹಣೆ ಮಾಡುತ್ತಿರುವ ಕ್ರೈಸ್ಟ್ ಸಂಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ. ನಿರ್ವಹಣೆಯ ಜವಾಬ್ದಾರಿಯನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನೀಡುವಂತೆ ಒತ್ತಾಯಿಸಿದರು.

ಆಯೋಗದ ಅಧ್ಯಕ್ಷರು ಇದಕ್ಕೆ ಪ್ರತಿಕ್ರಿಯೆ ನೀಡಿ ಮನೆಯಲ್ಲಿನ ಸಂಕಷ್ಟದಿಂದ ಹಾಸ್ಟೆಲ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಆ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಸಮರ್ಪಕ ನಿರ್ವಹಣೆ ಮಾಡುವಂತೆ ಆದೇಶಿಸುವುದಾಗಿ ಹೇಳಿದರು.

ಲ್ಯಾಂಪ್ಸ್ ಮಹಾ ಮಂಡಳದ ಅಧ್ಯಕ್ಷ ಮುತ್ತಪ್ಪ ಮಾತನಾಡಿ, ೫೦ ಬುಡಕಟ್ಟು ಸಮುದಾಯಗಳ ಪೈಕಿ ಒಂದು ಸಮುದಾಯ ೪೯ ಬುಡಕಟ್ಟು ಸಮುದಾಯಗಳ ಲಾಭವನ್ನು ಸಂಪೂರ್ಣವಾಗಿ ಕಬಳಿಸುತ್ತಿದ್ದು, ಮೂಲ ಆದಿವಾಸಿಗಳಿಗೆ ಪರಿಶಿಷ್ಟ ಜಾತಿ ಜನರಿಗೆ ಒಳಮೀಸಲಾತಿ ನಿಗಧಿ ಪಡಿಸಿರುವಂತೆ ಪರಿಶಿಷ್ಟ ವರ್ಗದ ಜನರಿಗೂ ಒಳ ಮೀಸಲಾತಿ ಒದಗಿಸಬೇಕು. ಕಳೆದ ಮೂರು ತಿಂಗಳಿನಿಂದ ಪೌಷ್ಟಿಕ ಆಹಾರ ಸ್ಥಗಿತಗೊಂಡಿದ್ದು, ಕೂಡಲೇ ಪೂರೈಸಬೇಕೆಂದು ಆಗ್ರಹಿಸಿದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸಿವಂತೆ ರಾಜ್ಯ ಸರ್ಕಾರಕ್ಕೆ ಶೀಫಾರಸ್ಸು ಮಾಡುವುದಾಗಿ ಆದಿವಾಸಿ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೇಶ್ ಮಾತನಾಡಿ, ಸಮಗ್ರ ಗಿರಿಜನ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆದಿವಾಸಿಗಳಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ಅವರ ವರ್ತನೆಯನ್ನು ತಿದ್ದಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಸಭೆಯಲ್ಲಿ ಆಗ್ರಹಿಸಿದರು.

ಹಿರಿಯ ಆದಿವಾಸಿ ಮುಖಂಡ ಮರಿಯಪ್ಪ ಮಾತನಾಡಿ ಜಿಲ್ಲೆಯ ಮಲೆನಾಡು ಭಾಗದಲ್ಲಿರುವ ಆಶ್ರಮ ಶಾಲೆಗಳಲ್ಲಿ ರಸ್ತೆ ಸೇರಿದಂತೆ ಮೂಲಭೂತಗ ಸೌಕರ್ಯಗಳಿಲ್ಲದೆ ನಲುಗುತ್ತಿದ್ದು, ಆಶ್ರಮ ಶಾಲೆಗಳಿಗೆ ಖಾಯಂ ಶಿಕ್ಷಕರು, ಸಿಬ್ಬಂದಿಗಳೊಂದಿಗೆ ಆಶ್ರಮ ಶಾಲೆಗಳನ್ನು ಪಿಯುಸಿ ವರೆಗೂ ಮೇಲ್ದರ್ಜೆಗೇರಿಸಬೇಕೆಂದು ಹೇಳಿದರು.

