Home namma chikmagalur chikamagalur ಟಿಪ್ಪು ಸುಲ್ತಾನ್ ಕಟೌಟ್ ಗೆ ದೇಶದ್ರೋಹಿ ಹಾಡು-7 ಜನ ಪೊಲೀಸರ ವಶಕ್ಕೆ
chikamagalurCrime NewsHomeLatest Newsnamma chikmagalur

ಟಿಪ್ಪು ಸುಲ್ತಾನ್ ಕಟೌಟ್ ಗೆ ದೇಶದ್ರೋಹಿ ಹಾಡು-7 ಜನ ಪೊಲೀಸರ ವಶಕ್ಕೆ

Share
Share

ಚಿಕ್ಕಮಗಳೂರು: ಕಾಫಿನಾಡಲ್ಲಿ ಪಾಕ್ ಪ್ರೇಮಿಗಳು ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಈದ್ ಮಿಲಾದ್ ಆಚರಣೆಗೆ ಟಿಪ್ಪು ಸುಲ್ತಾನ್ ಕಟೌಟ್ ಹಾಕಿರುವ ಯುವಕರು, ಕಟೌಟ್ ಬ್ಯಾಕ್ ಗ್ರೌಂಡ್ ಗೆ ದೇಶದ್ರೋಹಿ ಸಾಂಗ್ ಹಾಕಿ ವಿವಾದ ಸೃಷ್ಟಿಸಿದ್ದಾರೆ.

ಹಿಂಸೆಗೆ ಪ್ರಚೋಧನೆ ನೀಡುವ ಹಾಡು ಬಳಸಿ, ನಾವು ಪಾಕಿಸ್ತಾನದ ಮುಜಾಹಿದೀನ್ ಗಳು, ಈ ಮಣ್ಣಿನ ರಕ್ಷಕರು ಎಂಬ ಹಾಡನ್ನ ಸಾಮಾಜಿಕ ಜಾಲತಾಣದಲ್ಲಿ ಹರಡಿರೋದು ಈಗ ತೀವ್ರ ಸಂಚಲನ ಸೃಷ್ಠಿಸಿದ್ದು, ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಬುಧವಾರ ನಾಡಿನೆಲ್ಲೆಡೆ ಈದ್ ಮಿಲಾದ್ ಸಂಭ್ರಮ. ಮುಸ್ಲಿಮರು ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ ಕೆಲ ಕಿಡಿಗೇಡಿಗಳು ಸಮಾಜದಲ್ಲಿ ಅಶಾಂತಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈದ್ ಗಾಗಿ ಚಿಕ್ಕಮಗಳೂರು ನಗರದ ಟಿಪ್ಪು ನಗರದಲ್ಲಿ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಹಾಕಲಾಗಿದೆ. ಆದರೆ ಆ ಕಟೌಟ್ ವಿಡಿಯೋ ಮಾಡಿಕೊಂಡು, ಬ್ಯಾಕ್ ಗ್ರೌಂಡ್ ಗೆ ದೇಶದ್ರೋಹಿ ಹಾಡು ಹಾಕಿರುವುದು ತೀವ್ರ ಚರ್ಚೆ ಗ್ರಾಸವಾಗಿ ಸಂಚಲನ ಮೂಡಿಸಿದೆ.

ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್ ಎಂಬ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಕಟೌಟ್ ಗೆ ನಾವು ಪಾಕಿಸ್ತಾನಿ ಮುಜಾಹಿದೀನ್ ಗಳು, ಈ ಮಣ್ಣಿನ ರಕ್ಷಕರು, ಪಾಕಿಸ್ತಾನಿ ಸೈನಿಕರು ಎಂಬ ಹಾಡನ್ನ ಹಾಕಿ ಹರಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಚಿಕ್ಕಮಗಳೂರು ನಗರ ಠಾಣೆಯ ಪಿ.ಎಸ್.ಐ. ಧನರಾಜ್ ದೂರು ನೀಡಿದ್ದಾರೆ.
ಈ ಸಂಬಂಧ ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ಚಿಕ್ಕಮಗಳೂರಿನ ನಗರ ಪೊಲೀಸರು ತನಿಖೆ ಚುರುಕುಗೊಳಿಸಿ ಇಬ್ಬರು ಅಪ್ರಾಪ್ತರು ಹಾಗೂ ರೋಷನ್ ಎಂಬುವ ಸೇರಿ ಒಟ್ಟು ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಹಾಡು ಹಾಕಿದ್ದು ಏಕೆ? ಹಾಡು ಹಾಕಲು ಯಾರು ಹೇಳಿದ್ದು? ಯಾರು ಹಾಕಿದ್ದು ಎಂಬೆಲ್ಲಾ ಪ್ರಶ್ನೆಗಳನ್ನ ಮುಂದಿಟ್ಟು ತನಿಖೆ ಚುರುಕುಗೊಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಜಿತೇಂದ್ರ ಕುಮಾರ್ ದಾಯ್ಮಾ, ಡಿಪಿಒ ಹಾಗೂ ಎಸ್‌ಡಿಪಿಒ ಮಟ್ಟದ ಶಾಂತಿ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಳೆದ 5-6 ವರ್ಷಗಳ ನಿಯಮ, ಪದ್ಧತಿಗಳನ್ನೇ ಪಾಲಿಸಲು ಸೂಚಿಸಲಾಗಿದೆ. ಹೊಸ ಪದ್ಧತಿ ಅಥವಾ ಹೊಸ ಮಾರ್ಗಕ್ಕೆ ಯಾವುದೇ ಅವಕಾಶವಿಲ್ಲ. ಟಿಪ್ಪು ಕಟೌಟ್ ಅಳತೆ, ಸ್ಥಳ, ಸಮಯ ಹಿಂದಿನ ವರ್ಷಗಳಂತೆಯೇ ಇದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಕಟೌಟ್‌ಗೆ ಆಕ್ಷೇಪಾರ್ಹ ಹಾಡು ಸೇರಿಸಿ ವಿಡಿಯೋ ವೈರಲ್, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 196, 299ರ ಅಡಿ ಎಫ್‌ಐಆರ್ ದಾಖಲು ಮಾಡಲಾಗಿದೆ. ವಿಡಿಯೋ ತಯಾರಿಸಿದವರು, ಹಂಚಿಕೊಂಡವರು ಹಾಗೂ ಸ್ಟೇಟಸ್ ಹಾಕಿದವರ ವಿರುದ್ಧ ತನಿಖೆ ನಡೆಸಿದ್ದೇವೆ. ಆರೋಪಿಗಳ ಪತ್ತೆ ಕಾರ್ಯ ಮುಕ್ತಾಯ ಹಂತದಲ್ಲಿದ್ದು, ಕಠಿಣ ಕಾನೂನು ಕ್ರಮದ ಎಚ್ಚರಿಕೆ. ಧಾರ್ಮಿಕ ಹಬ್ಬಗಳಿಗೆ ರಾಜಕೀಯ ಅಥವಾ ಕೋಮು ಬಣ್ಣ ಕಟ್ಟಿದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇನ್ನು ಸಿ.ಟಿ.ರವಿ, ದೇಶ ದ್ರೋಹಿಗಳನ್ನ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಭಾರತದಲ್ಲಿದ್ದು ದೇಶದ್ರೋಹಿ ಕೆಲಸ ಮಾಡುವವರನ್ನ ಸಹಿಸಬಾರದು,ಇವರ ಬಾಲ ಕಟ್ ಮಾಡಿ ಜೈಲಿಗೆ ಕಳುಹಿಸಿ ಎಂದು ಕಿಡಿಕಾರಿದ್ದಾರೆ. ಸಂಸದ ಕೋಟಾ, ಗೋಹತ್ಯೆ ತಡೆದವರ ಮೇಲೆಯೇ ಕೇಸ್ ಮಾಡಿದ್ರು, ಪಾಕ್ ಪರ ಘೋಷಣೆ ಕೂಗಿದ್ದನ್ನ ವಿರೋಧಿಸಿದವರ ಮೇಲೆಯೇ ಪ್ರಕರಣ ದಾಖಲಿಸಿದ್ರು. ಭಾರತ ವಿರೋಧಿ ನಿಲುವಿಗೆ ಸರ್ಕಾರವೇ ಬೆಂಬಲ ಕೊಟ್ರೆ ಏನು ಅನ್ನೋ ಚರ್ಚೆ ಆಗಬೇಕಿದ್ದು, ಇದರ ವಿರುದ್ಧ ಬಿಜೆಪಿ ಸೆಡೆದು ನಿಲ್ಲಬೇಕು ಎಂದಿದ್ದಾರೆ.

