ತರೀಕೆರೆ: ಪಟ್ಟಣದ ಎಂಎಸ್‌ಐಎಲ್ ಅಂಗಡಿ ಮುಂಭಾಗ ನಿಲ್ಲಿಸಿದ್ದ ಅಪಾಚಿ ಬೈಕ್ ಕಳುವಾಗಿರುವ ಕುರಿತು ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇರಲಕೆರೆ ಗ್ರಾಮದ ಮಂಜುನಾಥ ಎನ್.ಸಿ. ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಅವರು 2017ರಲ್ಲಿ ತರೀಕೆರೆ ಟಿವಿಎಸ್ ಶೋರೂಂನಲ್ಲಿ ಕೆಎ-66-ಇ-6027 ನೋಂದಣಿ ಸಂಖ್ಯೆಯ ಅಪಾಚಿ ಬೈಕ್ ಖರೀದಿಸಿದ್ದು, ಕೃಷಿ ಹಾಗೂ ವೈಯಕ್ತಿಕ ಕೆಲಸಗಳಿಗೆ ಬಳಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆ.7ರಂದು ರಾತ್ರಿ ಸುಮಾರು 8 ಗಂಟೆಗೆ ದಿನಸಿ ಸಾಮಾನು ತರಲು ತರೀಕೆರೆ ಪಟ್ಟಣಕ್ಕೆ ಬಂದ ಅವರು, ತಮ್ಮ ಬೈಕ್ ಅನ್ನು ಎಂಎಸ್‌ಐಎಲ್ ಅಂಗಡಿ ಮುಂಭಾಗ ನಿಲ್ಲಿಸಿ ಲಾಕ್ ಮಾಡಿ ಶಿವಮೊಗ್ಗಕ್ಕೆ ತೆರಳಿದ್ದರು. ಅಲ್ಲಿ ಕೆಲಸ ಮುಗಿಸಿಕೊಂಡು ಆ.8ರಂದು ಬೆಳಗಿನ ಜಾವ ಸುಮಾರು 3 ಗಂಟೆಗೆ ತರೀಕೆರೆಯಲ್ಲಿದ್ದ ಬೈಕ್ ಬಳಿ ವಾಪಸ್ ಬಂದಾಗ ಬೈಕ್ ಕಾಣೆಯಾಗಿತ್ತು ಎಂದು ತಿಳಿಸಿದ್ದಾರೆ.
ಬೈಕ್‌ಗಾಗಿ ವಿವಿಧೆಡೆ ಹುಡುಕಾಟ ನಡೆಸಿ, ಸ್ನೇಹಿತರು ಹಾಗೂ ಪರಿಚಯಸ್ಥರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ತಡವಾಗಿ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಹೇಳಿದ್ದಾರೆ.
ಕಳುವಾದ ಅಪಾಚಿ ಬೈಕ್‌ನ ಅಂದಾಜು ಮೌಲ್ಯ ₹47,000 ಎಂದು ದೂರಿನಲ್ಲಿ ತಿಳಿಸಲಾಗಿದೆ. ಬೈಕ್ ಪತ್ತೆ ಮಾಡಿಕೊಡುವಂತೆ ಮನವಿ ಮಾಡಿದ್ದು, ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ತರೀಕೆರೆ ಪೊಲೀಸ್ ಠಾಣೆಯಲ್ಲಿ ಮೊ.ನಂ. 216/2026ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Apache bike stolen in Tarikere
Leave a comment