ಜಿಲ್ಲಾ ದೌರ್ಜನ್ಯ ಸಮಿತಿ ಸದಸ್ಯ ಹುಣಸೆಮಕ್ಕಿ ಲಕ್ಷ್ಮಣ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಇಲಾಖೆ ವತಿಯಿಂದ ನೀಡುವ ಸೌಲಭ್ಯಗಳ ಗುರಿ ಹೆಚ್ಚಿಸಬೇಕು. ಆದಾರ ರಹಿತ ಸಾಲ ನೀಡಿಬೇಕು. ಅಂತರ್ಜಾತಿ ವಿವಾಹದ ಸಹಾಯಧನ ಹೆಚ್ಚಿಸಬೇಕು. ದಲಿತರಿಗೆ ದೇವಾಲಯಗಳಿಗೆ ಮುಕ್ತ ಪ್ರವೇಶ ಕೊಡಿಸುವುದು, ನಗರದ ಕಲ್ದೊಡ್ಡಿ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಡೋಂಗ್ರಿ ಗರಾಸಿಯಾ ಸಮುದಾಯದ ಜನರ ಮನೆಗಳ ಕಾಮಗಾರಿ ಪೂರ್ಣಗೊಳಿಸುವುದು. ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತಗೆ ಮನವಿ ಮಾಡಿದರು.

ವಾಲ್ಮೀಕಿ ಸಂಘದ ಅಧ್ಯಕ್ಷ ಜಗದೀಶ್ ಮಾತನಾಡಿ ನಗರದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನವನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು. ಆದಿವಾಸಿ ಮುಖಂಡ ಕೆಂಪಯ್ಯ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆಯಡಿ ವಿಲೆ ಇಟ್ಟಿರುವ ಅರ್ಜಿಗಳನ್ನು ಪುನರ್ ಪರಿಶೀಲಿಸಿ ಫಲಾನುಭವಿಗಳಿದೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿದರು.

ಮೆಣಸಿನ ಹಾಡ್ಯದ ಯೋಗೇಶ್ ಮಾತನಾಡಿ ಮಲೆನಾಡಿನ ಗುಡ್ಡಗಾಡು ನಕ್ಸಲ್ ಪೀಡಿತ ಪ್ರದೇಶದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಕುಂದು ಕೊರತೆ ಸಭೆ ನಡೆಸಿ ಎಂದು ಮನವಿ ಮಾಡಿದರೆ, ಮುಖಂಡರಾದ ಸೀತಮ್ಮ ಹೊಸ ಅರ್ಜಿದಾರರಿಗೆ ಪೌಷ್ಟಿಕ ಆಹಾರ ನೀಡುವಂತೆ ಕೋರಿದರು. ಬಾಳೆಹೊನ್ನೂರಿನ ಅರಣ್ಯ ಇಲಾಖೆಯಲ್ಲಿ ೧೭ ವರ್ಷಗಳಿಂದ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ತ್ರಿವೇಣಿ ಎಂಬುವವರನ್ನು ಅಲ್ಲಿನ ಅಧಿಕಾರಿಗಳು ಕೆಲಸದಿಂದ ತೆಗೆದು ಹಾಕಿದ್ದು, ಅವರನ್ನು ಪುನರ್ ಸ್ಥಾಪಿಸುವಂತೆ ಮನವಿ ಮಾಡಿಕೊಂಡರು,