ಒಟ್ಟಾರೆ, ಕಾಫಿನಾಡಲ್ಲಿ ಪಾಕ್ ಪ್ರೇಮಿಗಳ ಪ್ರೇಮ ಅನಾವರಣಗೊಂಡಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅವರೇ ಕಟ್ಟಿಕೊಂಡ್ರೋ ಅಥವಾ ಯಾರಾದ್ರು ಕಟ್ಟಿಸದ್ರೋ ಗೊತ್ತಿಲ್ಲ.‌ ಆದರೆ, ಅಪ್ರಾಪ್ತರು ಪ್ಯಾಲಸ್ತೇನ್ ಬಾವುಟವನ್ನ ಬೈಕ್ ಗೆ ಕಟ್ಟಿಕೊಂಡು ಓಡಾಡಿದ್ದರು. ಈಗ ಮತ್ತೆ ಈದ್ ಹಬ್ಬದ ವೇಳೆ ಪಾಕ್ ಪ್ರೇಮಿಗಳು ಮುನ್ನೆಲೆಗೆ ಬಂದಿದ್ದಾರೆ. ಆದರೆ, ತನಿಖೆ ಚುರುಗೊಳಿಸಿರೋ ನಗರ ಪೊಲೀಸರು ಏಳು ಜನರನ್ನ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಪೊಲೀಸರ ತನಿಖೆ ಬಳಿಕ ಪಾಕ್ ಪ್ರೇಮಕ್ಕೆ ಕಾರಣವೇನೆಂಬ ಸತ್ಯ ಹೊರಬರಲಿದೆ.

Tipu Sultan Cutout Sedition Song – 7 people in police custody

Share

Leave a comment

Leave a Reply

Your email address will not be published. Required fields are marked *

Don't Miss

ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು...

ರಾಷ್ಟ್ರಧ್ವಜ ಅವಮಾನ ಆರೋಪ: ಕಾನೂನು ಕ್ರಮಕ್ಕೆ ರೈತ ಸಂಘ ಆಗ್ರಹ

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ಬೆಳಿಗ್ಗೆ ರಾಷ್ಟ್ರಧ್ವಜಾರೋಹಣ ಮಾಡಿ, ಮಧ್ಯಾಹ್ನದ ವೇಳೆಗೆ ಧ್ವಜವನ್ನು ಅವರೋಹಣ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ...

Related Articles

ಆರು ಜಿಲ್ಲೆಗಳ ಪ್ರತಿನಿಧಿಸುವ ಸಂಸದರ ಒಳಗೊಂಡ ಸರ್ವಪಕ್ಷದ ನಿಯೋಗ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ(ಇಎಸ್‌ಎ) ಘೋಷಣೆಯಿಂದ ಮಲೆನಾಡಿನ ಜನಜೀವನದ ಮೇಲೆ ಉಂಟಾಗಲಿರುವ ಪರಿಣಾಮದ...

ಬಿಡದಿ ರೈತರ ಹೋರಾಟ ಬೆಂಬಲಿಸಿ ಆ.25ರಂದು ವಿಧಾನಸೌಧ ಚಲೋ

ಚಿಕ್ಕಮಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ವಿರೋಧಿಸಿ ಹಾಗೂ...

ಮುಂಗಾರು ಋತುವಿನಲ್ಲಿ ಜಿಲ್ಲೆಯಲ್ಲಿ ಶೇ.35 ಮಳೆ ಕೊರತೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಋತುವಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೆ ಶೇ.೩೫ರಷ್ಟು ಮಳೆ ಕೊರತೆ ಉಂಟಾಗಿದೆ...

ಎಸ್‌ಐಆರ್: ಜಿಲ್ಲೆಯ ಮತದಾರರ ಕರಡು ಪಟ್ಟಿ ಪ್ರಕಟ

ಚಿಕ್ಕಮಗಳೂರು: ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್-೨೦೨೬)...