Home namma chikmagalur ajjampura ಅಜ್ಜಂಪುರದಲ್ಲಿ 85 ಚೀಲ ಪಡಿತರ ಅಕ್ಕಿ ಅಕ್ರಮ ಸಾಗಾಟ ಪತ್ತೆ
ajjampuraCrime NewsHomeLatest Newsnamma chikmagalur

ಅಜ್ಜಂಪುರದಲ್ಲಿ 85 ಚೀಲ ಪಡಿತರ ಅಕ್ಕಿ ಅಕ್ರಮ ಸಾಗಾಟ ಪತ್ತೆ

Share
Share

ಅಜ್ಜಂಪುರ: ಯಾವುದೇ ಪರವಾನಗಿ ಅಥವಾ ದಾಖಲೆಗಳಿಲ್ಲದೆ ಪಡಿತರ ಅಕ್ಕಿಯನ್ನು ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಅಜ್ಜಂಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಗಸ್ಟ್ 31ರಂದು ಅಜ್ಜಂಪುರ ಪಟ್ಟಣದ ಮಸೀದಿ ರಸ್ತೆಯ ಮುಂಭಾಗ ಗೀತಾ ರಸ್ತೆ–ಟಿಬಿ ರಸ್ತೆ ಸೇರುವ ಸ್ಥಳದಲ್ಲಿ ಕೆಎ-50-ಎ-5037 ನೋಂದಣಿಯ ಟಾಟಾ ಕ್ಸೀನಾನ್ ಪಿಕಪ್ ವಾಹನದಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಅಧಿಕಾರಿಗಳಿಗೆ ದೊರೆತಿತ್ತು.

ಮಾಹಿತಿ ಆಧರಿಸಿ ತಹಶೀಲ್ದಾರ್ ಅವರ ನಿರ್ದೇಶನದಂತೆ ಆಹಾರ ಶಾಖೆಯ ಅಧಿಕಾರಿ ಹಾಗೂ ಅಜ್ಜಂಪುರ ಠಾಣೆ ಪಿಎಸ್‌ಐ ಗಜೇಂದ್ರ ಎಂ. ನೇತೃತ್ವದ ತಂಡ ಪಂಚರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಈ ವೇಳೆ ವಾಹನದಲ್ಲಿ ಸುಮಾರು 50 ಕೆ.ಜಿ. ತೂಕದ 85 ಪ್ಲಾಸ್ಟಿಕ್ ಚೀಲಗಳಲ್ಲಿ ಅಕ್ಕಿ ತುಂಬಿರುವುದು ಪತ್ತೆಯಾಗಿದೆ.

ಅಕ್ಕಿಯ ದಾಸ್ತಾನಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದಾಗ ಚಾಲಕ ಯಾವುದೇ ದಾಖಲೆಗಳನ್ನು ಹಾಜರುಪಡಿಸಿಲ್ಲ. ಚೀಲಗಳಲ್ಲಿದ್ದ ಅಕ್ಕಿಯನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಸಾರ್ವಜನಿಕ ವಿತರಣಾ ಪದ್ಧತಿ (ಪಿಡಿಎಸ್) ಅಡಿ ವಿತರಿಸುವ ಪಡಿತರ ಅಕ್ಕಿಯಂತೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಂಚರ ಸಮ್ಮುಖದಲ್ಲಿ ಅಕ್ಕಿಯ ಮಾದರಿಯನ್ನು ಸಂಗ್ರಹಿಸಿ ಸೀಲ್ ಮಾಡಲಾಗಿದ್ದು, ವಾಹನ ಸಹಿತ ಅಕ್ಕಿಯ ದಾಸ್ತಾನನ್ನು ವಶಕ್ಕೆ ಪಡೆಯಲಾಗಿದೆ. ಅಜ್ಜಂಪುರ ವೇಬ್ರಿಡ್ಜ್‌ನಲ್ಲಿ ವಾಹನ ಸೇರಿದಂತೆ ಒಟ್ಟು ತೂಕ 6,740 ಕೆ.ಜಿ. ಎಂದು ದಾಖಲಾಗಿದೆ.