ಈ ಎಲ್ಲಾ ಸಮಸ್ಯೆಗಳನ್ನು ಸಾವಧಾನದಿಂದ ಆಲಿಸಿದ ಅಧ್ಯಕ್ಷರು ಅರ್ಜಿಗಳ ಆಧಾರದಲ್ಲಿ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯುವುದರೊಂದಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅರ್ಜಿ ದಾರರಿಗೂ ಮಾಹಿತಿ ನೀಡಲಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ತರೀಕೆರೆ ವೆಂಕಟೇಶ್, ಕೆಳಗಣೆ ಚಂದ್ರು, ಮಂಜುನಾಥ್, ಬಸವರಾಜ್, ಹರೀಶ್, ಆಯೋಗದ ಸದಸ್ಯರು , ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ಪೊಲೀಸ್ ವರಿಷ್ಟಾಧಿಕಾರಿ ಜಿತೇಂದ್ರಕುಮಾರ್ ದಾಯ್ಮಾ, ಸಿಇಓ ಕೀರ್ತನಾ ಇದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಾಲತಿ ನಿರ್ವಹಣೆ ಮಾಡಿದರು.

A flood of issues at the Scheduled Castes and Tribes Commission meeting

Share

Leave a comment

Leave a Reply

Your email address will not be published. Required fields are marked *

Don't Miss

ಮನೆಯ ಹಿಂಭಾಗದಲ್ಲಿ ಬೆಳೆದಿದ್ದ 12.250 ಕೆ.ಜಿ. ಹಸಿ ಗಾಂಜಾ ವಶ

ತರೀಕೆರೆ: ತಾಲ್ಲೂಕಿನ ಬೆಟ್ಟತಾವರೆಕೆರೆ ಗ್ರಾಮದ ನಿವಾಸಿ ದಿನೇಶ್ ಎಂಬುವವರು ತಮ್ಮ ಮನೆಯ ಹಿಂಭಾಗದಲ್ಲಿ ಬೆಳೆದಿದ್ದ ಸುಮಾರು ೧೨.೨೫೦ ಕೆ.ಜಿ. ತೂಕದ ಹಸಿ ಗಾಂಜಾವನ್ನು ತರೀಕೆರೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಿಎಸ್‌ಐ ಆನಂದ್ ಡಿ....

ಪತ್ನಿ ಕೊಲೆ ಮಾಡಿದ ಗಂಡನಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು: ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು ₹75 ಸಾವಿರ ದಂಡ...

Related Articles

ದೇಶವಿರೋಧಿ ಮನಸ್ಥಿತಿ ವಿರುದ್ಧ ಕಠಿಣ ಕ್ರಮ ಅಗತ್ಯ

ಮೂಡಿಗೆರೆ : ಕಾಫಿನಾಡಿನ ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಪರ ಹಾಡು ಹಾಕಿ ವೈರಲ್ ಮಾಡಿದ್ದ ಪ್ರಕರಣಕ್ಕೆ...

ಕೆಎಸ್‌ಆರ್‌ಟಿಸಿ ಬಸ್‌ಗಾಗಿ ರಸ್ತೆಗಿಳಿದ ವಿದ್ಯಾರ್ಥಿಗಳು-ಗ್ರಾಮಸ್ಥರು

ಕಡೂರು: ಗ್ರಾಮೀಣ ಭಾಗದ ಕುಗ್ರಾಮಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು...

ವಿಶೇಷ ಅಧಿವೇಶನದಲ್ಲಿ ಪಕ್ಷಭೇದ ಮರೆತು ಮಲೆನಾಡಿನ ಸಮಸ್ಯೆ ಚರ್ಚಿಸಲು ಒತ್ತಾಯ

ಚಿಕ್ಕಮಗಳೂರು: ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಸೆ.21, 22 ಮತ್ತು 23ರಂದು ಮೂರು...

ಸಿ.ಎಸ್. ಸುಮಿತ್ರಾಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕರ ವಿಶೇಷ ಪ್ರಶಸ್ತಿ

ಚಿಕ್ಕಮಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಗಳನ್ನು ಉಳಿಸಿ, ಅವುಗಳನ್ನು ಮಾದರಿ ಶಾಲೆಗಳನ್ನಾಗಿ ರೂಪಿಸುವಲ್ಲಿ...