ವಾಹನ ಚಾಲಕನನ್ನು ನುಗ್ಗೆಹಳ್ಳಿ ಗ್ರಾಮದ ಎಸ್.ಎ. ರಬ್ಬಿ (43) ಎಂದು ಗುರುತಿಸಲಾಗಿದೆ. ಯಾವುದೇ ಪರವಾನಗಿ ಇಲ್ಲದೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇರೆಗೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಈ ಸಂಬಂಧ ಅಗತ್ಯ ವಸ್ತುಗಳ ಕಾಯ್ದೆ 1955ರ ಕಲಂ 3 ಮತ್ತು 7ರ ಅಡಿ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಮೊ.ನಂ. 228/2026ರಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Illegal transportation of 85 bags of ration rice detected in Ajjampura

Share

Leave a comment

Leave a Reply

Your email address will not be published. Required fields are marked *

Don't Miss

ರೈಲ್ವೆ ಕಾಮಗಾರಿಗೆ ಜಮೀನು ಬಳಕೆ: ಪರಿಹಾರ ನೀಡುವಂತೆ ರೈತ ಸಂಘ ಒತ್ತಾಯ

ಚಿಕ್ಕಮಗಳೂರು: ರೈಲ್ವೆ ಕಾಮಗಾರಿಗಾಗಿ ರೈತರ ಜಮೀನು ಹಾಗೂ ವಾಸದ ಮನೆಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಪರಿಹಾರ ನೀಡುವವರೆಗೆ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ...

ಬಿಎಫ್‌ಐಎಲ್‌ ಸಂಸ್ಥೆಯಲ್ಲಿ ₹5.50 ಲಕ್ಷ ದುರುಪಯೋಗ: ಇಬ್ಬರು ಸಿಬ್ಬಂದಿ ವಿರುದ್ಧ ಪ್ರಕರಣ

ನರಸಿಂಹರಾಜಪುರ: ಭಾರತ್ ಫೈನಾನ್ಸಿಯಲ್ ಇನ್‌ಕ್ಲೂಶನ್ ಲಿಮಿಟೆಡ್‌ (ಬಿಎಫ್‌ಐಎಲ್‌) ಸಂಸ್ಥೆಯ ಸೇಫ್‌ ಲಾಕರ್‌ನಲ್ಲಿದ್ದ ಚೆಕ್‌ಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ಬಾರದಂತೆ ತೆಗೆದುಕೊಂಡು ₹5.50 ಲಕ್ಷ ಹಣವನ್ನು ಬಿಡಿಸಿಕೊಂಡು ದುರುಪಯೋಗಪಡಿಸಿಕೊಂಡ ಆರೋಪದಡಿ ಇಬ್ಬರು ಸಿಬ್ಬಂದಿ ವಿರುದ್ಧ...

Related Articles

ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆಯಿಂದ ಪ್ರತಿಭಟನೆ

ಚಿಕ್ಕಮಗಳೂರು: ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಕಡೂರು ಹಾಗೂ ಚಿಕ್ಕಮಗಳೂರು ತಾಲ್ಲೂಕುಗಳನ್ನು...

ಆನ್‌ಲೈನ್ ಟ್ರೇಡಿಂಗ್ ಹೂಡಿಕೆ ಹೆಸರಿನಲ್ಲಿ ವಿದ್ಯಾರ್ಥಿನಿಗೆ ₹4.77 ಲಕ್ಷ ವಂಚನೆ

ಚಿಕ್ಕಮಗಳೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಭಾರಿ ಲಾಭ ನೀಡುವುದಾಗಿ ನಂಬಿಸಿ...

ಯುವತಿ ಮೇಲೆ ಅತ್ಯಾಚಾರ-ಕೊಲೆ ಬೆದರಿಕೆ ಆರೋಪ

ಚಿಕ್ಕಮಗಳೂರು: ಯುವತಿಗೆ ಅತ್ಯಾಚಾರ ಎಸಗಿದ ಆರೋಪ ಹಾಗೂ ಬಳಿಕ ಕೊಲೆ ಬೆದರಿಕೆ ಹಾಕಿದ ಆರೋಪದಡಿ ಪಂಚನಹಳ್ಳಿ...

ಮನೆಯ ಹಿಂಭಾಗದಲ್ಲಿ ಬೆಳೆದಿದ್ದ 12.250 ಕೆ.ಜಿ. ಹಸಿ ಗಾಂಜಾ ವಶ

ತರೀಕೆರೆ: ತಾಲ್ಲೂಕಿನ ಬೆಟ್ಟತಾವರೆಕೆರೆ ಗ್ರಾಮದ ನಿವಾಸಿ ದಿನೇಶ್ ಎಂಬುವವರು ತಮ್ಮ ಮನೆಯ ಹಿಂಭಾಗದಲ್ಲಿ ಬೆಳೆದಿದ್ದ ಸುಮಾರು...